ಜೆಕರ್ಯ 4:3 - ಕನ್ನಡ ಸಮಕಾಲಿಕ ಅನುವಾದ3 ಅದರ ತಲೆಯ ಮೇಲಿರುವ ಏಳು ದೀಪಗಳಿಗೆ ಏಳು ಕೊಳವೆಗಳಿವೆ. ಅದರ ಬಳಿಯಲ್ಲಿ ಎರಡು ಹಿಪ್ಪೆಮರಗಳು, ಪಾತ್ರೆಯ ಬಲಗಡೆಯಲ್ಲಿ ಒಂದೂ, ಪಾತ್ರೆಯ ಎಡಗಡೆಯಲ್ಲಿ ಒಂದೂ ಇದ್ದವು,” ಎಂದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಆ ಪಾತ್ರೆಯ ಬಲಗಡೆಯಲ್ಲಿ ಒಂದು ಎಣ್ಣೆಯ ಮರ, ಎಡಗಡೆಯಲ್ಲಿ ಒಂದು ಎಣ್ಣೆಯ ಮರ, ಮತ್ತು ಎರಡು ಮರಗಳು ಅದರ ಪಕ್ಕಗಳಲ್ಲಿ ಇದೆ” ಎಂದು ಹೇಳಿದೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ದೀಪಸ್ತಂಭದ ಪಕ್ಕದಲ್ಲಿ ಬಲಗಡೆ ಒಂದು, ಎಡಗಡೆ ಇನ್ನೊಂದು - ಹೀಗೆ ಎರಡು ಎಣ್ಣೆಯ ಮರಗಳಿವೆ,” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಆ ಪಾತ್ರೆಯ ಬಲಗಡೆಯಲ್ಲಿ ಒಂದು ಎಣ್ಣೆಯ ಮರ, ಎಡಗಡೆಯಲ್ಲಿ ಒಂದು ಎಣ್ಣೆಯ ಮರ, ಅಂತು ಎರಡು ಮರಗಳು ಅದರ ಪಕ್ಕಗಳಲ್ಲಿವೆ ಎಂದು ಹೇಳಿದೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಆ ಬೋಗುಣಿಯ ಬಳಿಯಲ್ಲಿ ಎರಡು ಆಲೀವ್ ಮರಗಳಿದ್ದವು. ಒಂದು ಬಲಬದಿಯಲ್ಲಿಯೂ ಇನ್ನೊಂದು ಎಡಬದಿಯಲ್ಲಿಯೂ ಇತ್ತು. ಈ ಮರಗಳು ದೀಪಗಳಿಗೆ ಬೇಕಾದ ಎಣ್ಣೆಯನ್ನು ತಯಾರು ಮಾಡುತ್ತಿದ್ದವು.” ಅಧ್ಯಾಯವನ್ನು ನೋಡಿ |