ಗಲಾತ್ಯದವರಿಗೆ 5:10 - ಕನ್ನಡ ಸಮಕಾಲಿಕ ಅನುವಾದ10 ನೀವು ಬೇರೆ ರೀತಿಯಿಂದ ಯೋಚಿಸುವುದಿಲ್ಲವೆಂದು ಕರ್ತ ಯೇಸುವಿನಲ್ಲಿ ನಿಮ್ಮನ್ನು ಕುರಿತು ನನಗೆ ಭರವಸೆ ಇದೆ. ಆದರೆ ನಿಮ್ಮನ್ನು ತೊಂದರೆ ಪಡಿಸುವವನು ಯಾವನಾದರೂ ಸರಿ, ಅವನು ದಂಡನೆಯನ್ನು ಅನುಭವಿಸುವನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ನಿಮ್ಮಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುವುದಿಲ್ಲವೆಂದು ಕರ್ತನಲ್ಲಿ ನಿಮ್ಮನ್ನು ಕುರಿತಾಗಿ ನನಗೆ ಭರವಸೆ ಉಂಟು. ನಿಮ್ಮಲ್ಲಿ ಬೇಧವನ್ನು ಹುಟ್ಟಿಸುವವನು ಯಾವನಾದರೂ ಸರಿಯೇ, ಅವನು ದಂಡನೆಯನ್ನು ಅನುಭವಿಸುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ಭಿನ್ನಾಭಿಪ್ರಾಯಗಳಿಗೆ ನೀವು ಮಣಿಯುವುದಿಲ್ಲವೆಂದು ನಿಮ್ಮನ್ನು ಕುರಿತು ಪ್ರಭುವಿನಲ್ಲಿ ನನಗೆ ದೃಢವಾದ ನಂಬಿಕೆ ಇದೆ. ನಿಮ್ಮಲ್ಲಿ ಗೊಂದಲ ಎಬ್ಬಿಸುವವನು ಯಾರೇ ಆಗಿರಲಿ, ಅವನು ದೈವದಂಡನೆಗೆ ಗುರಿಯಾಗುತ್ತಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ನನಗಂತೂ ನೀವು ಬೇರೆ ಅಭಿಪ್ರಾಯವನ್ನು ಹಿಡಿಯುವದಿಲ್ಲವೆಂದು ಕರ್ತನಲ್ಲಿ ನಿಮ್ಮನ್ನು ಕುರಿತು ಭರವಸ ಉಂಟು. ನಿಮ್ಮಲ್ಲಿ ಭೇದವನ್ನು ಹುಟ್ಟಿಸುವವನು ಯಾವನಾದರೂ ಸರಿಯೇ ಬರುವ ದಂಡನೆಯನ್ನು ಅನುಭವಿಸುವನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ಆ ಬೇರೆ ಅಭಿಪ್ರಾಯಗಳನ್ನು ನೀವು ನಂಬುವುದಿಲ್ಲವೆಂದು ಪ್ರಭುವಿನಲ್ಲಿ ನಿಮ್ಮನ್ನು ಕುರಿತು ಭರವಸೆಯಿಂದಿದ್ದೇನೆ. ಯಾರೊ ಒಬ್ಬನು ಆ ಅಭಿಪ್ರಾಯಗಳಿಂದ ನಿಮ್ಮನ್ನು ಗಲಿಬಿಲಿಗೊಳಿಸುತ್ತಿದ್ದಾನೆ. ಅವನು ಯಾರೇ ಆಗಿದ್ದರೂ ದಂಡನೆ ಹೊಂದುವನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್10 ಖರೆ ಅಜುನ್‍ಬಿ ಧನಿಯಾಚ್ಯಾ ಎಕ್ವಟ್ಟಾ ವೈನಾ ತುಮ್ಚ್ಯಾ ವಿಶಯಾತ್ ಮಾಕಾ ಬರೊಸೊ ಹಾಯ್, ಅಮ್ಚೊ ಜಿವ್ ತುಮಿ; ತ್ಯಾ ತುಮ್ಕಾ ಬೆಜಾರ್ ಕರ್‍ತಲ್ಯಾ ಮಾನ್ಸಾಚ್ಯಾ ದುಸ್ರ್ಯಾ ವಾಟೆನ್ ಜಯ್‌ನ್ಯಾಶಿ ಮನುನ್, ಮಿಯಾ ಬರೊಸೊ ಕರಿನಾ ಸಾರ್ಕೆ ಕರ್‍ತಾ. ತೊ ಕೊನ್‍ಬಿ ರ್‍ಹಾಂವ್ದಿತ್ ತೆಕಾ ದೆವಾಕ್ನಾ ಶಿಕ್ಷಾ ಗಾವ್ತಾ. ಅಧ್ಯಾಯವನ್ನು ನೋಡಿ |