ಕೀರ್ತನೆಗಳು 43:1 - ಕನ್ನಡ ಸಮಕಾಲಿಕ ಅನುವಾದ1 ದೇವರೇ, ನನ್ನನ್ನು ನಿರ್ದೋಷಿ ಎಂದು ನಿರ್ಣಯಿಸಿರಿ, ಭಕ್ತಿಹೀನ ಜನತೆಯ ವಿರೋಧವಾಗಿ ನನ್ನ ನ್ಯಾಯವನ್ನು ವಾದಿಸಿರಿ. ಮೋಸವೂ ಅನ್ಯಾಯವೂ ಉಳ್ಳ ಮನುಷ್ಯನಿಂದ ನನ್ನನ್ನು ತಪ್ಪಿಸಿರಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ದೇವರೇ, ನ್ಯಾಯವನ್ನು ತೀರಿಸು; ನನಗೋಸ್ಕರ ವ್ಯಾಜ್ಯವನ್ನು ನಡೆಸಿ ಭಕ್ತಿ ಇಲ್ಲದ ಜನಾಂಗದಿಂದ ತಪ್ಪಿಸು, ದುರಾಚಾರಿಗಳಾದ ಮೋಸಗಾರರಿಂದ ನನ್ನನ್ನು ಬಿಡಿಸು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ನಿರ್ಣಯಿಸು ನನ್ನ ನ್ಯಾಯವನು ಓ ದೇವಾ I ವಾದಿಸು ಆ ಭಕ್ತಿಹೀನ ಜನತೆಯ ವಿರುದ್ಧ I ಬಿಡಿಸೆನ್ನನು ವಂಚಕರಿಂದ, ಅಧರ್ಮಿಗಳಿಂದ II ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ದೇವರೇ, ನ್ಯಾಯವನ್ನು ನಿರ್ಣಯಿಸು; ನನಗೋಸ್ಕರ ವ್ಯಾಜ್ಯವನ್ನು ನಡಿಸಿ ನಿರ್ದಯವಾದ ಜನಾಂಗದಿಂದ ತಪ್ಪಿಸು, ದುರಾಚಾರಿಗಳಾದ ಮೋಸಗಾರರಿಂದ ನನ್ನನ್ನು ಬಿಡಿಸು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ದೇವರೇ, ನನ್ನನ್ನು ನಿರಪರಾಧಿಯೆಂದು ತೀರ್ಪು ನೀಡು. ವ್ಯಾಜ್ಯದಲ್ಲಿ ನನ್ನ ಪರವಾಗಿಯೂ ಅನ್ಯ ಜನಾಂಗಗಳಿಗೆ ವಿರೋಧವಾಗಿಯೂ ವಾದಿಸು. ಸುಳ್ಳುಗಾರರಿಂದಲೂ ಕೆಡುಕರಿಂದಲೂ ನನ್ನನ್ನು ರಕ್ಷಿಸು. ಅಧ್ಯಾಯವನ್ನು ನೋಡಿ |