Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 17:2 - ಕನ್ನಡ ಸಮಕಾಲಿಕ ಅನುವಾದ

2 ನಾಚಿಕೆಪಡಿಸುವ ಮಗನ ಮೇಲೆ ಜಾಣನಾದ ಸೇವಕನು ಆಳುವವನಾಗಿ ಸಹೋದರರಲ್ಲಿ ಬಾಧ್ಯತೆಗೆ ಪಾಲುಗಾರನಾಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಜಾಣನಾದ ಆಳು ಮಾನಕಳೆದ ಮನೆಮಗನ ಮೇಲೆ ಅಧಿಕಾರಮಾಡುವನು, ಮನೆಮಕ್ಕಳೊಂದಿಗೆ ಬಾಧ್ಯತೆಯನ್ನು ಹೊಂದುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಜಾಣನಾದ ಆಳು ಮಾನಕಳೆದ ಮನೆಮಗನ ಮೇಲೆ ಅಧಿಕಾರ ನಡೆಸುವನು, ಮನೆಮಕ್ಕಳ ಬಾಧ್ಯತೆಯಲ್ಲೂ ಪಾಲುಗಾರನಾಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಜಾಣನಾದ ಆಳು ಮಾನಕಳೆದ ಮನೆಮಗನ ಮೇಲೆ ಅಧಿಕಾರಮಾಡುವನು; ಮನೆಮಕ್ಕಳೊಂದಿಗೆ ಬಾಧ್ಯತೆಯನ್ನು ಹೊಂದುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಜ್ಞಾನಿಯಾದ ಸೇವಕನು ತನ್ನ ಯಜಮಾನನ ಅಯೋಗ್ಯ ಮಗನನ್ನೇ ತನ್ನ ಹತೋಟಿಯಲ್ಲಿಟ್ಟುಕೊಳ್ಳುವನು; ಅವನ ಸಹೋದರರೊಂದಿಗೂ ಆಸ್ತಿಯಲ್ಲಿ ಪಾಲು ಹೊಂದುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 17:2
9 ತಿಳಿವುಗಳ ಹೋಲಿಕೆ  

ಬೇಸಿಗೆಯಲ್ಲಿ ಫಸಲನ್ನು ಕೂಡಿಸುವವರು ಬುದ್ಧಿವಂತ ಮಕ್ಕಳು, ಸುಗ್ಗಿಯಲ್ಲಿ ನಿದ್ರೆ ಮಾಡುವವರು ನಾಚಿಕೆಗೆಟ್ಟ ಮಕ್ಕಳು.


ಬುದ್ಧಿಯ ಹೇಳಿಕೆಗೆ ಕಿವಿಗೊಡದ ಮೂಢ ಮುದಿ ಅರಸನಿಗಿಂತ ಬಡವನಾದರೂ ಜ್ಞಾನಿಯಾದ ಒಬ್ಬ ಯುವಕನೇ ಮೇಲು.


ಯಾರು ತಂದೆಯನ್ನು ದೋಚಿಕೊಂಡು ತಾಯಿಯನ್ನು ಓಡಿಸುವರೋ ನಾಚಿಕೆಯನ್ನುಂಟುಮಾಡಿ, ನಿಂದೆಯನ್ನು ತರುತ್ತಾರೆ.


ಜ್ಞಾನವುಳ್ಳ ಸೇವಕನ ಕಡೆಗೆ ಅರಸನ ದಯೆ ಇದೆ; ಆದರೆ ಮಾನಗೇಡಿ ಸೇವಕನ ಮೇಲೆ ಅರಸನ ಕೋಪ ಎರಗುತ್ತದೆ.


ಬೆತ್ತ ಮತ್ತು ಬೆದರಿಕೆಗಳು ಜ್ಞಾನವನ್ನುಂಟುಮಾಡುತ್ತವೆ; ಆದರೆ ಶಿಕ್ಷಿಸದೆ ಬಿಟ್ಟ ಹುಡುಗನು ತನ್ನ ತಾಯಿಗೆ ಅವಮಾನವನ್ನು ತರುತ್ತಾನೆ.


ತನ್ನ ಮನೆಯವರನ್ನು ಬಾಧಿಸುವವನು ಗಾಳಿಯನ್ನು ಬಾಧ್ಯವಾಗಿ ಹೊಂದುವನು; ಮೂರ್ಖನು ಜ್ಞಾನನಿಗೆ ಸೇವಕನಾಗಿರುವನು.


ವಿವಾದದೊಂದಿಗೆ ತುಂಬಿದ ಔತಣದ ಮನೆಗಿಂತ, ಶಾಂತಿ ಸಮಾಧಾನದ ಒಣ ತುತ್ತು ಮೇಲು.


ಸೋಸುವುದಕ್ಕೆ ಬೆಳ್ಳಿಗೆ ಕುಲುಮೆ ಪುಟ, ಬಂಗಾರಕ್ಕೆ ಆವಿಗೆ; ಆದರೆ ಯೆಹೋವ ದೇವರು ಹೃದಯಗಳನ್ನು ಪರಿಶೋಧಿಸುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು