Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 18:35 - ಕನ್ನಡ ಸಮಕಾಲಿಕ ಅನುವಾದ

35 ನಿಮ್ಮ ರಕ್ಷಣೆಯ ಸಹಾಯವನ್ನು ನನಗೆ ಗುರಾಣಿಯನ್ನಾಗಿ ಮಾಡಿದ್ದೀರಿ. ನಿಮ್ಮ ಬಲಗೈ ನನಗೆ ಆಧಾರವಾಗಿದೆ; ನಿಮ್ಮ ಸಹಾಯವು ನನ್ನನ್ನು ಘನವಂತನನ್ನಾಗಿ ಮಾಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ನೀನೇ ನನಗೋಸ್ಕರ ಗುರಾಣಿಯನ್ನು ಹಿಡಿದು ರಕ್ಷಿಸಿದ್ದೀ. ನಿನ್ನ ಬಲಗೈ ನನಗೆ ಆಧಾರ; ನಿನ್ನ ಕೃಪಾಕಟಾಕ್ಷವು ನನಗೆ ದೊಡ್ಡಸ್ತಿಕೆಯನ್ನು ಉಂಟುಮಾಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

35 ನನ್ನ ಪರ ನೀನೇ ಗುರಾಣಿ ಹಿಡಿದು ರಕ್ಷಿಸಿದೆ I ನಿನ್ನ ಬಲಗೈ ನನಗೆ ಆಧಾರವಾಗಿದೆ I ನಿನ್ನ ಕೃಪಾವರ ತಂದಿತು ನನಗೆ ದೊಡ್ಡಸ್ತಿಕೆ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ನೀನೇ ನನಗೋಸ್ಕರ ಗುರಾಣಿಯನ್ನು ಹಿಡಿದು ರಕ್ಷಿಸಿದ್ದೀ. ನಿನ್ನ ಬಲಗೈ ನನಗೆ ಆಧಾರ; ನಿನ್ನ ಕೃಪಾಕಟಾಕ್ಷವು ನನಗೆ ದೊಡ್ಡಸ್ತಿಕೆಯನ್ನು ಉಂಟುಮಾಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ದೇವರೇ, ನಿನ್ನ ವಿಜಯದ ಗುರಾಣಿಯನ್ನು ನೀನು ನನಗೆ ಕೊಟ್ಟಿರುವೆ. ನಿನ್ನ ಬಲಗೈ ನನಗೆ ಆಧಾರ ನೀಡುತ್ತದೆ. ನೀನು ನನ್ನನ್ನು ಪದೇಪದೇ ಬಲಗೊಳಿಸಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 18:35
12 ತಿಳಿವುಗಳ ಹೋಲಿಕೆ  

ನಿಮ್ಮ ರಕ್ಷಣೆಯ ಸಹಾಯವನ್ನು ನನಗೆ ಗುರಾಣಿಯನ್ನಾಗಿ ಮಾಡಿದ್ದೀರಿ, ನಿಮ್ಮ ಸಹಾಯವು ನನ್ನನ್ನು ಘನವಂತನನ್ನಾಗಿ ಮಾಡಿದೆ.


ಯೆಹೋವ ದೇವರು ನನ್ನ ಬಲವೂ, ನನ್ನ ಗುರಾಣಿಯೂ ಆಗಿದ್ದಾರೆ; ನನ್ನ ಹೃದಯವು ಅವರಲ್ಲಿ ಭರವಸೆ ಇಟ್ಟದ್ದರಿಂದ ನಾನು ಸಹಾಯ ಹೊಂದಿದೆನು; ನನ್ನ ಹೃದಯವು ಬಹಳವಾಗಿ ಉತ್ಸಾಹಪಡುವುದು; ನನ್ನ ಕೀರ್ತನೆಯಿಂದ ಅವರನ್ನು ಕೊಂಡಾಡುವೆನು.


ನಾನು ನಿಮ್ಮ ಬಳಿಯಲ್ಲಿ ಮುಖಾಮುಖಿಯಾಗಿ ಮಾತನಾಡುವಾಗ, “ಮೃದುವಾಗಿಯೂ” ನಿಮ್ಮಿಂದ ದೂರವಿರುವಾಗ “ಕಠಿಣನಾಗಿಯೂ ವರ್ತಿಸುವವನು” ಎಂತಲೂ ನೀವು ತಿಳಿದಿದ್ದೀರಿ. ಅಂಥ ಪೌಲನೆಂಬ, ನಾನು ಕ್ರಿಸ್ತ ಯೇಸುವಿನ ದೀನತ್ವದಿಂದಲೂ ಸಾತ್ವಿಕತೆಯಿಂದಲೂ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ:


ಅವರು ತಮ್ಮ ಮಂದೆಯನ್ನು ಕುರುಬನಂತೆ ಮೇಯಿಸುವರು. ಕುರಿಮರಿಗಳನ್ನು ಕೂಡಿಸಿ, ಅವುಗಳನ್ನು ತಮ್ಮ ಎದೆಗಪ್ಪಿಕೊಳ್ಳುವರು, ಎಳೆಯ ಮರಿಗಳನ್ನು ಮೆಲ್ಲಗೆ ನಡಿಸುವರು.


ಇಸ್ರಾಯೇಲರೇ, ನೀವು ಎಷ್ಟೋ ಧನ್ಯರು. ಯೆಹೋವ ದೇವರಿಂದ ರಕ್ಷಣೆಹೊಂದಿದ ಜನಾಂಗವೇ ನಿಮ್ಮಂತೆ ಯಾರಿದ್ದಾರೆ? ದೇವರೇ ನಿಮಗೆ ಗುರಾಣಿ ಹಾಗೂ ಸಹಾಯಕ. ದೇವರು ನಿಮ್ಮ ಮಹಿಮಾ ಖಡ್ಗ. ನಿಮ್ಮ ವೈರಿಗಳು ನಿಮ್ಮ ಮುಂದೆ ಮುದುರಿಕೊಳ್ಳುವರು ಮತ್ತು ಅವರ ಉನ್ನತ ಸ್ಥಳಗಳನ್ನು ನೀವು ತುಳಿದುಬಿಡುವಿರಿ.”


ನಿಮ್ಮ ಒಡಂಬಡಿಕೆಯ ಪ್ರೀತಿಯ ಅದ್ಭುತವನ್ನು ನನಗೆ ತೋರಿಸಿರಿ. ತಮ್ಮ ವೈರಿಗಳಿಂದ ಓಡಿಬಂದು ನಿಮ್ಮಲ್ಲಿ ಆಶ್ರಯ ಪಡೆಯುವವರಿಗೆ ಭುಜಬಲದಿಂದ ರಕ್ಷಿಸುವವರು ನೀವೇ.


ನಿನ್ನ ಅಧಿಕಾರಸ್ಥರೆಲ್ಲ ಒಟ್ಟಿಗೆ ಓಡಿದರೂ ಬಿಲ್ಲುಗಾರರಿಲ್ಲದೆಯೇ ಸೆರೆಯಾಗಿದ್ದಾರೆ. ದೂರದಿಂದ ಓಡಿಬಂದರೂ ನಿನ್ನ ಜನರು ಶತ್ರುವಿನ ಕೈಗೆ ಸಿಕ್ಕಿಬಿದ್ದಿದ್ದಾರೆ.


ಯೆಹೋವ ದೇವರೇ, ನೀವು ನೀತಿವಂತರನ್ನು ನಿಶ್ಚಯವಾಗಿ ಆಶೀರ್ವದಿಸಿದ್ದೀರಿ; ನೀವು ಅವರನ್ನು ನಿಮ್ಮ ಮೆಚ್ಚುಗೆಯಿಂದ ಗುರಾಣಿಯಂತೆಯೇ ಆವರಿಸಿಕೊಳ್ಳಿರಿ.


ನನ್ನ ಬಲವಾಗಿರುವ ಯೆಹೋವ ದೇವರಿಗೆ ಸ್ತೋತ್ರವಾಗಲಿ. ದೇವರು ನನ್ನ ಕೈಗಳಿಗೆ ಕಾಳಗವನ್ನು, ನನ್ನ ಬೆರಳುಗಳಿಗೆ ಯುದ್ಧವಿದ್ಯೆಯನ್ನು ಕಲಿಸಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು