Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜೆಕರ್ಯ 10:1 - ಕನ್ನಡ ಸಮಕಾಲಿಕ ಅನುವಾದ

1 ಯೆಹೋವ ದೇವರಿಂದ ಹಿಂಗಾರು ಮಳೆಯ ಕಾಲದಲ್ಲಿ, ಮಳೆಯನ್ನು ಬೇಡಿಕೊಳ್ಳಿರಿ. ಹೀಗೆ ಯೆಹೋವ ದೇವರು ಮಿಂಚುವ ಮೋಡಗಳನ್ನು ಮಾಡಿ, ಅವರಿಗೆ ಸಮೃದ್ಧಿಯಾದ ಮಳೆಯನ್ನೂ, ಒಬ್ಬೊಬ್ಬನಿಗೆ ಹೊಲದಲ್ಲಿ ಹುಲ್ಲನ್ನೂ ಕೊಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಮಳೆಯಾಗುವಂತೆ ಹಿಂಗಾರಿನಲ್ಲಿ ಯೆಹೋವನನ್ನು ಬೇಡಿಕೊಳ್ಳಿರಿ; ಯೆಹೋವನೇ ಮಿಂಚುಗಳನ್ನು ಉಂಟುಮಾಡುತ್ತಾನೆ, ಮನುಷ್ಯರಿಗೆ ಸಮೃದ್ಧಿಯಾದ ಮಳೆಯನ್ನು ದಯಪಾಲಿಸುತ್ತಾನೆ, ಎಲ್ಲರಿಗೂ ಹೊಲದ ಪೈರನ್ನು ಅನುಗ್ರಹಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ವಸಂತಕಾಲದಲ್ಲಿ ಮಳೆಗಾಗಿ ಸರ್ವೇಶ್ವರಸ್ವಾಮಿಗೆ ಪ್ರಾರ್ಥನೆ ಮಾಡಿರಿ. ಮೋಡ ಮಿಂಚುಗಳನ್ನು ಗಾಳಿಮಳೆಯನ್ನು ಉಂಟುಮಾಡುವವರು ಅವರೇ. ಸರ್ವರಿಗೂ ಹೊಲಗದ್ದೆಗಳಲ್ಲಿ ಪೈರುಪಚ್ಚೆಗಳನ್ನು ನೀಡುವವರು ಅವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಮಳೆಯಾಗುವಂತೆ ಹಿಂಗಾರಿನಲ್ಲಿ ಯೆಹೋವನನ್ನು ಬೇಡಿಕೊಳ್ಳಿರಿ; ಯೆಹೋವನೇ ವಿುಂಚುಗಳನ್ನು ಉಂಟುಮಾಡುತ್ತಾನೆ, ಮನುಷ್ಯರಿಗೆ ಸಮೃದ್ಧಿಯಾದ ಮಳೆಯನ್ನು ದಯಪಾಲಿಸುತ್ತಾನೆ, ಎಲ್ಲರಿಗೂ ಹೊಲದ ಪೈರನ್ನು ಅನುಗ್ರಹಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ವಸಂತ ಕಾಲದಲ್ಲಿ ಮಳೆಗಾಗಿ ಯೆಹೋವನಿಗೆ ಪ್ರಾರ್ಥಿಸಿರಿ. ಯೆಹೋವನು ಮಿಂಚನ್ನು ಕಳುಹಿಸುವನು; ಆಗ ಮಳೆ ಸುರಿಯುವುದು ಮತ್ತು ದೇವರು ಎಲ್ಲರ ಹೊಲಗಳಲ್ಲಿ ಸಸಿಗಳು ಬೆಳೆಯುವಂತೆ ಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜೆಕರ್ಯ 10:1
31 ತಿಳಿವುಗಳ ಹೋಲಿಕೆ  

ಏಕೆಂದರೆ ನಾನು ಬಾಯಾರಿದ ಭೂಮಿಯ ಮೇಲೆ ನೀರನ್ನು ಸುರಿಸುವೆನು. ಒಣನೆಲದ ಮೇಲೆ ಪ್ರವಾಹಗಳನ್ನು ಬರಮಾಡುವೆನು. ನಿನ್ನ ಸಂತಾನದವರಲ್ಲಿ ನನ್ನ ಆತ್ಮವನ್ನೂ, ನಿನ್ನಿಂದ ಹುಟ್ಟುವಂಥದ್ದರ ಮೇಲೆ ನನ್ನ ಆಶೀರ್ವಾದವನ್ನೂ ಸುರಿಸುವೆನು.


ಪ್ರಿಯರೇ, ಕರ್ತ ಯೇಸು ಬರುವ ತನಕ ದೀರ್ಘಶಾಂತಿಯಿಂದಿರಿ. ವ್ಯವಸಾಯಗಾರನನ್ನು ನೋಡಿರಿ. ಅವನು ಭೂಮಿಯ ಅಮೂಲ್ಯವಾದ ಫಲಕ್ಕಾಗಿ ಕಾದಿದ್ದು ಮುಂಗಾರು ಹಿಂಗಾರು ಮಳೆಗಳು ಬರುವ ತನಕ ದೀರ್ಘಶಾಂತಿಯಿಂದಿರುವನು.


“ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಇನ್ನೊಂದು ವಿಷಯದಲ್ಲಿ, ಇಸ್ರಾಯೇಲರ ಮತ್ತೊಂದು ಕೋರಿಕೆಯನ್ನು ಆಲಿಸಿ ನೆರವೇರಿಸುವೆನು. ನಾನು ಅವರನ್ನು ಮನುಷ್ಯರಲ್ಲಿ ಮಂದೆಯಂತೆ ಹೆಚ್ಚಿಸುವೆನು.


ಆಗ ನೀವು ಹೊಲದಲ್ಲಿ ಬೀಜ ಬಿತ್ತುವುದಕ್ಕೆ ಬಿತ್ತನೆಯ ಮಳೆಯನ್ನು ದಯಪಾಲಿಸುವೆನು. ಭೂಮಿಯ ಬೆಳೆಯಿಂದ ಸಾರವಾದ ಆಹಾರವನ್ನು ಸಮೃದ್ಧಿಯಾಗಿ ಒದಗಿಸುವೆನು. ಆ ದಿನದಲ್ಲಿ ನಿನ್ನ ದನಗಳು ವಿಸ್ತಾರವಾದ ಹುಲ್ಲುಗಾವಲುಗಳಲ್ಲಿ ಮೇಯುವುವು.


ಭೂಮಿಯನ್ನು ಸಂಧಿಸಿ, ಅದಕ್ಕೆ ಮಳೆಬರುವಂತೆ, ಅದನ್ನು ಫಲವತ್ತಾಗಿ ಮಾಡುತ್ತೀರಿ. ದೇವರ ನದಿಯು ನೀರಿನಿಂದ ತುಂಬಿದೆ. ಹೀಗೆ ಭೂಮಿಯನ್ನು ಸಿದ್ಧಮಾಡಿ, ಜನರಿಗೆ ನೀವು ಧಾನ್ಯವನ್ನು ಒದಗಿಸುತ್ತೀರಿ.


ನಿಮ್ಮ ತಲೆಯ ಮೇಲಿರುವ ಆಕಾಶವು ಕಂಚಿನಂತೆಯೂ ಕೆಳಗಿರುವ ಭೂಮಿ ಬೆಳೆಕೊಡದೆ ಕಬ್ಬಿಣದಂತೆಯೂ ಇರುವವು.


ಆ ದಿನದಲ್ಲಿ ನೀವು ನನ್ನನ್ನು ಏನೂ ಪ್ರಶ್ನಿಸುವುದಿಲ್ಲ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅವರು ನಿಮಗೆ ಕೊಡುವರು.


ಇದಲ್ಲದೆ ಯಾಕೋಬನ ಶೇಷವು ಅನೇಕ ಜನಾಂಗಳ ಮಧ್ಯದಲ್ಲಿ ಯೆಹೋವ ದೇವರಿಂದ ಬಂದ ಮಂಜಿನ ಹಾಗೆಯೂ ಹುಲ್ಲಿನ ಮೇಲೆ ಜಡಿಮಳೆಯ ಹಾಗೆಯೂ ಇರುವುದು. ಅದು ಮನುಷ್ಯರಿಗೋಸ್ಕರ ಆತುಕೊಳ್ಳುವುದಿಲ್ಲ, ಮನುಷ್ಯ ಮಕ್ಕಳಿಗಾಗಿ ಕಾದುಕೊಳ್ಳುವುದಿಲ್ಲ.


“ಸುಗ್ಗಿಯು ಇನ್ನು ಮೂರು ತಿಂಗಳು ಇರುವಾಗ, ಮಳೆಯನ್ನು ನಾನು ನಿಮ್ಮಿಂದ ಹಿಂದೆಗೆದಿದ್ದೇನೆ. ಒಂದು ಪಟ್ಟಣದ ಮೇಲೆ ಮಳೆ ಸುರಿಸಿ, ಇನ್ನೊಂದು ಪಟ್ಟಣದ ಮೇಲೆ ಮಳೆ ಸುರಿಸಲಿಲ್ಲ. ಒಂದು ಹೊಲದ ಮೇಲೆ ಮಳೆ ಸುರಿಸಿ, ಇನ್ನೊಂದು ಹೊಲದ ಮೇಲೆ ಮಳೆ ಸುರಿಸಲಿಲ್ಲ ಮತ್ತು ಅದು ಒಣಗಿ ಹೋಯಿತು.


ನಿಮಗಾಗಿ ನೀತಿಯ ಬೀಜವನ್ನು ಬಿತ್ತಿರಿ. ಪ್ರೀತಿಯ ಫಲವನ್ನು ಕೊಯ್ಯಿರಿ. ಹಾಳಾಗಿ ಬೀಳುಬಿದ್ದ ನಿಮ್ಮ ಭೂಮಿಯನ್ನು ಅಗೆಯಿರಿ. ಏಕೆಂದರೆ ಆತನು ಬಂದು ನಿಮ್ಮ ಮೇಲೆ ನೀತಿಯನ್ನು ಸುರಿಸುವವರೆಗೂ ಯೆಹೋವ ದೇವರನ್ನು ಹುಡುಕುವ ಸಮಯ ಇದೇ.


ಅವರನ್ನೂ ನನ್ನ ಪರ್ವತಗಳ ಸುತ್ತಣ ಪ್ರದೇಶಗಳನ್ನೂ ಆಶೀರ್ವಾದವನ್ನಾಗಿ ಮಾಡುವೆನು. ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು. ದಿವ್ಯಾಶೀರ್ವಾದದ ಮಳೆಯಾಗುವುದು.


ಜನಾಂಗಗಳ ವ್ಯರ್ಥ ವಿಗ್ರಹಗಳೊಳಗೆ ಮಳೆಯನ್ನು ಸುರಿಸಬಲ್ಲವುಗಳುಂಟೇ? ಆಕಾಶವು ತಾನಾಗಿ ಹದ ಮಳೆಗಳನ್ನು ಕೊಟ್ಟೀತೇ? ಅಲ್ಲ, ನೀವೇ, ನಮ್ಮ ದೇವರಾದ ಯೆಹೋವ ದೇವರು, ನೀವೇ ವೃಷ್ಟಿದಾತರು, ನಾವು ನಿಮ್ಮನ್ನೇ ನಿರೀಕ್ಷಿಸುವೆವು, ನೀವು ಇವುಗಳನ್ನೆಲ್ಲಾ ನಡಿಸುವವರಾಗಿದ್ದೀರಷ್ಟೆ.


ಅವರ ಗರ್ಜನೆಗೆ ಆಕಾಶದಲ್ಲಿನ ನೀರು ಭೋರ್ಗರೆಯುತ್ತದೆ, ಅವರು ಭೂಮಿಯ ಕಟ್ಟಕಡೆಗಳಿಂದ ಮೋಡಗಳನ್ನು ಏಳುವಂತೆ ಮಾಡುತ್ತಾರೆ. ಮಳೆಗೋಸ್ಕರ ಮಿಂಚನ್ನು ಉಂಟುಮಾಡುತ್ತಾರೆ. ತಮ್ಮ ಭಂಡಾರದಿಂದ ಗಾಳಿಯನ್ನು ಬೀಸಮಾಡುತ್ತಾರೆ.


ಅದನ್ನು ನಾನು ಹಾಳಾಗಲು ಬಿಡುವೆನು. ಅದರ ಕುಡಿ ಯಾರೂ ಕತ್ತರಿಸುವುದಿಲ್ಲ, ಅಗೆಯುವುದೂ ಇಲ್ಲ, ಅದರಲ್ಲಿ ಮುಳ್ಳು ಕಳೆ ಬೆಳೆಯುವುದು. ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಆಜ್ಞಾಪಿಸುವೆನು.”


ಪ್ರಕಾಶಮಾನವಾದ ಅರಸನ ಮುಖದಲ್ಲಿ ಜೀವ, ಅವನ ದಯೆಯು ಹಿಂಗಾರು ಮಳೆಯ ಮೇಘದಂತಿದೆ.


ದೇವರು ಬೆಟ್ಟಗಳಿಗೆ ತಮ್ಮ ಉಪ್ಪರಿಗೆಗಳೊಳಗಿಂದ ನೀರು ಹಾಕುತ್ತಾರೆ. ಅವರ ಕೆಲಸಗಳ ಫಲದಿಂದ ಭೂಮಿಯು ತೃಪ್ತಿಯಾಗುತ್ತದೆ.


ಅವರ ಗರ್ಜನೆಗೆ ಆಕಾಶದಲ್ಲಿನ ನೀರು ಭೋರ್ಗರೆಯುತ್ತದೆ, ಅವರು ಭೂಮಿಯ ಕಟ್ಟಕಡೆಗಳಿಂದ ಮೋಡಗಳನ್ನು ಏಳುವಂತೆ ಮಾಡುತ್ತಾರೆ. ಮಳೆಗೋಸ್ಕರ ಮಿಂಚನ್ನು ಉಂಟುಮಾಡುತ್ತಾರೆ; ತಮ್ಮ ಭಂಡಾರದಿಂದ ಗಾಳಿಯನ್ನು ಬೀಸಮಾಡುತ್ತಾರೆ.


ಗಿಲ್ಯಾದಿನ ಪ್ರವಾಸಿಗಳಲ್ಲಿ ತಿಷ್ಬೀಯ ಊರಿನವನಾದ ಎಲೀಯನು ಅಹಾಬನಿಗೆ, “ನಾನು ಸನ್ನಿಧಿಸೇವೆ ಮಾಡುತ್ತಿರುವ ಇಸ್ರಾಯೇಲ್ ದೇವರಾದ ಯೆಹೋವ ದೇವರ ಜೀವದಾಣೆ, ನನ್ನ ಮಾತಿನ ಪ್ರಕಾರ ಸೂಚಿಸಿದ ಹೊರತು ಇಂದಿನಿಂದ ಕೆಲವು ವರ್ಷಗಳವರೆಗೆ ಮಂಜಾಗಲಿ ಅಥವಾ ಮಳೆಯಾಗಲಿ ಬೀಳುವುದಿಲ್ಲ,” ಎಂದನು.


ನಾನು ಬೀಜವನ್ನು ಬಿತ್ತಿದೆನು, ಅಪೊಲ್ಲೋಸನು ನೀರು ಹಾಕಿದನು, ಆದರೆ ಬೆಳೆಸಿದವರು ದೇವರೇ.


ನಾವು ಯೆಹೋವ ದೇವರನ್ನು ತಿಳಿದುಕೊಳ್ಳಲು, ಅವರನ್ನು ಹಿಂಬಾಲಿಸಿದರೆ ತಿಳಿದುಕೊಳ್ಳುವೆವು. ಅವರ ಆಗಮನವು ಅರುಣೋದಯದಂತೆ ನಿಶ್ಚಯ. ಅವರು ಮಳೆಯಂತೆಯೂ ಮುಂಗಾರಿನಂತೆಯೂ, ಭೂಮಿಯನ್ನು ತಂಪು ಮಾಡುವ ಹಿಂಗಾರಿನಂತೆಯೂ ಬಳಿಗೆ ಬರುವರು.


ಕೊಯ್ದ ಹುಲ್ಲಿನ ಮೇಲೆ ಬೀಳುವ ಮಳೆಯ ಹಾಗೆಯೂ, ಭೂಮಿಯನ್ನು ನೆನಸುತ್ತಾ ಸುರಿಯುವ ಮಳೆಗಳ ಹಾಗೆಯೂ ಅರಸನು ಇರಲಿ.


ಮಳೆಯಂತೆ ನನ್ನನ್ನು ಎದುರುನೋಡುತ್ತಿದ್ದರು. ಮುಂಗಾರಿನ ಮಳೆಯಹಾಗೆ ನನ್ನ ಮಾತುಗಳಲ್ಲಿ ಉಲ್ಲಾಸಿಸುತ್ತಿದ್ದರು.


ಭೂಮಿಯ ಎಲ್ಲಕಡೆಗಳಿಂದ ಮೋಡಗಳನ್ನು ಏಳುವಂತೆ ಮಾಡುತ್ತಾರೆ. ಮಳೆಯನ್ನೂ ಮಿಂಚನ್ನೂ ಕಳುಹಿಸುತ್ತಾರೆ. ಗಾಳಿಯನ್ನು ತಮ್ಮ ಉಗ್ರಾಣಗಳಿಂದ ಬೀಸುವಂತೆ ಮಾಡುತ್ತಾರೆ.


ತಮ್ಮ ಹೃದಯದಲ್ಲಿ, ‘ಮುಂಗಾರು ಹಿಂಗಾರು ಮಳೆಯನ್ನು ಅದರದರ ಕಾಲದಲ್ಲಿ ನಮಗೆ ಕೊಡುವಂಥ ಸುಗ್ಗಿಗೆ ನೇಮಕವಾದ ವಾರಗಳನ್ನು ನಮಗೆ ಪ್ರತ್ಯೇಕಿಸುವಂಥ ನಮ್ಮ ದೇವರಾದ ಯೆಹೋವ ದೇವರಿಗೆ ಭಯಪಡೋಣ,’ ಎಂದುಕೊಳ್ಳುವುದಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು