Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ತೀತನಿಗೆ 2:14 - ಕನ್ನಡ ಸಮಕಾಲಿಕ ಅನುವಾದ

14 ಕ್ರಿಸ್ತ ಯೇಸು ನಮ್ಮನ್ನು ಎಲ್ಲಾ ದುಷ್ಟತನದಿಂದ ವಿಮೋಚಿಸಿ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಂತ ಜನರನ್ನು ತಮಗಾಗಿ ಪರಿಶುದ್ಧ ಮಾಡುವಂತೆ ನಮಗೋಸ್ಕರ ತಮ್ಮನ್ನು ತಾವೇ ಒಪ್ಪಿಸಿಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಆತನು ನಮ್ಮನ್ನು ಸಕಲ ಅಧರ್ಮಗಳಿಂದ ಬಿಡುಗಡೆಮಾಡುವುದಕ್ಕೂ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಕೀಯಜನರನ್ನು ತನಗಾಗಿ ಬೇರ್ಪಡಿಸಿ ಶುದ್ಧೀಕರಣ ಮಾಡುವುದಕ್ಕಾಗಿಯೂ ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಯೇಸುಕ್ರಿಸ್ತರು ನಮ್ಮನ್ನು ಸಕಲ ಅಪರಾಧಗಳಿಂದ ವಿಮೋಚಿಸಿ, ಪರಿಶುದ್ಧರನ್ನಾಗಿಸಿ, ಸತ್ಕಾರ್ಯಗಳಲ್ಲಿ ಆಸಕ್ತರಾದ ಒಂದು ಜನಾಂಗವನ್ನಾಗಿ ಮಾಡಿದರು. ನಮ್ಮನ್ನು ತಮ್ಮ ಸ್ವಂತದವರನ್ನಾಗಿಸಿಕೊಳ್ಳಲೆಂದು ತಮ್ಮನ್ನೇ ನಮಗಾಗಿ ಸಮರ್ಪಿಸಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಆತನು ನಮ್ಮನ್ನು ಸಕಲ ಅಧರ್ಮದಿಂದ ವಿಮೋಚಿಸುವದಕ್ಕೂ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಕೀಯ ಜನರನ್ನು ತನಗಾಗಿ ಪರಿಶುದ್ಧ ಮಾಡುವದಕ್ಕೂ ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಆತನು ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು. ನಮ್ಮನ್ನು ಪಾಪದಿಂದ ಬಿಡುಗಡೆ ಮಾಡಲು ಮತ್ತು ಯಾವಾಗಲೂ ಒಳ್ಳೆಯ ಕಾರ್ಯಗಳನ್ನೇ ಮಾಡ ಬಯಸುವ ತನ್ನ ಪರಿಶುದ್ಧ ಜನರನ್ನಾಗಿ ಮಾಡಲು ಆತನು ಮರಣ ಹೊಂದಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

14 ಅಮ್ಕಾ ಸಗ್ಳ್ಯಾ ರಿತಿಚ್ಯಾ ಬುರ್ಶ್ಯಾ ಪಾನಾತ್ನಾ ಸುಟ್ಕಾ ಕರುಕ್ ಅನಿ ಅಮ್ಕಾ ಪವಿತ್ರ್ ಲೊಕಾ ಕರುಕ್ ಅನಿ ತೆಕಾ ಎಕ್ಲ್ಯಾಕುಚ್ ಸಮಂದ್ ಪಡಲ್ಲೆ ಅನಿ ಬರೆ ಕಾಮ್ ಕರುಕ್ ಉಮ್ಮೆದಿನ್ ಭರಲ್ಲಿ ಲೊಕಾ ಕರುಕ್, ತೆನಿ ಅಮ್ಚ್ಯಾಸಾಟ್ನಿ ಅಪ್ನಾಕುಚ್ ಒಪ್ಸುನ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ತೀತನಿಗೆ 2:14
54 ತಿಳಿವುಗಳ ಹೋಲಿಕೆ  

ನಿತ್ಯಾತ್ಮರಿಂದ ತಮ್ಮನ್ನು ತಾವೇ ನಿರ್ದೋಷಿಯನ್ನಾಗಿ ದೇವರಿಗೆ ಸಮರ್ಪಿಸಿಕೊಂಡ ಕ್ರಿಸ್ತ ಯೇಸುವಿನ ರಕ್ತವು ಎಷ್ಟೋ ಹೆಚ್ಚಾಗಿ ನಿರ್ಜೀವ ಕ್ರಿಯೆಗಳಿಂದ ನಮ್ಮನ್ನು ಬಿಡಿಸಿ ಜೀವವುಳ್ಳ ದೇವರನ್ನು ಆರಾಧಿಸುವಂತೆ ನಮ್ಮ ಮನಸ್ಸಾಕ್ಷಿಯನ್ನು ಶುದ್ಧೀಕರಿಸುವುದಲ್ಲವೇ?


ನಾವು ಕ್ರಿಸ್ತ ಯೇಸುವಿನಲ್ಲಿ ಸತ್ಕ್ರಿಯೆಗಳನ್ನು ಮಾಡುವುದಕ್ಕಾಗಿಯೇ ಸೃಷ್ಟಿಸಲಾದ ದೇವರ ಕಲಾಕೃತಿಯಾಗಿದ್ದೇವೆ. ಸತ್ಕ್ರಿಯೆಗಳನ್ನು ಮಾಡುತ್ತಾ ಬಾಳಬೇಕೆಂದು ದೇವರು ನಮ್ಮನ್ನು ಮುಂಚಿತವಾಗಿ ನೇಮಿಸಿದ್ದಾರೆ.


ಆದರೆ ಕತ್ತಲೆಯೊಳಗಿದ್ದ ನಿಮ್ಮನ್ನು ಕರೆದು ತಮ್ಮ ಆಶ್ಚರ್ಯಕರವಾದ ಬೆಳಕಿಗೆ ಸೇರಿಸಿದ ದೇವರನ್ನು ಕೊಂಡಾಡುವವರಾಗುವಂತೆ ನೀವು ಆಯ್ದುಕೊಂಡ ಜನರೂ ರಾಜತನದ ಯಾಜಕರೂ ಪರಿಶುದ್ಧ ಜನಾಂಗವೂ ದೇವರ ಜನರೂ ಆಗಿದ್ದೀರಿ.


ನಿಮ್ಮ ಪೂರ್ವಿಕರಿಂದ ಕಲಿತುಕೊಂಡ ಸಂಪ್ರದಾಯದ ವ್ಯರ್ಥ ನಡವಳಿಕೆಯಿಂದ ನಿಮಗೆ ಬಿಡುಗಡೆಯಾದದ್ದು ನಶಿಸಿಹೋಗುವ ಬೆಳ್ಳಿ, ಬಂಗಾರದಿಂದಲ್ಲ.


ಇದು ನಂಬತಕ್ಕ ಮಾತಾಗಿದೆ. ದೇವರನ್ನು ನಂಬಿದವರು ಸತ್ಕ್ರಿಯೆಗಳನ್ನು ಮಾಡುವುದರಲ್ಲಿ ಜಾಗರೂಕರಾಗಿರುವಂತೆ ನೀನು ಇವುಗಳ ವಿಷಯವಾಗಿ ಪ್ರಾಮುಖ್ಯತೆಯನ್ನು ಕೊಡಬೇಕೆಂದು ಅಪೇಕ್ಷಿಸುತ್ತೇನೆ. ಇವು ಮನುಷ್ಯರಿಗೆ ಹಿತಕರವೂ ಪ್ರಯೋಜನಕರವೂ ಆಗಿವೆ.


ಅವರು ಹೊಸಹಾಡನ್ನು ಹಾಡುತ್ತಾ, “ನೀವು ಸುರುಳಿಯನ್ನು ತೆಗೆದುಕೊಂಡು ಅದರ ಮುದ್ರೆಗಳನ್ನು ಒಡೆಯುವುದಕ್ಕೆ ಯೋಗ್ಯರಾಗಿದ್ದೀರಿ. ಏಕೆಂದರೆ ನೀವು ವಧಿತರಾಗಿ, ನಿಮ್ಮ ರಕ್ತದಿಂದ ಸಕಲ ಕುಲ, ಭಾಷೆ, ಪ್ರಜೆ, ರಾಷ್ಟ್ರಗಳವರಿಂದ ಮನುಷ್ಯರನ್ನು ದೇವರಿಗಾಗಿ ಕೊಂಡುಕೊಂಡಿರುವಿರಿ.


ಪವಿತ್ರ ವೇದದಲ್ಲಿ, “ಮರಕ್ಕೆ ತೂಗುಹಾಕಲಾದ ಪ್ರತಿಯೊಬ್ಬನೂ ಶಾಪಗ್ರಸ್ತನು,” ಎಂದು ಬರೆದಿರುವಂತೆ ಕ್ರಿಸ್ತ ಯೇಸು ಮರಕ್ಕೆ ತೂಗುಹಾಕಲಾಗಿ ನಮಗೋಸ್ಕರ ಶಾಪಗ್ರಸ್ಥರಾಗಿ ನಿಯಮದ ಶಾಪದೊಳಗಿಂದ ನಮ್ಮನ್ನು ವಿಮೋಚಿಸಿದರು.


ಆಮೇಲೆ ನಾನು ನಿಮ್ಮ ಮೇಲೆ ಶುದ್ಧವಾದ ನೀರನ್ನು ಚಿಮುಕಿಸುತ್ತೇನೆ ಮತ್ತು ನೀವು ಶುದ್ಧರಾಗುವಿರಿ, ನಿಮ್ಮ ಎಲ್ಲಾ ಅಶುದ್ಧತ್ವಗಳಿಂದಲೂ ನಿಮ್ಮ ಎಲ್ಲಾ ವಿಗ್ರಹಗಳಿಂದಲೂ ನಿಮ್ಮನ್ನು ಶುದ್ಧೀಕರಿಸುವೆನು.


ಕ್ರಿಸ್ತ ಯೇಸುವಿನೊಂದಿಗೆ ನಾನೂ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ. ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತ ಯೇಸುವೇ ನನ್ನಲ್ಲಿ ಜೀವಿಸುತ್ತಾರೆ. ನನ್ನನ್ನು ಪ್ರೀತಿಸಿ ನನಗೋಸ್ಕರ ತಮ್ಮನ್ನೇ ಒಪ್ಪಿಸಿಕೊಟ್ಟ ದೇವಪುತ್ರ ಆಗಿರುವವರ ನಂಬಿಕೆಯಲ್ಲಿಯೇ ಈಗ ನಾನು ಈ ಶರೀರದಲ್ಲಿ ಜೀವಿಸುತ್ತಿದ್ದೇನೆ.


ನೀವು ಕ್ರಿಸ್ತ ಯೇಸುವಿನ ಮೂಲಕ ಸತ್ಯಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧಮಾಡಿಕೊಂಡಿದ್ದರಿಂದ ನಿಷ್ಕಪಟವಾದ ಸಹೋದರ ಸ್ನೇಹವುಳ್ಳವರಾಗಿರತಕ್ಕದ್ದು. ಹೀಗಿರಲಾಗಿ ಒಬ್ಬರನ್ನೊಬ್ಬರು ಶುದ್ಧವಾದ ಹೃದಯದಿಂದಲೂ ಆಸಕ್ತಿಯಿಂದಲೂ ಪ್ರೀತಿಸಿರಿ.


ಯೊಪ್ಪ ಎಂಬಲ್ಲಿ ತಬಿಥಾ ಎಂಬ ಹೆಸರಿನ ದೇವಭಕ್ತೆ ಇದ್ದಳು. ಈ ಹೆಸರಿನ ಗ್ರೀಕ್ ಭಾಷಾಂತರ “ದೊರ್ಕ” ಎಂದಾಗುತ್ತದೆ. ಆಕೆ ಬಡವರಿಗೆ ಸಹಾಯ ಮಾಡುತ್ತಾ ಯಾವಾಗಲೂ ಒಳ್ಳೆಯದನ್ನೇ ಮಾಡುತ್ತಿದ್ದಳು.


ನಂಬಿಗಸ್ತ ಸಾಕ್ಷಿಯೂ ಸತ್ತವರೊಳಗಿಂದ ಪ್ರಥಮವಾಗಿ ಜೀವಂತವಾಗಿ ಎದ್ದು ಬಂದವರೂ ಭೂರಾಜರಿಗೆ ಒಡೆಯರೂ ಆಗಿರುವ ಕ್ರಿಸ್ತ ಯೇಸುವಿನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. ಅವರೇ ನಮ್ಮನ್ನು ಪ್ರೀತಿಸುವವರೂ ತಮ್ಮ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದವರೂ ಆಗಿದ್ದಾರೆ.


ಮನುಷ್ಯಪುತ್ರನಾದ ನಾನು ಸಹ ಸೇವೆಮಾಡಿಸಿಕೊಳ್ಳುವುದಕ್ಕಾಗಿ ಅಲ್ಲ, ಸೇವೆಮಾಡುವುದಕ್ಕಾಗಿಯೂ ಅನೇಕರಿಗಾಗಿ ನನ್ನ ಪ್ರಾಣವನ್ನೇ ಈಡಾಗಿ ಕೊಡುವುದಕ್ಕಾಗಿಯೂ ಬಂದಿದ್ದೇನೆ,” ಎಂದು ಹೇಳಿದರು.


ಪ್ರಿಯರೇ, ನಾವು ಈಗ ದೇವರ ಮಕ್ಕಳಾಗಿದ್ದೇವೆ. ಮುಂದೆ ನಾವು ಏನಾಗುವೆವೋ ಅದು ಇನ್ನೂ ಪ್ರತಕ್ಷವಾಗಲಿಲ್ಲ. ಕ್ರಿಸ್ತ ಯೇಸು ಪ್ರತ್ಯಕ್ಷರಾದಾಗ ನಾವು ಅವರ ಹಾಗಿರುವೆವೆಂದು ಬಲ್ಲೆವು. ಏಕೆಂದರೆ ನಾವು ಅವರನ್ನು ಅವರಿರುವ ಪ್ರಕಾರವೇ ನೋಡುವೆವು.


ಕ್ರಿಸ್ತ ಯೇಸುವು ನೀತಿವಂತರಾಗಿದ್ದರೂ ಅನೀತಿವಂತರಾದ ನಮ್ಮನ್ನು ದೇವರ ಬಳಿಗೆ ತರುವುದಕ್ಕಾಗಿ, ಒಂದೇ ಸಾರಿ ಪಾಪಗಳಿಗೋಸ್ಕರ ಬಾಧೆಪಟ್ಟು ಶರೀರದಲ್ಲಿ ಮರಣಹೊಂದಿದರು. ಆದರೆ ಆತ್ಮದಲ್ಲಿ ಬದುಕುವವರಾದರು.


ದೇವರು ಇಸ್ರಾಯೇಲನ್ನು ಅವರ ಎಲ್ಲಾ ಅಕ್ರಮಗಳಿಂದ ವಿಮೋಚಿಸುವರು.


ನಿಮ್ಮ ನಡವಳಿಕೆಯು ಯೆಹೂದ್ಯರಲ್ಲದವರ ನಡುವೆ ಯೋಗ್ಯವಾಗಿರಲಿ, ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಕೆಟ್ಟವರೆಂದು ನಿಂದಿಸುತ್ತಾರೋ, ಆ ನಿಮ್ಮ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ಕರ್ತ ಯೇಸು ನಮ್ಮನ್ನು ದರ್ಶಿಸುವ ದಿನದಲ್ಲಿ ಅವರು ದೇವರನ್ನು ಕೊಂಡಾಡುವರು.


ಏಕೆಂದರೆ ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಪರಿಶುದ್ಧ ಜನರೇ, ಯೆಹೋವ ದೇವರು ಭೂಮಿಯ ಮೇಲಿರುವ ಎಲ್ಲಾ ಜನರೊಳಗಿಂದ ನಿಮ್ಮನ್ನೇ ತಮ್ಮ ಅಮೂಲ್ಯವಾದ ಆಸ್ತಿಯಾಗಿ ಆಯ್ದುಕೊಂಡಿದ್ದಾರೆ.


ಈ ಯೇಸುವೇ ನಮ್ಮನ್ನು ಈಗಿನ ದುಷ್ಟ ಯುಗದೊಳಗಿಂದ ಬಿಡಿಸಬೇಕೆಂದು ನಮ್ಮ ತಂದೆಯಾದ ದೇವರ ಚಿತ್ತಕ್ಕನುಸಾರವಾಗಿ ನಮ್ಮ ಪಾಪಗಳಿಗಾಗಿ ತಮ್ಮನ್ನೇ ಬಲಿಯಾಗಿ ಒಪ್ಪಿಸಿದರು.


ತಂದೆಯು ನನ್ನನ್ನು ತಿಳಿದಿರುವಂತೆ ನಾನು ತಂದೆಯನ್ನು ತಿಳಿದಿರುತ್ತೇನೆ; ನಾನು ಕುರಿಗಳಿಗೋಸ್ಕರ ನನ್ನ ಪ್ರಾಣವನ್ನೇ ಕೊಡುತ್ತೇನೆ.


ಈ ಹೊತ್ತು ನಿಮಗೆ ಯೆಹೋವ ದೇವರು ಘೋಷಿಸಿದಂತೆ, ನೀವು ಅವರ ಜನರೂ ಅವರ ಸಂಗ್ರಹಿಸಿದ ಆಸ್ತಿಯೂ ಆಗಿದ್ದೀರೆಂದು ವಾಗ್ದಾನಮಾಡಿದ್ದಾರೆ. ನೀವು ಅವರ ಎಲ್ಲಾ ಆಜ್ಞೆಗಳನ್ನು ಪಾಲಿಸಿರಿ.


ಏಕೆಂದರೆ ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಪರಿಶುದ್ಧ ಜನರು. ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಭೂಮಿಯ ಮೇಲಿರುವ ಎಲ್ಲಾ ಜನರೊಳಗಿಂದ ತಮಗೆ ಸ್ವಂತ ಜನರಾಗಿರಲು ತಮ್ಮ ಆಸ್ತಿಯಾಗಿ ಆರಿಸಿಕೊಂಡಿದ್ದಾರೆ.


ಭಯವೂ ಹೆದರಿಕೆಯೂ ಅವರಿಗಾಗುವುದು; ನಿಮ್ಮ ಜನರು ದಾಟಿ ಹೋಗುವವರೆಗೆ ಯೆಹೋವ ದೇವರೇ, ನೀವು ಕೊಂಡುಕೊಂಡ ಜನರು ದಾಟಿಹೋಗುವವರೆಗೆ ನಿಮ್ಮ ಬಾಹುವಿನ ದೊಡ್ಡಸ್ತಿಕೆಯಿಂದ ಅವರು ಕಲ್ಲಿನಂತೆ ಸ್ತಬ್ಧರಾಗಿರುವರು.


ನಾವು ಒಬ್ಬರನ್ನೊಬ್ಬರು ಪ್ರೀತಿಸುವುದಕ್ಕಾಗಿಯೂ ಸತ್ಕಾರ್ಯ ಮಾಡುವುದಕ್ಕಾಗಿಯೂ ಹೇಗೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಬೇಕೆಂದು ಯೋಚಿಸೋಣ.


ಎಲ್ಲಾ ವಿಷಯಗಳಲ್ಲಿ ನಿನ್ನನ್ನು ಸತ್ಕಾರ್ಯ ಮಾಡುವುದರಲ್ಲಿ ಆದರ್ಶವಾಗಿ ತೋರಿಸು. ಬೋಧನೆಯಲ್ಲಿ ಪ್ರಾಮಾಣಿಕತೆಯನ್ನೂ ಗಂಭೀರತೆಯನ್ನೂ


ಅಂಥವರು ಒಳ್ಳೆಯದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ಪಾಲು ಕೊಡುವುದರಲ್ಲಿ ಸಿದ್ಧರಾಗಿರುವವರೂ ಪರೋಪಕಾರ ಮಾಡುವವರೂ ಆಗಿರಬೇಕೆಂದು ಅವರನ್ನು ಪ್ರಬೋಧಿಸು.


ಕ್ರಿಸ್ತ ಯೇಸು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತಮ್ಮನ್ನೇ ದೇವರಿಗೆ ಸುಗಂಧ ಕಾಣಿಕೆಯಾಗಿಯೂ ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಸಹ ಪ್ರೀತಿಯಿಂದ ಬಾಳಿರಿ.


ಅವರು ಇನ್ನು ತಮ್ಮ ವಿಗ್ರಹಗಳಿಂದಲೂ ತಮ್ಮ ಅಸಹ್ಯ ವಸ್ತುಗಳಿಂದಲೂ ತಮ್ಮ ಅಕ್ರಮಗಳಿಂದಲೂ ಅಶುದ್ಧವಾಗುವುದಿಲ್ಲ. ಅವರ ಎಲ್ಲಾ ಪಾಪದ ಹಿಂಜಾರುವಿಕೆಯಿಂದಲೂ ನಾನು ಅವರನ್ನು ರಕ್ಷಿಸಿ, ಅವರನ್ನು ಶುದ್ಧಮಾಡುವೆನು. ಹೀಗೆ ಅವರು ನನ್ನ ಜನರಾಗಿರುವರು ನಾನು ಅವರಿಗೆ ದೇವರಾಗಿರುವೆನು.


ಯೆಹೋವ ದೇವರು ಯಾಕೋಬನನ್ನು ತಮಗೋಸ್ಕರ ಆಯ್ದುಕೊಂಡರು, ಇಸ್ರಾಯೇಲನ್ನು ತಮ್ಮ ಶ್ರೇಷ್ಠ ಸಂಪತ್ತಾಗಿಯೂ ಆಯ್ದುಕೊಂಡಿದ್ದಾರೆ.


ಎಲ್ಲಾ ಕೇಡಿನಿಂದ ನನ್ನನ್ನು ತಪ್ಪಿಸಿದ ಆ ದೇವರ ದೂತ, ಈ ಹುಡುಗರನ್ನು ಆಶೀರ್ವದಿಸಲಿ. ನನ್ನ ಹೆಸರಿನಿಂದಲೂ, ನನ್ನ ಪಿತೃಗಳಾದ ಅಬ್ರಹಾಮ, ಇಸಾಕರ ಹೆಸರಿನಿಂದಲೂ ಅವರು ಮುಂದುವರೆಯಲಿ. ಭೂಮಿಯ ಮೇಲೆ ಸಮೂಹವಾಗಿ ಹೆಚ್ಚಲಿ.”


ದೇವರ ಸಮೀಪಕ್ಕೆ ಬನ್ನಿರಿ. ಆಗ ನಿಮ್ಮ ಸಮೀಪಕ್ಕೆ ದೇವರು ಬರುವರು. ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ. ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲ ಮಾಡಿಕೊಳ್ಳಿರಿ.


ದೇವ ಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ತಕ್ಕಂತೆ ಸತ್ಕ್ರಿಯೆಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳಬೇಕು.


ಯೇಸು ಎಲ್ಲರಿಗೋಸ್ಕರ ವಿಮೋಚನೆಯ ಕ್ರಯವಾಗಿ ತಮ್ಮನ್ನು ತಾವೇ ಒಪ್ಪಿಸಿಕೊಟ್ಟರು. ಇದೇ ಸೂಕ್ತ ಸಮಯದಲ್ಲಿ ನೀಡಬೇಕಾದ ಸಾಕ್ಷಿಯಾಗಿದೆ.


ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದರು, ಎಂಬ ವಾಕ್ಯವು ನಂಬತಕ್ಕದ್ದೂ ಪೂರ್ಣ ಅಂಗೀಕಾರಕ್ಕೆ ಯೋಗ್ಯವಾದದ್ದೂ ಆಗಿದೆ. ಆ ಪಾಪಿಗಳಲ್ಲಿ ನಾನೇ ಮುಖ್ಯನು.


ದೇವರು ಯೆಹೂದ್ಯರಲ್ಲದವರೊಳಗಿಂದ ತಮ್ಮ ಹೆಸರಿಗಾಗಿ ಜನರನ್ನು ಆರಿಸಿಕೊಳ್ಳಲು ಹೇಗೆ ದಯೆತೋರಿಸಿದರೆಂದು ಸೀಮೋನನು ಈಗಾಗಲೇ ನಮಗೆ ವಿವರಿಸಿದ್ದಾನೆ.


ದೇವರು ಅವರಿಗೂ ನಮಗೂ ಮಧ್ಯದಲ್ಲಿ ಯಾವುದೇ ವ್ಯತ್ಯಾಸವನ್ನು ಮಾಡದೆ, ವಿಶ್ವಾಸದ ಮೂಲಕ ಅವರ ಹೃದಯಗಳನ್ನು ಶುದ್ಧೀಕರಿಸಿದರು.


ನಾನೇ ಪರಲೋಕದಿಂದ ಬಂದ ಜೀವದ ರೊಟ್ಟಿ. ಈ ರೊಟ್ಟಿಯನ್ನು ಯಾರು ತಿನ್ನುವರೋ ಅವರು ಸದಾಕಾಲವೂ ಬದುಕುವರು. ಲೋಕದ ಜೀವಕ್ಕಾಗಿ ನಾನು ಕೊಡುವ ರೊಟ್ಟಿಯು ನನ್ನ ಮಾಂಸವೇ,” ಎಂದರು.


ಮೊರವು ಅವರ ಕೈಯಲ್ಲಿದೆ, ಅವರು ತಮ್ಮ ಕಣದಲ್ಲಿಯ ರಾಶಿಯನ್ನು ತೂರಿ ಶುದ್ಧಮಾಡಿ ಗೋಧಿಯನ್ನು ಕಣಜದಲ್ಲಿ ತುಂಬಿಕೊಂಡು, ಹೊಟ್ಟನ್ನು ಆರಿಸಲಾಗದ ಬೆಂಕಿಯಲ್ಲಿ ಸುಟ್ಟುಹಾಕುವರು,” ಎಂದು ಹೇಳಿದನು.


ಅವಳು ಒಬ್ಬ ಮಗನನ್ನು ಹೆರುವಳು, ನೀನು ಆತನಿಗೆ, ‘ಯೇಸು’ ಎಂದು ಹೆಸರಿಡಬೇಕು. ಏಕೆಂದರೆ ಅವರೇ ತಮ್ಮ ಜನರನ್ನು ಅವರ ಪಾಪಗಳಿಂದ ರಕ್ಷಿಸುವರು,” ಎಂದು ಹೇಳಿದನು.


ದೇವರು ಬೆಳ್ಳಿಯನ್ನು ಪರಿಶೋಧಿಸಿ ಶುದ್ಧೀಕರಿಸುವ ಅಕ್ಕಸಾಲಿಗನಂತೆ ಕುಳಿತುಕೊಂಡು ಲೇವಿಯರನ್ನು ಶುದ್ಧಮಾಡುವರು. ಬಂಗಾರದ ಹಾಗೆಯೂ, ಬೆಳ್ಳಿಯ ಹಾಗೆಯೂ ಶುದ್ಧಮಾಡುವರು. ಆಗ ಅವರು ಯೆಹೋವ ದೇವರಿಗೆ ನೀತಿಯ ಕಾಣಿಕೆಯನ್ನು ಅರ್ಪಿಸುವರು.


ಅವನು ತನ್ನ ದೇವರ ಗೌರವವನ್ನು ಕಾಪಾಡಲು ಆಸಕ್ತನಾಗಿದ್ದು, ಇಸ್ರಾಯೇಲರಿಗೋಸ್ಕರ ಪಾಪ ಪ್ರಾಯಶ್ಚಿತ್ತ ಮಾಡಿದ್ದರಿಂದ, ಅವನಿಗೂ ಅವನ ಹಿಂದೆ ಬರುವ ಅವನ ಸಂತತಿಗೂ ನಿತ್ಯ ಯಾಜಕತ್ವದ ಒಡಂಬಡಿಕೆ ಮಾಡಿದ್ದೇನೆ,” ಎಂದರು.


ನಿಮ್ಮನ್ನಾದರೋ ಯೆಹೋವ ದೇವರು ತಮಗೆ ಸ್ವಕೀಯ ಜನರನ್ನಾಗಿ ಮಾಡಿಕೊಳ್ಳಬೇಕೆಂದು ಸಂಕಲ್ಪಿಸಿ, ಕಬ್ಬಿಣವನ್ನು ಕರಗಿಸುವ ಕುಲುಮೆಯೋಪಾದಿಯಲ್ಲಿದ್ದ ಈಜಿಪ್ಟ್ ದೇಶದಿಂದ ಹೊರತಂದರು.


ದೇವರು ತಮ್ಮ ರಕ್ತದಿಂದ ಕೊಂಡುಕೊಂಡ ಸಭೆಗೆ ನೀವು ಕುರುಬರಾಗಿರುವುದಕ್ಕಾಗಿ ಪವಿತ್ರಾತ್ಮರು ನಿಮ್ಮನ್ನೇ ಮಂದೆಯಲ್ಲಿ ಮೇಲ್ವಿಚಾರಕರನ್ನಾಗಿ ಇಟ್ಟಿರುವುದರಿಂದ, ನಿಮ್ಮ ವಿಷಯದಲ್ಲಿಯೂ ಇಡೀ ಮಂದೆಯ ವಿಷಯದಲ್ಲಿಯೂ ಎಚ್ಚರವಾಗಿರಿ.


ದೇವರ ಚಿತ್ತಾನುಸಾರವಾಗಿ ಎಲ್ಲಾ ಕಾರ್ಯಗಳನ್ನು ನಡೆಸುವ ಅವರ ಉದ್ದೇಶದ ಪ್ರಕಾರ ಕ್ರಿಸ್ತನಲ್ಲಿ ನಮ್ಮನ್ನು ಮೊದಲೇ ಆರಿಸಿಕೊಂಡರು.


ಈ ಕ್ರಿಸ್ತ ಯೇಸುವೇ ದೇವರ ಮಹಿಮೆಯ ಪ್ರಕಾಶವೂ ಅವರ ವ್ಯಕ್ತಿತ್ವದ ಪ್ರತಿರೂಪವಾಗಿರುವ ದೇವಪುತ್ರ ಆಗಿದ್ದಾರೆ. ಈ ಕ್ರಿಸ್ತ ಯೇಸುವೇ ತಮ್ಮ ಶಕ್ತಿಯುತ ವಾಕ್ಯದಿಂದ ಸಮಸ್ತಕ್ಕೂ ಆಧಾರವಾಗಿದ್ದಾರೆ. ಕ್ರಿಸ್ತ ಯೇಸು ತಾವಾಗಿಯೇ ನಮ್ಮ ಪಾಪಗಳನ್ನು ಶುದ್ಧಿಮಾಡಿ ಉನ್ನತದೊಳಗೆ ಮಹೋನ್ನತ ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾರೆ.


ದೇವರು ಬೆಳಕಿನಲ್ಲಿರುವಂತೆಯೇ ನಾವೂ ಬೆಳಕಿನಲ್ಲಿ ಬಾಳಿದರೆ, ನಾವು ಒಬ್ಬರ ಸಂಗಡಲೊಬ್ಬರು ಅನ್ಯೋನ್ಯತೆಯಲ್ಲಿದ್ದೇವೆ, ಆಗ ದೇವರ ಮಗನಾದ ಯೇಸುವಿನ ರಕ್ತವು ನಮ್ಮನ್ನು ಸಕಲ ಪಾಪದಿಂದ ಶುದ್ಧಿಮಾಡುತ್ತದೆ.


ನಾವು ನಮ್ಮ ಪಾಪಗಳನ್ನು ದೇವರಿಗೆ ಅರಿಕೆಮಾಡಿದರೆ ಅವರು ನಂಬಿಗಸ್ತರೂ ನೀತಿವಂತರೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿ, ಸಕಲ ಅನೀತಿಯಿಂದ ನಮ್ಮನ್ನು ಶುದ್ಧಿಮಾಡುವರು.


ತರುವಾಯ ಅವನು ನಿನ್ನ ಬಳಿಯಿಂದ ತನ್ನ ಮಕ್ಕಳೊಂದಿಗೆ ಹೊರಟು ತನ್ನ ಕುಟುಂಬಕ್ಕೆ ಹಿಂದಿರುಗಬೇಕು. ತನ್ನ ಪಿತೃಗಳ ಸೊತ್ತಿಗೂ ಅವನು ಹಿಂದಿರುಗಬೇಕು.


ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು