Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 14:11 - ಕನ್ನಡ ಸಮಕಾಲಿಕ ಅನುವಾದ

11 ದುಷ್ಟರ ಮನೆಯು ನಾಶವಾಗುವುದು, ಆದರೆ ಯಥಾರ್ಥವಂತರ ಗುಡಾರವು ಏಳಿಗೆಯಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ದುಷ್ಟರ ಮನೆಗೆ ನಾಶನ, ಶಿಷ್ಟರ ಗುಡಾರಕ್ಕೆ ಏಳಿಗೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ದುಷ್ಟರ ಮನೆಮಠ ನಿರ್ಮೂಲವಾಗುವುದು; ಸಜ್ಜನರ ಗುಡಾರ ಉದ್ಧಾರವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ದುಷ್ಟರ ಮನೆಗೆ ನಾಶನ; ಶಿಷ್ಟರ ಗುಡಾರಕ್ಕೆ ಏಳಿಗೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ದುಷ್ಟನ ಮನೆ ನಾಶಕರ; ಶಿಷ್ಟನ ಮನೆ ಅಭಿವೃದ್ಧಿಕರ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 14:11
21 ತಿಳಿವುಗಳ ಹೋಲಿಕೆ  

ದುಷ್ಟರ ಮನೆಯ ಮೇಲೆ ದೈವಶಾಪವಿದೆ. ಆದರೆ ನೀತಿವಂತರ ನಿವಾಸದ ಮೇಲೆ ದೈವಾಶೀರ್ವಾದವಿರುವುದು.


ದುಷ್ಟರು ನೆಲಕ್ಕುರುಳಿ ನಿರ್ಮೂಲರಾಗುವರು, ಆದರೆ ನೀತಿವಂತರ ಮನೆಯು ಸ್ಥಿರವಾಗಿ ನಿಲ್ಲುವುದು.


‘ನಾನು ಶಾಪವನ್ನು ಕಳುಹಿಸುತ್ತೇನೆ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ. ಅದು ಕಳ್ಳನ ಮನೆಯಲ್ಲಿಯೂ, ನನ್ನ ಹೆಸರಿನಿಂದ ಸುಳ್ಳಾಗಿ ಆಣೆ ಇಡುವವನ ಮನೆಯಲ್ಲಿಯೂ ಪ್ರವೇಶಿಸಿ, ಅವನ ಮನೆಯಲ್ಲಿ ನಿಂತು, ಅದನ್ನೂ, ಅದರ ಮರಗಳನ್ನೂ, ಅದರ ಕಲ್ಲುಗಳನ್ನೂ ನಾಶಮಾಡುವುದು.’ ”


ನೀತಿವಂತನು ದುಷ್ಟರ ಮನೆಯನ್ನು ಗಮನಿಸುತ್ತಾನೆ; ದುಷ್ಟರನ್ನು ಕೇಡಿಗೆ ತಳ್ಳುವನು.


ನೀವು, ‘ಪ್ರಧಾನನ ಮನೆ ಈಗ ಎಲ್ಲಿದೆ? ದುಷ್ಟರು ವಾಸಿಸಿದ ಗುಡಾರ ಎಲ್ಲಿ?’ ಎನ್ನುತ್ತೀರಿ.


ಜ್ಞಾನವಂತರ ನಿವಾಸದಲ್ಲಿ ಆಯ್ದ ಐಶ್ವರ್ಯವೂ, ಎಣ್ಣೆಯೂ ಇರುತ್ತವೆ; ಆದರೆ ಬುದ್ಧಿಹೀನನು ಇದ್ದದ್ದೆಲ್ಲವನ್ನು ನುಂಗಿಬಿಡುತ್ತಾನೆ.


ತನ್ನ ಐಶ್ವರ್ಯದಲ್ಲಿ ಭರವಸೆ ಇಡುವವನು ಬಿದ್ದುಹೋಗುವನು, ಆದರೆ ನೀತಿವಂತರು ಹಸಿರೆಲೆಯ ಹಾಗೆ ಚಿಗುರುವರು.


ಅಂಥಾ ಮನೆ ಮೇಲೆ ಒರಗಿಕೊಂಡರೆ, ಅದು ನಿಲ್ಲದು; ಅದನ್ನು ಬಿಗಿಹಿಡಿದರೆ, ಅದು ತಡೆಯಲಾರದು.


ನಿನ್ನ ಹೆಂಡತಿಯು ನಿನ್ನ ಮನೆಯಲ್ಲಿರುವ ಫಲಭರಿತವಾದ ದ್ರಾಕ್ಷಿಬಳ್ಳಿಯ ಹಾಗೆ ಇರುವಳು. ನಿನ್ನ ಮೇಜಿನ ಸುತ್ತಲಿರುವ ನಿನ್ನ ಮಕ್ಕಳು, ಓಲಿವ್ ಮರಗಳ ಸಸಿಗಳ ಹಾಗೆ ಇರುವರು.


ನಿಶ್ಚಯವಾಗಿ ದುಷ್ಟರ ನೆಲೆಯು ಹೀಗೆಯೇ ಇರುವುದು; ದೇವರನ್ನು ಅರಿಯದವನ ಸ್ಥಿತಿ ಇದೇ.”


ದೇವರಿಲ್ಲದವರ ಸಹವಾಸ ಬಂಜರು, ಬೆಂಕಿಯು ಲಂಚಕೋರರ ಮನೆಗಳನ್ನು ಸುಟ್ಟುಹಾಕುವುದು.


ನೀನು ಶುದ್ಧನೂ, ಯಥಾರ್ಥನೂ ಆಗಿದ್ದರೆ, ನಿಶ್ಚಯವಾಗಿ ಈಗಲೇ ದೇವರು ನಿನಗೋಸ್ಕರ ಎಚ್ಚೆತ್ತು, ನಿನ್ನ ನೀತಿಯ ನಿವಾಸವನ್ನು ಸಮೃದ್ಧಿಗೊಳಿಸುವರು.


ಯೆಹೋವ ದೇವರು ಗರ್ವಿಷ್ಠರ ಮನೆಯನ್ನು ಕೆಡವಿಬಿಡುವರು, ಆದರೆ ವಿಧವೆಯರ ಮೇರೆಯನ್ನು ಅವರು ನೆಲೆಗೊಳಿಸುವರು.


ನಿನ್ನ ಶತ್ರುಗಳಿಗೆ ನಾಚಿಕೆಯಾಗುವುದು; ದುಷ್ಟರ ವಾಸಸ್ಥಳವು ಇಲ್ಲದೆ ಹೋಗುವುದು.”


ಇನ್ನು ಸ್ವಲ್ಪ ಸಮಯದಲ್ಲಿ ದುಷ್ಟನು ಕಾಣದೆ ಹೋಗುವನು. ಅವನನ್ನು ಹುಡುಕಿದರೂ ಸಿಕ್ಕುವುದೇ ಇಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು