Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 37:32 - ಕನ್ನಡ ಸಮಕಾಲಿಕ ಅನುವಾದ

32 ದುಷ್ಟನು ನೀತಿವಂತನಿಗಾಗಿ ಒಳಸಂಚು ಮಾಡುತ್ತಾನೆ; ಅವನನ್ನು ಕೊಲ್ಲಲು ಹುಡುಕುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ದುಷ್ಟನು ಹೊಂಚುಹಾಕಿ ನೀತಿವಂತನನ್ನು ಕೊಲ್ಲಬೇಕೆಂದು ಸಮಯನೋಡುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ದುಷ್ಟನಿಟ್ಟಿರುವನು ಕಣ್ಣನು ಸಜ್ಜನರ ಮೇಲೆ I ಹೊಂಚುಹಾಕಿ ನೋಡುತಿಹನು ಮಾಡಲವರ ಕೊಲೆ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ದುಷ್ಟನು ಹೊಂಚುಹಾಕಿ ನೀತಿವಂತನನ್ನು ಕೊಲ್ಲಬೇಕೆಂದು ಸಮಯನೋಡುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಕೆಡುಕರಾದರೋ ನೀತಿವಂತರಿಗೆ ಕೇಡುಮಾಡಲು ಹೊಂಚುಹಾಕುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 37:32
18 ತಿಳಿವುಗಳ ಹೋಲಿಕೆ  

ಆದರೆ ಅವರ ಯೋಚನೆ ಸೌಲನಿಗೆ ತಿಳಿಯಿತು. ಅವರು ಅವನನ್ನು ಕೊಲ್ಲುವುದಕ್ಕಾಗಿ ಹಗಲಿರುಳು ಪಟ್ಟಣದ ದ್ವಾರಗಳ ಬಳಿಯಲ್ಲಿ ಹೊಂಚುಹಾಕುತ್ತಿದ್ದರು.


ಅವರು ಯೇಸುವನ್ನು ಹೊಂಚಿ ನೋಡುತ್ತಾ, ಮಾತಿನಲ್ಲಿ ಅವರನ್ನು ಸಿಕ್ಕಿಸುವಂತೆ ಅಧಿಪತಿಗೂ ಅಧಿಕಾರಕ್ಕೂ ಒಪ್ಪಿಸಿಕೊಡಲು, ನೀತಿವಂತರೆಂದು ನಟಿಸುವ ಗೂಢಚಾರರನ್ನು ಕಳುಹಿಸಿದರು.


ಯೇಸು ಒಂದು ಸಬ್ಬತ್ ದಿನದಲ್ಲಿ, ಫರಿಸಾಯರ ಮುಖ್ಯಸ್ಥರಲ್ಲಿ ಒಬ್ಬನ ಮನೆಯೊಳಗೆ ಊಟಕ್ಕೆ ಹೋದಾಗ, ಎಲ್ಲರು ಅವರನ್ನು ಗಮನಿಸುತ್ತಿದ್ದರು.


ಏಕೆಂದರೆ ಯೇಸುವಿನ ಮಾತಿನಲ್ಲಿ ಏನನ್ನಾದರೂ ಕಂಡುಹಿಡಿದು ಅವರ ಮೇಲೆ ತಪ್ಪು ಹೊರಿಸಬೇಕೆಂದು ಹೊಂಚಿನೋಡುತ್ತಿದ್ದರು.


ಆಗ ಫರಿಸಾಯರೂ ನಿಯಮ ಬೋಧಕರೂ ಯೇಸುವಿಗೆ ವಿರೋಧವಾಗಿ ತಪ್ಪು ಕಂಡು ಹಿಡಿಯಬೇಕೆಂದು, ಅವರು ಆ ಸಬ್ಬತ್ ದಿನದಲ್ಲಿ ಅವನನ್ನು ಯೇಸು ಗುಣಪಡಿಸುವರೋ ಏನೋ ಎಂದು ಗಮನಿಸಿ ನೋಡುತ್ತಿದ್ದರು.


ಏಕೆಂದರೆ ಅನೇಕರ ಚಾಡಿಯನ್ನು ಕೇಳಿದೆನು. “ಸುತ್ತಲೂ ಭಯವಿದೆ. ಅವನನ್ನು ಖಂಡಿಸಿರಿ! ಅವನನ್ನು ಖಂಡಿಸೋಣ!” ನನ್ನ ಆಪ್ತರೆಲ್ಲರೂ ನಾನು ಕುಂಟುವುದನ್ನು ನೋಡಿಕೊಳ್ಳುತ್ತಾ ಒಂದು ವೇಳೆ ಅವನು ಮೋಸಗೊಂಡಾನು. “ಆಗ ನಾವು ಅವನನ್ನು ಗೆದ್ದು, ಅವನಲ್ಲಿ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುವೆವು ಅನ್ನುತ್ತಾರೆ.”


ದುಷ್ಟನು ನೀತಿವಂತನಿಗಾಗಿ ಒಳಸಂಚು ಮಾಡುತ್ತಾನೆ, ಆದರೆ ಅವನನ್ನು ಕಂಡು ಹಲ್ಲು ಕಡಿಯುತ್ತಾನೆ.


ತನ್ನ ಯಜಮಾನನು ಹೊರಗಿನಿಂದ ಬರುವವರೆಗೆ, ಆಕೆಯು ಅವನ ವಸ್ತ್ರವನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡಳು.


ಆಗ ಸೌಲನು ದಾವೀದನನ್ನು ಈಟಿಯಿಂದ ಗೋಡೆಗೆ ಹತ್ತಿಕೊಳ್ಳುವ ಹಾಗೆ ಹೊಡೆಯಬೇಕೆಂದು ಹುಡುಕಿದನು. ಆದರೆ ದಾವೀದನು ಸೌಲನ ಎದುರಿನಿಂದ ತಪ್ಪಿಸಿಕೊಂಡನು. ಅವನ ಈಟಿಯು ಗೋಡೆಯಲ್ಲಿ ಹತ್ತಿಕೊಳ್ಳುವಂತೆ ಹೊಡೆದನು. ದಾವೀದನು ಓಡಿಹೋಗಿ ಆ ರಾತ್ರಿಯಲ್ಲಿ ತಪ್ಪಿಸಿಕೊಂಡನು.


ದಾವೀದನು ಅರಣ್ಯದಲ್ಲಿರುವ ಬಲವಾದ ಕೋಟೆಗಳಲ್ಲಿಯೂ, ಜೀಫ್ ಎಂಬ ಮರುಭೂಮಿಯ ಬೆಟ್ಟದಲ್ಲಿಯೂ ವಾಸವಾಗಿದ್ದನು. ಸೌಲನು ದಿನವೂ ಅವನನ್ನು ಹುಡುಕುತ್ತಿದ್ದನು. ಆದರೆ ದೇವರು ದಾವೀದನನ್ನು ಸೌಲನ ಕೈಯಲ್ಲಿ ಒಪ್ಪಿಸಿಕೊಡಲಿಲ್ಲ.


ಆಗ ಅರಾಮ್ಯರ ಅರಸನು, “ನಾನು ಅವನನ್ನು ಹಿಡಿಯುವ ಹಾಗೆ ನೀವು ಹೋಗಿ ಅವನು ಎಲ್ಲಿದ್ದಾನೋ ನೋಡಿರಿ,” ಎಂದನು. ಅವನು ದೋತಾನಿನಲ್ಲಿದ್ದಾನೆಂದು ಅವನಿಗೆ ತಿಳಿಸಿದರು.


ಅಪರಾಧದಿಂದ ಅವರು ತಪ್ಪಿಸಿಕೊಂಡಾರೋ? ದೇವರೇ ಜನರನ್ನು ಕಠಿಣವಾಗಿ ದಂಡಿಸಿರಿ.


ದುಷ್ಟನೇ, ನೀತಿವಂತನ ನಿವಾಸಕ್ಕೆ ಹೊಂಚು ಹಾಕಬೇಡ; ಅವನ ವಿಶ್ರಾಂತಿಯ ಸ್ಥಳವನ್ನು ಸೂರೆಮಾಡಬೇಡ.


ನಾನಾದರೋ ವಧೆಗೆ ಒಯ್ಯುವ ಸಾಧು ಕುರಿಯಂತೆ ಇದ್ದೆ. ಆದರೆ ನನ್ನ ವಿರುದ್ಧ ಸಂಚು ಹೂಡುತ್ತಿದ್ದಾರೆಂದು ನನಗೆ ತಿಳಿದಿರಲಿಲ್ಲ. “ಮರವನ್ನು ಫಲ ಸಹಿತ ನಾಶ ಪಡಿಸೋಣ, ಜೀವ ಲೋಕದಿಂದ ಇವನನ್ನು ನಿರ್ಮೂಲ ಮಾಡೋಣ, ಅವನ ಹೆಸರೇ ಇಲ್ಲದಂತಾಗಲಿ.”


ಆದರೂ ಯೆಹೋವ ದೇವರೇ, ಅವರು ನನ್ನನ್ನು ಸಾಯಿಸುವುದಕ್ಕೆ ನನಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೆಲ್ಲಾ ನೀವು ಬಲ್ಲಿರಿ. ಅವರ ಅಕ್ರಮವನ್ನು ಮನ್ನಿಸಬೇಡಿ. ಅವರ ಪಾಪಗಳನ್ನು ನಿನ್ನ ಸನ್ನಿಧಿಯೊಳಗಿಂದ ಅಳಿಸಿಬಿಡಬೇಡಿರಿ. ಅವರು ನಿಮ್ಮ ಮುಂದೆ ಎಡವಿಬೀಳಲಿ. ನಿಮ್ಮ ಕೋಪದ ಕಾಲದಲ್ಲಿ ಅವರಿಗೆ ತಕ್ಕದ್ದನ್ನು ಮಾಡಿರಿ.


ಆಗ ಆ ಮನುಷ್ಯರು, “ಈ ದಾನಿಯೇಲನ ಮೇಲೆ ತಪ್ಪು ಹೊರಿಸಬೇಕಾದರೆ ಇವನ ದೇವರ ಹಾಗೂ ಧರ್ಮದ ಮೂಲಕವೇ ಹೊರತು ಇನ್ನಾವುದರಲ್ಲೂ ನಮಗೆ ಅವಕಾಶ ದೊರಕದು,” ಎಂದುಕೊಂಡರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು