Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 78:54 - ಕನ್ನಡ ಸಮಕಾಲಿಕ ಅನುವಾದ

54 ಹೀಗೆ ದೇವರು ತಮ್ಮ ಭುಜಬಲದಿಂದ ಪವಿತ್ರ ನಾಡಿನ ತಮ್ಮ ಮೇರೆಗೂ, ಈ ಪರ್ವತ ನಾಡಿಗೂ ಅವರನ್ನು ಬರಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

54 ಅವರನ್ನು ತನ್ನ ಪವಿತ್ರದೇಶಕ್ಕೆ ಅಂದರೆ ತನ್ನ ಭುಜಬಲದಿಂದ ಸಂಪಾದಿಸಿದ ಈ ಪರ್ವತಸೀಮೆಗೆ ಕರೆದುಕೊಂಡು ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

54 ಕರೆತಂದನವರನು ತನ್ನ ಪವಿತ್ರನಾಡಿಗೆ I ಭುಜಬಲದಿಂದ ಗಳಿಸಿದಾಪರ್ವತ ಸೀಮೆಗೆ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

54 ಅವರನ್ನು ತನ್ನ ಪವಿತ್ರದೇಶಕ್ಕೆ ಅಂದರೆ ತನ್ನ ಭುಜಬಲದಿಂದ ಸಂಪಾದಿಸಿದ ಈ ಪರ್ವತಸೀಮೆಗೆ ಕರತಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

54 ಆತನು ತನ್ನ ಜನರನ್ನು ತನ್ನ ಪವಿತ್ರನಾಡಿಗೂ ತನ್ನ ಭುಜಬಲದಿಂದ ತೆಗೆದುಕೊಂಡ ಪರ್ವತಕ್ಕೂ ನಡೆಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 78:54
9 ತಿಳಿವುಗಳ ಹೋಲಿಕೆ  

ನಮ್ಮ ಪಿತೃಗಳು ತಮ್ಮ ಖಡ್ಗದಿಂದ ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿಲ್ಲ; ಅವರ ತೋಳು ಅವರಿಗೆ ಜಯ ತರಲಿಲ್ಲ; ಆದರೆ ನಿಮ್ಮ ಬಲಗೈಯೂ ನಿಮ್ಮ ತೋಳೂ ನಿಮ್ಮ ಮುಖದ ಪ್ರಕಾಶವೇ ಅವರಿಗೆ ಜಯವನ್ನು ತಂದಿತು. ಏಕೆಂದರೆ ಅವರನ್ನು ನೀವು ಪ್ರೀತಿಸಿದಿರಿ.


ಅವರನ್ನು ಒಳಗೆ ಬರಮಾಡಿ, ಯೆಹೋವ ದೇವರೇ, ನಿಮ್ಮ ಕೈಗಳು ಸ್ಥಾಪಿಸಿದ ಪರಿಶುದ್ಧ ನಿವಾಸದಲ್ಲಿಯೂ ಯೆಹೋವ ದೇವರೇ, ನೀವು ವಾಸಿಸುವುದಕ್ಕೆ ಮಾಡಿಕೊಂಡಿರುವ ನಿಮ್ಮ ಸ್ವತ್ತಾಗಿರುವ ಪರ್ವತದಲ್ಲಿಯೂ ಅವರನ್ನು ಸ್ಥಾಪಿಸುವಿರಿ.


ದೇವರಿಗೆ ಸೇರಿದವರಾದ ನಾವು ವಿಮೋಚನೆಯಾಗುವ ತನಕ ನಮ್ಮ ಸ್ವರ್ಗೀಯ ವಾರಸುತನವನ್ನು ಹೊಂದುವೆವು ಎಂಬುವುದಕ್ಕೆ ಈ ಪವಿತ್ರಾತ್ಮ ದೇವರೇ ನಮಗೆ ಹೊಣೆಯಾಗಿದ್ದಾರೆ. ದೇವರ ಮಹಿಮೆಯ ನಿಮಿತ್ಯವಾಗಿ ನಾವು ಅವರನ್ನು ಸ್ತುತಿಸೋಣ.


ಅವನು ತನ್ನ ರಾಜ ಗುಡಾರಗಳನ್ನು ಸಮುದ್ರದ ನಡುವೆ ರಮ್ಯವಾದ ಪರಿಶುದ್ಧ ಪರ್ವತದಲ್ಲಿ ಹಾಕುವನು. ಆದರೂ ಅವನು ಕೊನೆಗಾಣುವನು. ಯಾರೂ ಅವನಿಗೆ ಸಹಾಯ ಮಾಡರು.


ನನ್ನ ಪರಿಶುದ್ಧ ಪರ್ವತದಲ್ಲಿ ಯಾರೂ ಕೇಡುಮಾಡುವುದಿಲ್ಲ, ಯಾರೂ ಹಾಳುಮಾಡುವುದಿಲ್ಲ. ಏಕೆಂದರೆ ಸಮುದ್ರವು ನೀರಿನಿಂದ ತುಂಬಿಕೊಂಡಿರುವಂತೆ, ಯೆಹೋವ ದೇವರ ತಿಳುವಳಿಕೆಯು ಭೂಮಿಯಲ್ಲಿ ತುಂಬಿಕೊಂಡಿರುವುದು.


ಉನ್ನತ ಬೆಟ್ಟಗಳೇ, ಏಕೆ ಕುಣಿಯುತ್ತೀರಿ? ದೇವರು ನಿವಾಸಕ್ಕಾಗಿ ಅಪೇಕ್ಷಿಸುವ ಬೆಟ್ಟವು ಇದೇ ಹೌದು, ಯೆಹೋವ ದೇವರು ಅದರಲ್ಲಿ ಸದಾಕಾಲವೂ ವಾಸಿಸುವರು.


ನೀವು ವಿಮೋಚಿಸಿದ ಜನರನ್ನು ನೀವು ನಿಮ್ಮ ಪ್ರೀತಿಯಿಂದ ನಡೆಸಿದ್ದೀರಿ. ನೀವು ಅವರನ್ನು ನಿಮ್ಮ ಬಲದಿಂದ ನಿಮ್ಮ ಪರಿಶುದ್ಧ ನಿವಾಸಕ್ಕೆ ನಡೆಸಿದ್ದೀರಿ.


ಅವರು ಅದರಲ್ಲಿ ಸೇರಿ ಅದನ್ನು ಸ್ವಾಧೀನಪಡಿಸಿಕೊಂಡರು. ಆದರೆ ಅವರು ನಿಮ್ಮ ಮಾತಿಗೆ ಕಿವಿಗೊಡಲಿಲ್ಲ. ನಿಮ್ಮ ನಿಯಮದಲ್ಲಿ ನಡೆದುಕೊಳ್ಳಲಿಲ್ಲ. ಮಾಡಬೇಕೆಂದು ನೀವು ಅವರಿಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಲಿಲ್ಲ. ಆದ್ದರಿಂದ ಈ ಕೇಡನ್ನೆಲ್ಲಾ ಅವರಿಗೆ ಸಂಭವಿಸುವಂತೆ ಮಾಡಿದ್ದೀರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು