ಕೊಲೊಸ್ಸೆಯವರಿಗೆ 2:16 - ಕನ್ನಡ ಸಮಕಾಲಿಕ ಅನುವಾದ16 ಹೀಗಿರಲಾಗಿ, ಅನ್ನಪಾನಗಳ ವಿಷಯದಲ್ಲಿಯೂ ಹಬ್ಬ ಅಮಾವಾಸ್ಯೆ ಸಬ್ಬತ್ ದಿನ ಮುಂತಾದವುಗಳ ವಿಷಯದಲ್ಲಿಯೂ ಯಾರೂ ನಿಮ್ಮನ್ನು ತೀರ್ಪು ಮಾಡದಿರಲಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಹೀಗಿರುವುದರಿಂದ, ಅನ್ನಪಾನಗಳ ವಿಷಯದಲ್ಲಿಯೂ ಅಥವಾ ಹಬ್ಬ ಅಮಾವಾಸ್ಯೆ ಹಾಗೂ ಸಬ್ಬತ್ತು ಎಂಬಿವುಗಳ ವಿಷಯದಲ್ಲಿಯೂ ನಿಮ್ಮನ್ನು ದೋಷಿಗಳೆಂದು ಯಾರೂ ನಿರ್ಣಯಿಸದಿರಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಹೀಗಿರಲಾಗಿ, ತಿಂಡಿತೀರ್ಥದ ವಿಷಯದಲ್ಲಾಗಲಿ, ಹಬ್ಬಹುಣ್ಣಿಮೆಗಳ ವಿಚಾರದಲ್ಲಾಗಲಿ, ಸಬ್ಬತ್‍ದಿನವನ್ನು ಆಚರಿಸುವ ರೀತಿಯಲ್ಲಾಗಲಿ ನಿಮ್ಮನ್ನು ದೋಷಿಗಳೆಂದು ಯಾರೂ ದೂರದಿರಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಹೀಗಿರುವದರಿಂದ ತಿಂದು ಕುಡಿಯುವ ವಿಷಯದಲ್ಲಿಯೂ ಹಬ್ಬ ಅಮವಾಸ್ಯೆ ಸಬ್ಬತು ಎಂಬಿವುಗಳ ವಿಷಯದಲ್ಲಿಯೂ ನಿಮ್ಮನ್ನು ದೋಷಿಗಳೆಂದು ಯಾರೂ ಎಣಿಸಬಾರದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ಹೀಗಿರುವುದರಿಂದ ತಿಂದು ಕುಡಿಯುವುದರ ಬಗ್ಗೆ ಇಲ್ಲವೆ ಯೆಹೂದ್ಯರ ಪದ್ಧತಿಗಳ (ಹಬ್ಬಗಳು, ಅಮಾವಾಸ್ಯೆಯ ಆಚರಣೆಗಳು, ಸಬ್ಬತ್ ದಿನಗಳು) ಬಗ್ಗೆ ನಿಮಗೆ ನಿಯಮಗಳನ್ನು ರೂಪಿಸಲು ಯಾರಿಗೂ ಅವಕಾಶ ಕೊಡಬೇಡಿ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್16 ಅಶೆ ರಾತಾನಾ, ಖಾತಲ್ಯಾ ಅನಿ ಫಿತಲ್ಯಾ ವಿಶಯಾತ್, ನಾತರ್ ತೆಂಚ್ಯಾ ಪದ್ದತಿಯಾಂಚಿ ಸನಾ, ಆಂವ್ಸೆಚೆ ಕಾರೆವ್, ಸಬ್ಬತಾಚಿ ದಿಸಾ, ಹ್ಯಾ ನಿಯಮಾ ಘೆವ್ನ್ ಕೊನ್ಬಿ ಝಡ್ತಿ ಕರುಚ್ ನ್ಹಯ್. ಅಧ್ಯಾಯವನ್ನು ನೋಡಿ |
ಪ್ರಿಯರೇ, ಒಬ್ಬರ ವಿಷಯದಲ್ಲಿ ಒಬ್ಬರು ಕೆಟ್ಟದ್ದನ್ನು ಮಾತನಾಡಬೇಡಿರಿ. ಯಾವನಾದರೂ ತನ್ನ ಸಹೋದರನ ವಿಷಯದಲ್ಲಿ ಕೆಟ್ಟದ್ದಾಗಿ ಮಾತನಾಡಿದರೆ ಅಥವಾ ತೀರ್ಪುಮಾಡಿದರೆ ಅವನು ದೇವರ ನಿಯಮದ ವಿಷಯದಲ್ಲಿ ಕೆಟ್ಟದ್ದಾಗಿ ಮಾತನಾಡಿ, ನಿಯಮವನ್ನೇ ತೀರ್ಪುಮಾಡಿದ ಹಾಗಾಗುವುದು. ಆದರೆ ನೀನು ದೇವರ ನಿಯಮವನ್ನೇ ತೀರ್ಪುಮಾಡಿದರೆ ನೀನು ಅನುಸರಿಸುವವನಾಗಿರದೆ ನ್ಯಾಯಾಧಿಪತಿಯೆನಿಸಿಕೊಳ್ಳುವಿ.