Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜ್ಞಾನೋಕ್ತಿಗಳು 10:32 - ಕನ್ನಡ ಸಮಕಾಲಿಕ ಅನುವಾದ

32 ಯೋಗ್ಯವಾದದ್ದು ಯಾವುದೆಂದು ನೀತಿವಂತರ ತುಟಿಗಳಿಗೆ ತಿಳಿಯುವುದು, ಆದರೆ, ದುಷ್ಟರ ಬಾಯಿ ಮೂರ್ಖತನವನ್ನೇ ಹೊರಗೆಡವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಶಿಷ್ಟನ ತುಟಿಯಲ್ಲಿ ಹಿತವಚನ, ದುಷ್ಟನ ಬಾಯಲ್ಲಿ ನೀಚವಚನ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಸಜ್ಜನರ ಬಾಯಲ್ಲಿ ಹಿತವಚನ; ದುರ್ಜನರ ಬಾಯಲ್ಲಿ ನೀಚವಚನ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಶಿಷ್ಟನ ತುಟಿಯಲ್ಲಿ ಉಚಿತವಚನ; ದುಷ್ಟನ ಬಾಯಲ್ಲಿ ನೀಚವಚನ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಒಳ್ಳೆಯವನು ಯೋಗ್ಯವಾದವುಗಳನ್ನು ಹೇಳುವನು. ಕೆಡುಕನು ಸುಳ್ಳನ್ನು ಮಾತ್ರ ಹೇಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜ್ಞಾನೋಕ್ತಿಗಳು 10:32
13 ತಿಳಿವುಗಳ ಹೋಲಿಕೆ  

ನೀತಿವಂತರ ಹೃದಯವು ಹೇಗೆ ಉತ್ತರಿಸಬೇಕೆಂದು ಯೋಚಿಸುತ್ತದೆ. ಆದರೆ ದುಷ್ಟರ ಬಾಯಿಯು ಕೆಟ್ಟವುಗಳನ್ನು ಹೊರಗೆಡವುತ್ತದೆ.


ಅಜಾಗರೂಕತೆಯ ಮಾತುಗಳು ಖಡ್ಗಗಳಂತೆ ಚುಚ್ಚುತ್ತವೆ, ಆದರೆ ಜ್ಞಾನವಂತರ ನಾಲಿಗೆಯು ಸ್ವಸ್ಥತೆಯನ್ನು ತರುವುದು.


ದುಷ್ಟರ ಮಾತುಗಳು ರಕ್ತಕ್ಕೆ ಹೊಂಚು, ಯಥಾರ್ಥವಂತರ ನುಡಿ ಅವರನ್ನು ಬಿಡಿಸುವುದು.


ಯಥಾರ್ಥವಂತರ ಆಶೀರ್ವಾದದಿಂದ ಪಟ್ಟಣವು ಪ್ರಗತಿಯಾಗುತ್ತದೆ, ಆದರೆ ದುಷ್ಟರ ಬಾಯಿಂದ ಅದು ನಾಶವಾಗುತ್ತದೆ.


ಜ್ಞಾನವು ದುಷ್ಟರ ಮಾರ್ಗಗಳಿಂದಲೂ, ವಕ್ರರ ಮಾತುಗಳಿಂದಲೂ ಕಾಪಾಡುವುದು.


ಪ್ರಸಂಗಿಯು ಸೂಕ್ತ ವಾಕ್ಯಗಳನ್ನು ಹುಡುಕಿ ಕಂಡುಹಿಡಿದನು. ಹಾಗೆ ಬರೆದವುಗಳು ಯಥಾರ್ಥ ಮತ್ತು ಸತ್ಯವಾದ ಮಾತುಗಳು.


ಜ್ಞಾನಿಯ ನಾಲಿಗೆಯು ಒಳ್ಳೆಯ ಪರಿಜ್ಞಾನವನ್ನು ಹರಡುತ್ತದೆ. ಆದರೆ ಬುದ್ಧಿಹೀನರ ಬಾಯಿಯು ಮೂರ್ಖತನವನ್ನು ಹೊರಗೆಡವುತ್ತದೆ.


ನಿಂದೆಗೆ ಹೊರತಾದ ಸ್ವಸ್ಥ ಮಾತುಗಳನ್ನಾಡುವವನಾಗಿರು. ಇದರಿಂದ ವಿರೋಧಿಸುವವನು ನಿನ್ನ ವಿಷಯದಲ್ಲಿ ಕೆಟ್ಟದ್ದೇನೂ ಹೇಳುವುದಕ್ಕಾಗದೆ ನಾಚಿಕೆ ಪಡುವನು.


ಆದ್ದರಿಂದ ಅರಸನೇ, ನನ್ನ ಆಲೋಚನೆಯು ನಿನಗೆ ಸರಿಯಾದದ್ದಾಗಿರಲಿ. ಸರಿಯಾದದ್ದನ್ನು ಮಾಡುವುದರಿಂದ ನಿನ್ನ ಪಾಪಗಳನ್ನು ಬಿಟ್ಟುಬಿಡು. ದಬ್ಬಾಳಿಕೆಯಾದವರಿಗೆ ದಯೆ ತೋರುವುದರಿಂದ ನಿನ್ನ ದುಷ್ಟತ್ವವನ್ನು ಬಿಟ್ಟುಬಿಡು. ಹೀಗಾದರೆ ಒಂದು ವೇಳೆ ನಿನ್ನ ಸಮೃದ್ಧಿ ಮುಂದುವರಿಯುವುದು.”


ಜ್ಞಾನಿಯ ಮಾತುಗಳು ಹಿತಕರ. ಆದರೆ ಬುದ್ಧಿಹೀನನ ಮಾತುಗಳು ಅವನಿಗೆ ವಿನಾಶಕರ.


ವಕ್ರಮಾತುಗಳನ್ನು ನಿನ್ನ ಬಾಯಿಂದ ತೊಲಗಿಸಿ; ಕೆಟ್ಟ ಮಾತುಗಳು ನಿನ್ನ ತುಟಿಗಳಿಂದ ದೂರವಿರಲಿ.


ತೊಂದರೆಕೊಡುವವನೂ ಕೆಡುಕನೂ ಆಗಿರುವವನ ಬಾಯಿಂದ ಕುಟಿಲ ಮಾತೇ ಬರುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು