Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 37:7 - ಕನ್ನಡ ಸಮಕಾಲಿಕ ಅನುವಾದ

7 ಯೆಹೋವ ದೇವರ ಮುಂದೆ ಶಾಂತನಾಗಿರು; ಮೌನವಾಗಿದ್ದು ಅವರಿಗಾಗಿ ಎದುರು ನೋಡು; ತಮ್ಮ ಮಾರ್ಗದಲ್ಲಿ ಸಫಲವಾಗುವವರನ್ನು ಕಂಡು ಸಿಡುಕಬೇಡ. ಕುಯುಕ್ತಿಗಳನ್ನು ನಡೆಸುವ ಮನುಷ್ಯರನ್ನು ಕಂಡು ಕೋಪ ಮಾಡಿಕೊಳ್ಳಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಯೆಹೋವನ ಸನ್ನಿಧಿಯಲ್ಲಿ ಶಾಂತನಾಗಿ ಆತನಿಗೋಸ್ಕರ ಕಾದಿರು; ಕುಯುಕ್ತಿಗಳನ್ನು ನೆರವೇರಿಸಿಕೊಂಡು ಅಭಿವೃದ್ಧಿ ಹೊಂದುವವನನ್ನು ನೋಡಿ ಉರಿಗೊಳ್ಳಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಪ್ರಭುವಿನ ಮುಂದೆ ಪ್ರಶಾಂತನಾಗಿರು, ಆತನಿಗೋಸ್ಕರ ಕಾದಿರು I ಸ್ವಾರ್ಥಿಗಳ, ಕುತಂತ್ರಿಗಳ ಏಳಿಗೆಯ ಕಂಡು ಉರಿಗೊಳ್ಳದಿರು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಯೆಹೋವನ ಸನ್ನಿಧಿಯಲ್ಲಿ ಶಾಂತನಾಗಿ ಆತನಿಗೋಸ್ಕರ ಕಾದಿರು; ಕುಯುಕ್ತಿಗಳನ್ನು ನೆರವೇರಿಸಿಕೊಂಡು ಅಭಿವೃದ್ಧಿ ಹೊಂದುವವನನ್ನು ನೋಡಿ ಉರಿಗೊಳ್ಳಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಯೆಹೋವನಲ್ಲಿ ಭರವಸವಿಟ್ಟು ಆತನ ಸಹಾಯಕ್ಕಾಗಿ ಕಾದುಕೊಂಡಿರು. ಕೆಡುಕರ ಅಭಿವೃದ್ಧಿಯನ್ನು ಕಂಡು ಉರಿಗೊಳ್ಳಬೇಡ. ಕೆಡುಕರ ಕುಯುಕ್ತಿಗಳು ನೆರವೇರಿದರೂ ಹೊಟ್ಟೆಕಿಚ್ಚುಪಡಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 37:7
24 ತಿಳಿವುಗಳ ಹೋಲಿಕೆ  

ಯೆಹೋವ ದೇವರಿಗಾಗಿ ಕಾದಿರು, ಧೈರ್ಯವಾಗಿರು; ಅವರು ನಿನ್ನ ಹೃದಯವನ್ನು ದೃಢಪಡಿಸುವರು; ಯೆಹೋವ ದೇವರಿಗಾಗಿ ಕಾದಿರು.


ಹೌದು, ದೇವರಲ್ಲಿಯೇ ನನ್ನ ಪ್ರಾಣಕ್ಕೆ ಶಾಂತಿ. ನನ್ನ ನಿರೀಕ್ಷೆಯು ದೇವರಿಂದಲೇ.


ನೀನು, “ಕೇಡಿಗೆ ಮುಯ್ಯಿತೀರಿಸುವೆನು,” ಎಂದು ಹೇಳಬೇಡ; ಯೆಹೋವ ದೇವರನ್ನು ನಿರೀಕ್ಷಿಸು; ಆಗ ಅವರೇ ನಿಮ್ಮನ್ನು ರಕ್ಷಿಸಿ ಉದ್ಧರಿಸುವನು.


ಏಕೆಂದರೆ ಪ್ರಕಟನೆಯು ಇನ್ನೂ ನೇಮಕವಾದ ಕಾಲಕ್ಕಾಗಿ ಎದುರು ನೋಡುವುದು. ಅದು ಅಂತ್ಯದ ಬಗ್ಗೆ ಮಾತಾಡುವುದು. ಅದು ಸುಳ್ಳಾಗದು. ಅದು ತಡವಾದರೂ, ಅದಕ್ಕೆ ಕಾದುಕೊಂಡಿರು. ಏಕೆಂದರೆ ಅದು ತಡಮಾಡದೆ ನಿಶ್ಚಯವಾಗಿ ಬರುವುದು.


ಓ ಯೆಹೋವ ದೇವರೇ, ನಾನು ನಿಮ್ಮ ಸಂಗಡ ವಾದಿಸುವಾಗ, ನೀವು ನೀತಿವಂತರೇ ಆಗಿದ್ದೀರಿ. ಆದರೂ ನಾನು ನಿಮ್ಮ ಸಂಗಡ ನ್ಯಾಯವಾದವುಗಳನ್ನು ಕುರಿತು ಮಾತನಾಡುವೆನು. ದುಷ್ಟರ ಮಾರ್ಗವು ಸಮೃದ್ಧಿಯಾಗುವುದು ಏಕೆ? ಮಹಾ ವಂಚನೆ ಮಾಡುವವರೆಲ್ಲರು ಸುಖವಾಗಿರುವುದು ಏಕೆ?


ನಾನು ಯೆಹೋವ ದೇವರಿಗಾಗಿ ತಾಳ್ಮೆಯಿಂದ ಕಾದಿದ್ದೆನು; ಅವರು ನನ್ನ ಕಡೆಗೆ ತಿರುಗಿ, ನನ್ನ ಮೊರೆಯನ್ನು ಕೇಳಿದರು.


ಏಕೆಂದರೆ ಇಸ್ರಾಯೇಲಿನ ಪರಿಶುದ್ಧನಾದ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, “ನೀವು ತಿರುಗಿಕೊಂಡು ಸುಮ್ಮನಿದ್ದರೆ ನಿಮಗೆ ರಕ್ಷಣೆಯಾಗುವುದು. ಶಾಂತರಾಗಿ ಭರವಸದಿಂದಿರುವುದೇ ನಿಮಗೆ ಬಲ ಎಂದು ಹೇಳಿದ್ದರೂ, ನೀವು ಒಪ್ಪಿಕೊಂಡಿಲ್ಲ.


ದೇವರಲ್ಲಿಯೇ ನನ್ನ ಪ್ರಾಣಕ್ಕೆ ಶಾಂತಿ, ನನ್ನ ರಕ್ಷಣೆಯು ದೇವರಿಂದಲೇ.


ಒಳ್ಳೆಯದನ್ನು ಮಾಡುವುದರಲ್ಲಿ ಎದೆಗುಂದದಿರೋಣ. ಏಕೆಂದರೆ ನಾವು ಬೇಸರಗೊಳ್ಳದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು.


ಯಾಕೋಬಿನ ವಂಶದವರಿಗೆ ಮುಖವನ್ನು ಮರೆಮಾಡಿಕೊಂಡಿರುವ ಯೆಹೋವ ದೇವರಿಗಾಗಿ ನಾನು ಕಾದುಕೊಂಡು ಎದುರು ನೋಡುತ್ತಿರುವೆನು. ನಾನು ದೇವರ ಮೇಲೆ ಭರವಸೆ ಇಡುವೆನು.


ಯೆಹೋವ ದೇವರು ಅಮೋರಿಯರನ್ನು ಇಸ್ರಾಯೇಲರ ಕೈಯಲ್ಲಿ ಒಪ್ಪಿಸಿದ ಆ ದಿನದಲ್ಲಿ ಯೆಹೋಶುವನು ಯೆಹೋವ ದೇವರ ಸಂಗಡ ಮಾತನಾಡಿ ಇಸ್ರಾಯೇಲಿನ ಮುಂದೆ ಹೀಗೆ ಹೇಳಿದನು, “ಸೂರ್ಯನೇ ನೀನು ಗಿಬ್ಯೋನಿನ ಮೇಲೆ ನಿಲ್ಲು; ಚಂದ್ರನೇ, ನೀನು ಅಯ್ಯಾಲೋನ್ ಕಣಿವೆಯಲ್ಲಿ ಸ್ಥಿರವಾಗಿ ನಿಲ್ಲು.”


ದೇಶದಲ್ಲಿ ಬಡವರ ಹಿಂಸೆಯನ್ನೂ ನೀತಿನ್ಯಾಯ ನಿರಾಕರಿಸಿದ್ದನ್ನೂ ನೀನು ನೋಡಿದರೆ, ಆಶ್ಚರ್ಯಪಡಬೇಡ. ಏಕೆಂದರೆ ಒಬ್ಬ ಅಧಿಕಾರಿಯ ಮೇಲೆ ಇನ್ನೊಬ್ಬನಿದ್ದಾನೆ. ಅವರಿಬ್ಬರ ಮೇಲೆ ಮತ್ತೊಬ್ಬ ಉನ್ನತ ಅಧಿಕಾರಿಗಳು ಇದ್ದಾರೆ.


ಆಗ ಬಿರುಗಾಳಿ ಮತ್ತಷ್ಟು ತೀವ್ರಗೊಳ್ಳುತ್ತಿತ್ತು. ನಾವಿಕರು ಯೋನನಿಗೆ, “ಸಮುದ್ರ ಶಾಂತವಾಗಬೇಕಾದರೆ, ನಿನ್ನನ್ನು ಏನು ಮಾಡಬೇಕು? ಹೇಳು,” ಎಂದು ಕೇಳಿದರು.


ಅರಸನು ತನ್ನ ಇಷ್ಟದ ಪ್ರಕಾರ ಮಾಡುವನು. ತನ್ನನ್ನು ತಾನೇ ಹೆಚ್ಚಿಸಿಕೊಂಡು, ತನ್ನನ್ನು ಎಲ್ಲಾ ದೇವರುಗಳಿಗಿಂತಲೂ ದೊಡ್ಡವನನ್ನಾಗಿ ಮಾಡಿಕೊಂಡು, ದೇವರುಗಳ ದೇವರಿಗೆ ವಿರೋಧವಾಗಿ ಆಶ್ಚರ್ಯವಾದ ಸಂಗತಿಗಳನ್ನು ಮಾತನಾಡಿ, ರೋಷವು ತೀರುವವರೆಗೂ ವೃದ್ಧಿಯಾಗಿರುವನು. ಹೀಗೆ ನಿಶ್ಚಯವಾದದ್ದು ನೆರವೇರಲೇಬೇಕು.


ನಿಮ್ಮ ಯಜ್ಞಗಳ ವಿರೋಧವಾಗಿ ನಾನು ತಪ್ಪು ಹೊರಿಸುತ್ತಾಯಿಲ್ಲ, ಅಥವಾ ನನ್ನ ಮುಂದೆ ಯಾವಾಗಲೂ ಇರುವ ದಹನಬಲಿಗಳ ವಿರೋಧವಾಗಿಯೂ ನಾನು ತಪ್ಪು ಹೊರಿಸುತ್ತಾಯಿಲ್ಲ.


ಅಂಚೆಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಹೊರಟು ಹೋದರು. ಶೂಷನಿನ ಅರಮನೆಯಲ್ಲಿಂದ ಆ ಆಜ್ಞೆಯು ಹೊರಡಿತು. ಅರಸನೂ ಹಾಮಾನನೂ ಮದ್ಯಪಾನ ಮಾಡಲು ಕುಳಿತುಕೊಂಡರು. ಆದರೆ ಶೂಷನ್ ಪಟ್ಟಣವೋ ತಳಮಳಗೊಂಡಿತ್ತು.


ಹೀಗಿರಲು, ‘ದೇವರು ಕಾಣುವುದಿಲ್ಲ, ನನ್ನ ವ್ಯಾಜ್ಯವು ದೇವರ ಮುಂದೆ ಇದೆ; ದೇವರಿಗಾಗಿ ಕಾದಿರುತ್ತೇನೆ,’ ಎಂದು ನೀನು ಹೇಳಿದರೆ, ದೇವರು ನಿನಗೆ ಕಿವಿಗೊಡುವರೋ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು