Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 5:16 - ಕನ್ನಡ ಸಮಕಾಲಿಕ ಅನುವಾದ

16 ನಿನ್ನ ಬುಗ್ಗೆಗಳು ಬೀದಿಗಳಲ್ಲಿ ಹರಡುವುದು ಯುಕ್ತವೋ? ನೀರಿನ ಒರತೆಗಳು ಬೀದಿಚೌಕಗಳಲ್ಲಿ ಹರಿಯುವುದು ಸರಿಯೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ನಿನ್ನ ಒರತೆಗಳು ಬಯಲಿನಲ್ಲಿಯೂ, ನಿನ್ನ ಕಾಲುವೆಗಳು ಬೀದಿಗಳಲ್ಲಿಯೂ ಹರಡಿ ಹರಿಯುವುದು ಹಿತವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ನಿನ್ನ ಬುಗ್ಗೆ ಹೊರಗೆ ಹೋಗುವುದು ಸರಿಯೇ? ನಿನ್ನ ಕಾಲುವೆ ಬೀದಿಚೌಕಗಳಲ್ಲಿ ಹರಡಿಕೊಳ್ಳುವುದು ಹಿತವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ನಿನ್ನ ಒರತೆಗಳು ಬೈಲಿನಲ್ಲಿಯೂ ನಿನ್ನ ಕಾಲುವೆಗಳು ಚೌಕದಲ್ಲಿಯೂ ಹರಡಿ ಹರಿಯುವದು ವಿಹಿತವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಬೇರೆ ಸ್ತ್ರೀಯರಲ್ಲಿ ನೀನು ಮಕ್ಕಳನ್ನು ಪಡೆಯುವುದು ಒಳ್ಳೆಯದಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 5:16
13 ತಿಳಿವುಗಳ ಹೋಲಿಕೆ  

ನಿನ್ನ ಹೆಂಡತಿಯು ನಿನ್ನ ಮನೆಯಲ್ಲಿರುವ ಫಲಭರಿತವಾದ ದ್ರಾಕ್ಷಿಬಳ್ಳಿಯ ಹಾಗೆ ಇರುವಳು. ನಿನ್ನ ಮೇಜಿನ ಸುತ್ತಲಿರುವ ನಿನ್ನ ಮಕ್ಕಳು, ಓಲಿವ್ ಮರಗಳ ಸಸಿಗಳ ಹಾಗೆ ಇರುವರು.


ಮಕ್ಕಳು ಯೆಹೋವ ದೇವರು ಕೊಟ್ಟ ಸೊತ್ತು. ಗರ್ಭಫಲವು ದೇವರ ಬಹುಮಾನ.


ದೇವರು ಅವರನ್ನು ಮರುಭೂಮಿಯಲ್ಲಿ ನಡಿಸಿದಾಗ, ಅವರಿಗೆ ದಾಹವಾಗಲಿಲ್ಲ. ದೇವರು ಅವರಿಗಾಗಿ ನೀರನ್ನು ಬಂಡೆಯೊಳಗಿಂದ ಹರಿಸಿದರು. ದೇವರು ಬಂಡೆಯನ್ನು ಸೀಳಲು, ನೀರು ರಭಸದಿಂದ ಹೊರಗೆ ಬಂತು.


ಮಹಾಸಭೆಯಲ್ಲಿ ದೇವರನ್ನು ಸ್ತುತಿಸಿರಿ. ಇಸ್ರಾಯೇಲರ ಸಮೂಹದವರಲ್ಲಿ ಯೆಹೋವ ದೇವರನ್ನು ಸ್ತುತಿಸಿರಿ.


ಅವನಿಗೆ ಮೂವತ್ತು ಮಂದಿ ಪುತ್ರರು, ಮೂವತ್ತು ಮಂದಿ ಪುತ್ರಿಯರು ಇದ್ದರು. ಪುತ್ರಿಯರನ್ನು ಹೊರಗೆ ಮದುವೆ ಮಾಡಿಕೊಟ್ಟನು; ಹೊರಗಿನಿಂದ ಮೂವತ್ತು ಮಂದಿ ಕನ್ಯೆಯರನ್ನು ತನ್ನ ಪುತ್ರರಿಗೆ ತೆಗೆದುಕೊಂಡನು. ಅವನು ಇಸ್ರಾಯೇಲಿಗೆ ಏಳು ವರ್ಷ ನ್ಯಾಯತೀರಿಸಿದನು.


ಆದಕಾರಣ ಆಕಾಶದಿಂದ ಮಂಜನ್ನು ಸುರಿಯುವ, ಧಾನ್ಯ, ಹೊಸ ದ್ರಾಕ್ಷಾರಸ ಸಮೃದ್ಧಿಯಾಗಿರುವ ನಾಡಿನಲ್ಲಿ, ಯಾಕೋಬನ ವಂಶದವರು ಸುರಕ್ಷಿತರಾದರು. ಇಸ್ರಾಯೇಲರು ನಿರ್ಭಯವಾಗಿ ವಾಸಿಸುವವರಾದರು.


ಇದಲ್ಲದೆ ಅವರು ರೆಬೆಕ್ಕಳನ್ನು ಹೀಗೆಂದು ಆಶೀರ್ವದಿಸಿದರು: “ನಮ್ಮ ಸಹೋದರಿಯೇ, ನೀನು ಸಹಸ್ರ ಸಹಸ್ರ ಮಕ್ಕಳಿಗೆ ತಾಯಿಯಾಗು. ನಿನ್ನ ಸಂತಾನದವರು ತಮ್ಮ ವೈರಿಗಳ ಪ್ರದೇಶಗಳನ್ನು ಸ್ವಾಧೀನಮಾಡಿಕೊಳ್ಳಲಿ.”


ನಿನ್ನ ಸ್ವಂತ ಕೊಳದ ನೀರನ್ನು ಕುಡಿ, ನಿನ್ನ ಸ್ವಂತ ಬಾವಿಯೊಳಗಿಂದ ಉಕ್ಕಿಬರುವ ಜಲವನ್ನು ಕುಡಿ.


ಅವು ನಿನಗೆ ಸ್ವಂತವಾಗಿರಲಿ; ಪರರು ಭಾಗಿಗಳಾಗಿರಬಾರದು.


ನಿನ್ನ ಬುಗ್ಗೆಯು ಆಶೀರ್ವಾದ ಹೊಂದಲಿ; ನಿನ್ನ ಆನಂದವು ಯೌವನದ ಕಾಲದ ಹೆಂಡತಿಯೊಂದಿಗಿರಲಿ.


“ಕದ್ದ ನೀರು ಸಿಹಿಯಾಗಿದೆ; ರಹಸ್ಯದಲ್ಲಿ ತಿನ್ನುವ ಆಹಾರವು ರುಚಿಯಾಗಿದೆ,” ಎಂದು ಹೇಳುತ್ತಾಳೆ.


ನನ್ನ ಪ್ರಿಯಳೇ, ನನ್ನ ವಧುವೇ, ನೀನು ಭದ್ರ ತೋಟವೂ ಬೇಲಿಯೊಳಗಿನ ಬುಗ್ಗೆಯೂ ಮುದ್ರಿಸಿದ ಬಾವಿಯೂ ಆಗಿರುವೆ.


ನೀನು ತೋಟದ ಬುಗ್ಗೆಯೂ ಉಕ್ಕಿಬರುವ ಒರತೆಯೂ ಲೆಬನೋನಿನಿಂದ ಹರಿಯುವ ಹೊಳೆಯೂ ಆಗಿರುವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು