ಜೆಕರ್ಯ 5:2 - ಕನ್ನಡ ಸಮಕಾಲಿಕ ಅನುವಾದ2 ಆಗ ದೂತನು ನನಗೆ, “ಏನು ನೋಡುತ್ತೀ?” ಎಂದಾಗ, ನಾನು, “ಹಾರುವ ಸುರುಳಿಯನ್ನು ನೋಡುತ್ತಿದ್ದೇನೆ. ಅದರ ಉದ್ದವು ಒಂಬತ್ತು ಮೀಟರ್, ಅದರ ಅಗಲವು ನಾಲ್ಕುವರೆ ಮೀಟರ್ ಇದೆ,” ಎಂದೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ಆಗ ದೂತನು ನನಗೆ, “ನಿನಗೆ ಏನು ಕಾಣಿಸುತ್ತದೆ?” ಎಂದಾಗ ನಾನು, ಹಾರುತ್ತಿರುವ ಒಂದು ಸುರುಳಿಯು ಕಾಣಿಸುತ್ತದೆ ಅದರ ಉದ್ದ ಇಪ್ಪತ್ತು ಮೊಳ, ಅಗಲ ಹತ್ತು ಮೊಳ ಎಂದು ಉತ್ತರಕೊಟ್ಟೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 ದೂತನು ನನ್ನನ್ನು, “ನಿನಗೆ ಏನು ಕಾಣಿಸುತ್ತಿದೆ?” ಎಂದು ಕೇಳಿದನು. ಅದಕ್ಕೆ ನಾನು “ಹಾರುತ್ತಿರುವ ಪತ್ರದ ಸುರುಳಿ ಕಾಣಿಸುತ್ತಿದೆ. ಅದರ ಉದ್ದ ಒಂಬತ್ತು ಮೀಟರ್, ಅಗಲ ನಾಲ್ಕುವರೆ ಮೀಟರ್,” ಎಂದು ಉತ್ತರಕೊಟ್ಟೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ಅವನು ನನ್ನನ್ನು - ನಿನಗೆ ಏನು ಕಾಣಿಸುತ್ತಿದೆ ಎಂದು ಕೇಳಿದ್ದಕ್ಕೆ - ಹಾರುತ್ತಿರುವ ಒಂದು ಸುರಳಿಯು ಕಾಣಿಸುತ್ತದೆ; ಅದರ ಉದ್ದ ಇಪ್ಪತ್ತು ಮೊಳ, ಅಗಲ ಹತ್ತು ಮೊಳ ಎಂದುತ್ತರ ಕೊಟ್ಟೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್2 “ಏನನ್ನು ನೋಡುತ್ತೀ?” ಎಂದು ದೇವದೂತನು ಕೇಳಿದನು. “ಒಂದು ಹಾರುವ ಸುರುಳಿ, ಅದು ಮೂವತ್ತು ಅಡಿ ಉದ್ದ, ಹದಿನೈದು ಅಡಿ ಅಗಲವಿದೆ” ಎಂದು ನಾನು ಉತ್ತರಿಸಿದೆನು. ಅಧ್ಯಾಯವನ್ನು ನೋಡಿ |