Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜೆಕರ್ಯ 4:10 - ಕನ್ನಡ ಸಮಕಾಲಿಕ ಅನುವಾದ

10 “ಆ ಏಳು ದೀಪಗಳು ಭೂಮಿಯಲ್ಲೆಲ್ಲಾ ಅತ್ತಿತ್ತ ಓಡಾಡುವ ಯೆಹೋವ ದೇವರ ಕಣ್ಣುಗಳು. ಜನರು ನೂಲುಗುಂಡನ್ನು ಜೆರುಬ್ಬಾಬೆಲನ ಕೈಯಲ್ಲಿ ನೋಡುವಾಗ ಸಂತೋಷಪಡುವರು. ಹೀಗಿರುವುದರಿಂದ ಅಲ್ಪ ಕಾರ್ಯಗಳ ದಿನವನ್ನು ತಿರಸ್ಕರಿಸಿದವರು ಯಾರು?”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಆಗ ದೂತನು “ಈ ದೀಪಗಳಿಂದ ಸೂಚಿತವಾದ ಯೆಹೋವನ ಏಳು ಕಣ್ಣುಗಳು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ಪ್ರಸರಿಸುತ್ತಾ ತೂಕದ ಗುಂಡು ಜೆರುಬ್ಬಾಬೆಲನ ಕೈಯಲ್ಲಿರುವುದನ್ನು ಸಂತೋಷದಿಂದ ನೋಡುತ್ತೇವೆ. ಹೀಗಿರುವಲ್ಲಿ ಅಲ್ಪ ಕಾರ್ಯಗಳ ದಿನವನ್ನು ತಿರಸ್ಕರಿಸಿದವರು ಯಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಆಗ ದೂತನು, “ಈ ಸ್ತಂಭದಲ್ಲಿರುವ ಏಳು ದೀಪಗಳು ಭೂಲೋಕದ ಎಲ್ಲಾ ಭಾಗಗಳನ್ನು ವೀಕ್ಷಿಸುವ ಸರ್ವೇಶ್ವರಸ್ವಾಮಿಯ ಏಳು ಕಣ್ಣುಗಳನ್ನು ಸೂಚಿಸುತ್ತವೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಈ [ದೀಪಗಳಿಂದ ಸೂಚಿತವಾದ] ಯೆಹೋವನ ಏಳು ಕಣ್ಣುಗಳು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ಪ್ರಸರಿಸುತ್ತಾ ತೂಕದ ಗುಂಡು ಜೆರುಬ್ಬಾಬೆಲನ ಕೈಯಲ್ಲಿರುವದನ್ನು ಸಂತೋಷದಿಂದ ನೋಡುತ್ತವೆ; ಹೀಗಿರುವಲ್ಲಿ ಅಲ್ಪಕಾರ್ಯಗಳ ದಿನವನ್ನು ಯಾರು ತಿರಸ್ಕರಿಸಾರು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಒಂದು ಸಣ್ಣ ರೀತಿಯ ಪ್ರಾರಂಭಕ್ಕೆ ಜನರು ನಾಚುವುದಿಲ್ಲ. ಜೆರುಬ್ಬಾಬೆಲನು ನೂಲುಗುಂಡು ಹಿಡಿದುಕೊಂಡು ಸಂಪೂರ್ಣವಾದ ಆಲಯವನ್ನು ಅಳತೆ ಮಾಡುವಾಗ ಜನರು ಅತಿಯಾಗಿ ಸಂತೋಷಿಸುವರು. ಈಗ ಆ ಕಲ್ಲಿನ ಏಳು ಬದಿಗಳು ಯೆಹೋವನ ಕಣ್ಣುಗಳು ಎಲ್ಲಾ ದಿಕ್ಕುಗಳನ್ನು ನೋಡುತ್ತಿರುವುದನ್ನು ಸೂಚಿಸುತ್ತವೆ. ಅವು ಭೂಲೋಕದಲ್ಲಿರುವ ಎಲ್ಲಾ ಸಂಗತಿಗಳನ್ನು ನೋಡುತ್ತಿವೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜೆಕರ್ಯ 4:10
26 ತಿಳಿವುಗಳ ಹೋಲಿಕೆ  

ನಿನ್ನ ಆರಂಭವು ಅಲ್ಪವಾಗಿದ್ದರೂ, ನಿನ್ನ ಅಂತ್ಯವು ಬಹಳವಾಗಿ ವೃದ್ಧಿ ಹೊಂದುವುದು.


ಏಕೆಂದರೆ ಯೆಹೋವ ದೇವರಿಗೆ ಪೂರ್ಣವಾಗಿ ಸಮರ್ಪಿಸಿಕೊಂಡವರ ಹೃದಯವನ್ನು ಬಲಪಡಿಸುವುದಕ್ಕೆ ಅವರ ಕಣ್ಣುಗಳು ಭೂಲೋಕದ ಎಲ್ಲಾ ಕಡೆ ಇವೆ. ಆದರೆ ಈಗ ನೀನು ಬುದ್ಧಿಹೀನನಾಗಿ ನಡೆದುಕೊಂಡಿದ್ದೀಯೆ. ನಿಶ್ಚಯವಾಗಿ ಇಂದಿನಿಂದ ನಿನಗೆ ಯುದ್ಧಗಳು ಇದ್ದೇ ಇರುತ್ತವೆ,” ಎಂದನು.


ಈ ಆಲಯದ ಅದರ ಪೂರ್ವದ ಮಹಿಮೆಯನ್ನು ನೋಡಿದವರೊಳಗೆ ಉಳಿದವನು ನಿಮ್ಮಲ್ಲಿ ಯಾರು ಇದ್ದಾರೆ? ಈಗ ಅದು ಹೇಗೆ ಕಾಣುತ್ತದೆ? ಇದು ನಿಮ್ಮ ದೃಷ್ಟಿಗೆ ಏನೂ ಇಲ್ಲದ ಹಾಗೆ ತೋರುತ್ತದಲ್ಲವೋ?


ಯೆಹೋವ ದೇವರ ಕಣ್ಣುಗಳು ಪ್ರತಿಯೊಂದು ಸ್ಥಳದಲ್ಲಿ ಇವೆ. ಕೆಟ್ಟವರನ್ನೂ ಒಳ್ಳೆಯವರನ್ನೂ ನೋಡುತ್ತಾ ಇರುವರು.


ಆಗ ನಾನು, ಸಿಂಹಾಸನದ ಮಧ್ಯದಲ್ಲಿಯೂ ನಾಲ್ಕು ಜೀವಿಗಳು ಮತ್ತು ಹಿರಿಯರ ಮಧ್ಯದಲ್ಲಿಯೂ ಒಂದು ಕುರಿಮರಿಯು ಬಲಿಗೋಸ್ಕರ ವಧೆಯಾಗಿದ್ದಂತೆ ನಿಂತಿರುವುದನ್ನು ಕಂಡೆನು. ಅದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದವು. ಅವು ಭೂಮಿಯ ಮೇಲೆಲ್ಲಾ ಕಳುಹಿಸಲಾದ ದೇವರ ಏಳು ಆತ್ಮಗಳು.


ನಾನು ಯೆಹೋಶುವನ ಮುಂದೆ ಇಟ್ಟಿರುವ ಕಲ್ಲನ್ನು ನೋಡು. ಆ ಒಂದು ಕಲ್ಲಿನ ಮೇಲೆ ಏಳು ಕಣ್ಣುಗಳು ಇರುವಂತೆ ನಾನು ಅದರ ಮೇಲೆ ಒಂದು ಶಾಸನವನ್ನು ಕೆತ್ತಿಸುವೆನು. ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ. ಆ ದೇಶದ ಅಪರಾಧವನ್ನು ಒಂದೇ ದಿವಸದಲ್ಲಿ ತೊಲಗಿಸುವೆನು.


ನೀತಿವಂತರ ಮಾರ್ಗವು ಮುಂಜಾನೆಯ ಸೂರ್ಯನ ಬೆಳಕಿನಂತೆ ಇದ್ದು, ದಿನದ ಪೂರ್ಣ ಬೆಳಕಿನವರೆಗೂ ಪ್ರಕಾಶಿಸಿ ಹೊಳೆಯುತ್ತಾ ಇರುವುದು.


ನೀವು ಅದನ್ನು ಕಾಣುವಾಗ, ನಿಮ್ಮ ಹೃದಯವು ಸಂತೋಷಿಸುವುದು. ನಿಮ್ಮ ಎಲುಬುಗಳು ಹಸಿರು ಹುಲ್ಲಿನ ಹಾಗೆ ಚಿಗುರುವುವು. ಯೆಹೋವ ದೇವರ ಕೈ ತಮ್ಮ ಸೇವಕರ ಮೇಲೆಯೂ, ಅವರ ರೌದ್ರವು ತಮ್ಮ ಶತ್ರುಗಳ ಮೇಲೆ ಕಾಣಬರುವುದು.


ಆಕೆಯ ಸಾಂತ್ವನ ಸ್ತನವನ್ನು ಕುಡಿದು ನೀವು ತೃಪ್ತಿಯಾಗಿರುವಿರಿ. ನೀವು ಕುಡಿಯುವಿರಿ ಮತ್ತು ಅದರ ಸಮೃದ್ಧಿಯು ನಿಮ್ಮ ಸಂತೋಷಕ್ಕೆ ಕಾರಣವಾಗಿದೆ.”


ಆಗ ದೇವರ ಸನ್ನಿಧಿಯಲ್ಲಿ ನಿಂತಿರುವ ಏಳು ದೇವದೂತರನ್ನು ಕಂಡೆನು. ಅವರಿಗೆ ಏಳು ತುತೂರಿಗಳನ್ನು ಕೊಡಲಾಗಿತ್ತು.


ನಾವು ಯೆಹೋವ ದೇವರನ್ನು ತಿಳಿದುಕೊಳ್ಳಲು, ಅವರನ್ನು ಹಿಂಬಾಲಿಸಿದರೆ ತಿಳಿದುಕೊಳ್ಳುವೆವು. ಅವರ ಆಗಮನವು ಅರುಣೋದಯದಂತೆ ನಿಶ್ಚಯ. ಅವರು ಮಳೆಯಂತೆಯೂ ಮುಂಗಾರಿನಂತೆಯೂ, ಭೂಮಿಯನ್ನು ತಂಪು ಮಾಡುವ ಹಿಂಗಾರಿನಂತೆಯೂ ಬಳಿಗೆ ಬರುವರು.


ಆದರೆ ಈ ನಿನ್ನ ತಮ್ಮ ಸತ್ತುಹೋಗಿದ್ದನು, ತಿರುಗಿ ಬದುಕಿದ್ದಾನೆ; ಕಳೆದುಹೋಗಿದ್ದನು, ಸಿಕ್ಕಿದ್ದಾನೆ. ಆದಕಾರಣ ನಾವು ಉಲ್ಲಾಸಪಟ್ಟು ಆನಂದಪಡುವುದು ಯುಕ್ತವಾದದ್ದೇ ಎಂದು ಹೇಳಿದನು.’ ”


ನನ್ನ ಕಣ್ಣುಗಳು ಅವರ ಎಲ್ಲಾ ಮಾರ್ಗಗಳ ಮೇಲೆ ಇವೆ. ಅವು ನನ್ನ ಮುಖಕ್ಕೆ ಮರೆಯಾದವುಗಳಲ್ಲ, ಅವರ ಅಕ್ರಮವು ನನ್ನ ದೃಷ್ಟಿಗೆ ಅಡಗಿರುವುದಿಲ್ಲ.


ಆ ಜೀವಿಗಳು ಮಿಂಚಿನ ಹಾಗೆ ಓಡುತ್ತಾ ತಿರುಗಾಡುತ್ತಾ ಇದ್ದವು.


ಅವು ದೇಶದ ಹುಲ್ಲನ್ನು ತಿಂದು ಮುಗಿಸಿದ ಮೇಲೆ ನಾನು, “ಸಾರ್ವಭೌಮ ಯೆಹೋವ ದೇವರೇ, ಲಾಲಿಸು, ನನ್ನನ್ನು ಮನ್ನಿಸು. ಯಾಕೋಬ ಜನಾಂಗ ಹೇಗೆ ಉಳಿಯುವುದು? ಏಕೆಂದರೆ ಅದು ಚಿಕ್ಕದಾದ ಜನಾಂಗ,” ಎಂದು ವಿಜ್ಞಾಪಿಸಿಕೊಂಡೆನು.


ಆಗ ನಾನು, “ಸಾರ್ವಭೌಮ ಯೆಹೋವ ದೇವರೇ, ನಿಲ್ಲಿಸಿಬಿಡಿರಿ,” ಎಂದು ಬೇಡಿಕೊಳ್ಳುತ್ತೇನೆ. “ಯಾಕೋಬನು ಹೇಗೆ ಬದುಕುಳಿಯುತ್ತಾನೆ? ಅವನು ತುಂಬಾ ಚಿಕ್ಕವನು,” ಎಂದು ಮೊರೆಯಿಟ್ಟೆನು.


ತಮ್ಮ ನಿವಾಸ ಸ್ಥಳದಿಂದ ಭೂನಿವಾಸಿಗಳೆಲ್ಲರ ಮೇಲೆ ಕಣ್ಣಿಡುತ್ತಾರೆ.


ಒಂದು ಪ್ರವಾದನೆ: ಹದ್ರಾಕ್ ದೇಶದ ವಿಷಯವಾದ ಯೆಹೋವ ದೇವರ ವಾಕ್ಯ: ಅದು ದಮಸ್ಕದಲ್ಲಿ ತಂಗುವುದು. ಮನುಷ್ಯನ ಕಣ್ಣುಗಳು, ಇಸ್ರಾಯೇಲಿನ ಎಲ್ಲಾ ಗೋತ್ರಗಳು ಯೆಹೋವ ದೇವರ ಮೇಲೆ ಇರುವುವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು