ಚೆಫನ್ಯ 1:7 - ಕನ್ನಡ ಸಮಕಾಲಿಕ ಅನುವಾದ7 ಸಾರ್ವಭೌಮ ಯೆಹೋವ ದೇವರ ಮುಂದೆ ಮೌನವಾಗಿರಿ. ಏಕೆಂದರೆ ಯೆಹೋವ ದೇವರ ದಿನವು ಸಮೀಪವಾಗಿದೆ. ಯೆಹೋವ ದೇವರು ಯಜ್ಞವನ್ನು ಸಿದ್ಧಮಾಡಿದ್ದಾರೆ. ಅವರು ಆಮಂತ್ರಿಸಿದವರನ್ನು ಅವರು ಪವಿತ್ರೀಕರಿಸಿದ್ದಾರೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಕರ್ತನಾದ ಯೆಹೋವನ ಸನ್ನಿಧಿಯಲ್ಲಿ ಮೌನವಾಗಿರಿ, ಯೆಹೋವನ ನ್ಯಾಯತೀರ್ಪಿನ ದಿನವು ಸಮೀಪಿಸಿತು; ಯೆಹೋವನು ಯಜ್ಞದ ಔತಣವನ್ನು ಸಿದ್ಧಪಡಿಸಿದ್ದಾನೆ, ಕರೆದವರನ್ನು ಪ್ರತಿಷ್ಠಿಸಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 “ಸ್ವಾಮಿ ಸರ್ವೇಶ್ವರ ನ್ಯಾಯತೀರ್ಪು ನೀಡುವ ದಿನ ಸಮೀಪಿಸಿದೆ; ಆದುದರಿಂದ ಅವರ ಸನ್ನಿಧಿಯಲ್ಲಿ ಮೌನ ತಾಳಿರಿ. ಸರ್ವೇಶ್ವರ, ಯಜ್ಞದ ಔತಣವನ್ನು ಸಿದ್ಧಗೊಳಿಸಿದ್ದಾರೆ. ಅತಿಥಿಗಳನ್ನು ಪವಿತ್ರೀಕರಿಸಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ಕರ್ತನಾದ ಯೆಹೋವನ ಸನ್ನಿಧಿಯಲ್ಲಿ ಮೌನವಾಗಿರಿ; ಯೆಹೋವನ ದಿನವು ಸಮೀಪಿಸಿತು; ಯೆಹೋವನು ಯಜ್ಞದ ಔತಣವನ್ನು ಸಿದ್ಧಪಡಿಸಿದ್ದಾನೆ, ಕರೆದವರನ್ನು ಮಡಿಮಾಡಿದ್ದಾನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ದೇವರಾದ ಯೆಹೋವನ ಸನ್ನಿಧಿಯಲ್ಲಿ ಮೌನವಾಗಿರಿ. ಯಾಕೆಂದರೆ ಯೆಹೋವನು ಜನರಿಗೆ ನ್ಯಾಯತೀರಿಸುವ ದಿನವು ಹತ್ತಿರವಾಯಿತು. ಯೆಹೋವನು ತನ್ನ ಯಜ್ಞವನ್ನು ತಯಾರು ಮಾಡಿ ತನ್ನ ಆಮಂತ್ರಿತರನ್ನು ಸಿದ್ಧವಾಗಿರಲು ಹೇಳಿದ್ದಾನೆ. ಅಧ್ಯಾಯವನ್ನು ನೋಡಿ |