Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 70:3 - ಕನ್ನಡ ಸಮಕಾಲಿಕ ಅನುವಾದ

3 “ಆಹಾ! ಆಹಾ!” ಎಂದು ನನ್ನನ್ನು ಹಾಸ್ಯಮಾಡುವವರು ತಮ್ಮ ನಾಚಿಕೆಯ ಫಲಕ್ಕಾಗಿ ಬೆಂಗೊಟ್ಟು ಓಡಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆಹಾ, ಆಹಾ ಎಂದು ಪರಿಹಾಸ್ಯಮಾಡುವವರು ತಮಗಾಗುವ ಅಪಮಾನದಿಂದ ಬೆನ್ನು ಕೊಟ್ಟು ಓಡಿಹೋಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 “ಆಹಾಹಾ” ಎಂದೆನ್ನ ಜರೆಯುವವರು I ಬೆಂಗೊಟ್ಟು ಓಡಲಿ ಆ ಲಜ್ಜೆಗೆಟ್ಟವರು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಆಹಾ, ಆಹಾ ಎಂದು ಪರಿಹಾಸ್ಯ ಮಾಡುವವರು ತಮಗಾಗುವ ಅಪಮಾನದಿಂದ ಬೆಂಗೊಟ್ಟು ಓಡಿಹೋಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ನನ್ನನ್ನು ಗೇಲಿಮಾಡುವವರು ಸೋಲಿನಿಂದ ಅವಮಾನಕ್ಕೀಡಾಗಿ ಓಡಿಹೋಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 70:3
10 ತಿಳಿವುಗಳ ಹೋಲಿಕೆ  

“ಆಹಾ! ಆಹಾ!” ಎಂದು ನನ್ನನ್ನು ಹಾಸ್ಯಮಾಡುವವರು ತಮ್ಮ ನಾಚಿಕೆಯಿಂದಲೇ ವಿಸ್ಮಯಗೊಳ್ಳಲಿ.


ಯೂದನು, ದ್ರೋಹ ಕೃತ್ಯದಿಂದ ಪಡೆದ ಹಣದಿಂದ ಒಂದು ಹೊಲವನ್ನು ಕೊಂಡುಕೊಂಡನು; ಅಲ್ಲಿಯೇ ಅವನು ತಲೆಕೆಳಗಾಗಿ ಬಿದ್ದು, ಹೊಟ್ಟೆ ಬಿರಿದು, ಕರುಳೆಲ್ಲಾ ಹೊರಬಂದು ಸತ್ತನು.


“ಮನುಷ್ಯಪುತ್ರನೇ, ಟೈರ್, ಯೆರೂಸಲೇಮಿನ ವಿಷಯವಾಗಿ, ‘ಆಹಾ, ಜನರ ದ್ವಾರವಾಗಿದ್ದದ್ದು ಮುರಿದುಹೋಯಿತು, ಅದು ನನ್ನ ಕಡೆಗೆ ತೆರೆದುಕೊಂಡಿದೆ. ಯೆರೂಸಲೇಮು ಹಾಳಾದದ್ದರಿಂದ ನಾನು ವೃದ್ಧಿಗೊಳ್ಳುವೆನು,’


ಅಮ್ಮೋನ್ಯರಿಗೆ ಹೇಳು, ‘ಸಾರ್ವಭೌಮ ಯೆಹೋವ ದೇವರ ವಾಕ್ಯವನ್ನು ಕೇಳಿರಿ. ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, ನೀವು ನನ್ನ ಪರಿಶುದ್ಧ ಸ್ಥಳವನ್ನು ಅಪವಿತ್ರ ಪಡಿಸಿದಾಗಲೂ ಇಸ್ರಾಯೇಲಿನ ದೇಶವು ಹಾಳಾದಾಗಲೂ ಯೆಹೂದನ ಮನೆತನದವರು ಸೆರೆಯಲ್ಲಿದ್ದಾಗಲೂ ನೀವು “ಆಹಾ!” ಅಂದದ್ದರಿಂದ


ಅವರು ತಮ್ಮ ಹೃದಯದಲ್ಲಿ, “ಆಹಾ, ನಮ್ಮ ಇಷ್ಟವೇ ನೆರವೇರಿತು,” ಎಂದು ಹೇಳದಿರಲಿ; “ಅವನನ್ನು ನುಂಗಿಬಿಟ್ಟೆವು,” ಎಂದೂ ಅವರು ಹೇಳದೇ ಇರಲಿ.


ಹೌದು, ಅವರು ತಮ್ಮ ಬಾಯನ್ನು ತೆರೆದು ನನಗೆ ವಿರೋಧವಾಗಿ, “ಆಹಾ, ಆಹಾ, ನಾವು ಕಣ್ಣಾರೆ ಕಂಡೆವು,” ಎನ್ನುತ್ತಾರೆ.


ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಏಕೆಂದರೆ ನಿನ್ನ ಶತ್ರುವು ನಿನಗೆ ವಿರೋಧವಾಗಿ, “ಆಹಾ, ಪೂರ್ವದ ಉತ್ತಮ ಸ್ಥಳಗಳು ನಮ್ಮ ಸೊತ್ತಾದವು,” ಎಂದು ಹೇಳುವರು. ’


ನನ್ನನ್ನು ಆರೋಪಿಸುವವರು, ನಾಚಿಕೆಪಟ್ಟು ನಾಶವಾಗಲಿ. ನನ್ನ ಕೇಡಿಗಾಗಿ ಹುಡುಕುವವರನ್ನು ನಿಂದಾಪಮಾನಗಳು ಕವಿಯಲಿ.


ನನ್ನ ನಾಲಿಗೆಯು ಸಹ ದಿನವೆಲ್ಲಾ ನಿಮ್ಮ ನೀತಿಯನ್ನು ಮಾತನಾಡುವುದು, ಏಕೆಂದರೆ ನನಗೆ ಕೇಡು ಬಗೆಯುವವರು ನಾಚಿಕೊಂಡು ತಲೆ ತಗ್ಗಿಸಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು