Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 78:65 - ಕನ್ನಡ ಸಮಕಾಲಿಕ ಅನುವಾದ

65 ಆಗ ಯೆಹೋವ ದೇವರು ಪ್ರತಿಕ್ರಿಯೆಯನ್ನು ಪ್ರಕಟಿಸಿದರು. ದ್ರಾಕ್ಷಾರಸದಿಂದ ಆರ್ಭಟಿಸುವ ಪರಾಕ್ರಮಶಾಲಿಯ ಹಾಗೆ ಸಂರಕ್ಷಿಸಲಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

65 ಆ ವರೆಗೆ ನಿದ್ರಿಸುವವನಂತೆಯೂ, ದ್ರಾಕ್ಷಾರಸದಿಂದ ಮೈಮರೆತ ವೀರನಂತೆಯೂ ಇದ್ದ ಕರ್ತನು ಫಕ್ಕನೆ ಎಚ್ಚೆತ್ತು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

65 ಪ್ರಭುವೆದ್ದನು ನಿದ್ರೆಯಿಂದಲೋ ಎಂಬಂತೆ I ಮಧುವಿನ ಅಮಲಿನಿಂದೆಚ್ಚೆತ್ತ ಬಲಿಷ್ಠನಂತೆ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

65 ಆವರೆಗೆ ನಿದ್ರಿಸುವವನಂತೆಯೂ ದ್ರಾಕ್ಷಾರಸದಿಂದ ಮೈಮರೆತ ವೀರನಂತೆಯೂ ಇದ್ದ ಕರ್ತನು ಫಕ್ಕನೆ ಎಚ್ಚತ್ತು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

65 ಕೊನೆಗೆ, ನಿದ್ದೆಯಿಂದ ಎಚ್ಚರಗೊಳ್ಳುತ್ತಿರುವ ಮನುಷ್ಯನಂತೆಯೂ ಅಮಲಿಳಿದು ಎಚ್ಚರಗೊಳ್ಳುತ್ತಿರುವ ಸೈನಿಕನಂತೆಯೂ ನಮ್ಮ ಯೆಹೋವನು ಎದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 78:65
7 ತಿಳಿವುಗಳ ಹೋಲಿಕೆ  

ಯೆಹೋವ ದೇವರೇ, ಏಳಿರಿ, ಹೌದು ಎದ್ದೇಳಿರಿ ಸದಾಕಾಲಕ್ಕೆ ನಮ್ಮನ್ನು ತಳ್ಳಿಬಿಡಬೇಡಿರಿ.


ಯೆಹೋವ ದೇವರ ಭುಜವೇ, ಎಚ್ಚರಗೊಳ್ಳು, ಎಚ್ಚರಗೊಳ್ಳು ಬಲವನ್ನು ಧರಿಸಿಕೋ. ಹಿಂದಿನ ಜನಾಂಗಗಳಲ್ಲಿ ಪೂರ್ವಕಾಲದ ದಿವಸಗಳಲ್ಲಿ ಎಚ್ಚರವಿದ್ದಂತೆಯೇ ಎಚ್ಚರವಾಗು. ರಹಬನ್ನು ಕಡಿದುಬಿಟ್ಟದ್ದೂ, ಘಟಸರ್ಪವನ್ನು ಗಾಯಪಡಿಸಿದ್ದೂ ನೀನಲ್ಲವೋ?


ಅವರು ನಿದ್ದೆಯಿಂದ ಎಚ್ಚರಗೊಂಡ ಕನಸಿನಂತೆ ಇರುತ್ತಾರೆ. ಯೆಹೋವ ದೇವರೇ, ನಿಮ್ಮ ದೃಷ್ಟಿಯಲ್ಲಿ ಅವರು ಅಲ್ಪರಾಗಿರಲಿ.


ಯೆಹೋವ ದೇವರೇ, ನೀವು ಕೋಪದಿಂದ ಎದ್ದೇಳಿರಿ; ನನ್ನ ವೈರಿಗಳ ಕ್ರೋಧಕ್ಕೆ ವಿರೋಧವಾಗಿ ಎಚ್ಚರಗೊಳ್ಳಿರಿ. ನನ್ನ ದೇವರೇ, ನ್ಯಾಯಕ್ಕೆ ನಿಮ್ಮ ತೀರ್ಪನ್ನು ನೀಡಲು ಎದ್ದೇಳಿರಿ.


ತನ್ನ ಯಜಮಾನನನ್ನು ಬಿಟ್ಟು, ನಿನ್ನ ಬಳಿಗೆ ತಪ್ಪಿಸಿಕೊಂಡು ಬಂದ ದಾಸನನ್ನು ಹಿಡಿದು ಯಜಮಾನನಿಗೆ ಒಪ್ಪಿಸಬಾರದು.


ನಿನ್ನ ದೇವರಾದ ಯೆಹೋವ ದೇವರು ನಿನ್ನೊಂದಿಗಿದ್ದಾರೆ. ನಿನ್ನನ್ನು ರಕ್ಷಿಸಲು ಶಕ್ತರಾಗಿದ್ದಾರೆ. ನಿನ್ನಲ್ಲಿ ಬಹಳವಾಗಿ ಹರ್ಷಾನಂದಗೊಳ್ಳುವರು. ತಮ್ಮ ಪ್ರೀತಿಯ ನಿಮಿತ್ತ ಅವರು ಇನ್ನು ಮುಂದೆ ನಿನ್ನನ್ನು ಖಂಡಿಸುವುದಿಲ್ಲ, ಆದರೆ ಆನಂದ ಸ್ವರದಿಂದ ನಿನ್ನ ಮೇಲೆ ಉಲ್ಲಾಸಿಸುವರು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು