Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 99:3 - ಕನ್ನಡ ಸಮಕಾಲಿಕ ಅನುವಾದ

3 ನಿಮ್ಮ ಅತಿಶಯವಾದ ಹೆಸರನ್ನು ಜನರು ಕೊಂಡಾಡಲಿ. ದೇವರು ಪರಿಶುದ್ಧರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಅವರು ಯೆಹೋವನ ಭಯಂಕರವಾದ ಮಹಾನಾಮವನ್ನು ಕೊಂಡಾಡಲಿ; ಆತನು ಪರಿಶುದ್ಧನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಆತ ಪರಮ ಪವಿತ್ರನು, ಸ್ತುತಿಸಲಿ ಅವರೆಲ್ಲರು I ಆತ ಘನಗಂಭೀರನು, ಸ್ತುತಿಸಲಿ ಆತನ ಶ್ರೀನಾಮವನು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಅವರು ಯೆಹೋವನ ಪೂಜ್ಯವಾದ ಮಹಾನಾಮವನ್ನು ಕೊಂಡಾಡಲಿ; ಆತನು ಪರಿಶುದ್ಧನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಅವರೆಲ್ಲರೂ ನಿನ್ನ ಭಯಂಕರವಾದ ಹೆಸರನ್ನು ಕೊಂಡಾಡಲಿ. ಆತನೇ ಪರಿಶುದ್ಧನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 99:3
20 ತಿಳಿವುಗಳ ಹೋಲಿಕೆ  

ಅವರಲ್ಲಿ ಒಬ್ಬನು ಮತ್ತೊಬ್ಬನಿಗೆ, “ಸೇನಾಧೀಶ್ವರ ಯೆಹೋವ ದೇವರು ಪರಿಶುದ್ಧರು, ಪರಿಶುದ್ಧರು, ಪರಿಶುದ್ಧರು. ಭೂಮಂಡಲವೆಲ್ಲಾ ಅವರ ಮಹಿಮೆಯಿಂದ ತುಂಬಿದೆ,” ಎಂದು ಕೂಗಿ ಹೇಳಿದನು.


ನಿಮ್ಮ ದೇವರಾದ ಯೆಹೋವ ದೇವರೆಂಬ ಈ ಘನವುಳ್ಳ ಹೆಸರಿಗೆ ನೀವು ಭಯಪಡಬೇಕೆಂದು ಈ ಪುಸ್ತಕದಲ್ಲಿ ಬರೆದಿರುವ ಈ ನಿಯಮದ ಮಾತುಗಳನ್ನು ಅಲಕ್ಷಿಸಿ, ತಪ್ಪು ದಾರಿ ಹಿಡಿದರೆ,


ದೇವರು ತಮ್ಮ ಜನರಿಗೆ ವಿಮೋಚನೆಯನ್ನು ಕಳುಹಿಸಿದರು; ಯುಗಯುಗಕ್ಕೂ ತಮ್ಮ ಒಡಂಬಡಿಕೆಯನ್ನು ಸ್ಥಾಪಿಸಿದ್ದಾರೆ; ದೇವರ ಹೆಸರು ಪರಿಶುದ್ಧರು, ಅತಿಶಯರು ಎಂಬುದು.


ಆ ನಾಲ್ಕು ಜೀವಿಗಳಿಗೆ ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು. ಆ ಜೀವಿಗಳ ಸುತ್ತಲೂ ಒಳಗೂ ತುಂಬಾ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ ಹೀಗೆ ಹೇಳುತ್ತಿದ್ದವು: “ ‘ದೇವರು ಆಗಿರುವ ಕರ್ತ ಪರಿಶುದ್ಧರು, ಪರಿಶುದ್ಧರು, ಪರಿಶುದ್ಧರು, ಅವರು ಸರ್ವಶಕ್ತರು,’ ಗತಕಾಲ, ವರ್ತಮಾನ ಭವಿಷ್ಯತ್ಕಾಲಗಳಲ್ಲಿ ಇರುವವರು.”


ಇನ್ನು ಮೇಲೆ ನಾನು ಲೋಕದಲ್ಲಿ ಇರುವುದಿಲ್ಲ. ಇವರಾದರೋ ಲೋಕದಲ್ಲಿರುತ್ತಾರೆ. ನಾನು ನಿಮ್ಮ ಬಳಿಗೆ ಬರುತ್ತೇನೆ. ಪರಿಶುದ್ಧ ತಂದೆಯೇ, ನಾವು ಒಂದಾಗಿರುವಂತೆಯೇ ಇವರೂ ಒಂದಾಗಿರಬೇಕೆಂದು ನೀವು ನನಗೆ ಕೊಟ್ಟ ನಿಮ್ಮ ಹೆಸರಿನ ಶಕ್ತಿಯಿಂದ ಇವರನ್ನು ಕಾಪಾಡಿರಿ.


ಯೆಹೋವ ದೇವರು ತಮ್ಮ ಎಲ್ಲಾ ಮಾರ್ಗಗಳಲ್ಲಿ ನೀತಿವಂತರೂ ತಮ್ಮ ಸೃಷ್ಟಿಗೆಲ್ಲಾ ಪ್ರೀತಿ ತೋರಿಸುವವರೂ ಆಗಿದ್ದಾರೆ.


ನೀವು ದೇವರಿಗೆ, “ನಿಮ್ಮ ಕೃತ್ಯಗಳು ಅತಿಶಯವಾದವುಗಳಾಗಿವೆ. ನಿಮ್ಮ ಶತ್ರುಗಳು ನಿಮ್ಮೆದುರಿನಲ್ಲಿ ಮುದುರಿ ಬೀಳುವಷ್ಟು ನಿಮ್ಮ ಶಕ್ತಿ ದೊಡ್ಡದಾಗಿದೆ.


ನಾನು ಅವರನ್ನು ಸಂದರ್ಶಿಸಿ, ಅವರ ಮುಂದೆ ನಿಂತು ಶ್ರೇಷ್ಠರಿಗೂ, ಅಧಿಕಾರಸ್ಥರಿಗೂ, ಇತರ ಜನರಿಗೂ ಸಂಬೋಧಿಸಿ, “ನೀವು ಅವರಿಗೋಸ್ಕರ ಭಯಪಡಬೇಡಿರಿ. ದೊಡ್ಡವನಾಗಿಯೂ, ಭಯಂಕರನಾಗಿಯೂ ಇರುವ ಯೆಹೋವ ದೇವರನ್ನು ಜ್ಞಾಪಕಮಾಡಿಕೊಂಡು, ನಿಮ್ಮ ಪುತ್ರರಿಗೋಸ್ಕರ, ಪುತ್ರಿಯರಿಗೋಸ್ಕರ, ನಿಮ್ಮ ಹೆಂಡತಿಯರಿಗೋಸ್ಕರ, ನಿಮ್ಮ ಮನೆಗಳಿಗೋಸ್ಕರ ಯುದ್ಧಮಾಡಿರಿ,” ಎಂದೆನು.


ನಾನು ನನ್ನ ಪ್ರಾರ್ಥನೆಯಲ್ಲಿ: “ಪರಲೋಕ ದೇವರಾದ ಯೆಹೋವ ದೇವರೇ, ನೀವು ಮಹೋನ್ನತರೂ ಭಯಭಕ್ತಿಗೆ ಪಾತ್ರರೂ ಆಗಿದ್ದೀರಿ. ನಿಮ್ಮನ್ನು ಪ್ರೀತಿಸಿ ನಿಮ್ಮ ಆಜ್ಞೆಗಳಿಗೆ ವಿಧೇಯರಾಗಿರುವವರೊಂದಿಗೆ, ನಿಮ್ಮ ಪ್ರೀತಿಯ ಒಡಂಬಡಿಕೆಯನ್ನು ನೆರವೇರಿಸುವವರೇ, ಭಯಭಕ್ತಿಗೆ ಪಾತ್ರರಾದ ದೇವರೇ,


ಅದಕ್ಕೆ ಯೆಹೋಶುವನು ಜನರಿಗೆ, “ನೀವು ಯೆಹೋವ ದೇವರನ್ನು ಸೇವಿಸಲಾರಿರಿ. ಏಕೆಂದರೆ ಅವರು ಪರಿಶುದ್ಧ ದೇವರು, ತಮಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ತೀಕ್ಷ್ಣ ದೇವರು. ಅವರು ನಿಮ್ಮ ದ್ರೋಹಗಳನ್ನೂ ಪಾಪಗಳನ್ನೂ ಮನ್ನಿಸರು.


ಅವರಿಗೆ ಹೆದರಬೇಡಿರಿ. ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ಭಯಭಕ್ತಿಗೆ ಯೋಗ್ಯರಾದ ಮಹಾ ದೇವರಾಗಿ ನಿಮ್ಮ ಮಧ್ಯದಲ್ಲಿದ್ದಾರೆ.


ಯೆಹೂದ ಪ್ರದೇಶದಲ್ಲಿ ದೇವರು ಸುಪ್ರಸಿದ್ಧರಾಗಿದ್ದಾರೆ. ಇಸ್ರಾಯೇಲಿನಲ್ಲಿ ದೇವರ ಹೆಸರು ಪ್ರಖ್ಯಾತವಾಗಿದೆ.


“ಯೆಹೋವ ದೇವರ ಹಾಗೆ ಪರಿಶುದ್ಧರಾದವರಿಲ್ಲ. ನಿಶ್ಚಯವಾಗಿ ನಿಮ್ಮ ಹೊರತು ಮತ್ತೊಬ್ಬರಿಲ್ಲ. ನಮ್ಮ ದೇವರ ಹಾಗೆಯೇ ಆಶ್ರಯದುರ್ಗ ಇಲ್ಲ.


ಆದರೆ ಯೆಹೋವ ದೇವರು ಭಯಂಕರವಾದ ಪರಾಕ್ರಮಶಾಲಿಯ ಹಾಗೆ ನನ್ನ ಸಂಗಡ ಇದ್ದಾರೆ. ಆದ್ದರಿಂದ ನನ್ನನ್ನು ಹಿಂಸಿಸುವವರು ಎಡವುವರು, ಗೆಲ್ಲುವುದಿಲ್ಲ. ಅನುಕೂಲವಾಗದೆ ಇದ್ದುದರಿಂದ ಅವರು ಬಹಳವಾಗಿ ನಾಚಿಕೆಪಡುವರು. ಅವರ ಅವಮಾನವು ಎಂದಿಗೂ ಮರೆಯದ ಅವಮಾನವಾಗಿರುವುದು.


ದೇವರು ಅಧಿಕಾರಿಗಳ ಗರ್ವವನ್ನು ಮುರಿಯುತ್ತಾರೆ. ಭೂಲೋಕದ ಅರಸರು ದೇವರಿಗೆ ಭಯಪಡುತ್ತಾರೆ.


“ಆದಕಾರಣ ನಮ್ಮ ದೇವರೇ, ಪ್ರೀತಿಯ ಒಡಂಬಡಿಕೆಯನ್ನು ಕೈಗೊಳ್ಳುವಂಥ ಮಹಾ ಪರಾಕ್ರಮವುಳ್ಳ ಭಯಭಕ್ತಿಗೆ ಕಾರಣರಾದ ದೇವರೇ, ಅಸ್ಸೀರಿಯದ ಅರಸರ ಕಾಲ ಮೊದಲ್ಗೊಂಡು ಇಂದಿನವರೆಗೆ ನಮ್ಮ ಮೇಲೆಯೂ, ನಮ್ಮ ಅರಸರ ಮೇಲೆಯೂ, ನಮ್ಮ ಪ್ರಧಾನರ ಮೇಲೆಯೂ, ನಮ್ಮ ಯಾಜಕರ ಮೇಲೆಯೂ, ನಮ್ಮ ಪ್ರವಾದಿಗಳ ಮೇಲೆಯೂ, ನಮ್ಮ ಪಿತೃಗಳ ಮೇಲೆಯೂ, ನಿಮ್ಮ ಸಮಸ್ತ ಜನರ ಮೇಲೆಯೂ ಬಂದ ಇವೆಲ್ಲಾ ಕಷ್ಟಸಂಕಟಗಳು ನಿಮಗೆ ಅಲ್ಪವಾಗಿ ಕಾಣದಿರಲಿ.


ಲೇವಿಯರಾದ ಯೇಷೂವ, ಕದ್ಮಿಯೇಲ್, ಬಾನೀ, ಹಷಬ್ನೆಯ, ಶೇರೇಬ್ಯ, ಹೋದೀಯ, ಶೆಬನ್ಯ, ಪೆತಹ್ಯ ಎಂಬವರು ಜನರಿಗೆ: “ಏಳಿರಿ, ಎಂದೆಂದಿಗೂ ಏಕರೀತಿಯಾಗಿರುವ ನಿಮ್ಮ ದೇವರಾಗಿರುವ ಯೆಹೋವ ದೇವರನ್ನು ಸ್ತುತಿಸಿರಿ,” ಎಂದರು. ಅನಂತರ ಅವರು, “ಯೆಹೋವ ದೇವರೇ, ಸಕಲ ಸ್ತುತಿ ಆಶೀರ್ವಾದಗಳಿಗೆ ಉನ್ನತವಾದದ್ದು ನಿಮ್ಮ ಮಹಿಮೆಯುಳ್ಳ ಹೆಸರು.


ಕೃತಜ್ಞತೆಯಿಂದ ಅವರ ಬಾಗಿಲುಗಳಿಗೂ, ಕೃತಜ್ಞತಾ ಸ್ತೋತ್ರದಿಂದ ಅವರ ಅಂಗಳಗಳಿಗೂ ಬನ್ನಿರಿ; ಅವರನ್ನು ಕೊಂಡಾಡಿರಿ, ಅವರ ಹೆಸರನ್ನು ಸ್ತುತಿಸಿರಿ.


ನನ್ನ ಮನವೇ, ಯೆಹೋವ ದೇವರನ್ನು ಕೊಂಡಾಡು; ನನ್ನ ಅಂತರಾತ್ಮವೇ ಅವರ ಪರಿಶುದ್ಧ ನಾಮವನ್ನು ಸ್ತುತಿಸು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು