ಕೀರ್ತನೆಗಳು 60:3 - ಕನ್ನಡ ಸಮಕಾಲಿಕ ಅನುವಾದ3 ನಿಮ್ಮ ಜನರಿಗೆ ಕಠಿಣ ಕಾಲಗಳನ್ನು ನೀವು ತೋರಿಸಿದ್ದೀರಿ. ನಾವು ಭ್ರಮಣಗೊಳಿಸುವ ದ್ರಾಕ್ಷಾರಸವನ್ನು ಕುಡಿದವರಂತೆ ಆದೆವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ನಿನ್ನ ಜನರನ್ನು ಸಂಕಟಕ್ಕೆ ಗುರಿಪಡಿಸಿದ್ದೀ; ನೀನು ನಮಗೆ ರೋಷವೆಂಬ ಪಾತ್ರೆಯಿಂದ ಪಾನಮಾಡಿಸಿದಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ನಿನ್ನ ಜನರನು ಗುರಿಪಡಿಸಿದೆ ಸಂಕಟಕೆ I ಭ್ರಮಣಗೊಳಿಪ ಮದ್ಯವ ಕುಡಿಸಿದೆ ನಮಗೆ II ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ನಿನ್ನ ಜನರನ್ನು ಸಂಕಟಕ್ಕೆ ಗುರಿಪಡಿಸಿದ್ದೀ; ನೀನು ನಮಗೆ ಭ್ರಮಣಮದ್ಯವನ್ನು ಕುಡಿಸಿದ್ದೀ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ನೀನು ನಿನ್ನ ಜನರಿಗೆ ಅನೇಕ ಕಷ್ಟಗಳನ್ನು ಕೊಟ್ಟಿರುವೆ. ನಾವು ಕುಡಿದವರಂತೆ ತೂರಾಡುತ್ತಾ ಬೀಳುತ್ತಿದ್ದೇವೆ. ಅಧ್ಯಾಯವನ್ನು ನೋಡಿ |
“ಆದಕಾರಣ ನಮ್ಮ ದೇವರೇ, ಪ್ರೀತಿಯ ಒಡಂಬಡಿಕೆಯನ್ನು ಕೈಗೊಳ್ಳುವಂಥ ಮಹಾ ಪರಾಕ್ರಮವುಳ್ಳ ಭಯಭಕ್ತಿಗೆ ಕಾರಣರಾದ ದೇವರೇ, ಅಸ್ಸೀರಿಯದ ಅರಸರ ಕಾಲ ಮೊದಲ್ಗೊಂಡು ಇಂದಿನವರೆಗೆ ನಮ್ಮ ಮೇಲೆಯೂ, ನಮ್ಮ ಅರಸರ ಮೇಲೆಯೂ, ನಮ್ಮ ಪ್ರಧಾನರ ಮೇಲೆಯೂ, ನಮ್ಮ ಯಾಜಕರ ಮೇಲೆಯೂ, ನಮ್ಮ ಪ್ರವಾದಿಗಳ ಮೇಲೆಯೂ, ನಮ್ಮ ಪಿತೃಗಳ ಮೇಲೆಯೂ, ನಿಮ್ಮ ಸಮಸ್ತ ಜನರ ಮೇಲೆಯೂ ಬಂದ ಇವೆಲ್ಲಾ ಕಷ್ಟಸಂಕಟಗಳು ನಿಮಗೆ ಅಲ್ಪವಾಗಿ ಕಾಣದಿರಲಿ.