Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 34:19 - ಕನ್ನಡ ಸಮಕಾಲಿಕ ಅನುವಾದ

19 ನೀತಿವಂತನಿಗೆ ತೊಂದರೆಗಳು ಬಹಳವಾಗಿವೆ; ಆದರೆ ಅವೆಲ್ಲವುಗಳಿಂದ ಯೆಹೋವ ದೇವರು ಅವನನ್ನು ಬಿಡಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ, ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಸಜ್ಜನನಿಗೊದಗುವ ಸಂಕಟಗಳು ವಿಪರೀತ I ಪ್ರಭುವೆಲ್ಲವನು ನಿವಾರಿಸುವುದು ನಿಶ್ಚಿತ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ನೀತಿವಂತರಿಗೆ ಅನೇಕ ಕಷ್ಟಗಳು ಬಂದರೂ ಯೆಹೋವನು ಅವೆಲ್ಲವುಗಳಿಂದ ಬಿಡಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 34:19
24 ತಿಳಿವುಗಳ ಹೋಲಿಕೆ  

ನೀತಿವಂತರ ಕೂಗನ್ನು ಯೆಹೋವ ದೇವರು ಕೇಳಿ, ಅವರನ್ನು ಎಲ್ಲಾ ಇಕ್ಕಟ್ಟುಗಳೊಳಗಿಂದ ಬಿಡಿಸುತ್ತಾರೆ.


ಹಗುರವಾಗಿಯೂ ಕ್ಷಣಿಕವಾಗಿಯೂ ಇರುವ ನಮ್ಮ ಸಂಕಟವು ಅತ್ಯಂತ ಘನತೆಯುಳ್ಳ ನಿತ್ಯ ಮಹಿಮೆಯನ್ನು ನಮಗೆ ದೊರಕಿಸಿಕೊಡುವುದು.


“ನನ್ನಲ್ಲಿ ನಿಮಗೆ ಸಮಾಧಾನ ಇರುವಂತೆ ಇವುಗಳನ್ನು ನಾನು ನಿಮ್ಮೊಂದಿಗೆ ಮಾತನಾಡಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟವಿರುವದು. ಆದರೆ ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ,” ಎಂದರು.


ಬಡವನಾದ ನಾನು ಕರೆಯಲು ಯೆಹೋವ ದೇವರು ಕೇಳಿ ನನ್ನ ಎಲ್ಲಾ ಇಕ್ಕಟ್ಟುಗಳೊಳಗಿಂದ ನನ್ನನ್ನು ರಕ್ಷಿಸಿದರು.


ನಾನು ಯೆಹೋವ ದೇವರನ್ನು ಹುಡುಕಿದೆನು; ಆಗ ಅವರು ನನಗೆ ಉತ್ತರಕೊಟ್ಟು, ಸಕಲ ಭೀತಿಗಳಿಂದ ನನ್ನನ್ನು ಬಿಡಿಸಿದರು.


ಏಕೆಂದರೆ ನೀತಿವಂತನು ಏಳು ಸಾರಿ ಬಿದ್ದರೂ ಮತ್ತೆ ಏಳುತ್ತಾನೆ; ಆದರೆ ದುಷ್ಟನು ಕೇಡು ಬಂದಾಗ ಬೀಳುವನು.


ದೇವರು ಆರು ಇಕ್ಕಟ್ಟುಗಳಿಂದ ನಿನ್ನನ್ನು ತಪ್ಪಿಸುವರು; ಹೌದು, ಏಳರಲ್ಲಿಯೂ ಕೇಡು ನಿನ್ನನ್ನು ಮುಟ್ಟದು.


ಅನೇಕ ಕಠಿಣವಾದ ಇಕ್ಕಟ್ಟುಗಳನ್ನು ನೋಡ ಮಾಡಿದ ನನ್ನನ್ನು ನೀವು ತಿರುಗಿ ಬದುಕಿಸಿದ್ದೀರಿ. ಭೂಮಿಯ ಅಧೋಭಾಗದಿಂದ ಪುನಃ ನನ್ನನ್ನು ಮೇಲಕ್ಕೆ ಎತ್ತುವಿರಿ.


ಇದಲ್ಲದೆ ಯೆಹೋವ ದೇವರು ಯೋಬನ ಆರಂಭಕ್ಕಿಂತ ಅವನ ಅಂತ್ಯವನ್ನು ಅಧಿಕವಾಗಿ ಆಶೀರ್ವದಿಸಿದರು. ಯೋಬನಿಗೆ ಹದಿನಾಲ್ಕು ಸಾವಿರ ಕುರಿಗಳೂ ಆರು ಸಾವಿರ ಒಂಟೆಗಳೂ ಸಾವಿರ ಜೋಡಿ ಎತ್ತುಗಳೂ ಸಾವಿರ ಕತ್ತೆಗಳೂ ದೊರಕಿದವು.


ಅಲ್ಲಿದ್ದ ಶಿಷ್ಯರು ವಿಶ್ವಾಸದಲ್ಲಿ ಮುಂದುವರಿಯಲು, “ನಾವು ಅನೇಕ ಸಂಕಟಗಳಿಂದ ದೇವರ ರಾಜ್ಯದೊಳಗೆ ಸೇರಬೇಕು,” ಎಂದು ಹೇಳಿ ದೃಢಪಡಿಸಿದರು.


ಆದರೆ ನೊವೊಮಿಯ ಗಂಡನಾದ ಎಲೀಮೆಲೆಕನು ಸತ್ತುಹೋದನು. ಆಕೆಯೂ ಆಕೆಯ ಇಬ್ಬರು ಪುತ್ರರೂ ಉಳಿದರು.


ಆಗ ನೀತಿಯ ಯಜ್ಞಗಳಲ್ಲಿಯೂ ಸಂಪೂರ್ಣ ದಹನಬಲಿಗಳಲ್ಲಿಯೂ, ನೀವು ಸಂತೋಷಪಡುವಿರಿ; ಆಗ ನಿಮ್ಮ ಬಲಿಪೀಠದ ಮೇಲೆ ಹೋರಿಗಳನ್ನು ಅರ್ಪಿಸಲಾಗುವುದು.


ದೇವರು ಮುರಿದ ಹೃದಯದವರನ್ನು ಸ್ವಸ್ಥಮಾಡಿ, ಅವರ ಗಾಯಗಳನ್ನು ಕಟ್ಟುತ್ತಾರೆ.


ಯೆಹೋವ ದೇವರು ಸಿಕ್ಕುವ ಕಾಲದಲ್ಲಿ ಆತನನ್ನು ಹುಡುಕಿರಿ, ಆತನು ಸಮೀಪದಲ್ಲಿರುವಾಗ, ಆತನಿಗೆ ಬಿನ್ನಹ ಮಾಡಿರಿ.


ಏಕೆಂದರೆ ಉನ್ನತನೂ, ಮಹೋನ್ನತನೂ, ನಿತ್ಯವಾಗಿ ವಾಸಿಸುವವನೂ, ಪರಿಶುದ್ಧನು ಎಂಬ ಹೆಸರುಳ್ಳಾತನೂ ಹೇಳುವುದೇನೆಂದರೆ: “ಉನ್ನತವಾದ ಪರಿಶುದ್ಧ ಸ್ಥಳದಲ್ಲಿ ವಾಸಿಸುವ ನಾನಾದರೂ, ಪಶ್ಚಾತ್ತಾಪ ಪಡುವ ದೀನಮನದೊಂದಿಗೆ ನಾನಿದ್ದೇನೆ. ದೀನನ ಆತ್ಮವನ್ನು ಹಾಗು ಪಶ್ಚಾತ್ತಾಪ ಪಡುವ ಮನಸ್ಸನ್ನು ಉಜ್ಜೀವಗೊಳಿಸುವವನಾಗಿದ್ದೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು