Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 6:19 - ಕನ್ನಡ ಸಮಕಾಲಿಕ ಅನುವಾದ

19 ಅಸತ್ಯವನ್ನಾಡುವ ಸುಳ್ಳುಸಾಕ್ಷಿ ಮತ್ತು ಸಹೋದರರಲ್ಲಿ ಜಗಳ ಹುಟ್ಟಿಸುವ ವ್ಯಕ್ತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಅಸತ್ಯವಾಡುವ ಸುಳ್ಳುಸಾಕ್ಷಿ ಮತ್ತು ಒಡಹುಟ್ಟಿದವರಲ್ಲಿ ಜಗಳಗಳನ್ನು ಬಿತ್ತುವವನು ಇವುಗಳೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಅಸತ್ಯವಾಡುವ ಸುಳ್ಳುಸಾಕ್ಷಿ, ಒಡಹುಟ್ಟಿದವರಲ್ಲಿ ಜಗಳಗಳನ್ನು ಬಿತ್ತುವವನು, ಈ ಏಳೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಅಸತ್ಯವಾಡುವ ಸುಳ್ಳುಸಾಕ್ಷಿ ಮತ್ತು ಸಹೋದರರಲ್ಲಿ ಜಗಳ ಬಿತ್ತುವ ವ್ಯಕ್ತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 6:19
24 ತಿಳಿವುಗಳ ಹೋಲಿಕೆ  

ಸುಳ್ಳುಸಾಕ್ಷಿಯು ದಂಡನೆಯನ್ನು ಹೊಂದದಿರನು; ಸುಳ್ಳಾಡುವವನು ತಪ್ಪಿಸಿಕೊಳ್ಳದೆ ಇರಲಾರನು.


ಅವನು ತನ್ನ ಹೃದಯದಲ್ಲಿ ಮೋಸಕರ ಯೋಜನೆಯನ್ನೇ ಮಾಡುತ್ತಾನೆ; ಯಾವಾಗಲೂ ಅವನು ಜಗಳವನ್ನು ಕಲ್ಪಿಸುತ್ತಾನೆ.


ಸಮಾಧಾನ ಪಡಿಸುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ನೀತಿಯೆಂಬ ಫಲವನ್ನು ಕೊಯ್ಯುತ್ತಾರೆ.


ಸುಳ್ಳುಸಾಕ್ಷಿಯು ಶಿಕ್ಷೆಹೊಂದದೇ ಇರುವುದಿಲ್ಲ; ಸುಳ್ಳಾಡುವವನು ಹಾಳಾಗಿ ಹೋಗುವನು.


ನನ್ನ ವೈರಿಗಳ ವಶಕ್ಕೆ ನನ್ನನ್ನು ಕೊಡಬೇಡಿರಿ; ಸುಳ್ಳುಸಾಕ್ಷಿಗಳೂ ಕ್ರೂರ ನಿಂದಕರೂ ನನಗೆ ವಿರೋಧವಾಗಿ ಎದ್ದಿದ್ದಾರೆ.


ತನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಹೇಳುವವನು ಚಮಟಿಗೆ, ಖಡ್ಗ, ಹರಿತವಾದ ಬಾಣವಾಗಿದ್ದಾನೆ.


ಕಟ್ಟಿಗೆ ಇಲ್ಲದಿರುವಲ್ಲಿ ಬೆಂಕಿಯು ಆರಿಹೋಗುತ್ತದೆ; ಹಾಗೆಯೇ ಚಾಡಿಕೋರನು ಇಲ್ಲದಿರುವಲ್ಲಿ ಜಗಳ ಶಮನವಾಗುವುದು.


ಪರಿಹಾಸ್ಯ ಮಾಡುವವನನ್ನು ಹೊರಗೆ ತಳ್ಳಿಬಿಟ್ಟರೆ ಕಲಹವು ನಿಲ್ಲುವುದು; ವಿವಾದವೂ ನಿಂದೆಯೂ ನಿಂತುಹೋಗುವುವು.


ಬುದ್ಧಿಯಿಲ್ಲದ ಅಯುಕ್ತ ವಾಗ್ವಾದಗಳು ಜಗಳಗಳನ್ನು ಹುಟ್ಟಿಸುತ್ತವೆ ಎಂದು ತಿಳಿದು ಅವುಗಳನ್ನು ನಿರಾಕರಿಸು.


ಸುಳ್ಳುಸಾಕ್ಷಿಗಳನ್ನು ಹಾಜರುಪಡಿಸಿ, “ಈ ಮನುಷ್ಯನು ಈ ಪವಿತ್ರಸ್ಥಳಕ್ಕೂ ಮೋಶೆಯ ನಿಯಮಕ್ಕೂ ವಿರೋಧವಾಗಿ ಮಾತನಾಡುತ್ತಲೇ ಇದ್ದಾನೆ.


ಮೂರ್ಖನು ಜಗಳವನ್ನು ಬಿತ್ತುತ್ತಾನೆ. ಚಾಡಿಕೋರನು ಪ್ರಮುಖ ಸ್ನೇಹಿತರನ್ನು ಅಗಲಿಸುತ್ತಾನೆ.


ಒಬ್ಬ ಪ್ರಾಮಾಣಿಕ ಸಾಕ್ಷಿ ಸತ್ಯವನ್ನು ಹೇಳುತ್ತಾನೆ, ಆದರೆ ಸುಳ್ಳುಸಾಕ್ಷಿಯು ಸುಳ್ಳನ್ನು ಹೇಳುತ್ತಾನೆ.


ಆಗ ಮುಖ್ಯಯಾಜಕರೂ ಆಲೋಚನಾ ಸಭೆಯವರೆಲ್ಲರೂ ಯೇಸುವಿಗೆ ವಿರೋಧವಾಗಿ ಯೇಸುವನ್ನು ಕೊಲ್ಲಿಸಬೇಕೆಂದು ಸುಳ್ಳುಸಾಕ್ಷಿಗಾಗಿ ಹುಡುಕಿದರು.


ಏಕೆಂದರೆ ಹೃದಯದೊಳಗಿಂದ ದುರಾಲೋಚನೆಗಳು, ಕೊಲೆ, ವ್ಯಭಿಚಾರ, ಅನೈತಿಕತೆ, ಕಳ್ಳತನ, ಸುಳ್ಳುಸಾಕ್ಷಿ, ದೂರು ಇವು ಹೊರ ಬರುತ್ತವೆ.


ಸುಳ್ಳುಸಾಕ್ಷಿಗಳು ನನಗೆ ಎದುರಾಗಿ ಎದ್ದು, ನಾನು ತಿಳಿಯದವುಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ.


“ಸುಳ್ಳು ಸುದ್ದಿಯನ್ನು ಹಬ್ಬಿಸಬಾರದು. ದುರುದ್ದೇಶಪೂರಿತ ಸಾಕ್ಷಿಯಾಗುವ ಮೂಲಕ ದುಷ್ಟರಿಗೆ ಸಹಾಯಮಾಡಬೇಡ.


ನಿನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಹೇಳಬೇಡ.


ಪ್ರಾಮಾಣಿಕ ಸಾಕ್ಷಿಯು ಸುಳ್ಳಾಡನು, ಆದರೆ ಸುಳ್ಳುಸಾಕ್ಷಿಯು ಅಸತ್ಯವನ್ನೇ ಆಡುವನು.


ಸುಳ್ಳುಸಾಕ್ಷಿಯವನು ನಾಶವಾಗುವನು; ಆದರೆ ಕೇಳಿದ್ದನ್ನೇ ನುಡಿಯುವವನ ಸಾಕ್ಷಿ ಸದಾ ನಿಲ್ಲುವುದು.


ಕೆಟ್ಟದ್ದನ್ನು ಹಗೆ ಮಾಡುವುದೇ ಯೆಹೋವ ದೇವರ ಭಯವಾಗಿದೆ; ಗರ್ವ, ಅಹಂಕಾರ, ಕೆಟ್ಟನಡವಳಿಕೆ, ವಕ್ರ ಭಾಷಣಗಳನ್ನು ನಾನು ಹಗೆಮಾಡುತ್ತೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು