Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜೆಕರ್ಯ 1:18 - ಕನ್ನಡ ಸಮಕಾಲಿಕ ಅನುವಾದ

18 ನಾನು ನನ್ನ ಕಣ್ಣುಗಳನ್ನು ಎತ್ತಿದಾಗ, ನಾಲ್ಕು ಕೊಂಬುಗಳನ್ನು ನೋಡಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ನಾನು ಕಣ್ಣೆತ್ತಿ ನೋಡಲು ಇಗೋ, ನಾಲ್ಕು ಕೊಂಬುಗಳು ಕಾಣಿಸಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಮತ್ತೊಂದು ದರ್ಶನದಲ್ಲಿ ನಾನು ನಾಲ್ಕು ಕೊಂಬುಗಳನ್ನು ಕಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ನಾನು ಕಣ್ಣೆತ್ತಿನೋಡಲು ಇಗೋ, ನಾಲ್ಕು ಕೊಂಬುಗಳು ಕಾಣಿಸಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಆಗ ನಾನು ಮೇಲೆ ನೋಡಿದಾಗ ನಾಲ್ಕು ಕೊಂಬುಗಳನ್ನು ಕಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜೆಕರ್ಯ 1:18
17 ತಿಳಿವುಗಳ ಹೋಲಿಕೆ  

ಇದಾದ ಮೇಲೆ ಯೆಹೋಶುವನು ಯೆರಿಕೋವಿನ ಬಳಿಯಲ್ಲಿ ಇದ್ದಾಗ, ಒಮ್ಮೆ ಕಣ್ಣೆತ್ತಿ ನೋಡಿದನು. ಆಗ ಒಬ್ಬ ಮನುಷ್ಯನು ಅವನಿಗೆದುರಾಗಿ ನಿಂತಿದ್ದನು. ಆತನ ಕೈಯಲ್ಲಿ ಹಿರಿದ ಖಡ್ಗ ಇರುವುದನ್ನು ಕಂಡನು. ಯೆಹೋಶುವನು ಆತನ ಬಳಿಗೆ ಹೋಗಿ ಆತನಿಗೆ, “ನೀವು ನಮ್ಮವರೋ ಅಥವಾ ಶತ್ರು ಕಡೆಯವರೋ?” ಎಂದು ಕೇಳಿದನು.


ಆಗ ನಾನು ಕಣ್ಣೆತ್ತಿ ನೋಡಿದಾಗ, ಇಬ್ಬರು ಸ್ತ್ರೀಯರು ಇದ್ದರು. ಅವರ ರೆಕ್ಕೆಗಳು ರಭಸವಾಗಿದ್ದವು. ಅವರ ರೆಕ್ಕೆಗಳು ಕೊಕ್ಕರೆಯ ರೆಕ್ಕೆಗಳ ಹಾಗಿದ್ದವು. ಅವರು ಆಕಾಶ ಮತ್ತು ಭೂಮಿಯ ನಡುವೆ ಬುಟ್ಟಿಯನ್ನು ಎತ್ತಿದರು.


ಆಗ ನನ್ನ ಸಂಗಡ ಮಾತನಾಡುತ್ತಿದ್ದ ದೂತನು ಬಂದು, “ನಿನ್ನ ಕಣ್ಣೆತ್ತಿ ಹೊರಡುವಂಥದ್ದು ಏನೆಂದು ನೋಡು,” ಎಂದು ನನಗೆ ಹೇಳಿದನು.


ಆಗ ನಾನು ತಿರುಗಿಕೊಂಡು ನನ್ನ ಕಣ್ಣುಗಳನ್ನೆತ್ತಿ ನೋಡಲು, ಹಾರುವ ಸುರುಳಿ ಕಾಣಿಸಿತು.


ಆಗ ನಾನು ಕಣ್ಣೆತ್ತಿ ನೋಡಲು, ತನ್ನ ಕೈಯಲ್ಲಿ ಅಳೆಯುವ ನೂಲು ಉಳ್ಳ ಒಬ್ಬ ಮನುಷ್ಯನನ್ನು ಕಂಡೆನು.


ಇಸ್ರಾಯೇಲಿನ ಅರಸನಾದ ಪೆಕಹನ ಕಾಲದಲ್ಲಿ ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸೆರನು ಬಂದು, ಇಯ್ಯೋನ್, ಆಬೇಲ್ ಬೇತ್ ಮಾಕಾ, ಯಾನೋಹ, ಕೆದೆಷ್, ಹಾಚೋರ್, ಗಿಲ್ಯಾದ್, ಗಲಿಲಾಯ ಮತ್ತು ನಫ್ತಾಲಿಯ ಎಲ್ಲಾ ಭೂಮಿಯನ್ನು ವಶಮಾಡಿಕೊಂಡು, ಜನರನ್ನು ಸೆರೆಯಾಗಿ ಅಸ್ಸೀರಿಯಾ ದೇಶಕ್ಕೆ ಒಯ್ದನು.


ಆಗ ಕೆನಾನನ ಮಗನಾದ ಚಿದ್ಕೀಯನು, “ತನಗೆ ಕಬ್ಬಿಣದ ಕೊಂಬುಗಳನ್ನು ಮಾಡಿಕೊಂಡು, ‘ಇವುಗಳಿಂದ ನೀನು ಅರಾಮ್ಯರನ್ನು ನಿರ್ಮೂಲ ಮಾಡುವವರೆಗೂ ಇರಿದು ಹಾಕುವೆ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.


“ಪುನಃ ನೀನು ಸಾರಿ, ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಪಟ್ಟಣಗಳು ಇನ್ನು ಅಭಿವೃದ್ಧಿಯಾಗಿ ಹರಡುವುವು. ಯೆಹೋವ ದೇವರು ಚೀಯೋನನ್ನು ಆದರಿಸುವರು. ಯೆರೂಸಲೇಮನ್ನು ಆರಿಸಿಕೊಳ್ಳುವರು, ಎಂದು ಹೇಳಿದನು.”


ಆಗ ನನ್ನ ಸಂಗಡ ಮಾತನಾಡಿದ ದೂತನಿಗೆ ನಾನು, “ಇದೇನು?” ಎಂದೆನು. ಅದಕ್ಕೆ ಅವನು ನನಗೆ ಉತ್ತರಕೊಟ್ಟು, “ಇವು ಯೆಹೂದ, ಇಸ್ರಾಯೇಲ್, ಯೆರೂಸಲೇಮನ್ನೂ ಚದರಿಸಿದ ಕೊಂಬುಗಳು,” ಎಂದನು.


ನಾನು ಕಣ್ಣೆತ್ತಿ ನೋಡಿದಾಗ, ನಾಲ್ಕು ರಥಗಳು ಎರಡು ಬೆಟ್ಟಗಳ ಮಧ್ಯದಿಂದ ಹೊರಟು ಬಂದವು. ಆ ಬೆಟ್ಟಗಳು ಕಂಚಿನ ಬೆಟ್ಟಗಳಾಗಿದ್ದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು