Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಜೆಕರ್ಯ 1:15 - ಕನ್ನಡ ಸಮಕಾಲಿಕ ಅನುವಾದ

15 ನಿಶ್ಚಿಂತೆಯುಳ್ಳವರಾಗಿರುವ ಇತರ ರಾಷ್ಟ್ರಗಳ ಮೇಲೆ ನಾನು ಬಹಳ ಕೋಪವಾಗಿದ್ದೇನೆ. ಆದರೆ ಯೆರೂಸಲೇಮಿನ ಮೇಲೆ ನಾನು ಸ್ವಲ್ಪ ಮಾತ್ರ ಸಿಟ್ಟುಗೊಂಡಿರಲು, ಅವರು ಸಂಕಟಕ್ಕೆ ಇನ್ನು ಹೆಚ್ಚು ಕೇಡು ಕೂಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ನೆಮ್ಮದಿಯಾಗಿರುವ ಜನಾಂಗಗಳ ಮೇಲೆ ನಾನು ಬಹಳ ಕೋಪಗೊಂಡಿದ್ದೇನೆ; ನಾನು ಯೆರೂಸಲೇಮಿನ ಮೇಲೆ ಸ್ವಲ್ಪ ಮಾತ್ರ ಸಿಟ್ಟುಗೊಂಡು ಮಾಡಬೇಕೆಂದಿದ್ದ ಕೇಡಿಗಿಂತ ಅವರೇ ಹೆಚ್ಚಾಗಿ ಕೇಡಿಗೆ ಕೇಡು ಸೇರಿಸಿಕೊಂಡರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ನೆಮ್ಮದಿಯಿಂದ ಬಾಳುವ ರಾಷ್ಟ್ರಗಳ ಮೇಲೆ ಬಹಳ ಸಿಟ್ಟುಗೊಂಡಿದ್ದೇನೆ. ಏಕೆಂದರೆ, ನಾನು ಜೆರುಸಲೇಮಿನ ವಿರುದ್ಧ ಕಿಂಚಿತ್ತೇ ಕೋಪಗೊಂಡಿದ್ದಾಗ ಅವರು ಕೇಡಿಗೆ ಕೇಡು ಕೂಡಿಸಿಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ನೆಮ್ಮದಿಯಾಗಿರುವ ಜನಾಂಗಗಳ ಮೇಲೆ ನನಗೆ ಬಲು ಸಿಟ್ಟೇರಿದೆ; ನಾನು [ಯೆರೂಸಲೇವಿುನ ಮೇಲೆ] ಸ್ವಲ್ಪ ಮಾತ್ರ ಸಿಟ್ಟುಗೊಂಡು ಮಾಡಿಸಬೇಕೆಂದಿದ್ದ ಕೇಡಿಗಿಂತ ಅವು ಹೆಚ್ಚಾಗಿ ಮಾಡಿದವಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ತಾವು ಸುರಕ್ಷಿತರಾಗಿದ್ದೇವೆ ಎಂದು ನೆನಸುವ ಜನಾಂಗಗಳ ಮೇಲೆ ನಾನು ಕೋಪಗೊಳ್ಳುವೆನು. ನಾನು ಸ್ವಲ್ಪ ಕೋಪಗೊಂಡಿದ್ದರಿಂದ ನನ್ನ ಜನರನ್ನು ಶಿಕ್ಷಿಸಲು ಆ ಜನಾಂಗಗಳನ್ನು ಉಪಯೋಗಿಸಿಕೊಂಡೆನು. ಆದರೆ ಆ ಜನಾಂಗಗಳು ಅತಿಯಾಗಿ ಅವರನ್ನು ಹಾನಿಮಾಡಿದರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಜೆಕರ್ಯ 1:15
28 ತಿಳಿವುಗಳ ಹೋಲಿಕೆ  

“ಬಾಬಿಲೋನಿನವರು ಮತ್ತು ಕಸ್ದೀಯರು ಚೀಯೋನಿನಲ್ಲಿ ಮಾಡಿದ ಎಲ್ಲಾ ಕೇಡಿಗೆ ಪ್ರತಿಯಾಗಿ ನಾನು ಅವರೆಲ್ಲರಿಗೂ ಚೀಯೋನಿನವರ ಕಣ್ಣೆದುರಿಗೆ ಮುಯ್ಯಿತೀರಿಸುವೆನು” ಎಂದು ಯೆಹೋವ ದೇವರು ಹೇಳುತ್ತಾರೆ.


ನನಗೆ ಬೇಸರವಾದಾಗ ನನ್ನ ಮುಖವನ್ನು ನಿನಗೆ ಕ್ಷಣಮಾತ್ರವೇ ಮರೆಮಾಡಿಕೊಂಡೆನು. ಆದರೆ ಶಾಶ್ವತವಾದ ದಯೆಯಿಂದ ನಿನ್ನ ಮೇಲೆ ಕರುಣೆಯನ್ನು ಇಟ್ಟಿದ್ದೇನೆ, ಎಂದು ನಿನ್ನ ವಿಮೋಚಕನಾದ ಯೆಹೋವ ದೇವರು ಹೇಳುತ್ತಾರೆ.


ಆಗ ಅವರು ಗಂಧದ ಗಿಡಗಳ ನಡುವೆ ನಿಂತ ಯೆಹೋವ ದೇವರ ದೂತನಿಗೆ, “ಭೂಮಿಯ ಸುತ್ತಲೂ ನಡೆದಾಡಿದ್ದೇವೆ. ಇಗೋ, ಭೂಮಿಯೆಲ್ಲಾ ನಿಶ್ಚಿಂತೆಯಿಂದ ಶಾಂತವಾಗಿದೆ,” ಎಂದನು.


“ಯೆಹೋವ ದೇವರು ನಿಮ್ಮ ಪಿತೃಗಳ ಮೇಲೆ ಬಹು ಕೋಪಗೊಂಡಿದ್ದಾರೆ.


ನೀವು ಗಾಯಮಾಡಿದ ನನ್ನನ್ನು ಹಿಂಸಿಸುತ್ತಾರೆ. ನೀವು ನೋಯಿಸಿದ ನನ್ನನ್ನು ಕುರಿತು ಚುಚ್ಚಿಮಾತನಾಡಿಕೊಳ್ಳುತ್ತಾರೆ.


ಚೀಯೋನಿನಲ್ಲಿ ಹಾಯಾಗಿರುವವರಿಗೂ, ಸಮಾರ್ಯ ಬೆಟ್ಟದಲ್ಲಿ ಸುಭದ್ರವಾಗಿರುವವರಿಗೂ, ಇಸ್ರಾಯೇಲಿನ ಮನೆತನದವರು ಯಾರ ಬಳಿಗೆ ಬರುತ್ತಾರೋ, ಆ ಪ್ರಮುಖ ಜನಾಂಗದಲ್ಲಿ ಹೆಸರುಗೊಂಡವರಿಗೂ ಕಷ್ಟ!


“ಮನುಷ್ಯಪುತ್ರನೇ, ಟೈರ್, ಯೆರೂಸಲೇಮಿನ ವಿಷಯವಾಗಿ, ‘ಆಹಾ, ಜನರ ದ್ವಾರವಾಗಿದ್ದದ್ದು ಮುರಿದುಹೋಯಿತು, ಅದು ನನ್ನ ಕಡೆಗೆ ತೆರೆದುಕೊಂಡಿದೆ. ಯೆರೂಸಲೇಮು ಹಾಳಾದದ್ದರಿಂದ ನಾನು ವೃದ್ಧಿಗೊಳ್ಳುವೆನು,’


ಯೆರೂಸಲೇಮು ಬಿದ್ದುಹೋದ ದಿವಸದಲ್ಲಿ, “ಹಾಳುಮಾಡಿರಿ, ಅದರ ಅಸ್ತಿವಾರದವರೆಗೆ ಹಾಳುಮಾಡಿರಿ,” ಎಂದು ಹೇಳಿದ ಎದೋಮಿನವರನ್ನು ಯೆಹೋವ ದೇವರೇ ಜ್ಞಾಪಕಮಾಡಿಕೊಳ್ಳಿರಿ.


ನಾವು ಸುಖಭೋಗಿಗಳ ಗೇಲಿಯನ್ನೂ ಗರ್ವಿಷ್ಠರಿಂದ ತಿರಸ್ಕಾರವನ್ನೂ ಅನುಭವಿಸಿದ್ದೇವೆ.


ಆಗ ದೂತನು ನನಗೆ ಕೂಗಿ, “ನೋಡು, ಉತ್ತರ ದೇಶಕ್ಕೆ ಹೊರಟವುಗಳು, ಉತ್ತರ ದೇಶದಲ್ಲಿ ನನ್ನ ಆತ್ಮವನ್ನು ಶಾಂತಿ ಪಡಿಸಿವೆ,” ಎಂದನು.


ನನ್ನ ದಾರಿಯನ್ನೂ ಕಡಿದುಹಾಕಿದ್ದಾರೆ; ಅವರು ನನ್ನನ್ನು ನಾಶಮಾಡಲು ಯಶಸ್ವಿಯಾಗುತ್ತಿದ್ದಾರೆ; ‘ಅವನಿಗೆ ಸಹಾಯಕನಿಲ್ಲ,’ ಎಂದು ಹೇಳುತ್ತಿದ್ದಾರೆ.


“ ‘ಆದರೂ ನಿನ್ನನ್ನು ನುಂಗಿಬಿಡುವವರನ್ನು ನುಂಗಿಬಿಡಲಾಗುವುದು. ನಿನ್ನ ವಿರೋಧಿಗಳಲ್ಲಿ ಪ್ರತಿಯೊಬ್ಬನೂ ಸೆರೆಹೋಗುವನು. ನಿನ್ನನ್ನು ಸೂರೆಮಾಡುವವರು ಸೂರೆಯಾಗುವರು. ನಿನಗೆ ಬಲೆ ಬೀಸುವವರೆಲ್ಲರನ್ನು ನಾನು ಬಲೆಗೆ ಒಪ್ಪಿಸುವೆನು.


ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಇಸ್ರಾಯೇಲರೂ, ಯೆಹೂದ್ಯರೂ ಕೂಡ ಹಿಂಸೆಗೆ ಗುರಿಯಾಗಿದ್ದಾರೆ; ಅವರನ್ನು ಸೆರೆಗೆ ಒಯ್ಯುವವರೆಲ್ಲರು ಅವರನ್ನು ಬಿಟ್ಟುಬಿಡುವುದಿಲ್ಲವೆಂದು, ಬಲವಾಗಿ ಪಟ್ಟುಹಿಡಿದಿದ್ದಾರೆ.


ನೀನು ಸಿಟ್ಟಿನಿಂದ ದೇಶದ ಮೇಲೆ ನಡೆದುಹೋಗಿ, ಕೋಪದಿಂದ ಜನಾಂಗಗಳನ್ನು ತುಳಿದು ಹಾಕಿದ್ದೀಯೆ.


ಯೆರೂಸಲೇಮಿಗೆ ವಿರೋಧವಾಗಿ ದಂಡು ಕಟ್ಟಿಕೊಂಡಿರುವ ಎಲ್ಲಾ ಜನರನ್ನು ಯೆಹೋವ ದೇವರು ವ್ಯಾಧಿಯಿಂದ ಬಾಧಿಸುವರು. ಹೀಗೆಯೇ, ಅವರು ನಿಂತಿರುವಾಗ, ಅವರ ಮಾಂಸವು ಕ್ಷಯಿಸಿ ಹೋಗುವುವು. ಅವರ ಕಣ್ಣುಗಳು ಕುಣಿಗಳಲ್ಲಿ ಇಂಗಿ ಹೋಗುವುವು. ಅವರ ನಾಲಿಗೆ ಅವರ ಬಾಯಲ್ಲಿ ಕ್ಷಯಿಸಿ ಹೋಗುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು