Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 4:27 - ಕನ್ನಡ ಸಮಕಾಲಿಕ ಅನುವಾದ

27 ಏಕೆಂದರೆ, “ಬಂಜೆಯೇ, ಹೆರದವಳೇ, ಆನಂದಿಸು. ಪ್ರಸವವೇದನೆ ಪಡದವಳೇ, ಸ್ವರವೆತ್ತಿ ಹರ್ಷದಿಂದ ಸ್ವರವೆತ್ತಿ ಕೂಗು; ಗಂಡನುಳ್ಳವಳಿಗಿಂತ ಗಂಡ ಬಿಟ್ಟವಳಿಗೆ ಎಷ್ಟೋ ಹೆಚ್ಚು ಮಕ್ಕಳಿದ್ದಾರೆ,” ಎಂದು ಪವಿತ್ರ ವೇದದಲ್ಲಿ ಬರೆದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 “ಹೆರದ ಬಂಜೆಯೇ, ಆನಂದಿಸು. ಪ್ರಸವವೇದನೆಯಿಲ್ಲದವಳೇ, ಹರ್ಷೋದ್ಗಾರಮಾಡು, ಗಂಡನುಳ್ಳವಳಿಗಿಂತ ಗಂಡಬಿಟ್ಟವಳಿಗೆ ಮಕ್ಕಳು ಹೆಚ್ಚು” ಎಂದು ಬರೆದಿದೆಯಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 “ಸಂತಾನವಿಲ್ಲದ ಸ್ತ್ರೀಯೇ, ಸಂತೋಷಿಸು ಪ್ರಸವವೇದನೆಯನರಿಯದವಳೇ, ಹರ್ಷೋದ್ಗಾರಮಾಡು ಗಂಡನುಳ್ಳವಳಿಗಿಂತ ಕೈಬಿಟ್ಟವಳ ಸಂತಾನ ಹೆಚ್ಚು.” ಎಂದು ಪವಿತ್ರಗ್ರಂಥದಲ್ಲೇ ಲಿಖಿತವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಹೆರದ ಬಂಜೆಯೇ, ಆನಂದವಾಗಿರು, ಪ್ರಸವವೇದನೆಯಿಲ್ಲದವಳೇ, ಸ್ವರವೆತ್ತಿ ಕೂಗು; ಗಂಡನುಳ್ಳವಳಿಗಿಂತ ಗಂಡ ಬಿಟ್ಟವಳಿಗೆ ಮಕ್ಕಳು ಹೆಚ್ಚು ಎಂದು ಬರೆದದೆಯಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಪವಿತ್ರ ಗ್ರಂಥದಲ್ಲಿ ಹೀಗೆ ಬರೆದಿದೆ: “ಮಕ್ಕಳನ್ನು ಹೆತ್ತಿಲ್ಲದ ಬಂಜೆಯೇ, ಸಂತೋಷಪಡು. ಪ್ರಸವವೇದನೆಯಿಲ್ಲದವಳೇ, ಸ್ವರವೆತ್ತಿ ಕೂಗು. ಗಂಡನುಳ್ಳವಳಿಗಿಂತ ಗಂಡ ಬಿಟ್ಟವಳಿಗೆ ಮಕ್ಕಳು ಹೆಚ್ಚು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

27 ಪವಿತ್ರ್ ಪುಸ್ತಕ್ ಮನ್ತಾ, ಪೊರಾ ಹೊಯ್ ನಸಲ್ಲ್ಯಾ ಬಾಯ್ಕೊಮನ್ಸಿ ಖುಶಿ ಹೊ! ಕನ್ನಾಬಿ ಯೆನಾಂಚೊ ತರಾಸ್ ಅನ್ಭೊಗ್ ಕರಿನಸಲ್ಯಾ ಬಾಯ್ಕೊಮಾನ್ಸಿ ಲೈಯ್‍ ಖುಶಿನ್ ಬೊಬ್ ಮಾರ್! ಕಶ್ಯಾಕ್ ಮಟ್ಲ್ಯಾರ್ ಘೊವಾಚ್ಯಾ ವಾಂಗ್ಡಾ ಹೊತ್ತ್ಯಾ ಬಾಯ್ಕೊಮಾನ್ಸಿಕಿಂತಾಬಿ ಘೊವ್ ಸೊಡಲ್ಲಿಕ್ ಪೊರಾ ಲೈ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 4:27
9 ತಿಳಿವುಗಳ ಹೋಲಿಕೆ  

ಬಂಜೆಯಾದವಳನ್ನು ಮಕ್ಕಳ ಸೌಭಾಗ್ಯದಲ್ಲಿ ಸಂತೋಷಿಸಿ, ಮನೆಯಲ್ಲಿ ನಿವಾಸಿಸುವಂತೆ ಮಾಡುತ್ತಾರೆ. ಯೆಹೋವ ದೇವರನ್ನು ಸ್ತುತಿಸಿರಿ.


ತೃಪ್ತಿಪಟ್ಟವರು ಆಹಾರಕ್ಕಾಗಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಹಸಿದವರು ಇನ್ನು ಮುಂದೆ ಹಸಿಯರು. ಬಂಜೆಯಾದವಳು ಏಳುಮಂದಿ ಮಕ್ಕಳನ್ನು ಹೆತ್ತಳು. ಅನೇಕ ಮಂದಿ ಮಕ್ಕಳನ್ನು ಹೆತ್ತವಳು ಬಲಹೀನಳಾದಳು.


ನಿಜವಾಗಿಯೂ ಕಷ್ಟದಲ್ಲಿರುವ ವಿಧವೆಯು ದೇವರ ಮೇಲೆ ನಿರೀಕ್ಷೆಯನ್ನಿಟ್ಟು ಹಗಲು ಇರುಳು ವಿಜ್ಞಾಪನೆಗಳಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನೆಲೆಗೊಂಡಿರುವಳು.


‘ನನಗೋಸ್ಕರ ಇವರನ್ನು ಯಾರು ನನ್ನಲ್ಲಿ ಪಡೆದರು? ನಾನು ದುಃಖಿತ ಮತ್ತು ಬಂಜೆಯಾಗಿದ್ದೆ; ನನ್ನನ್ನು ಗಡಿಪಾರು ಮಾಡಿ ತಿರಸ್ಕರಿಸಲಾಯಿತು. ಇವುಗಳನ್ನು ತಂದವರು ಯಾರು? ನಾನು ಒಬ್ಬಂಟಿಯಾಗಿ ಉಳಿದಿದ್ದೇನೆ, ಇವರನ್ನು ಸಾಕಿದವರು ಯಾರು? ಅವರೆಲ್ಲಿದ್ದರು?’ ” ಎಂದುಕೊಳ್ಳುವೆ.


ಆಗ ಅವಳ ಸಹೋದರ ಅಬ್ಷಾಲೋಮನು ಅವಳಿಗೆ, “ನಿನ್ನ ಸಹೋದರ ಅಮ್ನೋನನು ನಿನ್ನ ಮಾನಭಂಗ ಮಾಡಿದನೋ? ನನ್ನ ಸಹೋದರಿ, ಈಗ ಸುಮ್ಮನಿರು. ಅವನು ನಿನ್ನ ಸಹೋದರನು. ಈ ಕಾರ್ಯವನ್ನು ನಿನ್ನ ಮನಸ್ಸಿಗೆ ತೆಗೆದುಕೊಳ್ಳಬೇಡ,” ಎಂದನು. ಹಾಗೆಯೇ ತಾಮಾರಳು ತನ್ನ ಸಹೋದರ ಅಬ್ಷಾಲೋಮನ ಮನೆಯಲ್ಲಿ ಒಂಟಿಗಳಾಗಿ ವಾಸಿಸಿದಳು.


ನನ್ನ ಮಕ್ಕಳೇ, ಕ್ರಿಸ್ತ ಯೇಸುವು ನಿಮ್ಮಲ್ಲಿ ರೂಪುಗೊಳ್ಳುವ ತನಕ ನಾನು ನಿಮಗಾಗಿ ಪುನಃ ಪ್ರಸವವೇದನೆ ಪಡುತ್ತೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು