ಜೆಕರ್ಯ 2:2 - ಕನ್ನಡ ಸಮಕಾಲಿಕ ಅನುವಾದ2 ಆಗ ನಾನು, “ನೀನು ಎಲ್ಲಿಗೆ ಹೋಗುತ್ತೀ?” ಎಂದೆನು. ಅದಕ್ಕೆ ಆತನು ನನಗೆ, “ಯೆರೂಸಲೇಮನ್ನು ಅಳತೆಮಾಡಿ, ಅದರ ಅಗಲವೆಷ್ಟು? ಅದರ ಉದ್ದವೆಷ್ಟು? ಎಂದು ನೋಡುವುದಕ್ಕೆ ಹೋಗುತ್ತೇನೆ,” ಎಂದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ನಾನು ಅವನನ್ನು, “ಎಲ್ಲಿಗೆ ಹೋಗುತ್ತಿ?” ಎಂದು ಕೇಳಲು ಅವನು ನನಗೆ, “ಯೆರೂಸಲೇಮಿನ ಅಗಲ, ಉದ್ದ ಎಷ್ಟಿರಬೇಕೆಂದು ಅಳೆದು ನೋಡುವುದಕ್ಕೆ ಹೋಗುತ್ತಿದ್ದೇನೆ” ಎಂದು ಹೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 “ಎಲ್ಲಿಗೆ ಹೋಗುತ್ತಿರುವೆ?” ಎಂದು ನಾನು ಅವನನ್ನು ಕೇಳಿದಾಗ, ಅವನು: “ಜೆರುಸಲೇಮಿನ ಉದ್ದ - ಅಗಲ ಎಷ್ಟಿದೆಯೆಂದು ಅಳೆಯಲು ಹೋಗುತ್ತಿದ್ದೇನೆ,” ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ನಾನು ಅವನನ್ನು - ಎಲ್ಲಿಗೆ ಹೋಗುತ್ತೀ ಎಂದು ಕೇಳಲು ಅವನು ನನಗೆ - ಯೆರೂಸಲೇವಿುನ ಅಗಲ ಉದ್ದ ಇಷ್ಟಿಷ್ಟಿರಬೇಕೆಂದು ಅಳೆದು ನೋಡುವದಕ್ಕೆ ಹೋಗುತ್ತೇನೆ ಎಂಬದಾಗಿ ಹೇಳಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್2 “ನೀನು ಎಲ್ಲಿಗೆ ಹೋಗುತ್ತೀ?” ಎಂದು ನಾನು ಅವನನ್ನು ವಿಚಾರಿಸಿದೆನು. “ನಾನು ಜೆರುಸಲೇಮ್ ಎಷ್ಟು ಉದ್ದಗಲವಿದೆಯೆಂದು ಅಳತೆ ಮಾಡಲು ಹೋಗುತ್ತಿದ್ದೇನೆ” ಎಂದನು. ಅಧ್ಯಾಯವನ್ನು ನೋಡಿ |