Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 28:17 - ಕನ್ನಡ ಸಮಕಾಲಿಕ ಅನುವಾದ

17 ನರಹತ್ಯದ ಅಪರಾಧ ಭಾವನೆಯಿಂದ ಇರುವವನು, ಮರಣದೆಡೆಗೆ ಓಡುತ್ತಿರುವನು, ಅವನನ್ನು ಯಾರೂ ತಡೆಯದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ನರಪ್ರಾಣ ತೆಗೆದ ದೋಷವನ್ನು ಕಟ್ಟಿಕೊಂಡವನು ಸಮಾಧಿಯ ಕಡೆಗೆ ಓಡುವನು, ಅವನನ್ನು ಯಾರೂ ತಡೆಯಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ನರಹತ್ಯಮಾಡಿದ ಪಾಪಾತ್ಮನು ಪಾತಾಳದತ್ತ ಓಡೋಡುತ್ತಿರುವನು; ಅವನನ್ನು ಯಾರೂ ತಡೆಯಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ನರಪ್ರಾಣ ತೆಗೆದ ದೋಷವನ್ನು ಕಟ್ಟಿಕೊಂಡವನು ಸಮಾಧಿಯ ಕಡೆಗೆ ಓಡುವನು; ಅವನನ್ನು ಯಾರೂ ತಡೆಯಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಕೊಲೆಮಾಡಿದ ಅಪರಾಧಿಯು ತನ್ನ ಸಮಾಧಿಗೆ ಓಡಿಹೋಗಲಿ. ಅವನಿಗೆ ಸಹಾಯಮಾಡಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 28:17
16 ತಿಳಿವುಗಳ ಹೋಲಿಕೆ  

“ಯಾರಾದರೂ ಮನುಷ್ಯರ ರಕ್ತವನ್ನು ಸುರಿಸುತ್ತಾರೋ, ಅವರ ರಕ್ತವನ್ನು ಮನುಷ್ಯರೇ ಸುರಿಸುವರು. ಏಕೆಂದರೆ ದೇವರು ತಮ್ಮ ಸ್ವರೂಪದಲ್ಲಿಯೇ ಮನುಷ್ಯರನ್ನು ಸೃಷ್ಟಿಸಿದರು.


ನೀನು ಅವನಿಗೆ, ‘ನೀನು ಕೊಂದುಹಾಕಿ ಸ್ವಾಧೀನ ಮಾಡಿಕೊಂಡಿಯಲ್ಲಾ. ಆದ್ದರಿಂದ ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲಿಯೇ ನಿನ್ನ ರಕ್ತವನ್ನು ನಿಶ್ಚಯವಾಗಿ ನೆಕ್ಕುವುವು,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.


ಆದರೆ ಒಬ್ಬನು ಮತ್ತೊಬ್ಬನನ್ನು ಕೊಲ್ಲಬೇಕೆಂಬ ಉದ್ದೇಶ ಇಟ್ಟುಕೊಂಡು ಮೋಸದಿಂದ ಕೊಂದರೆ, ಅವನು ಸಾಯುವಂತೆ ನೀನು ಅವನನ್ನು ನನ್ನ ಬಲಿಪೀಠದಿಂದ ದೂರ ತೆಗೆದುಕೊಂಡುಹೋಗಿ ಕೊಂದುಹಾಕಬೇಕು.


ಸರ್ಪವು ಪೌಲನ ಕೈಗೆ ಸುತ್ತಿಕೊಂಡಿರುವುದನ್ನು ದ್ವೀಪ ನಿವಾಸಿಗಳು ಕಂಡಾಗ, “ನಿಶ್ವಯವಾಗಿ ಈ ಮನುಷ್ಯನು ಕೊಲೆಗಾರನಾಗಿರಬೇಕು. ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ನ್ಯಾಯವು ಅವನನ್ನು ಜೀವಿಸಲಿಕ್ಕೆ ಬಿಡಲಿಲ್ಲ,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.


ನಾಬೋತನ ರಕ್ತವನ್ನೂ, ಅವನ ಪುತ್ರರ ರಕ್ತವನ್ನೂ ನಿನ್ನೆ ನಾನು ನಿಶ್ಚಯವಾಗಿ ನೋಡಿದೆನಲ್ಲಾ, ಎಂದು ಯೆಹೋವ ದೇವರು ಹೇಳುತ್ತಾರೆ. ಇದಲ್ಲದೆ ಇದೇ ಹೊಲದಲ್ಲಿ ನಿನಗೆ ಮುಯ್ಯಿಗೆ ಮುಯ್ಯಿ ಕೊಡುವೆನೆಂದು ಯೆಹೋವ ದೇವರು ಹೇಳುತ್ತಾರೆ. ಆದ್ದರಿಂದ ಯೆಹೋವ ದೇವರ ವಾಕ್ಯದ ಪ್ರಕಾರ ಎತ್ತಿಕೊಂಡು ಆ ಹೊಲದಲ್ಲಿ ಅವನನ್ನು ಹಾಕಿಬಿಡು,” ಎಂದನು.


“ಈಜೆಬೆಲಳನ್ನು ಕುರಿತು ಯೆಹೋವ ದೇವರು, ‘ನಾಯಿಗಳು ಈಜೆಬೆಲಳನ್ನು ಇಜ್ರೆಯೇಲ್ ಗೋಡೆಯ ಬಳಿಯಲ್ಲಿ ತಿನ್ನುವುವು.’


ಹೆಮ್ಮೆಯ ದೃಷ್ಟಿ, ಸುಳ್ಳಾಡುವ ನಾಲಿಗೆ, ನಿರಪರಾಧಿಯ ರಕ್ತವನ್ನು ಸುರಿಸುವ ಕೈಗಳು,


ಆದರೆ ನೆತನ್ಯನ ಮಗನಾದ ಇಷ್ಮಾಯೇಲನು ಎಂಟು ಜನರ ಸಂಗಡ ಯೋಹಾನಾನನಿಗೆ ತಪ್ಪಿಸಿಕೊಂಡು, ಅಮ್ಮೋನ್ಯರ ಬಳಿಗೆ ಹೋದನು.


ನೀನು ಭೂಮಿಯನ್ನು ವ್ಯವಸಾಯ ಮಾಡಿದರೂ ಅದು ಇನ್ನು ಮುಂದೆ ಫಲಿಸುವುದಿಲ್ಲ. ನೀನು ಭೂಲೋಕದಲ್ಲಿ ಅಲೆಮಾರಿಯಾಗಿ ತಿರುಗುವವನು ಆಗಿರುವೆ,” ಎಂದರು.


ಆದರೆ ಒಬ್ಬನು ತನ್ನ ನೆರೆಯವನನ್ನು ದ್ವೇಷಿಸಿ ಹೊಂಚು ಹಾಕಿ, ಅವನಿಗೆ ವಿರೋಧವಾಗಿ ಎದ್ದು, ಅವನನ್ನು ಸಾಯುವವರೆಗೂ ಹೊಡೆದು ಕೊಂದುಹಾಕಿ ಈ ಪಟ್ಟಣಗಳಿಗೆ ಓಡಿಹೋದರೆ,


ಅಬ್ಷಾಲೋಮನು ಓಡಿಹೋದನು. ಆಗ ಕಾವಲುಗಾರನು ಕಣ್ಣೆತ್ತಿ ನೋಡುವಾಗ, ಅವನ ಹಿಂಭಾಗದಲ್ಲಿ ಬೆಟ್ಟದ ಮಾರ್ಗವಾಗಿ ಅನೇಕ ಜನರು ಬರುತ್ತಿದ್ದರು. ಕಾವಲುಗಾರನು ಹೋಗಿ ಅರಸನಿಗೆ, “ನಾನು ಬೆಟ್ಟದ ಬದಿಯಲ್ಲಿರುವ ಹೋರೋನೈಮ್ ದಿಕ್ಕಿನಲ್ಲಿ ಮನುಷ್ಯರನ್ನು ಕಂಡೆನು,” ಎಂದು ಹೇಳಿದನು.


ಆಗ ಯೋವಾಬನ ಆಯುಧ ಹಿಡಿಯುವ ಹತ್ತು ಮಂದಿ ಯುವಕರು ಸುತ್ತಿಕೊಂಡು, ಅಬ್ಷಾಲೋಮನನ್ನು ಕೊಂದುಹಾಕಿದರು.


ಯೋವಾಬನು ಯೆಹೋವ ದೇವರ ಗುಡಾರಕ್ಕೆ ಓಡಿಹೋಗಿ ಬಲಿಪೀಠದ ಬಳಿಯಲ್ಲಿ ಇದ್ದಾನೆ, ಎಂಬ ಸುದ್ದಿ ಅರಸನಾದ ಸೊಲೊಮೋನನಿಗೆ ತಿಳಿಯಿತು. ಆಗ ಸೊಲೊಮೋನನು ಯೆಹೋಯಾದಾವನ ಮಗ ಬೆನಾಯನಿಗೆ, “ನೀನು ಹೋಗಿ ಅವನನ್ನು ಕೊಂದುಹಾಕು,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು