ಜೆಕರ್ಯ 1:19 - ಕನ್ನಡ ಸಮಕಾಲಿಕ ಅನುವಾದ19 ಆಗ ನನ್ನ ಸಂಗಡ ಮಾತನಾಡಿದ ದೂತನಿಗೆ ನಾನು, “ಇದೇನು?” ಎಂದೆನು. ಅದಕ್ಕೆ ಅವನು ನನಗೆ ಉತ್ತರಕೊಟ್ಟು, “ಇವು ಯೆಹೂದ, ಇಸ್ರಾಯೇಲ್, ಯೆರೂಸಲೇಮನ್ನೂ ಚದರಿಸಿದ ಕೊಂಬುಗಳು,” ಎಂದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ವಿವರಿಸುವ ದೂತನನ್ನು ಕುರಿತು, “ಇವು ಏನು?” ಎಂದು ನಾನು ಕೇಳಿದ್ದಕ್ಕೆ ಅವನು, “ಇವು ಯೆಹೂದ, ಇಸ್ರಾಯೇಲ್, ಯೆರೂಸಲೇಮನ್ನು ಚದುರಿಸುವ ಕೊಂಬುಗಳು” ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 “ಈ ಕೊಂಬುಗಳು ಏನನ್ನು ಸೂಚಿಸುತ್ತವೆ?” ಎಂದು ನಾನು ಕೇಳಿದಾಗ ಸೂತ್ರಧಾರಿಯಾದ ದೂತನು: ‘ಇವು ಜೂದ, ಇಸ್ರಯೇಲ್, ಮತ್ತು ಜೆರುಸಲೇಮಿನ ಪ್ರಜೆಗಳನ್ನು ಚದರಿಸಿಬಿಟ್ಟ ಕೊಂಬುಗಳು,’ ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ವಿವರಿಸುವ ದೂತನನ್ನು ಕುರಿತು ಇವು ಏನು ಎಂದು ನಾನು ಕೇಳಿದ್ದಕ್ಕೆ ಅವನು - ಇವು ಯೆಹೂದ ಇಸ್ರಾಯೇಲು ಯೆರೂಸಲೇಮುಗಳನ್ನು ಚದರಿಸಿರುವ ಕೊಂಬುಗಳು ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 “ಈ ಕೊಂಬುಗಳೇನು?” ಎಂದು ನಾನು ದೇವದೂತನೊಂದಿಗೆ ವಿಚಾರಿಸಿದೆನು. ಅದಕ್ಕವನು, “ಇವು ಬಲಿಷ್ಠವಾದ ಕೊಂಬುಗಳು (ಬಲಿಷ್ಠವಾದ ಜನಾಂಗಗಳು); ಇಸ್ರೇಲ್, ಯೆಹೂದ ಮತ್ತು ಜೆರುಸಲೇಮಿನ ಜನರನ್ನು ಪರದೇಶಗಳಿಗೆ ಚದರಿಹೋಗುವಂತೆ ಮಾಡಿವೆ” ಅಂದನು. ಅಧ್ಯಾಯವನ್ನು ನೋಡಿ |