Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 2:9 - ಕನ್ನಡ ಸಮಕಾಲಿಕ ಅನುವಾದ

9 ಸಭೆಯ ಸ್ತಂಭಗಳಂತಿರುವ ನಾಯಕರಾದ ಯಾಕೋಬ, ಪೇತ್ರ ಹಾಗೂ ಯೋಹಾನರು ನನಗೆ ಕೊಡಲಾದ ಕೃಪೆಯನ್ನು ಗ್ರಹಿಸಿಕೊಂಡರು. ಆಗ ಅವರು, ನನಗೂ ಬಾರ್ನಬನಿಗೂ ಅನ್ಯೋನ್ಯತೆಯ ಬಲಗೈಯನ್ನು ಕೊಟ್ಟರು. ಹೀಗೆ ನಾವು ಯೆಹೂದ್ಯರಲ್ಲದವರ ಬಳಿಗೂ ಅವರು ಯೆಹೂದ್ಯರ ಬಳಿಗೂ ಹೋಗುವಂತೆ ತೀರ್ಮಾನವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಸಭೆಯ ಸ್ತಂಭಗಳೆಂದು ಕರೆಸಿಕೊಂಡಿರುವ ಯಾಕೋಬ, ಕೇಫ, ಯೋಹಾನರು ದೇವರು ನನಗೆ ದಯಪಾಲಿಸಿರುವ ವರವನ್ನು ತಿಳಿದುಕೊಂಡು, ಅನ್ಯೋನ್ಯತೆಯನ್ನು ತೋರಿಸುವುದಕ್ಕಾಗಿ ನನಗೂ ಬಾರ್ನಬನಿಗೂ ಸಹಕಾರ ನೀಡಿ ಬಲಗೈ ಕೊಟ್ಟು, ನೀವು ಅನ್ಯಜನಗಳ ಬಳಿಗೆ ಹೋಗಿರಿ, ನಾವು ಸುನ್ನತಿಯವರ ಬಳಿಗೆ ಹೋಗುತ್ತೇವೆ ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ನನಗೆ ಕೊಡಲಾಗಿದ್ದ ಈ ವಿಶೇಷ ವರವನ್ನು ಮನಗಂಡು ಸಭಾಸ್ತಂಭಗಳೆಂದು ಪರಿಗಣಿತರಾದ ಯಕೋಬ, ಕೇಫ ಮತ್ತು ಯೊವಾನ್ನರು ನನಗೂ ಬಾರ್ನಬನಿಗೂ ಕೈಯಲ್ಲಿ ಕೈಯನ್ನಿಟ್ಟು ಅನ್ಯೋನ್ಯತೆಯನ್ನು ಸೂಚಿಸಿದರು. ಅಲ್ಲದೆ, “ನೀವು ಯೆಹೂದ್ಯರಲ್ಲದವರ ಬಳಿಗೆ ಹೋಗಿರಿ, ನಾವು ಯೆಹೂದ್ಯರ ಬಳಿಗೆ ಹೋಗುತ್ತೇವೆ,” ಎಂದೂ ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಸಭಾಸ್ತಂಭಗಳೆಂದು ಹೆಸರುಗೊಂಡಿರುವ ಯಾಕೋಬ ಕೇಫ ಯೋಹಾನರು ಕಂಡು ದೇವರು ನನಗೆ ದಯಪಾಲಿಸಿರುವ ವರವನ್ನು ತಿಳುಕೊಂಡು ಐಕ್ಯವನ್ನು ತೋರಿಸುವದಕ್ಕಾಗಿ ನನಗೂ ಬಾರ್ನಬನಿಗೂ ಬಲಗೈ ಕೊಟ್ಟು - ನೀವು ಅನ್ಯಜನರ ಬಳಿಗೆ ಹೋಗಿರಿ, ನಾವು ಸುನ್ನತಿಯವರ ಬಳಿಗೆ ಹೋಗುತ್ತೇವೆ ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ದೇವರು ನನಗೆ ಈ ವಿಶೇಷವಾದ ವರವನ್ನು ಕೊಟ್ಟಿದ್ದಾನೆಂಬುದನ್ನು ನಾಯಕರೆನಿಸಿಕೊಂಡಿದ್ದ ಯಾಕೋಬ, ಪೇತ್ರ, ಯೋಹಾನರು ಕಂಡುಕೊಂಡರು. ಆದ್ದರಿಂದ ಅವರು ಬಾರ್ನಬನನ್ನು ಮತ್ತು ನನ್ನನ್ನು ಸ್ವೀಕರಿಸಿಕೊಂಡರು. ಅವರು ನಮಗೆ, “ಪೌಲ ಮತ್ತು ಬಾರ್ನಬರೇ, ನೀವು ಯೆಹೂದ್ಯರಲ್ಲದವರ ಬಳಿಗೆ ಹೋಗಿರಿ. ನಾವು ಯೆಹೂದ್ಯರ ಬಳಿಗೆ ಹೋಗುತ್ತೇವೆ” ಎಂದು ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

9 ತನ್ನಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚೆ ಖಾಂಬೆ ಸಾರ್ಕೆ ಹೊವ್ನ್ ಹೊತ್ತ್ಯಾ ಜಾಕೊಬಾನ್ ಪೆದ್ರುನ್ ಅನಿ ಜುವಾಂವಾನ್, ದೆವಾಕ್ನಾಚ್ ಮಾಕಾ ಗಾವಲ್ಲೆ; ಹೆ ಎಕ್ ವಿಶೆಸ್ ಭೊಮಾನ್ ಮನುನ್ ವಳ್ಕುನ್, ಮಾಕಾ ಅನಿ ಬಾರ್ನಾಬಾಸಾಕ್ ಅಪ್ನಾಚೆ ವಾಂಗ್ಡಿ ಮನುನ್ ಘೆಟ್ಲ್ಯಾನಿ , ಅನಿ ಅಮ್ಕಾ ಎಕಾಮೆಕಾಕ್ ಒಪ್ಕಿ ಹಾಯ್ ಮನುನ್ ದಾಕ್ವುಸಾಟ್ನಿ ಅಮಿ ಎಕಾಮೆಕಾಚೆ ಹಾತ್ ಮಿಳ್ವುಲಾವ್, ಮಿಯಾ ಅನಿ ಬಾರ್ನಾಬಾಸ್ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ಮದ್ದಿ, ಅನಿ ತೆನಿ ಜುದೆವ್ ಲೊಕಾಂಚ್ಯಾ ಮದ್ದಿ ಜಾವ್ಕ್ ಮನುನ್ ನಿರ್ಧಾರ್ ಕರ್ಲ್ಯಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 2:9
32 ತಿಳಿವುಗಳ ಹೋಲಿಕೆ  

ನನಗೆ ದಯಪಾಲಿಸಿರುವ ಕೃಪೆಯಿಂದ ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನಾನು ಹೇಳುವುದೇನೆಂದರೆ, ನೀವು ಭಾವಿಸುವುದಕ್ಕಿಂತ ಹೆಚ್ಚಾಗಿ ಯಾರೂ ನಿಮ್ಮನ್ನು ನೀವೇ ಉನ್ನತವಾಗಿ ಭಾವಿಸಿಕೊಳ್ಳಬೇಡಿರಿ. ಅದರ ಬದಲಾಗಿ ದೇವರು ನಿಮಗೆ ಅನುಗ್ರಹಿಸಿರುವ ವಿಶ್ವಾಸದ ಅಳತೆಗೆ ಅನುಸಾರವಾಗಿ ಸ್ವಸ್ಥಚಿತ್ತವುಳ್ಳವರಾಗಿ ಭಾವಿಸಿಕೊಳ್ಳಿರಿ.


ಯಾರು ಜಯ ಹೊಂದುತ್ತಾರೋ, ಅವರನ್ನು ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ಸ್ಥಾಪಿಸುವೆನು. ಅವರು ಎಂದಿಗೂ ಅದರೊಳಗಿಂದ ಹೊರಗೆ ಹೋಗುವುದಿಲ್ಲ. ನಾನು ನನ್ನ ದೇವರ ಹೆಸರನ್ನು ಪರಲೋಕದಲ್ಲಿರುವ ನನ್ನ ದೇವರಿಂದ ಇಳಿದು ಬರುವ ಹೊಸ ಯೆರೂಸಲೇಮಿನ ಹೆಸರನ್ನೂ ಹಾಗೂ ನನ್ನ ಹೊಸ ಹೆಸರನ್ನೂ ಅವರ ಮೇಲೆ ಬರೆಯುವೆನು.


ನಾನು ನನಗೆ ದೊರೆತ ಪ್ರಕಟನೆಗೆ ಅನುಸಾರವಾಗಿ ಅಲ್ಲಿಗೆ ಹೋದೆನು. ಅಲ್ಲಿ ಇರುವ ಸಭೆಗೆ ಹೋಗಿ ಯೆಹೂದ್ಯರಲ್ಲದ ಜನರಿಗೆ ನಾನು ಸಾರುವ ಸುವಾರ್ತೆಯ ಬಗ್ಗೆ ವಿವರಿಸಿದೆನು. ಅಲ್ಲಿರುವ ಗಣ್ಯನಾಯಕರಿಗೆ ವೈಯಕ್ತಿಕವಾಗಿ ಅದರ ಬಗ್ಗೆ ವರದಿಮಾಡಿದೆನು. ಏಕೆಂದರೆ ನಾನು ಮಾಡಿದ ಸೇವೆ ಮತ್ತು ಮುಂದೆ ಮಾಡಲಿರುವ ಸೇವೆಯು ನಿಷ್ಫಲವಾಗಬಾರದೆಂಬ ಕಾರಣಕ್ಕಾಗಿ ಹೀಗೆ ಮಾಡಿದೆ.


ಯೇಸುವಿನ ನಾಮದ ಮಹಿಮೆಗಾಗಿ ಯೆಹೂದ್ಯರಲ್ಲದವರಲ್ಲಿಯೂ ನಂಬಿಕೆಯ ವಿಧೇಯತೆ ಉಂಟಾಗುವುದಕ್ಕಾಗಿ ನಾವು ಯೇಸುವಿನ ಮೂಲಕವಾಗಿ ಕೃಪೆಯನ್ನೂ ಅಪೊಸ್ತಲರಾಗಿರುವುದನ್ನೂ ಹೊಂದಿದೆವು.


ನಮಗಿರುವ ಅನ್ಯೋನ್ಯತೆಯಲ್ಲಿ ನೀವೂ ಇರಬೇಕೆಂದು, ನಾವು ಕಂಡು ಕೇಳಿದ್ದನ್ನು ನಿಮಗೆ ಪ್ರಸಿದ್ಧಿಪಡಿಸುತ್ತೇವೆ. ನಿಜವಾಗಿಯೂ ನಮಗಿರುವ ಅನ್ಯೋನ್ಯತೆಯು ತಂದೆಯ ಸಂಗಡವೂ ಅವರ ಮಗನಾದ ಕ್ರಿಸ್ತ ಯೇಸುವಿನ ಸಂಗಡವೂ ಇರುವಂಥದ್ದು.


ನಾನು ಕರ್ತನ ಜನರೆಲ್ಲರಲ್ಲಿಯೂ ಅತ್ಯಲ್ಪನಾಗಿದ್ದೇನೆ. ಹಾಗಿದ್ದರೂ, ನನಗೆ ಈ ಕೃಪೆ ಕೊಡಲಾಯಿತು: ಏಕೆಂದರೆ, ನಾನು ಕ್ರಿಸ್ತನ ಅಪರಿಮಿತವಾದ ಐಶ್ವರ್ಯವನ್ನು ಯೆಹೂದ್ಯರಲ್ಲದವರಿಗೆ ಸಾರುವಂತೆಯೂ


ಒಂದು ವೇಳೆ ನಾನು ತಡ ಮಾಡಿದರೂ ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿರುವ ದೇವರ ಮನೆಯಲ್ಲಿ ಎಂದರೆ ಜೀವಸ್ವರೂಪರಾದ ದೇವರ ಸಭೆಯಲ್ಲಿ ನಡೆದುಕೊಳ್ಳಬೇಕಾದ ರೀತಿಯು ನಿನಗೆ ಗೊತ್ತಾಗಿರಬೇಕು.


ನನ್ನಲ್ಲಿ ಬಲದಿಂದ ಕಾರ್ಯ ಮಾಡುವ ಕ್ರಿಸ್ತನ ಶಕ್ತಿಗೆ ಅನುಸಾರವಾಗಿ, ನಾನೂ ಸಹ ಪ್ರಯಾಸ ಪಡುತ್ತಾ ಈ ಗುರಿಗಾಗಿ ಹೋರಾಡುತ್ತೇನೆ.


ಕ್ರಿಸ್ತ ಯೇಸು ಎಂಬ ಮುಖ್ಯ ಮೂಲೆಗಲ್ಲಿನೊಂದಿಗೆ ಅಪೊಸ್ತಲರು ಹಾಗೂ ಪ್ರವಾದಿಗಳೆಂಬ ಅಸ್ತಿವಾರದ ಮೇಲೆ ನೀವು ಕಟ್ಟಲಾಗಿದ್ದೀರಿ.


ದೇವಜನರಿಗೆ ಸಹಾಯಮಾಡಲು ಭಾಗಿಗಳಾಗುವ ಅವಕಾಶವನ್ನು ತಮಗೆ ಕೊಡಬೇಕೆಂದು ಅವರು ತಾವಾಗಿಯೇ ನಮ್ಮನ್ನು ಬಹಳವಾಗಿ ಕೇಳಿಕೊಂಡರು.


ಆದರೆ ನಾನು ಎಂಥವನಾಗಿದ್ದೇನೋ, ಅದು ದೇವರ ಕೃಪೆಯಿಂದಲೇ ಆಗಿರುತ್ತದೆ. ನನಗುಂಟಾದ ದೇವರ ಕೃಪೆಯು ನಿಷ್ಫಲವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಎಷ್ಟೋ ಹೆಚ್ಚಾಗಿ ಪ್ರಯಾಸಪಟ್ಟೆನು. ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿದ್ದ ದೇವರ ಕೃಪೆಯೇ.


ನಾನು ನಿಮಗೆ ಕೆಲವು ವಿಷಯಗಳನ್ನು ಜ್ಞಾಪಕ ಪಡಿಸುವುದಕ್ಕಾಗಿ ಬಹಳ ಧೈರ್ಯದಿಂದ ಹೀಗೆ ಬರೆದಿದ್ದೇನೆ.


ಅವರು ಹೇಳಿ ಮುಗಿಸಿದಾಗ, ಯಾಕೋಬನು ಮಾತನಾಡಿ, “ಸಹೋದರರೇ, ನನ್ನ ಮಾತುಗಳನ್ನು ಆಲಿಸಿರಿ,


ಬಹಳ ಚರ್ಚೆಯಾಗುತ್ತಿರುವಾಗ ಪೇತ್ರನು ಎದ್ದು ನಿಂತು ಅವರಿಗೆ, “ಸಹೋದರರೇ, ಯೆಹೂದ್ಯರಲ್ಲದವರು ನನ್ನ ಬಾಯಿಂದ ಸುವಾರ್ತೆಯ ವಾಕ್ಯವನ್ನು ಕೇಳಿ ನಂಬಬೇಕೆಂಬ ಉದ್ದೇಶದಿಂದ ನಿಮ್ಮೊಳಗಿಂದ ನನ್ನನ್ನು ದೇವರು ಬಹು ದಿನಗಳ ಹಿಂದೆ ಆಯ್ದುಕೊಂಡರೆಂಬುದು ನಿಮಗೆ ತಿಳಿದೇ ಇದೆ.


ಸೈಪ್ರಸ್ ಎಂಬಲ್ಲಿ ಹುಟ್ಟಿದ ಒಬ್ಬ ಲೇವಿಯನು ಇದ್ದನು, ಅವನ ಹೆಸರು ಯೋಸೇಫ, ಅಪೊಸ್ತಲರು ಅವನನ್ನು “ಬಾರ್ನಬ” ಎಂದು ಕರೆದರು. ಬಾರ್ನಬ ಅಂದರೆ “ಆದರಣೆಯ ಪುತ್ರನು” ಎಂದು ಅರ್ಥ.


ನಾನು ಸಹ ನಿನಗೆ ಹೇಳುವುದೇನಂದರೆ, ನೀನು ಪೇತ್ರನು. ಈ ಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು. ಪಾತಾಳದ ದ್ವಾರಗಳು ಅದನ್ನು ಜಯಿಸಲಾರವು.


ಯೇಹುವು ಅಲ್ಲಿಂದ ಹೋಗಿ, ತನ್ನನ್ನು ಎದುರುಗೊಳ್ಳಲು ಬಂದ ರೇಕಾಬನ ಮಗ ಯೆಹೋನಾದಾಬನನ್ನು ಕಂಡು ಅವನನ್ನು ವಂದಿಸಿ ಅವನಿಗೆ, “ನನ್ನ ಹೃದಯವು ನಿನ್ನ ಹೃದಯದ ಸಂಗಡ ಇರುವ ಹಾಗೆ ನಿನ್ನ ಹೃದಯವು ಯಥಾರ್ಥವಾಗಿ ಇದೆಯೋ?” ಎಂದನು. ಯೆಹೋನಾದಾಬನು, “ಇದೆ,” ಎಂದನು. “ಹಾಗಾದರೆ ನಿನ್ನ ಕೈ ಕೊಡು,” ಎಂದನು. ಇವನು ತನ್ನ ಕೈ ಕೊಟ್ಟನು. ತನ್ನ ಬಳಿಗೆ ರಥದ ಮೇಲೆ ಹತ್ತಿಸಿಕೊಂಡು ಅವನಿಗೆ,


ಯೇಸು ಪೇತ್ರ ಯೋಹಾನರನ್ನು ಕರೆದು, “ನೀವು ಹೋಗಿ ನಮಗೋಸ್ಕರ ಪಸ್ಕಭೋಜನವನ್ನು ಸಿದ್ಧಮಾಡಿರಿ,” ಎಂದರು.


ಅವನನ್ನು ಯೇಸುವಿನ ಬಳಿಗೆ ಕರೆತಂದನು. “ಮೆಸ್ಸೀಯ” ಎಂದರೆ ಕ್ರಿಸ್ತ ಎಂದು ಅರ್ಥ. ಯೇಸು ಅವನನ್ನು ನೋಡಿ, “ನೀನು ಯೋಹಾನನ ಮಗ ಸೀಮೋನನು. ನಿನ್ನನ್ನು ‘ಕೇಫ’ ಎಂದು ಕರೆಯುವರು,” ಎಂದು ಹೇಳಿದರು. “ಕೇಫ” ಎಂದರೆ ಪೇತ್ರ ಇಲ್ಲವೆ ಬಂಡೆ ಎಂದರ್ಥ.


ಸುಮ್ಮನಿರಬೇಕೆಂದು ಪೇತ್ರನು ಅವರಿಗೆ ಕೈಸನ್ನೆ ಮಾಡಿ ಕರ್ತದೇವರು ಹೇಗೆ ತನ್ನನ್ನು ಸೆರೆಮನೆಯಿಂದ ಬಿಡಿಸಿ ಹೊರಗೆ ಕರೆದುಕೊಂಡು ಬಂದರು ಎಂಬುದನ್ನು ವಿವರಿಸಿದನು. “ಇದನ್ನು ಯಾಕೋಬನಿಗೆ ಹಾಗೂ ಸಹೋದರರಿಗೆ ತಿಳಿಸಿರಿ,” ಎಂದು ಹೇಳಿ ಬೇರೆ ಸ್ಥಳಕ್ಕೆ ಹೊರಟುಹೋದನು.


“ಅತ್ಯಂತ ಮಹಾ ಅಪೊಸ್ತಲರು” ಎಂದೆನಿಸಿದ ಇತರ ಅಪೊಸ್ತಲರಿಗಿಂತಲೂ ನಾನು ಕಡಿಮೆಯಾದವನಲ್ಲ ಎಂದು ಭಾವಿಸುತ್ತೇನೆ.


ನೀವೇ ನನ್ನನ್ನು ಹೊಗಳಿಕೊಳ್ಳುವಂತೆ ಮಾಡಿ, ನಾನು ಬುದ್ಧಿಹೀನನಾಗಿ ನಡೆಯಲು ಒತ್ತಾಯಿಸಿದ್ದೀರಿ. ನನಗೆ ನಿಮ್ಮಿಂದಲೇ ಹೊಗಳಿಕೆಯು ಬೇಕಾಗಿತ್ತು. ಏಕೆಂದರೆ ನಾನು ಕೇವಲ ಅತ್ಯಲ್ಪನಾದರೂ “ಅತಿಶ್ರೇಷ್ಠರಾದ ಅಪೊಸ್ತಲರಿಗಿಂತ” ಕಡಿಮೆ ಅಲ್ಲ.


ದೇವರು ತಮ್ಮ ಪುತ್ರನನ್ನು ನನ್ನಲ್ಲಿ ಪ್ರಕಟಿಸಿ, ಯೆಹೂದ್ಯರಲ್ಲದವರಲ್ಲಿ ಸುವಾರ್ತೆಯನ್ನು ಸಾರಬೇಕೆಂದು ಮನಸ್ಸು ಮಾಡಿದರು. ಕೂಡಲೇ ದೇವರ ಪುತ್ರ ಆಗಿರುವವರ ಪ್ರಕಟಣೆಯ ತರುವಾಯ ನಾನು ಯಾವ ಮನುಷ್ಯರನ್ನು ವಿಚಾರಿಸಲಿಲ್ಲ.


ಮೂರು ವರ್ಷಗಳ ನಂತರವೇ ನಾನು ಕೇಫನನ್ನು ಪರಿಚಯಮಾಡಿಕೊಳ್ಳಲು ಯೆರೂಸಲೇಮಿಗೆ ಹೋಗಿ ಅವನೊಂದಿಗೆ ಹದಿನೈದು ದಿವಸ ಇದ್ದೆನು.


ಹದಿನಾಲ್ಕು ವರ್ಷಗಳಾದ ಮೇಲೆ ನಾನು ತೀತನನ್ನು ಕರೆದುಕೊಂಡು ಬಾರ್ನಬನ ಜೊತೆಯಲ್ಲಿ ಪುನಃ ಯೆರೂಸಲೇಮಿಗೆ ಹೋದೆನು.


ಏನೂ ಅಲ್ಲದವನೊಬ್ಬನು ತಾನು ಏನೋ ಆಗಿದ್ದೇನೆಂದು ಭಾವಿಸಿಕೊಂಡರೆ, ತನ್ನನ್ನು ತಾನೇ ವಂಚಿಸಿಕೊಳ್ಳುತ್ತಾನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು