Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜೆಕರ್ಯ 12:6 - ಕನ್ನಡ ಸಮಕಾಲಿಕ ಅನುವಾದ

6 “ಆ ದಿವಸದಲ್ಲಿ ನಾನು ಯೆಹೂದದ ಕುಲಪತಿಗಳನ್ನು ಕಟ್ಟಿಗೆಯ ಮಧ್ಯದಲ್ಲಿರುವ ಬೆಂಕಿಯ ಒಲೆಯ ಹಾಗೆಯೂ, ಸಿವುಡುಗಳಲ್ಲಿರುವ ಬೆಂಕಿಯ ಪಂಜಿನ ಹಾಗೆಯೂ ಮಾಡುವೆನು. ಅವರು ಬಲಗಡೆಯಲ್ಲಿಯೂ, ಎಡಗಡೆಯಲ್ಲಿಯೂ ಸುತ್ತಲಿರುವ ಎಲ್ಲಾ ಜನಗಳನ್ನೂ ನುಂಗಿಬಿಡುವರು. ಆದರೆ ಯೆರೂಸಲೇಮಿನವರು ತಿರುಗಿ ತನ್ನ ಸ್ಥಳದಲ್ಲಿ ಯೆರೂಸಲೇಮಿನಲ್ಲಿಯೇ ಸುರಕ್ಷಿತವಾಗಿ ವಾಸಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 “ಆ ದಿನದಲ್ಲಿ ನಾನು ಯೆಹೂದದ ಕುಲಪತಿಗಳನ್ನು ಸೌದೆಯ ಮಧ್ಯದಲ್ಲಿನ ಅಗ್ಗಿಷ್ಟಿಕೆಯನ್ನಾಗಿಯೂ, ಸಿವುಡುಗಳ ನಡುವಣ ಪಂಜನ್ನಾಗಿಯೂ ಮಾಡುವೆನು; ಅವರು ಸುತ್ತಣ ಜನಾಂಗಗಳನ್ನೆಲ್ಲಾ ಎಡಬಲಗಳಲ್ಲಿ ನುಂಗಿಬಿಡುವರು; ಯೆರೂಸಲೇಮಿನವರು ತಮ್ಮ ಸ್ಥಳವಾದ ಯೆರೂಸಲೇಮಿನಲ್ಲೇ ಇನ್ನು ವಾಸಿಸುವರು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 “ಆ ದಿನದಂದು ಜುದೇಯದ ಕುಲನಾಯಕರನ್ನು ಕಟ್ಟಿಗೆಯ ಮಧ್ಯೆ ಇರುವ ಅಗ್ಗಿಷ್ಟಿಕೆಯನ್ನಾಗಿಯೂ ಸಿವುಡುಗಳ ನಡುವೆ ಉರಿಯುವ ಪಂಜನ್ನಾಗಿಯೂ ಮಾಡುವೆನು. ಅವರು ಸುತ್ತಮುತ್ತಲಿನ ರಾಷ್ಟ್ರಗಳನ್ನು ಎಡಬಲವೆನ್ನದೆ ನಾಶಮಾಡುವರು. ಜೆರುಸಲೇಮಿನ ನಿವಾಸಿಗಳಾದರೋ ತಮ್ಮ ನಗರದಲ್ಲೇ ಸುರಕ್ಷಿತವಾಗಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಆ ದಿನದಲ್ಲಿ ನಾನು ಯೆಹೂದದ ಕುಲಪತಿಗಳನ್ನು ಸೌದೆಯ ಮಧ್ಯದಲ್ಲಿನ ಅಗ್ಗಿಷ್ಟಿಕೆಯನ್ನಾಗಿಯೂ ಸಿವುಡುಗಳ ನಡುವಣ ಪಂಜನ್ನಾಗಿಯೂ ಮಾಡುವೆನು; ಅವರು ಸುತ್ತಣ ಜನಾಂಗಗಳನ್ನೆಲ್ಲಾ ಎಡಬಲಗಳಲ್ಲಿ ನುಂಗಿಬಿಡುವರು; ಯೆರೂಸಲೇವಿುನವರು ತಮ್ಮ ಸ್ಥಳವಾದ ಯೆರೂಸಲೇವಿುನಲ್ಲಿಯೇ ಇನ್ನು ವಾಸಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಆ ಸಮಯದಲ್ಲಿ ಯೆಹೂದದ ಕುಲ ಪ್ರಧಾನರನ್ನು ನಾನು ಕಾಡಿನಲ್ಲಿ ಉರಿಯುವ ಬೆಂಕಿಯಂತೆ ಮಾಡುವೆನು. ಅವರು ಹುಲ್ಲು ಸುಡುವ ಬೆಂಕಿಯೋಪಾದಿಯಲ್ಲಿ ತಮ್ಮ ವೈರಿಗಳನ್ನು ನಾಶಮಾಡುವರು. ತಮ್ಮ ಸುತ್ತಮುತ್ತಲಿರುವ ವೈರಿಗಳನ್ನು ನಾಶಮಾಡುವರು. ಜೆರುಸಲೇಮಿನ ಜನರು ಮತ್ತೆ ನೆಮ್ಮದಿಯಿಂದ ವಾಸಿಸುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜೆಕರ್ಯ 12:6
25 ತಿಳಿವುಗಳ ಹೋಲಿಕೆ  

ಯಾಕೋಬನ ಮನೆತನದವರು ಬೆಂಕಿಯಾಗಿಯೂ ಯೋಸೇಫನ ಮನೆತನದವರು ಜ್ವಾಲೆಯಾಗಿಯೂ ಇರುವರು; ಏಸಾವನ ಮನೆತನದವರು ಕೂಳೆಯಂತೆ ಧಗಧಗನೆ ದಹಿಸಿ ನಾಶವಾಗುವರು. ಏಸಾವನ ಮನೆತನದವರಲ್ಲಿ ಯಾರೂ ಉಳಿಯರು.” ಯೆಹೋವ ದೇವರೇ ಇದನ್ನು ನುಡಿದಿದ್ದಾರೆ.


“ಓಡಿಹೋಗಿ ಈ ಯೌವನಸ್ಥನಿಗೆ, ‘ಯೆರೂಸಲೇಮು, ಅದರಲ್ಲಿರುವ ಮನುಷ್ಯರ ಮತ್ತು ದನಗಳ ಸಂಖ್ಯೆ ಹೆಚ್ಚಾಗಿರುವುದು. ಯೆರೂಸಲೇಮು ಗೋಡೆ ಇಲ್ಲದ ಊರುಗಳಂತೆ ಇರುವುದು.


ಸೇನಾಧೀಶ್ವರ ಯೆಹೋವ ದೇವರು ಅವರನ್ನು ಕಾಪಾಡುವರು. ಅವರು ನಾಶಮಾಡಿ, ಕವಣೆ ಕಲ್ಲುಗಳನ್ನು ಸ್ವಾಧೀನಮಾಡಿಕೊಳ್ಳುವರು. ಕುಡಿದು, ದ್ರಾಕ್ಷಾರಸದಿಂದಾದ ಹಾಗೆ ತೂಗಾಡುವರು. ಅವರು ಬಲಿಪೀಠದ ಮೂಲೆಗಳಿಗೆ ಚಿಮುಕಿಸಲು ಬಳಸುವ ಪಾತ್ರೆಯ ಹಾಗೆಯೂ ತುಂಬಿರುವರು.


ಚೀಯೋನ್ ಪುತ್ರಿಯೇ, ಎದ್ದು ತುಳಿ. ಏಕೆಂದರೆ ನಿನ್ನ ಕೊಂಬನ್ನು ಕಬ್ಬಿಣವಾಗಿಯೂ ನಿನ್ನ ಗೊರಸುಗಳನ್ನು ಕಂಚಿನದಾಗಿಯೂ ಮಾಡುವೆನು. ನೀನು ಅನೇಕ ಜನಾಂಗಗಳನ್ನು ಚೂರುಚೂರಾಗಿ ಮಾಡುವೆ. ಅವರ ಕೊಳ್ಳೆಹೊಡೆದು ಸಂಪಾದಿಸಿದ್ದ ಸ್ವತ್ತನ್ನು ಯೆಹೋವ ದೇವರಿಗೂ ಅವರ ಸಂಪತ್ತನ್ನು ಲೋಕದ ಕರ್ತ ದೇವರಿಗೂ ಪ್ರತಿಷ್ಠೆಮಾಡುವೆನು.


“ಯೆಹೋವ ದೇವರು ಮತ್ತೆ ಹೀಗೆ ಹೇಳಿದ್ದು, “ ‘ಇಗೋ, ನಾನು ಯಾಕೋಬನ ಗುಡಾರಗಳ ಸೆರೆಯನ್ನು ತಿರುಗಿ ತರುತ್ತೇನೆ. ಅವನ ನಿವಾಸಗಳನ್ನು ಕರುಣಿಸುತ್ತೇನೆ. ಪಟ್ಟಣವು ಅದರ ದಿನ್ನೆಯ ಮೇಲೆ ಕಟ್ಟಲಾಗುವುದು. ಅರಮನೆಯು ತಕ್ಕ ಸ್ಥಳದಲ್ಲಿ ನೆಲೆಯಾಗಿರುವುದು.


ನೀನು ಬಲಗಡೆಗೂ, ಎಡಗಡೆಗೂ ಹಬ್ಬಿಕೊಳ್ಳುವೆ. ನಿನ್ನ ಸಂತಾನವು ಜನಾಂಗಗಳನ್ನು ವಶಪಡಿಸಿಕೊಂಡು, ಹಾಳಾದ ಪಟ್ಟಣಗಳನ್ನು ನಿವಾಸವಾಗ ಮಾಡುವುದು.


ಅವನು ಬಲಗಡೆಯಲ್ಲಿರುವುದನ್ನು ಕಿತ್ತುಕೊಂಡು ತಿಂದರೂ ಹಸಿದೇ ಇರುವನು, ಅವನು ಎಡಗಡೆಯಲ್ಲಿರುವುದನ್ನು ತಿಂದರೂ ಅವು ಅವನನ್ನು ತೃಪ್ತಿಪಡಿಸಲಾರವು. ಒಬ್ಬೊಬ್ಬನೂ ತನ್ನ ನೆರೆಯವನನ್ನು ಹಾನಿ ಮಾಡುತ್ತಿದ್ದಾನೆ.


ಅವರು ದೇಶದಲ್ಲೆಲ್ಲಾ ಹರಡಿಕೊಂಡು ಪರಿಶುದ್ಧರ ದಂಡಿಗೂ ಆ ಪ್ರಿಯಪಟ್ಟಣಕ್ಕೂ ಮುತ್ತಿಗೆ ಹಾಕಿದರು. ಆಗ ಪರಲೋಕದಿಂದ ಬೆಂಕಿ ಬಿದ್ದು ಅವರನ್ನು ದಹಿಸಿಬಿಟ್ಟಿತು.


ಸತ್ಯಮಾತುಗಳಿಂದಲೂ, ದೇವರ ಶಕ್ತಿಯಿಂದಲೂ, ಎಡಬಲಗೈಗಳಲ್ಲಿ ನೀತಿಯ ಆಯುಧಗಳೂ


ಲೆಬನೋನೇ, ಬೆಂಕಿ ನಿನ್ನ ದೇವದಾರುಗಳನ್ನು ನುಂಗುವ ಹಾಗೆ, ನಿನ್ನ ಬಾಗಿಲುಗಳನ್ನು ತೆರೆ.


ಇದಲ್ಲದೆ ಯೆಹೋವ ದೇವರು ತಮ್ಮ ಭಾಗವಾದ ಯೆಹೂದವನ್ನು ಪರಿಶುದ್ಧ ದೇಶದಲ್ಲಿ ಸೊತ್ತಾಗಿ ಹೊಂದುವರು. ಯೆರೂಸಲೇಮನ್ನು ತಿರುಗಿ ಆಯ್ದುಕೊಳ್ಳುವರು.


“ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾನೆ: ‘ನಾನು ಕನಿಕರದಿಂದ ಯೆರೂಸಲೇಮಿನ ಕಡೆಗೆ ತಿರುಗಿಕೊಂಡಿದ್ದೇನೆ. ನನ್ನ ಆಲಯವು ಅದರಲ್ಲಿ ಕಟ್ಟಲಾಗುವುದು. ಯೆರೂಸಲೇಮಿನ ಮೇಲೆ ಅಳತೆಯ ನೂಲು ಚಾಚಲಾಗುವುದು,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.


ಆ ಯೆಹೂದದ ದೊರೆಗಳು ತಮ್ಮ ಹೃದಯದಲ್ಲಿ ಯೆರೂಸಲೇಮಿನ ನಿವಾಸಿಗಳ ಶಕ್ತಿ ಸಾಮರ್ಥ್ಯ, ತಮ್ಮ ಸೇನಾಧೀಶ್ವರ ಯೆಹೋವ ದೇವರಲ್ಲಿಯೇ ಎಂದುಕೊಳ್ಳುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು