Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜೆಕರ್ಯ 10:2 - ಕನ್ನಡ ಸಮಕಾಲಿಕ ಅನುವಾದ

2 ವಿಗ್ರಹಗಳು ವ್ಯರ್ಥವಾಗಿ ಮಾತನಾಡುವವು. ಶಕುನಗಾರರು ಸುಳ್ಳು ದರ್ಶನವನ್ನು ಕಾಣುವರು. ಮೋಸವಾದ ಕನಸುಗಳನ್ನು ತಿಳಿಸಿದ್ದಾರೆ. ವ್ಯರ್ಥವಾಗಿ ಆದರಿಸುತ್ತಾರೆ, ಆದ್ದರಿಂದ ಕುರಿಗಳಂತೆ ಚದರಿದ್ದಾರೆ, ಕುರುಬನಿಲ್ಲದೆ ಕಂಗೆಟ್ಟಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ವಿಗ್ರಹಗಳು ನುಡಿಯುವುದು ಸುಳ್ಳು; ಕಣಿಹೇಳುವವರು ದರ್ಶನವನ್ನು ಕಾಣುವುದು ಸುಳ್ಳು, ತಿಳಿಸುವ ಕನಸುಗಳು ಮೋಸವಾದವುಗಳು, ಹೇಳುವ ಸಮಾಧಾನವು ವ್ಯರ್ಥ. ಆದುದರಿಂದ ನನ್ನ ಜನರು ದಿಕ್ಕಾಪಾಲಾಗಿದ್ದಾರೆ; ಕುರುಬನು ಇಲ್ಲದ ಕಾರಣ ಬಾಧೆಗೆ ಒಳಗಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಗೃಹದೇವತೆಗಳು ನುಡಿಯುವುದು ಜೊಳ್ಳು; ಶಕುನ ಹೇಳುವವರ ಮಾತು ಸುಳ್ಳು. ಸ್ವಪ್ನಕಾರರ ಕನಸುಗಳು ಕಲ್ಪಿತ, ಅವರು ಹೇಳುವ ಸಮಾಧಾನ ವ್ಯರ್ಥ, ಈ ಕಾರಣ ಜನರು ಕುರಿಗಳಂತೆ ಚದರಿದ್ದಾರೆ; ಕುರುಬನಿಲ್ಲದೆ ಕಂಗೆಟ್ಟಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ವಿಗ್ರಹಗಳು ನುಡಿಯುವದು ಜೊಳ್ಳು; ಕಣಿಯವರು ಕಾಣುವದು ಸುಳ್ಳು, ತಿಳಿಸುವ ಕನಸುಗಳು ಕಲ್ಪಿತ, ಹೇಳುವ ಸಮಾಧಾನವು ವ್ಯರ್ಥ, ಆದದರಿಂದ ನನ್ನ ಜನರು ದಿಕ್ಕಾಪಾಲಾಗಿದ್ದಾರೆ; ಕುರುಬನು ಇಲ್ಲದ ಕಾರಣ ಬಾಧೆಗೆ ಒಳಗಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಜನರು ಭವಿಷ್ಯವನ್ನು ತಿಳಿಯುವುದಕ್ಕೆ ತಮ್ಮ ಸಣ್ಣ ಬೊಂಬೆಗಳನ್ನೋ ಮಂತ್ರಜಾಲವನ್ನೋ ಉಪಯೋಗಿಸುವರು. ಆದರೆ ಅವೆಲ್ಲಾ ನಿಷ್ಪ್ರಯೋಜಕ. ಆ ಜನರು ದರ್ಶನವನ್ನು ನೋಡುವರು ಮತ್ತು ಕನಸುಗಳ ಬಗ್ಗೆ ಹೇಳುವರು. ಆದರೆ ಅವುಗಳೆಲ್ಲಾ ನಿಷ್ಪ್ರಯೋಜಕ ಸುಳ್ಳುಗಳಾಗಿವೆ. ಆದ್ದರಿಂದ ಜನರು ಸಹಾಯಕ್ಕಾಗಿ ಕೂಗುತ್ತಾ ಅತ್ತಿಂದಿತ್ತ ತಿರುಗಾಡುವ ಕುರಿಗಳಂತಿದ್ದಾರೆ. ಅವುಗಳನ್ನು ನಡಿಸಲು ಕುರುಬರೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜೆಕರ್ಯ 10:2
44 ತಿಳಿವುಗಳ ಹೋಲಿಕೆ  

ಜನಸಮೂಹವೂ ಕುರುಬನಿಲ್ಲದ ಕುರಿಗಳಂತೆ ಅಲೆಯುವವರಾಗಿಯೂ ನಿಸ್ಸಹಾಯಕರಾಗಿಯೂ ಇರುವುದನ್ನು ಕಂಡು ಯೇಸು ಅವರ ಮೇಲೆ ಕನಿಕರಪಟ್ಟರು.


“ಮನುಷ್ಯನು ಕೆತ್ತಿ ರೂಪಿಸಿದ ವಿಗ್ರಹದಿಂದ ಪ್ರಯೋಜನವೇನು? ಸುಳ್ಳನ್ನು ಬೋಧಿಸುವಂಥ ಪ್ರತಿಮೆಯ ಬೆಲೆಯೇನು? ಅದನ್ನು ರೂಪಿಸಿದವನು, ತನ್ನ ಸ್ವಂತ ಸೃಷ್ಟಿಯನ್ನು ನಂಬುತ್ತಾನೆ. ಮಾತನಾಡದಂಥ ಮೂರ್ತಿಗಳನ್ನು ಅವನು ಮಾಡುತ್ತಾನೆ.


ಇಸ್ರಾಯೇಲರು ಬಹಳ ದಿವಸಗಳವರೆಗೆ ಅರಸನಿಲ್ಲದೆ, ರಾಜಕುಮಾರನಿಲ್ಲದೆ, ಬಲಿ ಇಲ್ಲದೆ, ಪವಿತ್ರ ಕಲ್ಲುಗಳಿಲ್ಲದೆ, ಏಫೋದ್ ಇಲ್ಲದೆ ಮತ್ತು ವಿಗ್ರಹಗಳು ಇಲ್ಲದೆ ಇರುವರು.


ಅವು ಚದರಿಹೋದವು. ಏಕೆಂದರೆ ಅಲ್ಲಿ ಕುರುಬರಿಲ್ಲ; ಅವರು ಚದರಿಹೋದಾಗ ಎಲ್ಲಾ ಕಾಡುಮೃಗಗಳಿಗೆ ಆಹಾರವಾದವು.


‘ನೀವು ಬಾಬಿಲೋನಿನ ಅರಸನಿಗೆ ಅಡಿಯಾಳುಗಳು ಆಗುವುದಿಲ್ಲ,’ ಎಂದು ನಿಮಗೆ ನುಡಿಯುವ ನಿಮ್ಮ ಪ್ರವಾದಿಗಳು, ಶಕುನದವರು, ಕನಸಿಗರು, ಕಣಿಯವರು, ಮಾಟಗಾರರು. ಅವರಿಗೆ ಕಿವಿಗೊಡಲೇಬೇಡಿ.


ಲಾಬಾನನು ತನ್ನ ಕುರಿಗಳ ಉಣ್ಣೆ ಕತ್ತರಿಸುವುದಕ್ಕೆ ಹೋಗಿದ್ದನು. ಆಗ ರಾಹೇಲಳು ತನ್ನ ತಂದೆಯ ವಿಗ್ರಹಗಳನ್ನು ಕದ್ದುಕೊಂಡಳು.


ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಜೀವದಾಣೆ, ನಿಶ್ಚಯವಾಗಿ ನನ್ನ ಮಂದೆಯು ಕೊಳ್ಳೆಯಾದುದರಿಂದಲೂ ನನ್ನ ಮಂದೆಯು ಕುರುಬನಿಲ್ಲದೆ ಕಾಡುಮೃಗಗಳಿಗೆಲ್ಲಾ ಆಹಾರವಾದದ್ದರಿಂದಲೂ ನನ್ನ ಕುರುಬರು ನನ್ನ ಮಂದೆಯನ್ನು ಹುಡುಕದೆ ಇದ್ದುದರಿಂದಲೂ ಕುರುಬರು ತಮ್ಮನ್ನು ಮೇಯಿಸಿಕೊಂಡರೇ ಹೊರತು ತಮ್ಮ ಕುರಿಗಳನ್ನು ಮೇಯಿಸದೆ ಇದ್ದುದರಿಂದಲೂ


“ಯಾಕೋಬೇ, ನಿನ್ನವರನ್ನೆಲ್ಲಾ ನಿಶ್ಚಯವಾಗಿ ಕೂಡಿಸುವೆನು. ಇಸ್ರಾಯೇಲಿನಲ್ಲಿ ಉಳಿದವರನ್ನು ನಿಶ್ಚಯವಾಗಿ ಕೂಡಿಸುವೆನು. ಬೊಚ್ರದ ಕುರಿಗಳಂತೆಯೂ ತಮ್ಮ ಹಟ್ಟಿಯ ನಡುವೆ ಇರುವ ಮಂದೆಯಂತೆಯೂ ಅವರನ್ನು ಒಟ್ಟಾಗಿ ಕೂಡಿಸುವೆನು. ಹುಲ್ಲುಗಾವಲಿನ ಕುರಿಮಂದೆಯಂತೆ, ಸ್ಥಳವು ಜನರಿಂದ ತುಂಬಿ ತುಳುಕುವುದು.


ನಿನ್ನ ಜೋಯಿಸರು ವ್ಯರ್ಥವಾದದ್ದನ್ನು ನೋಡಿ, ಸಾಕ್ಷಾತ್ಕರಿಸಿ ಸುಳ್ಳಾಗಿ ಶಕುನ ಹೇಳುತ್ತಿದ್ದಾರೆ. ಹೀಗೆ ನಿನ್ನನ್ನು ಹತರಾದ ದುಷ್ಟರ ಕುತ್ತಿಗೆಗಳ ಮೇಲೆ ತಂದಿದ್ದಾರೆ. ಅವರ ಅಂತ್ಯದಿನವು ಬಂದಿದೆ. ಅದೇ ಅವರ ಅಕ್ರಮಗಳಿಗೆ ಅಂತ್ಯವಾಗಿದೆ.


ಬಾಬಿಲೋನಿನ ಅರಸನು, ಮಾರ್ಗವು ಒಡೆಯುವ ಸ್ಥಳದಲ್ಲಿ ಶಕುನವನ್ನು ನೋಡುವುದಕ್ಕೆ ನಿಂತಿದ್ದಾನೆ; ಬಾಣಗಳನ್ನು ಅಲ್ಲಾಡಿಸಿದನು; ಮೂರ್ತಿಗಳ ಹತ್ತಿರ ವಿಚಾರಿಸಿದನು; ಅವನು ಹತ್ಯೆ ಮಾಡಿದ ಪ್ರಾಣಿಯ ಯಕೃತ್ತನ್ನು ಪರೀಕ್ಷಿಸುತ್ತಾರೆ.


ನಿನ್ನ ಪ್ರವಾದಿಗಳು ನಿನಗಾಗಿ ವ್ಯರ್ಥವಾದ ಮತ್ತು ಮೂರ್ಖತನದ ದರ್ಶನಗಳನ್ನು ನೋಡಿದ್ದಾರೆ. ಅವರು ನಿನ್ನ ಬಂಧನವನ್ನು ನೀಗಿಸುವುದಕ್ಕಾಗಿ ನಿನ್ನ ಪಾಪವನ್ನು ಬಯಲಿಗೆ ತರಲಿಲ್ಲ. ಆದರೆ ನಿನಗಾಗಿ ಸುಳ್ಳಿನ ಪ್ರವಾದನೆಗಳನ್ನು ಕೊಟ್ಟು ಗಡಿಪಾರು ಮಾಡುವುದಕ್ಕೆ ಕಾರಣರಾಗಿದ್ದಾರೆ.


ನಿನ್ನಿಂದ ಕುರುಬನನ್ನೂ ಅವನ ಮಂದೆಯನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ; ನಿನ್ನಿಂದ ಒಕ್ಕಲಿಗನನ್ನೂ ಅವನ ನೊಗದ ಎತ್ತುಗಳನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ; ನಿನ್ನಿಂದ ಅಧಿಪತಿಗಳನ್ನೂ ಅಧಿಕಾರಿಗಳನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ.


“ಇಸ್ರಾಯೇಲನು ಚದರಿಹೋದ ಕುರಿಯಾಗಿದ್ದನು; ಸಿಂಹಗಳು ಅವನನ್ನು ಓಡಿಸಿಬಿಟ್ಟವು; ಮೊದಲು ಅಸ್ಸೀರಿಯನ ಅರಸನು ಅವನನ್ನು ತಿಂದುಬಿಟ್ಟನು. ಕಡೆಯಲ್ಲಿ ಬಾಬಿಲೋನಿನ ಅರಸನಾದ ಈ ನೆಬೂಕದ್ನೆಚ್ಚರನು ಅವನ ಎಲುಬುಗಳನ್ನು ಮುರಿದಿದ್ದಾನೆ.”


ಬಾಬಿಲೋನಿನ ಅರಸನು ನಿಮ್ಮ ಮೇಲೆಯೂ, ಈ ದೇಶದ ಮೇಲೆಯೂ ಬರುವುದಿಲ್ಲವೆಂದು ನಿಮಗೆ ಪ್ರವಾದಿಸಿದ ನಿಮ್ಮ ಪ್ರವಾದಿಗಳು ಈಗ ಎಲ್ಲಿ?


ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನಿಮ್ಮ ಮಧ್ಯದಲ್ಲಿರುವ ನಿಮ್ಮ ಪ್ರವಾದಿಗಳೂ ನಿಮ್ಮ ಶಕುನದವರೂ ನಿಮಗೆ ಮೋಸಮಾಡದಿರಲಿ. ನೀವು ಕೇಳುವ ನಿಮ್ಮ ಕನಸುಗಳಿಗೆ ಕಿವಿಗೊಡಬೇಡಿರಿ.


ಆಗ ಪ್ರವಾದಿಯಾದ ಯೆರೆಮೀಯನು ಪ್ರವಾದಿಯಾದ ಹನನ್ಯನಿಗೆ ಹೇಳಿದ್ದೇನೆಂದರೆ, “ಹನನೀಯನೇ, ಕೇಳು. ಯೆಹೋವ ದೇವರು ನಿನ್ನನ್ನು ಕಳುಹಿಸಲಿಲ್ಲ. ಆದರೆ ನೀನು ಈ ಜನರನ್ನು ಸುಳ್ಳಿನಲ್ಲಿ ಭರವಸೆ ಇಡುವಂತೆ ಮಾಡುತ್ತೀ.


ಆದರೂ ನನ್ನನ್ನು ಅಸಹ್ಯಿಸುವವರಿಗೆ, ಅವರು, ‘ನಿಮಗೆ ಸಮಾಧಾನವಾಗುವುದು, ಎಂದು ಯೆಹೋವ ದೇವರು ಹೇಳಿದ್ದಾರೆ,’ ಎಂದು ಹೇಳುತ್ತಲೇ ಇದ್ದಾರೆ. ತಮ್ಮ ಹೃದಯದ ಹಟದ ಪ್ರಕಾರ ನಡೆದುಕೊಳ್ಳುವವರೆಲ್ಲರಿಗೆ ‘ನಿಮ್ಮ ಮೇಲೆ ಕೇಡು ಬರುವುದಿಲ್ಲ,’ ಎನ್ನುತ್ತಾರೆ.


ಜನಾಂಗಗಳ ವ್ಯರ್ಥ ವಿಗ್ರಹಗಳೊಳಗೆ ಮಳೆಯನ್ನು ಸುರಿಸಬಲ್ಲವುಗಳುಂಟೇ? ಆಕಾಶವು ತಾನಾಗಿ ಹದ ಮಳೆಗಳನ್ನು ಕೊಟ್ಟೀತೇ? ಅಲ್ಲ, ನೀವೇ, ನಮ್ಮ ದೇವರಾದ ಯೆಹೋವ ದೇವರು, ನೀವೇ ವೃಷ್ಟಿದಾತರು, ನಾವು ನಿಮ್ಮನ್ನೇ ನಿರೀಕ್ಷಿಸುವೆವು, ನೀವು ಇವುಗಳನ್ನೆಲ್ಲಾ ನಡಿಸುವವರಾಗಿದ್ದೀರಷ್ಟೆ.


ಆಗ ನಾನು, “ಹಾ, ಸಾರ್ವಭೌಮ ಯೆಹೋವ ದೇವರೇ, ಇಗೋ, ಪ್ರವಾದಿಗಳು ಅವರಿಗೆ: ‘ನೀವು ಖಡ್ಗವನ್ನು ನೋಡುವುದಿಲ್ಲ. ನಿಮಗೆ ಕ್ಷಾಮವು ಬಾರದು. ಆದರೆ ಯೆಹೋವ ದೇವರು ನಿಮಗೆ ಈ ಸ್ಥಳದಲ್ಲಿ ಸ್ಥಿರಸಮಾಧಾನ ಕೊಡುತ್ತಾರೆ,’ ಎಂದು ಹೇಳುತ್ತಾರೆ,” ಎಂದೆನು.


ಆದರೆ ಅವರು ಮಂದರೂ ಮೂರ್ಖರೂ ಆಗಿದ್ದಾರೆ. ಅವರಿಗೆ ವ್ಯರ್ಥವಾದ ಮರ, ಬೊಂಬೆಗಳಿಂದ ಬೋಧನೆಯಾಗಿವೆ.


ಏಕೆಂದರೆ, ಅವರು ನನ್ನ ಜನರ ಗಾಯವನ್ನು ಹಗುರವಾಗಿ ಸ್ವಸ್ಥಮಾಡಿದ್ದಾರೆ. ಸಮಾಧಾನವಿಲ್ಲದಿರುವಾಗ, “ಸಮಾಧಾನ, ಸಮಾಧಾನ,” ಎಂದು ಹೇಳುತ್ತಾರೆ.


ಅವರು ನನ್ನ ಜನರ ಗಾಯವನ್ನು ಹಗುರವಾಗಿ ಸ್ವಸ್ಥಮಾಡಿದ್ದಾರೆ. ಸಮಾಧಾನವಿಲ್ಲದಿರುವಾಗ, ‘ಸಮಾಧಾನ, ಸಮಾಧಾನ,’ ಎಂದು ಹೇಳುತ್ತಾರೆ.


ನನ್ನನ್ನು ಯಾರಿಗೆ ಸರಿಕಟ್ಟಿ ಹೋಲಿಸುತ್ತೀರಿ? ನನ್ನ ಸಮಾನರೆಂದು ನನ್ನನ್ನು ಯಾರೊಡನೆ ಸಮಮಾಡುವಿರಿ?


ವಿಗ್ರಹಗಳನ್ನು ಕೆತ್ತುವವರು ನಿರರ್ಥಕರು. ಅವರ ಇಷ್ಟ ಬೊಂಬೆಗಳು ಏತಕ್ಕೂ ಬಾರವು. ಅವುಗಳಲ್ಲಿ ವಿಶ್ವಾಸವಿಡುವವರು ಕುರುಡರು, ತಿಳುವಳಿಕೆ ಇಲ್ಲದವರು. ಅಂಥವರು ನಾಚಿಕೆಗೆ ಗುರಿಯಾಗುವರು.


“ವ್ಯರ್ಥವಾದ ನಿಮ್ಮ ಮಾತುಗಳಿಂದ ನೀವು ನನ್ನನ್ನು ಸಂತೈಸುವುದು ಹೇಗೆ? ನಿಮ್ಮ ಉತ್ತರಗಳಲ್ಲಿ ವಿಶ್ವಾಸದ್ರೋಹ ಬಿಟ್ಟು ಮತ್ತೇನೂ ಉಳಿದಿರುವುದಿಲ್ಲ.”


ಆದರೆ ನೀವು ಸುಳ್ಳನ್ನು ಕಲ್ಪಿಸುವವರು; ನೀವೆಲ್ಲರು ವ್ಯರ್ಥ ವೈದ್ಯರೇ.


ಅದಕ್ಕೆ ಮೀಕಾಯನು, “ಇಸ್ರಾಯೇಲರೆಲ್ಲರು ಕುರುಬನಿಲ್ಲದ ಕುರಿಗಳಂತೆ ಬೆಟ್ಟಗಳ ಮೇಲೆ ಚದರಿಹೋದದ್ದನ್ನು ಕಂಡೆನು. ಆಗ ಯೆಹೋವ ದೇವರು, ‘ಇವರಿಗೆ ಯಜಮಾನನು ಇಲ್ಲ, ಪ್ರತಿ ಮನುಷ್ಯನು ತನ್ನ ತನ್ನ ಮನೆಗೆ ಸಮಾಧಾನವಾಗಿ ಹಿಂದಿರುಗಿ ಹೋಗಲಿ,’ ಎಂಬುದಾಗಿ ಹೇಳಿದರು,” ಎಂದನು.


ಆಗ ಲಯಿಷಿನ ದೇಶವನ್ನು ಸಂಚರಿಸಿ ನೋಡಿ ಬಂದ ಆ ಐದು ಮಂದಿ ಜನರು ತಮ್ಮ ಸಹೋದರರಿಗೆ ಉತ್ತರಕೊಟ್ಟು, “ಈ ಮನೆಗಳಲ್ಲಿ ಏಫೋದೂ, ಪ್ರತಿಮೆಗಳೂ, ಕೆತ್ತಿದ ವಿಗ್ರಹವೂ, ಎರಕದ ವಿಗ್ರಹವೂ ಉಂಟೆಂದು ನಿಮಗೆ ಗೊತ್ತುಂಟೋ? ನೀವು ಈಗ ಮಾಡಬೇಕಾದದ್ದೇನೆಂದು ತಿಳಿದುಕೊಳ್ಳಿರಿ,” ಎಂದರು.


ಅವನು ಅವರ ಮುಂದಾಗಿ ಹೋಗಲಿ, ಅವರ ಮುಂದಾಗಿ ಬರಲಿ. ಅವರನ್ನು ಕರೆದುಕೊಂಡು ಹೋಗಲಿ, ಕರೆದುಕೊಂಡು ಬರಲಿ. ಯೆಹೋವ ದೇವರ ಈ ಜನಸಮೂಹವು ಕುರುಬನಿಲ್ಲದ ಕುರಿಗಳ ಹಾಗೆ ಇರಬಾರದು,” ಎಂದನು.


ಯೇಸು ದೋಣಿಯಿಂದ ಇಳಿದಾಗ ದೊಡ್ಡ ಜನಸಮೂಹವನ್ನು ಕಂಡು ಅವರ ಮೇಲೆ ಕನಿಕರಪಟ್ಟರು. ಏಕೆಂದರೆ ಅವರು ಕುರುಬನಿಲ್ಲದ ಕುರಿಗಳಂತಿದ್ದರು. ಆಗ ಯೇಸು ಅವರಿಗೆ ಅನೇಕ ವಿಷಯಗಳನ್ನು ಕುರಿತು ಬೋಧಿಸಲಾರಂಭಿಸಿದರು.


ಸುಳ್ಳಿನ ಕನಸುಗಳನ್ನು ಪ್ರವಾದಿಸಿ, ತಮ್ಮ ಸುಳ್ಳುಗಳಿಂದಲೂ ತಮ್ಮ ನಿರರ್ಥಕವಾದ ವಿಚಾರಗಳಿಂದಲೂ ನನ್ನ ಜನರು ತಪ್ಪುವಂತೆ ಮಾಡುವವರಿಗೆ ವಿರೋಧವಾಗಿದ್ದೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ. “ನಾನು ಅವರನ್ನು ಕಳುಹಿಸಲಿಲ್ಲ, ಅವರಿಗೆ ಅಪ್ಪಣೆ ಕೊಡಲಿಲ್ಲ. ಆದ್ದರಿಂದ ಅವರು ಹೇಗೂ ಈ ಜನರಿಗೆ ಪ್ರಯೋಜನವಾಗಿರುವುದೇ ಇಲ್ಲ,” ಎಂದು ಯೆಹೋವ ದೇವರು ನುಡಿಯುತ್ತಾರೆ.


“ಮಂದೆಯನ್ನು ಕೈಬಿಡುವಂಥ ಮೈಗಳ್ಳನಾದ ಕುರುಬನಿಗೆ ಕಷ್ಟ! ಖಡ್ಗವು ಅವನ ತೋಳಿನ ಮೇಲೆಯೂ, ಅವನ ಬಲಗಣ್ಣಿನ ಮೇಲೆಯೂ ಇರುವುದು. ಅವನ ತೋಳು ಪೂರ್ತಿಯಾಗಿ ಒಣಗುವುದು. ಅವನ ಬಲಗಣ್ಣು ಪೂರ್ಣವಾಗಿ ಕತ್ತಲಾಗುವುದು.”


“ಈ ದೇವತೆಗಳನ್ನು ಅವಲಂಬಿಸಿ ಪೂಜಿಸೋಣ,” ಎಂದು ಬೋಧಿಸಬಹುದು. ಆ ಬೋಧನೆಯನ್ನು ರುಜುವಾತುಪಡಿಸಲು ಒಂದು ಅದ್ಭುತವನ್ನಾಗಲಿ, ಮಹತ್ಕಾರ್ಯವನ್ನಾಗಲಿ ತೋರಿಸಿಕೊಡುತ್ತೇನೆಂದು ಸಹ ಹೇಳಬಹುದು.


ಇಗೋ, ಅವರೆಲ್ಲಾ ವ್ಯರ್ಥವೇ, ಅವರ ಕಾರ್ಯಗಳು ಶೂನ್ಯವೇ. ಅವರ ಕೆತ್ತಿದ ವಿಗ್ರಹಗಳು ಗಾಳಿ ಮತ್ತು ಗಲಿಬಿಲಿಯೇ.”


ಸುಳ್ಳುಗಾರರ ಗುರುತುಗಳನ್ನು ನಿರರ್ಥಕ ಮಾಡುವವನೂ ಮತ್ತು ಕಣಿ ಹೇಳುವವರನ್ನು ಹುಚ್ಚರನ್ನಾಗಿ ಮಾಡುವವನೂ ಜ್ಞಾನಿಗಳನ್ನು ಹಿಂದಕ್ಕೆ ತಳ್ಳಿ, ಅವರ ತಿಳುವಳಿಕೆಯನ್ನು ಬುದ್ಧಿಹೀನವಾಗ ಮಾಡುವವನೂ


ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ. ಅವರ ದುರ್ಬೋಧನೆಯ ನಿಮಿತ್ತ ನಾನು ನಿಮ್ಮನ್ನು ಹೊರದೂಡಬೇಕಾಗುವುದು, ನೀವು ದೇಶ ಭ್ರಷ್ಟರಾಗಿ ನಾಶವಾಗುವಿರಿ.


‘ನೀವು ಬಾಬಿಲೋನಿಯದ ಅರಸನ ಅಡಿಯಾಳಾಗುವುದಿಲ್ಲ,’ ಎಂದು ನಿಮಗೆ ನುಡಿಯುವ ಪ್ರವಾದಿಗಳ ಮಾತುಗಳಿಗೆ ಕಿವಿಗೊಡಬೇಡಿ, ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು