Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 49:3 - ಕನ್ನಡ ಸಮಕಾಲಿಕ ಅನುವಾದ

3 ನನ್ನ ಬಾಯಿ ಜ್ಞಾನವನ್ನು ನುಡಿಯುವುದು, ನನ್ನ ಹೃದಯದ ಧ್ಯಾನವು ವಿವೇಕವಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ನನ್ನ ಬಾಯಿ ಸುಜ್ಞಾನವನ್ನು ಬೋಧಿಸುವುದು; ನನ್ನ ಹೃದಯದ ಧ್ಯಾನವು ವಿವೇಕದಿಂದ ಕೂಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ನನ್ನ ಬಾಯಿ ಬೋಧಿಸುವುದು ಸುಜ್ಞಾನವನು I ನನ್ನ ಮನ ಧ್ಯಾನಿಸುವುದು ವಿವೇಚನೆಯನು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ನನ್ನ ಬಾಯಿ ಸುಜ್ಞಾನವನ್ನು ಬೋಧಿಸುವದು; ನನ್ನ ಹೃದಯವು ವಿವೇಕವನ್ನು ಫಲಿಸುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ನಾನು ನಿಮಗೆ ಸುಜ್ಞಾನವನ್ನೂ ವಿವೇಕವನ್ನೂ ಬೋಧಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 49:3
15 ತಿಳಿವುಗಳ ಹೋಲಿಕೆ  

ಯೆಹೋವ ದೇವರೇ, ನನ್ನ ಬಂಡೆಯೇ, ನನ್ನ ವಿಮೋಚಕರೇ, ನನ್ನ ಬಾಯಿಯ ಮಾತುಗಳೂ ನನ್ನ ಹೃದಯದ ಧ್ಯಾನವೂ ನಿಮ್ಮ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿರಲಿ.


ಒಳ್ಳೆಯವನು ಒಳ್ಳೆಯ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ; ಕೆಟ್ಟವನು ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ.


ಜ್ಞಾನಿಗಳ ಮಾತುಗಳನ್ನು ಕಿವಿಗೊಟ್ಟು ಕೇಳು; ನನ್ನ ಬೋಧನೆಯನ್ನು ನಿನ್ನ ಹೃದಯವು ಅನ್ವಯಿಸಲಿ.


ನನ್ನ ಹೃದಯವು ಸೊಗಸಾದ ವಿಷಯದಿಂದ ಮಿಡಿಯುತ್ತಿದೆ. ಮಹಾರಾಜನನ್ನು ಕುರಿತು ನಾನು ರಚಿಸುವೆನು ಗೀತಾಂಜಲಿ. ನನ್ನ ನಾಲಿಗೆಯು ನಿಪುಣ ಬರಹಗಾರನ ಲೇಖನಿಯಂತೆ ಸಿದ್ಧವಾಗಿದೆ.


ನೀತಿವಂತನ ಬಾಯಿ ಜ್ಞಾನವನ್ನು ನುಡಿಯುವುದು; ಅವನ ನಾಲಿಗೆ ನ್ಯಾಯವನ್ನು ಮಾತನಾಡುವುದು.


ನಿಮ್ಮ ವಾಕ್ಯಗಳನ್ನು ತೆರೆಯುವಾಗ, ಅದು ಬೆಳಕನ್ನು ಕೊಡುವುದು; ಅದು ಮುಗ್ಧರಿಗೆ ಅರಿವನ್ನು ನೀಡುವುದು.


ಇಲ್ಲವಾದರೆ ನಾನು ಹೇಳುವುದನ್ನು ಕೇಳು; ಮೌನವಾಗಿರು, ಈಗ ನಾನು ನಿನಗೆ ಜ್ಞಾನವನ್ನು ಬೋಧಿಸುತ್ತೇನೆ.”


ನನ್ನ ಹೃದಯದ ಯಥಾರ್ಥತ್ವವನ್ನು ನನ್ನ ಮಾತುಗಳೇ ತಿಳಿಸುತ್ತವೆ; ನನ್ನ ತುಟಿಗಳು ನಾನು ತಿಳಿದುಕೊಂಡಿದ್ದನ್ನೇ ಯಥಾರ್ಥವಾಗಿ ಹೇಳುತ್ತವೆ.


ನನ್ನ ಬೋಧನೆ ಮಳೆಯಂತೆ ಸುರಿಯುವುದು. ನನ್ನ ಮಾತು ಮಂಜಿನಂತೆಯೂ, ಹುಲ್ಲಿನ ಮೇಲೆ ಬೀಳುವ ವೃಷ್ಟಿಗಳ ಹಾಗೆಯೂ ಬೀಳುವುದು.


ದೇವರ ವಿಷಯವಾದ ನನ್ನ ಧ್ಯಾನವು ಮಧುರವಾಗಿರುವುದು; ನಾನು ಯೆಹೋವ ದೇವರಲ್ಲಿ ಸಂತೋಷ ಪಡುವೆನು.


ಯೆಹೋವ ದೇವರು ತಮ್ಮ ನಂಬಿಗಸ್ತರನ್ನು ತಮಗಾಗಿ ಪ್ರತ್ಯೇಕಿಸಿದ್ದಾರೆ ಎಂದು ತಿಳಿದುಕೊಳ್ಳಿರಿ; ನಾನು ಬೇಡಿಕೊಳ್ಳಲು ಯೆಹೋವ ದೇವರು ನನಗೆ ಉತ್ತರ ನೀಡುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು