Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 40:10 - ಕನ್ನಡ ಸಮಕಾಲಿಕ ಅನುವಾದ

10 ನಾನು ನಿಮ್ಮ ನೀತಿಯನ್ನು ನನ್ನ ಹೃದಯದಲ್ಲಿ ಅಡಗಿಸಿಟ್ಟುಕೊಳ್ಳಲಿಲ್ಲ. ನಿಮ್ಮ ನಂಬಿಗಸ್ತಿಕೆಯನ್ನೂ ನಿಮ್ಮ ರಕ್ಷಣೆಯನ್ನೂ ನಿಮ್ಮ ಪ್ರೀತಿಯನ್ನೂ ಸತ್ಯವನ್ನೂ ದೊಡ್ಡ ಸಭೆಯಲ್ಲಿ ನಾನು ಮರೆಮಾಡದೆ ಸಾರಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ನಿನ್ನ ನೀತಿಸಾಧನೆಯನ್ನು ಮರೆಮಾಡಲಿಲ್ಲ; ನಿನ್ನ ನಂಬಿಕೆಯನ್ನೂ, ರಕ್ಷಣೆಯನ್ನೂ ಪ್ರಸಿದ್ಧಪಡಿಸಿದೆನು; ನಿನ್ನ ಕೃಪಾಸತ್ಯತೆಗಳನ್ನು ಮಹಾಸಮುದಾಯದಲ್ಲಿ ತಿಳಿಸದೆ ಇರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಬಚ್ಚಿಟ್ಟುಕೊಳ್ಳಲಿಲ್ಲ ನನ್ನೆದೆಯೊಳು ನಿನ್ನ ಸತ್ಸಂಬಂಧವನು I ಪ್ರಕಟಿಸಿದೆನು ಜೀವೋದ್ಧಾರವನು, ನಿನ್ನ ಪ್ರಾಮಾಣಿಕತೆಯನು I ಮಹಾಸಭೆಗೆ ಮರೆಯಿಸದೆ ಸಾರಿದೆನು ನಿನ್ನ ಪ್ರೀತಿ ಸತ್ಯತೆಯನು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ನಿನ್ನ ನೀತಿಸಾಧನೆಯನ್ನು ಮರೆಮಾಜಲಿಲ್ಲ; ನಿನ್ನ ನಂಬಿಕೆಯನ್ನೂ ರಕ್ಷಣೆಯನ್ನೂ ಪ್ರಸಿದ್ಧಪಡಿಸಿದೆನು; ನಿನ್ನ ಕೃಪಾಸತ್ಯತೆಗಳನ್ನು ಮಹಾಸಮುದಾಯದಲ್ಲಿ ತಿಳಿಸದೆ ಇರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ನಿನ್ನ ನೀತಿಕಾರ್ಯಗಳ ಕುರಿತು ನಾನು ಹೇಳಿದೆನು. ಅವುಗಳನ್ನು ನನ್ನ ಹೃದಯದಲ್ಲಿ ಬಚ್ಚಿಟ್ಟುಕೊಳ್ಳಲಿಲ್ಲ. ನಿನ್ನ ನಂಬಿಗಸ್ತಿಕೆಯನ್ನೂ ರಕ್ಷಣೆಯನ್ನೂ ನಾನು ಅವರಿಗೆ ತಿಳಿಸುವೆನು. ನಿನ್ನ ಪ್ರೀತಿಯನ್ನೂ ನಿನ್ನ ಸತ್ಯತೆಯನ್ನೂ ಮಹಾಸಭೆಯಲ್ಲಿ ಹೇಳುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 40:10
25 ತಿಳಿವುಗಳ ಹೋಲಿಕೆ  

ಬಡವನಾದ ನಾನು ಕರೆಯಲು ಯೆಹೋವ ದೇವರು ಕೇಳಿ ನನ್ನ ಎಲ್ಲಾ ಇಕ್ಕಟ್ಟುಗಳೊಳಗಿಂದ ನನ್ನನ್ನು ರಕ್ಷಿಸಿದರು.


ದೇವರಾತ್ಮ ಹಾಗು ವಧುವೂ “ಬಾ” ಎನ್ನುತ್ತಾರೆ, ಕೇಳುವವರು, “ಬಾ” ಎನ್ನಲಿ. ಬಾಯಾರಿದವರು ಬರಲಿ, ಇಷ್ಟವುಳ್ಳವರು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ.


ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದರು, ಎಂಬ ವಾಕ್ಯವು ನಂಬತಕ್ಕದ್ದೂ ಪೂರ್ಣ ಅಂಗೀಕಾರಕ್ಕೆ ಯೋಗ್ಯವಾದದ್ದೂ ಆಗಿದೆ. ಆ ಪಾಪಿಗಳಲ್ಲಿ ನಾನೇ ಮುಖ್ಯನು.


ಕರ್ತನ ವಾಕ್ಯವು ನಿಮ್ಮಿಂದಲೇ ಮಕೆದೋನ್ಯ ಹಾಗೂ ಅಖಾಯದಲ್ಲಿ ಘೋಷಿತವಾದದ್ದಲ್ಲದೆ, ದೇವರ ಮೇಲೆ ನೀವು ಇಟ್ಟಿರುವ ನಂಬಿಕೆಯು ಎಲ್ಲಾ ಸ್ಥಳಗಳಲ್ಲಿಯೂ ಹರಡಿತು. ಆದ್ದರಿಂದ ಇದನ್ನು ಕುರಿತು ನಾವು ಹೇಳಬೇಕಾದ ಅವಶ್ಯ ಏನೂ ಇಲ್ಲ.


ಹೀಗೆ ನಾನು ಕ್ರಿಸ್ತನನ್ನು ಸಂಪಾದಿಸಿಕೊಂಡು ಅವರಲ್ಲಿ ಒಂದಾಗಿರ ಬಯಸುತ್ತೇನೆ. ನಿಯಮದಿಂದ ಬರುವ ಸ್ವನೀತಿಯನ್ನು ಆಶ್ರಯಿಸಿಕೊಳ್ಳದೆ, ಕ್ರಿಸ್ತನನ್ನು ನಂಬುವುದರ ಮೂಲಕ ವಿಶ್ವಾಸದ ಆಧಾರದ ಮೇಲೆ ದೇವರು ಕೊಡುವ ನೀತಿಯನ್ನೇ ಹೊಂದಿದವನಾಗಿರ ಬಯಸುತ್ತೇನೆ.


ಅವರು ದೇವರಿಂದ ಬರುವ ನೀತಿಯನ್ನು ತಿಳಿಯದವರಾಗಿ ತಮ್ಮದೇ ಆದ ನೀತಿಯನ್ನು ಸ್ಥಾಪಿಸಲು ಪ್ರಯತ್ನಪಟ್ಟದ್ದರಿಂದ ಅವರು ತಮ್ಮನ್ನು ದೇವರ ನೀತಿಗೆ ಒಳಪಡಿಸಲಿಲ್ಲ.


ಮಾನವರೆಲ್ಲರೂ ದೇವರ ರಕ್ಷಣೆಯನ್ನು ಕಾಣುವರು.’ ”


ನೀನು ಪುರಾತನ ಕಾಲದಿಂದಲೂ ನಮ್ಮ ಪಿತೃಗಳಿಗೆ ಪ್ರಮಾಣಮಾಡಿರುವಂತೆ ಯಾಕೋಬನ ವಂಶದವರಿಗೆ ಸತ್ಯಪರನಾಗಿಯೂ, ಅಬ್ರಹಾಮನ ವಂಶದವರಿಗೆ ಪ್ರೀತಿಪರನಾಗಿಯೂ ನಡೆಯುವಿ.


ನೀನು ನನ್ನ ಮಾತುಗಳನ್ನು ಅವರಿಗೆ ಹೇಳಬೇಕು. ಅವರು ಕೇಳಿದರೂ ಸರಿ, ಕೇಳದಿದ್ದರೂ ಸರಿ, ಏಕೆಂದರೆ ಅವರು ತಿರುಗಿಬೀಳುವ ಜನರು.


ಆತನೇ ಈಗ ಹೀಗೆನ್ನುತ್ತಾನೆ, “ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬಿನ ಕುಲಗಳನ್ನು ಉನ್ನತಪಡಿಸುವುದೂ, ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರುಗಿ ಬರಮಾಡುವುದೂ ಅಲ್ಪ ಕಾರ್ಯವಲ್ಲವೇ, ನನ್ನ ರಕ್ಷಣೆಯು ಭೂಲೋಕದ ಕಟ್ಟಕಡೆಯವರೆಗೆ ವ್ಯಾಪಿಸುವಂತೆ ನಿನ್ನನ್ನು ಸರ್ವಜನಾಂಗಗಳಿಗೂ ಬೆಳಕನ್ನಾಗಿ ಮಾಡುವೆನು.”


ಯೆಹೋವ ದೇವರ ಮಹಾ ಪ್ರೀತಿಯನ್ನು ಯುಗಯುಗಕ್ಕೂ ಹಾಡುವೆನು. ತಲತಲಾಂತರಕ್ಕೂ ನಿಮ್ಮ ನಂಬಿಗಸ್ತಿಕೆಯನ್ನು ನನ್ನ ಬಾಯಿ ತಿಳಿಯಪಡಿಸುವುದು.


ಯೆಹೋವ ದೇವರ ಒಡಂಬಡಿಕೆಯನ್ನು ಕೈಗೊಳ್ಳುವವರಿಗೆ ಅವರ ದಾರಿಯೆಲ್ಲವು ಪ್ರೀತಿ, ಸತ್ಯದಿಂದ ತುಂಬಿರುತ್ತವೆ.


ಏಕೆಂದರೆ ನಿಯಮವು ಮೋಶೆಯ ಮೂಲಕ ಕೊಡಲಾಯಿತು. ಕೃಪೆಯೂ ಸತ್ಯವೂ ಕ್ರಿಸ್ತ ಯೇಸುವಿನ ಮೂಲಕ ಬಂದವು.


ದೀನರು ಉಂಡು ತೃಪ್ತರಾಗುವರು; ಯೆಹೋವ ದೇವರನ್ನು ಹುಡುಕುವವರು ಅವರನ್ನು ಸ್ತುತಿಸುವರು; ಅಂಥವರ ಹೃದಯವು ಎಂದೆಂದಿಗೂ ಚೈತನ್ಯ ಹೊಂದಲಿ.


ನಾನಾದರೋ ಸದಾ ವರ್ಣಿಸುವವನಾಗಿ ಯಾಕೋಬ ವಂಶದವರ ದೇವರನ್ನು ಸಂಕೀರ್ತಿಸುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು