Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 3:12 - ಕನ್ನಡ ಸಮಕಾಲಿಕ ಅನುವಾದ

12 ಏಕೆಂದರೆ ತಂದೆಯು ತನ್ನ ಮುದ್ದುಮಗನನ್ನು ಶಿಕ್ಷಿಸುವಂತೆ, ಯೆಹೋವ ದೇವರು ಯಾರನ್ನು ಪ್ರೀತಿಸುತ್ತಾರೋ, ಅವರನ್ನು ಶಿಸ್ತುಗೊಳಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ತಂದೆಯು ತನ್ನ ಮುದ್ದುಮಗನನ್ನು ಗದರಿಸುವಂತೆ ಯೆಹೋವನು ತಾನು ಪ್ರೀತಿಸುವವನನ್ನೇ ಗದರಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ತನ್ನ ಮುದ್ದು ಮಗನನ್ನು ತಂದೆ ಗದರಿಸುವಂತೆ, ಸರ್ವೇಶ್ವರ ತಾನು ಪ್ರೀತಿಸುವವರನ್ನು ಗದರಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ತಂದೆಯು ತನ್ನ ಮುದ್ದುಮಗನನ್ನು ಗದರಿಸುವಂತೆ ಯೆಹೋವನು ತಾನು ಪ್ರೀತಿಸುವವನನ್ನೇ ಗದರಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ತಂದೆಯು ತನ್ನ ಮಗನನ್ನು ಗದರಿಸುವಂತೆಯೇ ಯೆಹೋವನು ತಾನು ಪ್ರೀತಿಸುವವರನ್ನು ಶಿಕ್ಷಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 3:12
7 ತಿಳಿವುಗಳ ಹೋಲಿಕೆ  

ಇದಲ್ಲದೆ ಒಬ್ಬನು ತನ್ನ ಮಗನನ್ನು ಶಿಸ್ತುಪಡಿಸುವ ಪ್ರಕಾರ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಶಿಸ್ತಿನಿಂದ ನಡೆಸುತ್ತಾ ಬಂದರೆಂದು ನಿಮ್ಮ ಹೃದಯದಲ್ಲಿ ತಿಳಿದುಕೊಳ್ಳಿರಿ.


ನಾನು ಯಾರನ್ನು ಪ್ರೀತಿಸುತ್ತೇನೋ, ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ. ಆದ್ದರಿಂದ ನೀನು ಆಸಕ್ತನಾಗಿರು, ಪಶ್ಚಾತ್ತಾಪಪಡು.


ನಿನ್ನ ಮಕ್ಕಳನ್ನು ಶಿಕ್ಷಿಸಿದರೆ, ಅವರು ನಿನಗೆ ಮನಶಾಂತಿಯನ್ನು ಕೊಡುವರು; ಹೌದು, ಅವರು ನೀನು ಬಯಸುವ ಹರ್ಷವನ್ನು ನಿನಗೆ ತರುವರು.


ಬೆತ್ತವನ್ನು ಹಿಡಿಯದವನು ತನ್ನ ಮಗನನ್ನು ಹಗೆಮಾಡುತ್ತಾನೆ; ಆದರೆ ತಮ್ಮ ಮಕ್ಕಳನ್ನು ಪ್ರೀತಿಸುವವನು ಅವರನ್ನು ಶಿಸ್ತು ಮಾಡಲು ಜಾಗರೂಕರಾಗಿರುತ್ತಾನೆ.


ಒಬ್ಬ ತಂದೆಯು ತಮ್ಮ ಮಕ್ಕಳ ಮೇಲೆ ಅನುಕಂಪಗೊಳ್ಳುವಂತೆ, ಯೆಹೋವ ದೇವರು ತಮಗೆ ಭಯಪಡುವವರ ಮೇಲೆ ಅನುಕಂಪ ತೋರಿಸುವವರಾಗಿದ್ದಾರೆ.


ಏಕೆಂದರೆ, ಕರ್ತದೇವರು ಯಾರನ್ನು ಪ್ರೀತಿಸುತ್ತಾರೋ ಅವರನ್ನು ಶಿಕ್ಷಿಸುತ್ತಾರೆ. ತಾವು ಸ್ವೀಕರಿಸುವ ಪ್ರತಿಯೊಬ್ಬ ಮಗನನ್ನು ಹೊಡೆಯುತ್ತಾರೆ!” ಎಂಬುದಾಗಿದೆ.


ಯೆಹೋವ ದೇವರೇ, ನೀವು ಯಾರನ್ನು ಶಿಕ್ಷಿಸುವಿರೋ ಅಂಥವರು ಧನ್ಯರು. ನಿಮ್ಮ ನಿಯಮದಿಂದ ಯಾರಿಗೆ ಕಲಿಸಿಕೊಡುವಿರೋ ಅವರು ಧನ್ಯರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು