Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 91:8 - ಕನ್ನಡ ಸಮಕಾಲಿಕ ಅನುವಾದ

8 ನಿನ್ನ ಕಣ್ಣುಗಳಿಂದ ಮಾತ್ರ ನೀನು ಗಮನಿಸುವೆ. ದುಷ್ಟರಿಗೆ ಪ್ರತಿದಂಡನೆ ಆಗುವುದನ್ನು ಸಹ ನೀನು ಕಾಣುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ನೀನು ಅದನ್ನು ಕಣ್ಣಾರೆ ಕಂಡು, ದುಷ್ಟರಿಗೆ ಪ್ರತಿದಂಡನೆಯುಂಟು ಎಂಬುದಕ್ಕೆ ಸಾಕ್ಷಿಯಾಗಿರುವಿಯಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ನೀನಿದನು ಕಣ್ಣಾರೆ ಕಾಣುವೆ I ದುರುಳರ ದಂಡನೆಯನು ನೋಡುವೆ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ನೀನು ಅದನ್ನು ಕಣ್ಣಾರೆ ಕಂಡು ದುಷ್ಟರಿಗೆ ಪ್ರತಿದಂಡನೆಯುಂಟೆಂಬದಕ್ಕೆ ಸಾಕ್ಷಿಯಾಗಿರುವಿಯಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನೀನು ಅದನ್ನು ಕಣ್ಣಾರೆ ಕಂಡು ದುಷ್ಟರಿಗೆ ದಂಡನೆಯಾಯಿತೆಂದು ತಿಳಿದುಕೊಳ್ಳುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 91:8
9 ತಿಳಿವುಗಳ ಹೋಲಿಕೆ  

ಯೆಹೋವ ದೇವರನ್ನು ನಿರೀಕ್ಷಿಸು; ಅವರ ಮಾರ್ಗದಲ್ಲಿ ನಡೆ; ಆಗ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವಂತೆ ನಿನ್ನನ್ನು ಅವರು ಉನ್ನತಕ್ಕೆ ತರುವರು; ದುಷ್ಟರ ವಿನಾಶವನ್ನು ನೀವು ಕಾಣುವಿರಿ.


ನಿಮ್ಮ ಕಣ್ಣುಗಳಿಂದ ನೋಡಿ, ‘ಇಸ್ರಾಯೇಲಿನ ಮೇರೆ ಆಚೆಗೂ ಯೆಹೋವ ದೇವರು ಮಹೋನ್ನತರು!’ ಎಂದು ನೀವು ಹೇಳುವಿರಿ.”


ನನ್ನ ಕಣ್ಣು ನನ್ನ ವಿರೋಧಿಗಳ ಸೋಲನ್ನು ದೃಷ್ಟಿಸುವುದು. ನನಗೆ ವಿರೋಧವಾಗಿ ಏಳುವ ದುರ್ಮಾರ್ಗಿಗಳ ವಿಪತ್ತನ್ನು ಕುರಿತು ನಾನು ಕೇಳಿಸಿಕೊಳ್ಳುವೆ.


ಕೆಡುಕರಿಗೆ ಕಷ್ಟ! ಅವರಿಗೆ ಕೇಡೇ ಇರಲಿ. ಏಕೆಂದರೆ ಅವರ ಕೈಗಳ ಪ್ರತಿಫಲವು ಅವರಿಗೆ ಕೊಡಲಾಗುವುದು.


ಏಕೆಂದರೆ ದೇವದೂತರ ಮೂಲಕ ಹೇಳಲಾದ ವಾಕ್ಯವೇ ದೃಢಪಡಿಸಲಾಯಿತು. ಆದ್ದರಿಂದ ಆ ವಾಕ್ಯವನ್ನು ಮೀರಿದವರಿಗೂ ಅವಿಧೇಯರಾದವರಿಗೂ ನ್ಯಾಯವಾದ ದಂಡನೆ ಕೊಡಲಾಯಿತು.


ಅದಕ್ಕೆ ಮೋಶೆಯು ಜನರಿಗೆ, “ನೀವು ಭಯಪಡಬೇಡಿರಿ, ದೃಢವಾಗಿ ನಿಲ್ಲಿರಿ. ಯೆಹೋವ ದೇವರು ನಿಮಗೆ ಈ ಹೊತ್ತು ತೋರಿಸುವ ರಕ್ಷಣೆಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಈಜಿಪ್ಟಿನವರನ್ನು ಇನ್ನು ಮುಂದೆ ಎಂದೆಂದಿಗೂ ನೋಡುವುದಿಲ್ಲ.


ಆ ದಿನದಲ್ಲಿ ಯೆಹೋವ ದೇವರು ಈ ಪ್ರಕಾರ ಇಸ್ರಾಯೇಲರನ್ನು ಈಜಿಪ್ಟಿನವರ ಕೈಯಿಂದ ರಕ್ಷಿಸಿದರು. ಇಸ್ರಾಯೇಲರು ಸಮುದ್ರ ತೀರದಲ್ಲಿ ಸತ್ತ ಈಜಿಪ್ಟಿನವರನ್ನು ನೋಡಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು