Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 7:10 - ಕನ್ನಡ ಸಮಕಾಲಿಕ ಅನುವಾದ

10 ಇಗೋ, ವೇಶ್ಯೆಯ ವಸ್ತ್ರವನ್ನು ಧರಿಸಿಕೊಂಡು ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರುಗೊಂಡಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಇಗೋ ವೇಶ್ಯಾರೂಪವನ್ನು ಧರಿಸಿಕೊಂಡಿದ್ದ ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರುಗೊಂಡಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಇಗೋ, ಅವನನ್ನು ಎದುರುಗೊಳ್ಳುತ್ತಾಳೆ ವೇಷಧಾರಿಯಾದ ಕಪಟಸ್ತ್ರೀಯೊಬ್ಬಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಇಗೋ ವೇಶ್ಯಾವೇಷವನ್ನು ಧರಿಸಿರುವ ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರುಗೊಳ್ಳುತ್ತಾಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಆ ಹೆಂಗಸು ಅವನನ್ನು ಎದುರುಗೊಳ್ಳಲು ಮನೆಯ ಹೊರಗಡೆ ಬಂದಳು. ಆಕೆಯ ಉಡುಪು ವ್ಯಭಿಚಾರಿಣಿಯ ಉಡುಪಿನಂತಿತ್ತು. ಅವನೊಡನೆ ಪಾಪಮಾಡಬೇಕೆಂಬ ಆಸೆ ಆಕೆಯಲ್ಲಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 7:10
11 ತಿಳಿವುಗಳ ಹೋಲಿಕೆ  

ಹಾಗೆಯೇ ಸ್ತ್ರೀಯರು ಸಭ್ಯತೆ ಹಾಗೂ ಸ್ವಸ್ಥಬುದ್ಧಿಯುಳ್ಳವರಾಗಿದ್ದು ಗೌರವಕ್ಕೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ, ಚಿನ್ನ, ಮುತ್ತುಗಳು, ಬೆಲೆಯುಳ್ಳ ವಸ್ತ್ರ ಇವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ,


ಆಗ ನೀನು ನಿರ್ಜನನಾದಾಗ ಏನು ಮಾಡುವೆ? ನೀನು ಕಡುಕೆಂಪು ಬಣ್ಣದ ವಸ್ತ್ರವನ್ನು ತೊಟ್ಟುಕೊಂಡರೇನು? ಚಿನ್ನದ ಆಭರಣಗಳಿಂದ ನಿನ್ನನ್ನು ಅಲಂಕರಿಸಿಕೊಂಡರೇನು? ಕಾಡಿಗೆಯಿಂದ ಕಣ್ಣುಗಳನ್ನು ಅಗಲಿಸಿಕೊಂಡು ಶೃಂಗರಿಸಿಕೊಂಡರೇನು? ನೀವು ವ್ಯರ್ಥವಾಗಿ ನಿನ್ನನ್ನು ಅಲಂಕರಿಸಿಕೊಳ್ಳುತ್ತಿ. ನಿನ್ನ ಪ್ರೇಮಿಗಳು ನಿನ್ನನ್ನು ತಿರಸ್ಕರಿಸುತ್ತಾರೆ; ಅವರು ನಿನ್ನನ್ನು ಕೊಲ್ಲಲು ಬಯಸುತ್ತಾರೆ.


ಯೇಹುವು ಇಜ್ರೆಯೇಲಿಗೆ ಬಂದನು. ಅಲ್ಲಿಗೆ ಅವನು ಬಂದಿದ್ದಾನೆಂದು ಈಜೆಬೆಲಳು ಕೇಳಿ, ಅವಳು ತನ್ನ ಕಣ್ಣುಗಳಿಗೆ ಕಾಡಿಗೆ ಹಚ್ಚಿಕೊಂಡು, ತನ್ನ ತಲೆಯನ್ನು ಶೃಂಗರಿಸಿಕೊಂಡು, ಕಿಟಕಿಯಿಂದ ಇಣಿಕಿ ನೋಡಿದಳು.


“ಮರೆತುಹೋದ ವೇಶ್ಯೆಯೇ, ಕಿನ್ನರಿಯನ್ನು ತೆಗೆದುಕೋ. ಪಟ್ಟಣಗಳಲ್ಲಿ ಅಲೆಯುತ್ತಾ ನೀನು ನೆನಪಾಗುವ ಹಾಗೆ ಚೆನ್ನಾಗಿ ನುಡಿಸಿ, ಬಹಳ ಗೀತೆಗಳನ್ನು ಹಾಡು.”


ಯೋರಾಮನು ಯೇಹುವನ್ನು ಕಂಡಾಗ, “ಯೇಹುವೇ, ಸಮಾಧಾನದಿಂದ ಬಂದಿರುವೆಯೋ?” ಎಂದನು. ಅದಕ್ಕವನು, “ನಿನ್ನ ತಾಯಿಯಾದ ಈಜೆಬೆಲಳ ಜಾರತ್ವವೂ, ಅವಳ ಮಾಟಮಂತ್ರಗಳೂ ಅಧಿಕವಾಗಿರುವಾಗ ಸಮಾಧಾನವೆಲ್ಲಿ?” ಎಂದನು.


ಯೆಹೋವ ದೇವರು ಸೃಷ್ಟಿಸಿದ ಅಡವಿಯ ಎಲ್ಲಾ ಕಾಡುಮೃಗಗಳಿಗಿಂತ ಸರ್ಪವು ಬಹು ಯುಕ್ತಿಯುಳ್ಳದ್ದಾಗಿತ್ತು. ಅದು ಸ್ತ್ರೀಗೆ, “ನೀವು ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ತಿನ್ನಬಾರದೆಂದು ದೇವರು ಹೇಳಿದ್ದು ನಿಜವೋ?” ಎಂದು ಕೇಳಿತು.


ಕಳ್ಳನಂತೆ ಅವಳು ಹೊಂಚು ಹಾಕಿ ಮನುಷ್ಯರಲ್ಲಿ ದ್ರೋಹಿಗಳನ್ನು ಹೆಚ್ಚಿಸುತ್ತಾಳೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು