Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜೆಕರ್ಯ 14:5 - ಕನ್ನಡ ಸಮಕಾಲಿಕ ಅನುವಾದ

5 ನೀವು ಬೆಟ್ಟಗಳ ತಗ್ಗಿಗೆ ಓಡಿಹೋಗುವಿರಿ. ಏಕೆಂದರೆ ಬೆಟ್ಟಗಳ ತಗ್ಗು ಆಚೆಲಿನವರೆಗೂ ಮುಟ್ಟುವುದು. ಯೆಹೂದದ ಅರಸನಾದ ಉಜ್ಜೀಯನ ದಿವಸಗಳಲ್ಲಿ, ನೀವು ಭೂಕಂಪಕ್ಕೆ ಓಡಿ ಹೋದ ಹಾಗೆ, ಓಡಿಹೋಗುವಿರಿ. ನನ್ನ ದೇವರಾದ ಯೆಹೋವ ದೇವರು ಬರುವರು. ನಿಮ್ಮ ಸಂಗಡ ಪರಿಶುದ್ಧರೆಲ್ಲರು ಸಹ ಬರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ನೀವು ಯೆಹೋವನ ಗುಡ್ಡಗಳ ನಡುವಣ ಆ ಕಣಿವೆಯೊಳಗೆ ಓಡಿಹೋಗುವಿರಿ; ಏಕೆಂದರೆ ಆ ಕಣಿವೆಯು ಆಚೆಲಿನವರೆಗೂ ಮುಟ್ಟಿರುವುದು; ಯೆಹೂದದ ಅರಸನಾದ ಉಜ್ಜೀಯನ ಕಾಲದಲ್ಲಿ ಭೂಕಂಪದ ಕಡೆಯಿಂದ ನೀವು ಓಡಿಹೋದಂತೆಯೇ ಓಡಿಹೋಗುವಿರಿ; ಆಗ ಪರಿಶುದ್ಧ ದೇವರಾದ ಯೆಹೋವನು ಸಮಸ್ತ ದೇವದೂತರ ಸಮೇತ ಬರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ನೀವು ಆ ಗುಡ್ಡಗಳ ನಡುವೆ ಉಂಟಾಗುವ ಕಣಿವೆಯ ಮೂಲಕ ಪಲಾಯನಗೈಯುವಿರಿ. ಆ ಕಣಿವೆ ಆಚೆಲಿನವರೆಗೆ ಹಬ್ಬಿರುವುದು. ಜುದೇಯದ ಅರಸನಾದ ಉಜ್ಜೀಯನ ಕಾಲದಲ್ಲಿ ಭೂಕಂಪವಾದಾಗ ನೀವು ಮಾಡಿದಂತೆ ಪಲಾಯನ ಗೈಯುವಿರಿ. ಆಗ ನನ್ನ ದೇವರಾದ ಸರ್ವೇಶ್ವರ ತಮ್ಮ ದೂತರ ಸಮೇತ ಬರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ನೀವು ನನ್ನ ಗುಡ್ಡಗಳ ನಡುವಣ ಆ ಡೊಂಗರದೊಳಕ್ಕೆ ಓಡಿಹೋಗುವಿರಿ; ಏಕಂದರೆ ಆ ಡೊಂಗರವು ಆಚೆಲಿಗೆ ಮುಟ್ಟಿರುವದು; ಯೆಹೂದದ ಅರಸನಾದ ಉಜ್ಜೀಯನ ಕಾಲದಲ್ಲಿ ಭೂಕಂಪದ ಕಡೆಯಿಂದ ನೀವು ಓಡಿಹೋದಂತೆಯೇ ಓಡಿಹೋಗುವಿರಿ; ಆಗ ನನ್ನ ದೇವರಾದ ಯೆಹೋವನು ಸಮಸ್ತ ದೇವದೂತಸಮೇತ ಬರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಆ ಬೆಟ್ಟವು ನಿನ್ನ ಹತ್ತಿರಕ್ಕೆ ಬರುತ್ತಿರುವಾಗ ನೀನು ಓಡಿಹೋಗಲು ಪ್ರಯತ್ನಿಸುವೆ. ಯೆಹೂದದ ಅರಸನಾದ ಉಜ್ಜೀಯನ ಕಾಲದಲ್ಲಿ ಆದ ಭೂಕಂಪದ ಸಮಯದಲ್ಲಿ ನೀನು ಹೇಗೆ ಪಲಾಯನ ಮಾಡಿದ್ದಿಯೋ ಅದೇ ರೀತಿಯಲ್ಲಿ ನೀನು ಓಡುವೆ. ಆಗ ನನ್ನ ದೇವರಾದ ಯೆಹೋವನು ತನ್ನ ಎಲ್ಲಾ ಪರಿಶುದ್ಧ ಜನರೊಂದಿಗೆ ಬರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜೆಕರ್ಯ 14:5
30 ತಿಳಿವುಗಳ ಹೋಲಿಕೆ  

ತೆಕೋವದ ಕುರುಬರಲ್ಲಿ ಒಬ್ಬನಾದ ಆಮೋಸನು, ಯೆಹೂದದ ಅರಸನಾದ ಉಜ್ಜೀಯನ ದಿವಸಗಳಲ್ಲಿಯೂ ಇಸ್ರಾಯೇಲಿನ ಅರಸನಾದ ಯೋವಾಷನ ಮಗ ಯಾರೊಬ್ಬಾಮನ ದಿವಸಗಳಲ್ಲಿಯೂ ಭೂಕಂಪಕ್ಕೆ ಎರಡು ವರ್ಷಗಳ ಮುಂಚೆ ಇಸ್ರಾಯೇಲಿನ ವಿಷಯವಾಗಿ ಕಂಡ ದರ್ಶನಗಳು.


“ಮನುಷ್ಯಪುತ್ರನಾದ ನಾನು ಮಹಿಮೆಯಲ್ಲಿ ಎಲ್ಲಾ ಪರಿಶುದ್ಧ ದೂತರೊಂದಿಗೆ ಬರುವಾಗ, ನನ್ನ ಮಹಿಮೆಯ ಸಿಂಹಾಸನದ ಮೇಲೆ ಕುಳಿತುಕೊಳ್ಳುವೆನು.


ಮನುಷ್ಯಪುತ್ರನಾದ ನಾನು ನನ್ನ ತಂದೆಯ ಮಹಿಮೆಯಲ್ಲಿ ನನ್ನ ದೂತರೊಡನೆ ಬಂದಾಗ, ನಾನು ಪ್ರತಿಯೊಬ್ಬರಿಗೂ ಅವರವರ ಕೆಲಸಗಳಿಗೆ ತಕ್ಕಂತೆ ಪ್ರತಿಫಲವನ್ನು ಕೊಡುವೆನು.


ನಮಗೆ ಕರ್ತ ಆಗಿರುವ ಯೇಸುವು ತಮ್ಮ ಎಲ್ಲಾ ಪರಿಶುದ್ಧರೊಂದಿಗೆ ಬರುವಾಗ, ನೀವು ತಂದೆ ದೇವರ ಮುಂದೆ ಪರಿಶುದ್ಧರೂ ನಿರ್ದೋಷಿಗಳೂ ಆಗಿರುವಂತೆ ನಿಮ್ಮ ಹೃದಯಗಳನ್ನು ಬಲಪಡಿಸಲಿ!


ಸೇನಾಧೀಶ್ವರ ಯೆಹೋವ ದೇವರು ಗುಡುಗಿನಿಂದಲೂ, ಮಹಾಶಬ್ದದಿಂದಲೂ, ಬಿರುಗಾಳಿ ಸುಳಿಗಾಳಿಯಿಂದಲೂ, ದಹಿಸುವ ಅಗ್ನಿಜ್ವಾಲೆಯಿಂದಲೂ ಪ್ರತ್ಯಕ್ಷರಾಗುವರು.


ತರುವಾಯ ಸಿಂಹಾಸನಗಳನ್ನು ಕಂಡೆನು. ಅವುಗಳ ಮೇಲೆ ಕುಳಿತಿದ್ದವರಿಗೆ ನ್ಯಾಯತೀರಿಸುವ ಅಧಿಕಾರವು ಕೊಡಲಾಯಿತು. ಇದಲ್ಲದೆ ಯೇಸುವಿನ ಸಾಕ್ಷಿಯ ನಿಮಿತ್ತವಾಗಿಯೂ ದೇವರ ವಾಕ್ಯದ ನಿಮಿತ್ತವಾಗಿಯೂ ಶಿರಚ್ಛೇದನ ಗೊಂಡವರ ಆತ್ಮಗಳನ್ನೂ ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸದೆ ತಮ್ಮ ಹಣೆಯ ಮೇಲೆ ಇಲ್ಲವೆ ಕೈಯ ಮೇಲೆ ಅದರ ಗುರುತುಹಾಕಿಸಿಕೊಳ್ಳದವರನ್ನೂ ನೋಡಿದೆನು. ಅವರು ಪುನಃ ಜೀವಿತರಾಗಿ ಎದ್ದು ಯೇಸುಕ್ರಿಸ್ತರೊಂದಿಗೆ ಸಾವಿರ ವರ್ಷ ಆಳಿದರು.


ಅದೇ ಗಳಿಗೆಯಲ್ಲಿ, ಮಹಾ ಭೂಕಂಪ ಉಂಟಾಗಿ ಆ ಪಟ್ಟಣದ ಹತ್ತರಲ್ಲೊಂದು ಭಾಗವು ಬಿದ್ದುಹೋಯಿತು. ಆ ಭೂಕಂಪದಲ್ಲಿ ಏಳು ಸಾವಿರ ಮಂದಿ ಸತ್ತುಹೋದರು. ಉಳಿದವರು ಭಯಗ್ರಸ್ತರಾಗಿ ಪರಲೋಕದ ದೇವರಿಗೆ ಮಹಿಮೆಯನ್ನು ಸಲ್ಲಿಸಿದರು.


ಆಗ ಆ ನಿಯಮ ಮೀರುವವನು ಪ್ರತ್ಯಕ್ಷನಾಗುವನು. ಅವನನ್ನು ಕರ್ತ ಯೇಸು ತಮ್ಮ ಬಾಯಿಯ ಶ್ವಾಸದಿಂದ ಕೆಡವಿ, ತಮ್ಮ ಪ್ರತ್ಯಕ್ಷತೆಯ ಮಹಿಮೆಯಿಂದ ನಾಶಮಾಡಿಬಿಡುವರು.


ಸಮಸ್ತ ಸೃಷ್ಟಿಯು ಯೆಹೋವ ದೇವರ ಸನ್ನಿಧಿಯಲ್ಲಿ ಹಾಡಲಿ, ಏಕೆಂದರೆ ಅವರು ಲೋಕಕ್ಕೆ ನೀತಿಯಿಂದಲೂ; ಜನರಿಗೆ ತಮ್ಮ ಸತ್ಯದಿಂದಲೂ ನ್ಯಾಯತೀರಿಸಲು ಬರುತ್ತಾರೆ.


“ಯೆಹೋವ ದೇವರು ಸೀನಾಯಿ ಬೆಟ್ಟದಿಂದ ಬಂದು, ಸೇಯೀರಿನಿಂದ ಅವರ ಮೇಲೆ ಉದಯಿಸಿದರು. ಪಾರಾನ್ ಬೆಟ್ಟದಿಂದ ಪ್ರಕಾಶಿಸಿದರು. ದೇವರು ದಕ್ಷಿಣದ ತಮ್ಮ ಪರ್ವತ ಶ್ರೇಣಿಯಿಂದ ಲಕ್ಷಾಂತರ ಪರಿಶುದ್ಧರ ಸಂಗಡ ಬಂದರು.


ಆಮೇಲೆ ಬೆಳ್ಳಗಿರುವ ಮಹಾ ಸಿಂಹಾಸನವನ್ನು ಕಂಡೆನು. ಅದರ ಮೇಲೆ ಒಬ್ಬರು ಆಸೀನರಾಗಿದ್ದರು. ಅವರ ಸನ್ನಿಧಿಯಿಂದ ಭೂಮ್ಯಾಕಾಶಗಳು ಓಡಿಹೋಗಿ ಸ್ಥಳ ಕಾಣಿಸದಂತಾದವು.


ನೀವೂ ದೀರ್ಘಶಾಂತಿಯಿಂದಿರಿ. ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ. ಏಕೆಂದರೆ ಕರ್ತ ಯೇಸುವಿನ ಪುನರಾಗಮನ ಹತ್ತಿರವಾಯಿತು.


ಆಗ ಮನುಷ್ಯಪುತ್ರನಾದ ನಾನು ಶಕ್ತಿಯಿಂದಲೂ ಮಹಾ ಮಹಿಮೆಯಿಂದಲೂ ಮೇಘದಲ್ಲಿ ಬರುವುದನ್ನು ಜನರು ಕಾಣುವರು.


ಯೇಸು ಓಲಿವ್ ಗುಡ್ಡದ ಮೇಲೆ ಕುಳಿತುಕೊಂಡಾಗ, ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಈ ಸಂಗತಿಗಳು ಸಂಭವಿಸುವುದು ಯಾವಾಗ? ನಿನ್ನ ಆಗಮನದ ಹಾಗೂ ಲೋಕಾಂತ್ಯದ ಸೂಚನೆ ಏನು? ನಮಗೆ ತಿಳಿಸು,” ಎಂದು ಕೇಳಿದರು.


ಅವು ಯೆಹೋವ ದೇವರ ಮುಂದೆ ಹಾಡಲಿ, ಏಕೆಂದರೆ ಅವರು ಭೂಮಿಗೆ ನ್ಯಾಯತೀರಿಸಲು ಬರುತ್ತಾರೆ. ಅವರು ಲೋಕಕ್ಕೆ ನೀತಿಗನುಸಾರವಾಗಿಯೂ ಜನರಿಗೆ ನ್ಯಾಯಾನುಸಾರವಾಗಿಯೂ ತೀರ್ಪು ನೀಡುವರು.


ಆಗ ಅವರ ಸುತ್ತಲಿದ್ದ ಇಸ್ರಾಯೇಲರೆಲ್ಲರೂ ಓಡಿಹೋದರು, ಏಕೆಂದರೆ ಅವರು, “ಭೂಮಿಯು ನಮ್ಮನ್ನು ಸಹ ನುಂಗಿಬಿಟ್ಟೀತು,” ಎಂದು ಹೆದರಿದರು.


ಸುತ್ತಲಿನ ಎಲ್ಲಾ ರಾಷ್ಟ್ರಗಳೇ, ಸಭೆಯಾಗಿ ಕೂಡಿಕೊಳ್ಳಿರಿ. ಯೆಹೋವ ದೇವರೇ, ನಿನ್ನ ಶೂರರನ್ನು ಕೆಳಗೆ ಇಳಿಸಿರಿ.


“ಪರಾಕ್ರಮದ ಬೆಟ್ಟವೇ, ನೀನ್ಯಾರು? ಜೆರುಬ್ಬಾಬೆಲನ ಮುಂದೆ ಬಯಲಾಗುವೆ. ಅವನು ಕಲಶದ ಕಲ್ಲನ್ನು ಸ್ಥಾಪಿಸಿ, ‘ದೇವರು ಇದನ್ನು ಆಶೀರ್ವದಿಸಲಿ! ದೇವರು ಇದನ್ನು ಆಶೀರ್ವದಿಸಲಿ!’ ಎಂದು ಘೋಷಿಸುವನು.”


ಶಾಫೀರಿನ ನಿವಾಸಿಯೇ, ನಗ್ನತೆಯಿಂದಲೂ ನಾಚಿಕೆಯಿಂದಲೂ ಹಾದುಹೋಗಿರಿ, ಚಾನಾನಿನಲ್ಲಿ ವಾಸಿಸುವವರು ಹೊರಗೆ ಬರುವುದಿಲ್ಲ, ಬೇತ್ ಎಚೆಲು ನರಳುತ್ತಿದೆ. ಅದು ಇನ್ನು ಮುಂದೆ ನಿಮ್ಮನ್ನು ರಕ್ಷಿಸುವುದಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು