Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 25:3 - ಕನ್ನಡ ಸಮಕಾಲಿಕ ಅನುವಾದ

3 ನಿಮ್ಮನ್ನು ನಿರೀಕ್ಷಿಸುವವರಲ್ಲಿ ಯಾರೂ ನಾಚಿಕೆಪಡದಿರಲಿ; ನಿಷ್ಕಾರಣವಾಗಿ ವಂಚನೆ ಮಾಡುವವರು ನಾಚಿಕೆಪಡಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ನಿಷ್ಕಾರಣ ದ್ರೋಹಿಗಳಿಗೆ ಅಪಮಾನವಾಗಬೇಕೇ ಹೊರತು, ನಿನ್ನನ್ನು ನಿರೀಕ್ಷಿಸಿದವರಿಗೆ ಎಂದಿಗೂ ಆಗಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಆಗಲಿ ಆಶಾಭಂಗ ನಿನ್ನೆದುರಾಳಿಗಳಿಗೆ I ಹಾಗಾಗದಿರಲಿ ನಿನ್ನ ನಿರೀಕ್ಷಿಸುವವರಿಗೆ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ವೃಥಾದ್ರೋಹಿಗಳಿಗೆ ಆಶಾಭಂಗವಾಗಬೇಕೇ ಹೊರತು ನಿನ್ನನ್ನು ನಿರೀಕ್ಷಿಸಿದವರಿಗೆ ಎಂದಿಗೂ ಆಗಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ನಿನ್ನಲ್ಲಿ ಭರವಸವಿಟ್ಟಿರುವವರು ನಿರಾಶರಾಗುವುದಿಲ್ಲ ದ್ರೋಹಿಗಳಾದರೋ ನಿರಾಶರಾಗುವರು. ಅವರಿಗೆ ಏನೂ ದೊರೆಯುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 25:3
32 ತಿಳಿವುಗಳ ಹೋಲಿಕೆ  

ಆತನನ್ನು ನಿರೀಕ್ಷಿಸುವವರಿಗೂ, ಆತನನ್ನು ಹುಡಕುವವರಿಗೂ ಯೆಹೋವ ದೇವರು ಒಳ್ಳೆಯವರಾಗಿದ್ದಾರೆ.


ಆದರೆ ಯೆಹೋವ ದೇವರನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು. ಅವರು ಹದ್ದುಗಳಂತೆ ರೆಕ್ಕೆಗಳಿಂದ ಬೆಟ್ಟವನ್ನು ಏರುವರು. ಅವರು ಓಡಿ ದಣಿಯರು. ನಡೆದು ಬಳಲರು.


ಅರಸರು ನಿನಗೆ ಸಾಕು ತಂದೆಗಳು. ಅವರ ರಾಣಿಯರು ನಿನಗೆ ದಾದಿಗಳಾಗುವರು. ಅವರು ಭೂಮಿಯ ಕಡೆಗೆ ತಮ್ಮ ಮುಖವನ್ನು ಬಾಗಿಸಿ, ಅಡ್ಡಬಿದ್ದು, ನಿನ್ನ ಪಾದದ ಧೂಳನ್ನು ನೆಕ್ಕುವರು. ಆಗ ನಾನೇ ಯೆಹೋವ ಎಂದು ನೀನು ತಿಳಿದುಕೊಳ್ಳುವೆ. ಏಕೆಂದರೆ ನನ್ನನ್ನು ನಿರೀಕ್ಷಿಸಿಕೊಂಡಿರುವವರು ನಾಚಿಕೆಗೆ ಈಡಾಗರು.”


ಆದರೆ ನಾನು ಯೆಹೋವ ದೇವರನ್ನು ಎದುರು ನೋಡುವೆನು. ನನ್ನ ರಕ್ಷಣೆಯ ದೇವರಿಗೋಸ್ಕರ ಕಾದುಕೊಳ್ಳುವೆನು. ನನ್ನ ದೇವರು ನನ್ನ ಕಡೆಗೆ ಕಿವಿಗೊಡುವರು.


ಹೌದು, ದೇವರಲ್ಲಿಯೇ ನನ್ನ ಪ್ರಾಣಕ್ಕೆ ಶಾಂತಿ. ನನ್ನ ನಿರೀಕ್ಷೆಯು ದೇವರಿಂದಲೇ.


ಯೆಹೋವ ದೇವರಿಗಾಗಿ ಕಾದಿರು, ಧೈರ್ಯವಾಗಿರು; ಅವರು ನಿನ್ನ ಹೃದಯವನ್ನು ದೃಢಪಡಿಸುವರು; ಯೆಹೋವ ದೇವರಿಗಾಗಿ ಕಾದಿರು.


ಆದರೆ ನಾವು ಇನ್ನು ಕಾಣದಿರುವಂಥದ್ದಕ್ಕಾಗಿ ನಿರೀಕ್ಷಿಸುವುದಾದರೆ ಅದಕ್ಕಾಗಿ ತಾಳ್ಮೆಯಿಂದ ಕಾದುಕೊಂಡಿರುತ್ತೇವೆ.


ಯೆಹೋವ ದೇವರನ್ನು ನಿರೀಕ್ಷಿಸು; ಅವರ ಮಾರ್ಗದಲ್ಲಿ ನಡೆ; ಆಗ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವಂತೆ ನಿನ್ನನ್ನು ಅವರು ಉನ್ನತಕ್ಕೆ ತರುವರು; ದುಷ್ಟರ ವಿನಾಶವನ್ನು ನೀವು ಕಾಣುವಿರಿ.


ನಮ್ಮ ಪ್ರಾಣವು ಯೆಹೋವ ದೇವರಿಗಾಗಿ ಕಾದಿದೆ; ನಮ್ಮ ಸಹಾಯವೂ ನಮ್ಮ ಗುರಾಣಿಯೂ ಅವರೇ.


ಇಗೋ, ದಾಸರ ಕಣ್ಣುಗಳು ತಮ್ಮ ಯಜಮಾನರ ಕೈಯನ್ನು ನೋಡುವ ಪ್ರಕಾರ, ಮತ್ತು ದಾಸಿಯ ಕಣ್ಣುಗಳು ತನ್ನ ಯಜಮಾನಿಯ ಕೈಯನ್ನೂ ನೋಡುವ ಪ್ರಕಾರ, ನಮ್ಮ ಕಣ್ಣುಗಳು ನಮ್ಮ ಯೆಹೋವ ದೇವರು, ನಮ್ಮನ್ನು ಕರುಣಿಸುವವರೆಗೆ ನಿರೀಕ್ಷೆಯಿಂದ ನೋಡುತ್ತಿರುವುದು.


ಆ ದಿನದಲ್ಲಿ ಜನರು, “ಇಗೋ, ಇವರೇ ನಮ್ಮ ದೇವರು, ನಾವು ಇವರನ್ನೇ ನಂಬಿದ್ದೇವೆ. ಇವರೇ ನಮ್ಮನ್ನು ರಕ್ಷಿಸುವರು. ಇವರೇ ಯೆಹೋವ ದೇವರು, ನಾವು ಇವರನ್ನೇ ನಂಬಿದ್ದೇವೆ, ನಾವು ಇವರ ರಕ್ಷಣೆಯಲ್ಲಿ ಹರ್ಷಿಸಿ ಸಂತೋಷಪಡುವೆವು,” ಎಂದು ಹೇಳುವರು.


ಸೇನಾಧೀಶ್ವರ ಯೆಹೋವ ದೇವರೇ, ನಿಮ್ಮನ್ನು ನಂಬಿದವರಿಗೆ ನನ್ನಿಂದ ನಿರಾಶೆಯಾಗದಿರಲಿ; ಇಸ್ರಾಯೇಲರ ದೇವರೇ, ನಿಮ್ನನ್ನು ಹುಡುಕುವವರು ನನ್ನಿಂದ ಅಪಮಾನಕ್ಕೆ ಗುರಿಯಾಗದಿರಲಿ.


ಆದರೆ ಯೆಹೋವ ದೇವರು ಭಯಂಕರವಾದ ಪರಾಕ್ರಮಶಾಲಿಯ ಹಾಗೆ ನನ್ನ ಸಂಗಡ ಇದ್ದಾರೆ. ಆದ್ದರಿಂದ ನನ್ನನ್ನು ಹಿಂಸಿಸುವವರು ಎಡವುವರು, ಗೆಲ್ಲುವುದಿಲ್ಲ. ಅನುಕೂಲವಾಗದೆ ಇದ್ದುದರಿಂದ ಅವರು ಬಹಳವಾಗಿ ನಾಚಿಕೆಪಡುವರು. ಅವರ ಅವಮಾನವು ಎಂದಿಗೂ ಮರೆಯದ ಅವಮಾನವಾಗಿರುವುದು.


ನನ್ನ ಕೇಡಿನಲ್ಲಿ ಸಂತೋಷಪಡುವವರು ನಾಚಿಕೊಂಡು ಒಟ್ಟಿಗೆ ಕಳವಳಗೊಳ್ಳಲಿ; ನನಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿಕೊಳ್ಳುವವರು ನಾಚಿಕೆಯನ್ನೂ ಅವಮಾನವನ್ನೂ ಹೊಂದಲಿ.


ಇಲ್ಲಿ ಆತನ ಶತ್ರುಗಳಿಗೆ ನಾಚಿಕೆಯ ವಸ್ತ್ರವನ್ನು ಹೊದಿಸುವೆನು; ಆದರೆ ಆತನ ತೆರೆಯ ಮೇಲೆ ಕಿರೀಟವು ಶೋಭಿಸುವುದು.”


ನನ್ನನ್ನು ಆರೋಪಿಸುವವರು, ನಾಚಿಕೆಪಟ್ಟು ನಾಶವಾಗಲಿ. ನನ್ನ ಕೇಡಿಗಾಗಿ ಹುಡುಕುವವರನ್ನು ನಿಂದಾಪಮಾನಗಳು ಕವಿಯಲಿ.


ಯೆಹೋವ ದೇವರೇ, ನಾನು ನಾಚಿಕೆಪಡದಂತೆ ಮಾಡಿರಿ; ನಾನು ನಿಮಗೆ ಮೊರೆಯಿಟ್ಟಿದ್ದೇನೆ; ದುಷ್ಟರು ನಾಚಿಕೆಪಡಲಿ; ಅವರು ಸಮಾಧಿ ಸೇರಲಿ.


ದೇವರಲ್ಲಿಯೇ ನನ್ನ ಪ್ರಾಣಕ್ಕೆ ಶಾಂತಿ, ನನ್ನ ರಕ್ಷಣೆಯು ದೇವರಿಂದಲೇ.


ನನ್ನ ಶತ್ರುಗಳೆಲ್ಲರೂ ನಾಚಿಕೆಪಟ್ಟು ತತ್ತರಿಸುವರು; ಕ್ಷಣಮಾತ್ರದಲ್ಲಿ ಅವರು ಅವಮಾನಗೊಂಡು ಹಿಂದಿರುಗಿ ಹೋಗುವರು.


ಆದರೆ, ‘ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಮಾಡಿದರು,’ ಎಂದು ಅವರ ನಿಯಮದಲ್ಲಿ ಬರೆದಿರುವ ಮಾತು ನೆರವೇರುವಂತೆ ಹೀಗಾಯಿತು.


ಅಹಂಕಾರಿಗಳು ಕಾರಣವಿಲ್ಲದೆ ನನಗೆ ಕೇಡು ಮಾಡಿದ್ದರಿಂದ ನಾಚಿಕೆಪಡಲಿ; ಆದರೆ ನಾನು ನಿಮ್ಮ ಸೂತ್ರಗಳನ್ನು ಧ್ಯಾನಿಸುತ್ತಿರುವೆನು.


ದ್ವೇಷ ಮಾತುಗಳಿಂದ ನನ್ನನ್ನು ಸುತ್ತಿಕೊಂಡಿದ್ದಾರೆ, ನನಗೆ ವಿರೋಧವಾಗಿ ಕಾರಣವಿಲ್ಲದೆ ಯುದ್ಧ ಮಾಡುತ್ತಿದ್ದಾರೆ.


ಕಾರಣವಿಲ್ಲದೆ ನನ್ನನ್ನು ದ್ವೇಷಿಸುವವರು ನನ್ನ ತಲೆಗೂದಲುಗಳಿಗಿಂತ ಹೆಚ್ಚಾಗಿದ್ದಾರೆ. ನನ್ನನ್ನು ನಾಶಮಾಡ ಬಯಸುವವರೂ ಕಾರಣವಿಲ್ಲದೆ ನನಗೆ ಶತ್ರುಗಳಾಗಿದ್ದಾರೆ. ನಾನು ಅಪಹರಿಸದಿದ್ದರೂ ದಂಡ ಕೊಡಬೇಕಾಯಿತು.


“ಜೆಬುಲೂನನು ಸಮುದ್ರದ ಕರಾವಳಿಯಲ್ಲಿ ವಾಸಿಸುವನು, ಅವನಿಗೆ ಹಡಗುಗಳು ಸೇರುವ ರೇವೂ ಇರುವುದು. ಅವನ ಮೇರೆಯು ಸೀದೋನಿಗೆ ಮುಟ್ಟುವುದು.


ಹೀಗೆಯೇ ಸೌಲನು ಯೆಹೋವ ದೇವರಿಗೆ ವಿರೋಧವಾಗಿ ಮಾಡಿದ ತನ್ನ ಅಪರಾಧದ ನಿಮಿತ್ತ ಸತ್ತುಹೋದನು. ಅವನು ಯೆಹೋವ ದೇವರ ವಾಕ್ಯವನ್ನು ಕೈಗೊಳ್ಳದೆ, ಅದಕ್ಕೆ ವಿರೋಧವಾಗಿ ನಡೆದು, ಯೆಹೋವ ದೇವರನ್ನು ವಿಚಾರಿಸದೆ, ಯಕ್ಷಿಣಿಗಾರರನ್ನು ವಿಚಾರಿಸಿದ್ದರಿಂದ,


ಆದರೆ ನಾನು ಹುಳದಂಥವನೇ ಹೊರತು ಮನುಷ್ಯನಲ್ಲ; ನಾನು ಮನುಷ್ಯರಿಂದ ನಿಂದೆ ಹಾಗು ತಿರಸ್ಕಾರಕ್ಕೆ ಗುರಿಯಾಗಿದ್ದೇನೆ.


ನೀತಿವಂತರ ಮೇಲೆ ಗರ್ವದಿಂದಲೂ ತಿರಸ್ಕಾರದಿಂದಲೂ, ಕಠಿಣವಾಗಿಯೂ ಮಾತನಾಡುವ ಸುಳ್ಳಿನ ತುಟಿಗಳು ಮೌನವಾಗಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು