Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 83:18 - ಕನ್ನಡ ಸಮಕಾಲಿಕ ಅನುವಾದ

18 ಯೆಹೋವ ದೇವರು ಎಂಬ ಹೆಸರುಳ್ಳ ನೀವು ಮಾತ್ರವೇ ಸಮಸ್ತ ಭೂಮಿಯ ಮೇಲೆ ಮಹೋನ್ನತರಾಗಿದ್ದೀರಿ ಎಂದು ಅವರು ತಿಳಿದುಕೊಳ್ಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಆಗ ಯೆಹೋವನ ನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಇವರು ಅರಿಯಲಿ ಪ್ರಭುವೆಂಬ ನಾಮ ನಿನ್ನದೆಂದು I ಧರೆಯಲ್ಲೆಲ್ಲಾ ಸರ್ವೋನ್ನತ ನೀನೇ ಎಂದು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಆಗ ಅವರು ನೀನೊಬ್ಬನೇ ದೇವರೆಂದೂ ನಿನ್ನ ಹೆಸರು ಯೆಹೋವನೆಂದೂ ತಿಳಿದುಕೊಳ್ಳುವರು. ಭೂಲೋಕಕ್ಕೆಲ್ಲಾ ಮಹೋನ್ನತನಾದ ದೇವರೊಬ್ಬನೇ ದೇವರೆಂದು ಅವರು ಅರಿತುಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 83:18
21 ತಿಳಿವುಗಳ ಹೋಲಿಕೆ  

ನಾನೇ ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಸರ್ವಶಕ್ತ ದೇವರೆಂದು ಪ್ರಕಟಿಸಿಗೊಂಡೆನು. ಆದರೆ ಯೆಹೋವ ದೇವರೆಂಬ ನನ್ನ ಹೆಸರಿನಿಂದ ನಾನು ಅವರಿಗೆ ಪೂರ್ಣವಾಗಿ ತಿಳಿಸಲಿಲ್ಲ.


ಅವರು ದಂಡನೆಗೆ ತುತ್ತಾಗಲಿ. ಅವರು ನಿರ್ನಾಮವಾಗಿಬಿಡಲಿ. ಆಗ ಯಾಕೋಬರನ್ನು ಆಳುವವರು ದೇವರೇ ಎಂಬುದು ಇಡೀ ಲೋಕಕ್ಕೇ ಗೊತ್ತಾಗಲಿ.


ಹೀಗೆ ನಾನು ನನ್ನ ಮಹಿಮೆಯನ್ನು ತೋರ್ಪಡಿಸಿ, ನನ್ನ ಗೌರವವನ್ನು ಕಾಪಾಡಿಕೊಂಡು, ಬಹು ಜನಾಂಗಗಳು ನಾನೇ ಯೆಹೋವ ದೇವರೆಂದು ತಿಳಿದುಕೊಳ್ಳುವಂತೆ ಅವುಗಳ ಕಣ್ಣೆದುರಿಗೆ ವ್ಯಕ್ತವಾಗುವೆನು.’


ಏಕೆಂದರೆ ಯೆಹೋವ ದೇವರೇ, ನೀವು ಸಮಸ್ತ ಭೂಮಿಯ ಮೇಲೆ ಮಹೋನ್ನತರಾಗಿದ್ದೀರಿ; ಎಲ್ಲಾ ದೇವರುಗಳ ಮೇಲೆ ನೀವು ಅತ್ಯಂತ ಮಹೋನ್ನತರಾಗಿದ್ದೀರಿ.


“ಆದ್ದರಿಂದ ಇಗೋ, ನಾನು ಇದೊಂದು ಸಾರಿ ಅವರಿಗೆ ತಿಳಿಯುವಂತೆ ಮಾಡುವೆನು. ನನ್ನ ಕೈಯನ್ನೂ, ನನ್ನ ಪರಾಕ್ರಮವನ್ನೂ ಅವರಿಗೆ ತಿಳಿಸುವೆನು. ನನ್ನ ಹೆಸರು ಯೆಹೋವ ದೇವರೇ, ಎಂದು ಅವರು ತಿಳಿದುಕೊಳ್ಳುವರು.


ಹೀಗಿರುವುದರಿಂದ, ಈಗ ನಮ್ಮ ದೇವರಾದ ಯೆಹೋವ ದೇವರೇ, ‘ನೀವೊಬ್ಬರೇ ದೇವರಾದ ಯೆಹೋವ ದೇವರಾಗಿದ್ದೀರಿ,’ ಎಂದು ಭೂಮಿಯ ಸಮಸ್ತ ರಾಜ್ಯಗಳೂ ತಿಳಿಯುವ ಹಾಗೆ ನಮ್ಮನ್ನು ಅವನ ಕೈಯಿಂದ ತಪ್ಪಿಸಿ ರಕ್ಷಿಸಿರಿ,” ಎಂದು ಹಿಜ್ಕೀಯನು ಯೆಹೋವ ದೇವರಿಗೆ ಪ್ರಾರ್ಥಿಸಿದನು.


ನೀನು ಮಾನವ ಸಮಾಜದಿಂದ ಬಹುಷ್ಕೃತನಾಗುವೆ. ಕಾಡುಮೃಗಗಳ ನಡುವೆ ವಾಸಿಸುವೆ. ನೀನು ದನಗಳ ಹಾಗೆ ಹುಲ್ಲನ್ನು ಮೇಯುವೆ. ಮಹೋನ್ನತರು ಮನುಷ್ಯರ ರಾಜ್ಯವನ್ನಾಳುವರೆಂದು ತಮ್ಮ ಮನಸ್ಸಿಗೆ ಸರಿ ಬಂದವರಿಗೆ ಅದನ್ನು ಕೊಡುವೆರೆಂದು ನೀನು ತಿಳಿಯುವಷ್ಟರಲ್ಲಿ ಏಳು ಕಾಲಗಳು ನಿನ್ನನ್ನು ದಾಟಿ ಹೋಗುವುವು,” ಎಂಬುದೇ.


ಹೀಗೆ ನಾನು ಈಜಿಪ್ಟನ್ನು ದಂಡಿಸುವೆನು. ಆಗ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.’ ”


ನಾನೇ ಯೆಹೋವ ದೇವರು, ಅದೇ ನನ್ನ ಹೆಸರು. ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಇಲ್ಲವೆ ನನ್ನ ಸ್ತುತಿಯನ್ನು ಎರಕದ ವಿಗ್ರಹಗಳಿಗೂ ಕೊಡೆನು.


ಚೀಯೋನ್ ಪುತ್ರಿಯೇ, ಎದ್ದು ತುಳಿ. ಏಕೆಂದರೆ ನಿನ್ನ ಕೊಂಬನ್ನು ಕಬ್ಬಿಣವಾಗಿಯೂ ನಿನ್ನ ಗೊರಸುಗಳನ್ನು ಕಂಚಿನದಾಗಿಯೂ ಮಾಡುವೆನು. ನೀನು ಅನೇಕ ಜನಾಂಗಗಳನ್ನು ಚೂರುಚೂರಾಗಿ ಮಾಡುವೆ. ಅವರ ಕೊಳ್ಳೆಹೊಡೆದು ಸಂಪಾದಿಸಿದ್ದ ಸ್ವತ್ತನ್ನು ಯೆಹೋವ ದೇವರಿಗೂ ಅವರ ಸಂಪತ್ತನ್ನು ಲೋಕದ ಕರ್ತ ದೇವರಿಗೂ ಪ್ರತಿಷ್ಠೆಮಾಡುವೆನು.


ನೀವು ದೇವರಾದ ಯೆಹೋವ ದೇವರೆಂದೂ, ನೀವು ಅವರ ಹೃದಯವನ್ನು ತಿರುಗಿಸಿದ್ದೀರೆಂದೂ ಈ ಜನರು ತಿಳಿಯುವ ಹಾಗೆ ನನಗೆ ಉತ್ತರಕೊಡಿರಿ. ಯೆಹೋವ ದೇವರೇ, ನನಗೆ ಉತ್ತರಕೊಡಿರಿ” ಎಂದು ಬೇಡಿದನು.


ನಿನ್ನನ್ನು ಉಂಟುಮಾಡಿದವನೇ ನಿನ್ನ ಪತಿ. ಸೇನಾಧೀಶ್ವರ ಯೆಹೋವ ದೇವರು ಎಂಬುದು ಆತನ ಹೆಸರು. ನಿನ್ನ ವಿಮೋಚಕನು ಇಸ್ರಾಯೇಲಿನ ಪರಿಶುದ್ಧನೇ. ಸಮಸ್ತ ಭೂಮಿಯ ದೇವರು ಎಂದು ಆತನನ್ನು ಕರೆಯಲಾಗುತ್ತದೆ.


ಯೆಹೋವ ದೇವರೇ, ನೀವಾದರೋ ಎಂದೆಂದಿಗೂ ಉನ್ನತರಾಗಿದ್ದೀರಿ.


ನಾನು ನಿಮ್ಮಲ್ಲಿ ಆನಂದಿಸಿ ಉಲ್ಲಾಸಪಡುವೆನು; ಮಹೋನ್ನತರೇ, ನಾನು ನಿಮ್ಮ ಹೆಸರನ್ನು ಕೊಂಡಾಡಿ ಹಾಡುವೆನು.


ಯೆಹೋವ ದೇವರು ತಮ್ಮ ನ್ಯಾಯಕೃತ್ಯಗಳಲ್ಲಿ ಪ್ರಸಿದ್ಧರಾಗಿದ್ದಾರೆ; ದುಷ್ಟರು ತಮ್ಮ ಕೈಕೆಲಸದಲ್ಲಿ ಸಿಕ್ಕಿಕೊಂಡಿದ್ದಾರೆ.


ಅಬ್ರಹಾಮನು ಆ ಸ್ಥಳಕ್ಕೆ ಯೆಹೋವ ಯೀರೆ ಎಂದು ಹೆಸರಿಟ್ಟನು. “ಯೆಹೋವ ದೇವರು ಪರ್ವತದ ಮೇಲೆ ಒದಗಿಸುವರು,” ಎಂದು ಇಂದಿನವರೆಗೂ ಜನರು ಹೇಳುತ್ತಾರೆ.


ಆಗ ಅವನು, “ಇವು ಸಮಸ್ತ ಭೂಮಿಯ ಕರ್ತ ಆಗಿರುವವರ ಸನ್ನಿಧಿಸೇವೆ ಮಾಡಲು ಅಭಿಷೇಕ ಹೊಂದಿರುವ ಇಬ್ಬರು ಸೇವಕರನ್ನು ಸೂಚಿಸುತ್ತದೆ,” ಎಂದನು.


ನಿನ್ನನ್ನು ಮನುಷ್ಯರೊಳಗಿಂದ ಬಹಿಷ್ಕರಿಸಿ ಬಿಡುವರು. ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವುದು. ಪಶುಗಳಂತೆ ನೀನು ಹುಲ್ಲನ್ನು ತಿನ್ನುವೆ. ಆಕಾಶದ ಮಂಜಿನಿಂದ ನಿನ್ನನ್ನು ತೋಯಿಸುವುದು. ಮಹೋನ್ನತರು ಮನುಷ್ಯರ ರಾಜ್ಯವನ್ನು ಆಳುವರೆಂದೂ, ತಮಗೆ ಬೇಕಾದವರಿಗೆ ಅದನ್ನು ಕೊಡುತ್ತಾರೆಂದೂ ನೀನು ತಿಳಿಯುವವರೆಗೂ, ಆ ಏಳು ಕಾಲಗಳು ಕಳೆದುಹೋಗುವುವು.


ಆದರೆ ಸೇನಾಧೀಶ್ವರ ಯೆಹೋವ ದೇವರು ನ್ಯಾಯತೀರ್ಪಿನಲ್ಲಿ ಉನ್ನತವಾಗಿರುವರು. ಪರಿಶುದ್ಧ ದೇವರು ತಮ್ಮ ನ್ಯಾಯದಲ್ಲಿ ಪರಿಶುದ್ಧರೆಂದು ಕಾಣಿಸಿಕೊಳ್ಳುವರು.


ಯೆಹೋವ ದೇವರು ಆಕಾಶಗಳಲ್ಲಿ ಗುಡುಗಿದರು; ಮಹೋನ್ನತ ದೇವರ ಧ್ವನಿಯು ಕಲ್ಮಳೆ ಹಾಗೂ ಮಿಂಚುಗಳಿಂದ ಪ್ರತಿಧ್ವನಿಸಿತು.


ನನ್ನ ಪ್ರಾಣವನ್ನು ಹುಡುಕುವವರು ನಾಚಿಕೆಪಟ್ಟು ಅವಮಾನ ಹೊಂದಲಿ; ನನಗೆ ಕೇಡನ್ನು ಕಲ್ಪಿಸುವವರು ಹಿಂದಿರುಗಿ ಲಜ್ಜೆಪಡಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು