Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಚೆಫನ್ಯ 2:14 - ಕನ್ನಡ ಸಮಕಾಲಿಕ ಅನುವಾದ

14 ಅದು ದನಗಳ ಹಿಂಡುಗಳಿಗೂ ಕುರಿಗಳ ಮಂದೆಗಳಿಗೂ ಎಲ್ಲಾ ತರದ ಪ್ರಾಣಿಗಳಿಗೂ ಮಲಗುವ ಹಟ್ಟಿ ಆಗುವುದು, ಅದರ ಹಾಳುಬಿದ್ದ ಮನೆಯ ಕಂಬಗಳ ಮೇಲೆ ಗೂಬೆಗಳೂ, ಗುಬ್ಬಚ್ಚಿಗಳೂ ತಂಗುವುವು. ಗೂಬೆಯ ಘೂಂಕಾರವು ಕಿಟಕಿಗಳಿಂದ ಕೇಳಿಬರುವುದು, ಕಾಗೆಗಳ ಕೂಗು ಬಾಗಿಲಿನ ಹೊಸ್ತಿಲಲ್ಲೇ ಕೇಳುವುದು, ದೇವದಾರು ಮರದ ತೊಲೆಗಳು ಕಳಚಿಬೀಳುವುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಜನಾಂಗಗಳ ಪಶುಗಳೆಲ್ಲಾ ಮಂದೆಮಂದೆಯಾಗಿ ಅದರ ಮಧ್ಯದಲ್ಲಿ ಮಲಗಿಕೊಳ್ಳುವವು; ಕೊಕ್ಕರೆಯೂ, ಮುಳ್ಳುಹಂದಿಯೂ ಹಟ್ಟಿಗಳಲ್ಲಿ ವಾಸಮಾಡಿಕೊಳ್ಳುವವು. ಗೂಬೆಯು ಕಿಟಕಿಗಳಲ್ಲಿ ಮನೆಕಂಬಗಳ ಮೇಲೆ ಚಿಲಿಪಿಲಿ ಗಾನವು ತಂಗುವವು; ಕಾಗೆಗಳ ಕೂಗು ಹೊಸ್ತಿಲುಗಳಲ್ಲಿ ಕೇಳುವುದು; ದೇವದಾರು ಹಲಿಗೆಯ ಹೊದಿಕೆಯು ಕೀಳಲ್ಪಡುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಅದು ದನಗಳ ಹಿಂಡುಗಳಿಗೂ ಕುರಿಗಳ ಮಂದೆಗಳಿಗೂ ಎಲ್ಲಾ ತರದ ಪ್ರಾಣಿಗಳಿಗೂ ಮಲಗುವ ಹಟ್ಟಿ ಆಗುವುದು; ಅದರ ಹಾಳುಬಿದ್ದ ಮನೆಗಂಬಗಳ ಮೇಲೆ ಗೂಬೆಗಳೂ, ಗುಬ್ಬಚ್ಚಿಗಳೂ ತಂಗುವುವು. ಗೂಬೆಯ ಘೂಂಕಾರವು ಕಿಟಕಿಯಿಂದ ಕೇಳಿಬರುವುದು; ಕಾಗೆಗಳ ಕೂಗು ಬಾಗಿಲಿನ ಹೊಸ್ತಿಲಲ್ಲೇ ಕೇಳುವುದು; ದೇವದಾರು ಮರದ ತೊಲೆಗಳು ಕಳಚಿಬೀಳುವುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಜನಾಂಗಗಳ ಪಶುಗಳೆಲ್ಲಾ ಮಂದೆಮಂದೆಯಾಗಿ ಅದರ ಮಧ್ಯದಲ್ಲಿ ಮಲಗಿಕೊಳ್ಳುವವು; ಕೊಕ್ಕರೆಯೂ ಮುಳ್ಳುಹಂದಿಯೂ ಅದರ ಬೋದಿಗೆಗಳಲ್ಲಿ ವಾಸಮಾಡಿಕೊಳ್ಳುವವು; ಕಿಟಕಿಗಳಲ್ಲಿ ಚಿಲಿಪಿಲಿಗಾನವು ಕೇಳಿಸುವದು; ಹೊಸ್ತಿಲುಗಳಲ್ಲಿ ಹಾಳುಬಡಿಯುವದು; ದೇವದಾರು ಹಲಿಗೆಯ ಹೊದಿಕೆಯು ಕೀಳಲ್ಪಡುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಆಮೇಲೆ ಆ ಹಾಳುಬಿದ್ದ ನಗರದಲ್ಲಿ ಕಾಡುಪ್ರಾಣಿಗಳೂ ಕುರಿಗಳೂ ವಾಸಮಾಡುವವು. ಕಾಗೆಗಳೂ ಗೂಬೆಗಳೂ ಪಟ್ಟಣದ ಸ್ತಂಭಗಳ ಮೇಲೆ ಕುಳಿತುಕೊಂಡು ಒಂದನ್ನೊಂದು ಕರೆಯುವವು. ಬಾಗಿಲ ಹೊಸ್ತಿಲಲ್ಲಿ ಕಾಗೆಗಳು ಕುಳಿತುಕೊಳ್ಳುವವು. ಕಪ್ಪುಪಕ್ಷಿಗಳು ನಿರ್ಜನವಾದ ಮನೆಗಳ ಮೇಲೆ ಕುಳಿತುಕೊಳ್ಳುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಚೆಫನ್ಯ 2:14
8 ತಿಳಿವುಗಳ ಹೋಲಿಕೆ  

ಕರ್ತದೇವರು ಬಲಿಪೀಠದ ಪಕ್ಕದಲ್ಲಿ ನಿಂತಿರುವುದನ್ನು ನಾನು ಕಂಡೆನು. ಅವರು ಹೇಳಿದ್ದೇನೆಂದರೆ: “ಹೊಸ್ತಿಲುಗಳು ಕದಲುವಂತೆ ಆಧಾರ ಬೋದಿಗೆಗಳನ್ನು ಬಲವಾಗಿ ಹೊಡೆದು, ಅವು ಎಲ್ಲರ ತಲೆಗಳ ಮೇಲೆ ಬೀಳುವ ಹಾಗೆ ಅವುಗಳನ್ನು ಕಡಿದುಬಿಡು. ಅವರಲ್ಲಿ ಉಳಿದವರನ್ನು ಖಡ್ಗದಿಂದ ಕೊಲ್ಲುವೆನು. ಅವರಲ್ಲಿ ಓಡಿಹೋಗುವವನು ಓಡಿಹೋಗಲಾಗುವುದಿಲ್ಲ.


ಅವನು, ‘ನಾನು ವಿಸ್ತಾರವಾದ ಅರಮನೆಯನ್ನೂ, ವಿಶಾಲವಾದ ಕೊಠಡಿಗಳನ್ನೂ ಕಟ್ಟಿಸಿಕೊಳ್ಳುವೆನೆಂದು ಹೇಳಿ.’ ಕಿಟಕಿಗಳನ್ನು ಕೊರೆದು, ದೇವದಾರಿನ ಹಲಗೆಗಳನ್ನು ಹಾಕಿ, ಕೆಂಪು ಬಣ್ಣವನ್ನು ಹಚ್ಚುವವನಿಗೂ ಕಷ್ಟ!


ಅವನು ಮಹಾಧ್ವನಿಯಿಂದ: “ ‘ಬಿದ್ದಳು! ಬಾಬಿಲೋನ್ ಮಹಾನಗರಿಯು ಬಿದ್ದಳು!’ ಆಕೆಯು ದೆವ್ವಗಳಿಗೆ ವಾಸಸ್ಥಾನವೂ ಎಲ್ಲಾ ದುರಾತ್ಮಗಳಿಗೂ ಅಶುದ್ಧವಾದ ಹಾಗೂ ಅಸಹ್ಯವಾದ ಪ್ರತಿಯೊಂದು ಪ್ರಾಣಿಪಕ್ಷಿಗಳಿಗೂ ನಿವಾಸವಾಗಿದ್ದಾಳೆ.


“ಅದನ್ನು ಮುಳ್ಳುಹಂದಿಗಳ ನಿವಾಸವಾಗಿಯೂ, ಕೊಳಚೆ ಪ್ರದೇಶವನ್ನಾಗಿಯೂ ಪರಿವರ್ತಿಸುವೆನು. ನಾಶನದ ಕಸಬರಿಗೆಯಿಂದ ಅದನ್ನು ಗುಡಿಸುವೆನು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.


ಸಮುದ್ರದ ತೀರವು ಕುರುಬರು ಮೇಯಿಸುವ ಸ್ಥಳಗಳಾಗಿಯೂ ಕುಂಟೆಗಳಾಗಿಯೂ ಕುರಿಹಟ್ಟಿಗಳಾಗಿಯೂ ಇರುವುದು.


ನಾನು ಅರಣ್ಯದ ಗೂಬೆಗೆ ಸಮಾನನಾಗಿದ್ದೇನೆ; ನಾನು ಹಾಳೂರಿನ ಗೂಬೆಯ ಹಾಗಿದ್ದೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು