Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಚೆಫನ್ಯ 1:15 - ಕನ್ನಡ ಸಮಕಾಲಿಕ ಅನುವಾದ

15 ಆ ದಿವಸವು ರೌದ್ರದ ದಿವಸವು, ಇಕ್ಕಟ್ಟು ಸಂಕಟಗಳ ದಿವಸವು, ಹಾಳುಪಾಳುಗಳ ದಿವಸವು, ಕತ್ತಲೆ ಮಬ್ಬುಗಳ ದಿವಸವು, ಕಾರ್ಮುಗಿಲ ಕಗ್ಗತ್ತಲ ದಿವಸವು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆ ದಿನದ ಸುದ್ದಿ ಕಹಿಯಾದುದು, ಅದು ರೌದ್ರದ ದಿನ, ಶ್ರಮಸಂಕಟಗಳ ದಿನ, ಹಾಳುಪಾಳುಮಾಡುವ ದಿನ, ಕತ್ತಲಿನ ಮೊಬ್ಬಿನ ದಿನ, ಕಾರ್ಮುಗಿಲ ಕಗ್ಗತ್ತಲ ದಿನ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಅದು ರೌದ್ರದ ದಿನ, ಕಷ್ಟ - ಸಂಕಟದ ದಿನ, ನಾಶವಿನಾಶದ ದಿನ, ಕತ್ತಲು ಕಾರ್ಗತ್ತಲ ದಿನ, ಕಾರ್ಮುಗಿಲು ಕವಿದ ಕರಾಳ ದಿನ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಆ ದಿನವು ರೌದ್ರದ ದಿನ, ಶ್ರಮಸಂಕಟಗಳ ದಿನ, ಹಾಳುಪಾಳುಮಾಡುವ ದಿನ, ಕತ್ತಲಿನ ಮೊಬ್ಬಿನ ದಿನ, ಕಾರ್ಮುಗಿಲ ಕಗ್ಗತ್ತಲ ದಿನ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಯೆಹೋವನು ತನ್ನ ಕೋಪವನ್ನು ಆ ದಿವಸದಲ್ಲಿ ತೋರಿಸುವನು. ಆ ದಿವಸಗಳಲ್ಲಿ ಮಹಾ ಸಂಕಟಗಳಿರುವವು. ಅವು ನಾಶನದ ದಿವಸಗಳಾಗಿರುವವು. ಆ ದಿವಸವು ಕತ್ತಲು, ಕಾರ್ಮುಗಿಲು ಕವಿದ ಬಿರುಗಾಳಿಯ ದಿವಸವಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಚೆಫನ್ಯ 1:15
17 ತಿಳಿವುಗಳ ಹೋಲಿಕೆ  

ಅದು ಕತ್ತಲೆಯೂ ಮಬ್ಬೂ ಉಳ್ಳ ದಿವಸವೂ, ಮೇಘವೂ ಕಾರ್ಗತ್ತಲು ಉಳ್ಳ ದಿವಸವೂ ಆಗಿದೆ. ಬೆಟ್ಟಗಳ ಮೇಲೆ ಹರಡುವ ಉದಯದ ಹಾಗೆ ದೊಡ್ಡ ಬಲವಾದ ಸ್ಯೆನ್ಯವು ಬರುತ್ತದೆ. ಅದು ಪ್ರಾಚೀನ ಕಾಲದಲ್ಲಿ ಮತ್ತು ಮುಂದಿನ ಯುಗಗಳಲ್ಲಿ ಎಂದಿಗೂ ಇರುವುದಿಲ್ಲ.


ಕರ್ತ ಆಗಿರುವವರೂ, ಸರ್ವಶಕ್ತರೂ ಆದ ಯೆಹೋವ ದೇವರು, ದರ್ಶನದ ತಗ್ಗಿನಲ್ಲಿ ಶ್ರಮೆಯ ತುಳಿದಾಟದ ಭಯಭ್ರಾಂತಿಯ ದಿನವನ್ನು ಇಟ್ಟಿದ್ದಾರೆ. ಅದು ಗೋಡೆಗಳು ಹೊಡೆದುರುಳಿಸುವ ದಿನವು. ಪರ್ವತಗಳಿಗೆ ಜನರು ಕೂಗಾಡುವ ದಿನವದು.


ಏಕೆಂದರೆ, ಅವರ ಕೋಪಾಗ್ನಿಯ ಮಹಾದಿನವು ಬಂದಿದೆ, ಅದರ ಮುಂದೆ ಯಾರು ನಿಂತಾರು?” ಎಂದು ಹೇಳಿದರು.


ಆದರೆ ಈಗಿನ ಆಕಾಶವೂ ಭೂಮಿಯೂ ಅದೇ ವಾಕ್ಯದಿಂದ ಬೆಂಕಿಗಾಗಿ ಕಾದಿರಿಸಲಾಗಿವೆ. ಅವು ನ್ಯಾಯತೀರ್ಪಿಗಾಗಿ ಮತ್ತು ಭಕ್ತಿಹೀನರ ನಾಶನಕ್ಕಾಗಿ ಇಡಲಾಗಿವೆ.


ನೀನು ನಿನ್ನ ಕಠಿಣವಾದ ಮತ್ತು ಪಶ್ಚಾತ್ತಾಪ ಪಡದ ಹೃದಯದಿಂದ, ನಿನಗೋಸ್ಕರ ದೇವರ ನೀತಿಯುಳ್ಳ ತೀರ್ಪು ಪ್ರಕಟವಾಗುವ ಕೋಪದ ದಿನಕ್ಕಾಗಿ ದೇವರ ಕೋಪವನ್ನು ಸಂಗ್ರಹಿಸಿಕೊಳ್ಳುತ್ತಿದ್ದಿ.


ತೀರ್ಪು ಕಾರ್ಯಗತಗೊಳ್ಳುವ ಮುಂಚೆ ಮತ್ತು ಆ ದಿನವು ಗಾಳಿ ಬೀಸಿದ ಹೊಟ್ಟಿನಂತೆ ಹಾರಿಹೋಗುವುದಕ್ಕಿಂತ ಮುಂಚೆ ಯೆಹೋವ ದೇವರ ಉಗ್ರಕೋಪವು ನಿಮ್ಮ ಮೇಲೆ ಬರುವ ಮುಂಚೆ, ಯೆಹೋವ ದೇವರ ಕೋಪದ ದಿನವು ನಿಮ್ಮ ಮೇಲೆ ಬರುವ ಮುಂಚೆ,


ಯೆಹೋವ ದೇವರ ರೌದ್ರದಿನದಂದು ಅವರ ಬೆಳ್ಳಿಯಾದರೂ ಅವರ ಬಂಗಾರವಾದರೂ ಅವರನ್ನು ರಕ್ಷಿಸಲಾರವು.” ಅವರ ಅಸೂಯೆಯ ಬೆಂಕಿಯು ದೇಶವನ್ನೆಲ್ಲಾ ನುಂಗುವುದು. ಏಕೆಂದರೆ ದೇಶದ ನಿವಾಸಿಗಳನ್ನೆಲ್ಲಾ ಬೇಗ ನಿರ್ಮೂಲ ಮಾಡಿಬಿಡುವರು.


ಯೆಹೋವ ದೇವರು ತಮ್ಮ ಸೈನ್ಯಕ್ಕೆ ಗುಡುಗಿನಂತೆ ಆಜ್ಞಾಪಿಸುತ್ತಾರೆ. ಅವರ ಸೈನ್ಯ ಬಹು ದೊಡ್ಡದಾಗಿದೆ. ಅವರ ಆಜ್ಞೆಯನ್ನು ಪಾಲಿಸುವವನು ಪರಾಕ್ರಮಿಯು. ಯೆಹೋವ ದೇವರ ದಿವಸವು ದೊಡ್ಡದು, ಮಹಾ ಭಯಂಕರವಾದದ್ದು. ಅದನ್ನು ಸಹಿಸಿಕೊಳ್ಳುವವರು ಯಾರು?


ಅಯ್ಯೋ, ಈ ದಿನವು ಘೋರವಾದದ್ದು, ಅದಕ್ಕೆ ಎಣೆ ಇಲ್ಲ; ಅದು ಯಾಕೋಬ್ಯರಿಗೆ ಇಕ್ಕಟ್ಟಿನ ದಿನ; ಆದರೂ ಅವರು ಅದರಿಂದ ಪಾರಾಗುವರು.’


“ಆ ಸಂಕಟದ ದಿವಸಗಳು ಮುಗಿದ ತಕ್ಷಣವೇ, “ ‘ಸೂರ್ಯನು ಕತ್ತಲಾಗುವನು; ಚಂದ್ರನು ಕಾಂತಿಹೀನನಾಗುವನು. ಆಕಾಶದಿಂದ ನಕ್ಷತ್ರಗಳು ಬೀಳುವವು; ಮತ್ತು ಆಕಾಶದ ಶಕ್ತಿಗಳು ಕದಲುವವು.’


ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ನಿಮ್ಮ ದೇಶದಲ್ಲೆಲ್ಲಾ ನಿಮ್ಮ ಎಲ್ಲಾ ಊರುಗಳಲ್ಲಿ ನಿಮಗೆ ಮುತ್ತಿಗೆ ಹಾಕುವರು. ನೀವು ನಂಬಿಕೊಂಡಿರುವ ಉದ್ದವಾದ ಮತ್ತು ಭದ್ರವಾದ ನಿಮ್ಮ ಗೋಡೆಗಳನ್ನು ಕೆಡವಿಬಿಡುವರು.


ಅವರು ಭೂಮಿಯನ್ನು ದೃಷ್ಟಿಸಿದರೂ, ಇಕ್ಕಟ್ಟೆಂಬ ಕತ್ತಲೂ, ಸಂಕಟವೆಂಬ ಅಂಧಕಾರವೂ ಕವಿದುಕೊಂಡಿರುವುದು, ಕಾರ್ಗತ್ತಲೆಗೆ ಅವರನ್ನು ದೂಡಲಾಗುವುದು.


ಯೆಹೋವ ದೇವರ ಭಯಂಕರವಾದ ಮಹಾದಿನವು ಬರುವುದಕ್ಕಿಂತ ಮೊದಲು, ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.


ಇಗೋ, ಯೆಹೋವ ದೇವರ ದಿನವು ಬರುತ್ತದೆ. ಅದು ಭೂಮಿಯನ್ನು ಹಾಳು ಮಾಡುವುದಕ್ಕೂ, ಅಲ್ಲಿಂದ ಪಾಪಿಗಳನ್ನು ನಿರ್ಮೂಲ ಮಾಡುವುದಕ್ಕೂ, ಕಡುಕೋಪದಿಂದಲೂ, ತೀಕ್ಷ್ಣರೋಷದಿಂದಲೂ ಕ್ರೂರವಾಗಿರುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು