Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 148:14 - ಕನ್ನಡ ಸಮಕಾಲಿಕ ಅನುವಾದ

14 ದೇವರು ತಮ್ಮ ಜನರ ಬಲವನ್ನು ಮೇಲಕ್ಕೆತ್ತಿದ್ದಾರೆ. ದೇವರ ಇಸ್ರಾಯೇಲರೆಲ್ಲರೂ, ಭಕ್ತರೆಲ್ಲರೂ, ದೇವರಿಗೆ ಸಮೀಪವಾದ ಜನರೂ ದೇವರನ್ನು ಕೊಂಡಾಡಿರಿ. ಯೆಹೋವ ದೇವರನ್ನು ಸ್ತುತಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಆತನು ತನ್ನ ಪ್ರಜೆಗೋಸ್ಕರ ಘನದ ಕೊಂಬನ್ನು ಎಬ್ಬಿಸಿದ್ದಾನೆ. ಆದುದರಿಂದ ಆತನ ಎಲ್ಲಾ ಭಕ್ತರು, ಆತನ ಸಮೀಪ ಪ್ರಜೆಗಳಾದ ಇಸ್ರಾಯೇಲರು ಹಿಗ್ಗುತ್ತಾರೆ. ಯೆಹೋವನಿಗೆ ಸ್ತೋತ್ರ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಕೋಡು ಮೂಡಿಸಿಹನು ಪ್ರಭು ತನ್ನ ಪ್ರಜೆಗೆ I ಖ್ಯಾತಿ ತಂದಿಹನು ತನ್ನ ಭಕ್ತಾದಿಗಳಿಗೆ I ತನ್ನ ಆಪ್ತಜನರಾದ ಇಸ್ರಯೇಲರಿಗೆ I ಅಲ್ಲೆಲೂಯ! II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಆತನು ತನ್ನ ಪ್ರಜೆಗೋಸ್ಕರ [ಘನದ] ಕೊಂಬನ್ನು ಎಬ್ಬಿಸಿದ್ದಾನೆ. ಆದದರಿಂದ ಆತನ ಎಲ್ಲಾ ಭಕ್ತರೂ ಆತನ ಸಮೀಪ ಪ್ರಜೆಗಳಾದ ಇಸ್ರಾಯೇಲ್ಯರೂ ಹಿಗ್ಗುತ್ತಾರೆ. ಯಾಹುವಿಗೆ ಸ್ತೋತ್ರ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಆತನು ತನ್ನ ಜನರನ್ನು ಬಲಿಷ್ಠರನ್ನಾಗಿ ಮಾಡುತ್ತಾನೆ. ಆತನ ಭಕ್ತರನ್ನು ಜನರು ಹೊಗಳುವರು. ಜನರು ಇಸ್ರೇಲರನ್ನು ಹೊಗಳುವರು. ಆತನು ಹೋರಾಡುತ್ತಿರುವುದು ಅವರಿಗಾಗಿಯೇ. ಯೆಹೋವನಿಗೆ ಸ್ತೋತ್ರವಾಗಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 148:14
19 ತಿಳಿವುಗಳ ಹೋಲಿಕೆ  

ದುಷ್ಟರ ಕೊಂಬುಗಳನ್ನೆಲ್ಲಾ ಕಡಿದುಹೋಗುವುದು. ಆದರೆ ನೀತಿವಂತನ ಕೊಂಬುಗಳು ಎತ್ತಲಾಗುವುದು.


ಇದಲ್ಲದೆ ಕ್ರಿಸ್ತ ಯೇಸುವು ಬಂದು ದೂರವಾಗಿದ್ದ ನಿಮಗೂ ಸಮೀಪವಾಗಿದ್ದ ನಮಗೂ ಸಮಾಧಾನವನ್ನು ಸಾರಿದರು.


ನಾವು ನಮ್ಮ ದೇವರಾದ ಯೆಹೋವ ದೇವರಿಗೆ ಮೊರೆಯಿಡುವಾಗೆಲ್ಲಾ ಅವರು ಸಮೀಪವಾಗಿಯೇ ಇದ್ದಾರಲ್ಲಾ. ಬೇರೆ ಎಷ್ಟು ದೊಡ್ಡ ಜನಾಂಗಕ್ಕಾದರೂ ಯಾವ ದೇವರು ಹೀಗೆ ಸಮೀಪವಾಗಿರುವರು?


ಹನ್ನಳು ಪ್ರಾರ್ಥಿಸಿ ಹೇಳಿದ್ದೇನೆಂದರೆ, “ನನ್ನ ಹೃದಯವು ಯೆಹೋವ ದೇವರಲ್ಲಿ ಸಂತೋಷಿಸಿತು. ನನ್ನ ಕೊಂಬು ಯೆಹೋವ ದೇವರಲ್ಲಿ ಉನ್ನತವಾಯಿತು. ನನ್ನ ಶತ್ರುಗಳ ಮುಂದೆ ನನ್ನ ಬಾಯಿ ಹೆಚ್ಚಳಪಟ್ಟಿತು. ಏಕೆಂದರೆ ನಾನು ನಿಮ್ಮ ರಕ್ಷಣೆಯಲ್ಲಿ ಹರ್ಷಿಸುತ್ತೇನೆ.


ಆದರೆ ಕತ್ತಲೆಯೊಳಗಿದ್ದ ನಿಮ್ಮನ್ನು ಕರೆದು ತಮ್ಮ ಆಶ್ಚರ್ಯಕರವಾದ ಬೆಳಕಿಗೆ ಸೇರಿಸಿದ ದೇವರನ್ನು ಕೊಂಡಾಡುವವರಾಗುವಂತೆ ನೀವು ಆಯ್ದುಕೊಂಡ ಜನರೂ ರಾಜತನದ ಯಾಜಕರೂ ಪರಿಶುದ್ಧ ಜನಾಂಗವೂ ದೇವರ ಜನರೂ ಆಗಿದ್ದೀರಿ.


ನೀವು ನೋಡಿದ ಆ ಮಹಾ ಭಯಂಕರವಾದ ಕಾರ್ಯಗಳನ್ನು ನಿಮಗೆ ಮಾಡಿದ ಅವರೇ ನಿಮ್ಮ ಸ್ತೋತ್ರವು. ಅವರೇ ನಿಮ್ಮ ದೇವರು.


ಅವರು ಬಡವರಿಗೆ ದಾನಗಳನ್ನು ಧಾರಾಳವಾಗಿ ಹಂಚಿಡುವರು; ಅವರ ನೀತಿಯು ಸದಾಕಾಲವೂ ನೆಲೆಯಾಗಿ ಇರುವುದು; ಅವನ ಬಲವು ಘನದಿಂದ ಉನ್ನತವಾಗುವುದು.


ಮೊದಲು ಕ್ರಿಸ್ತ ಯೇಸುವಿಗೆ ದೂರವಾಗಿದ್ದ ನೀವು ಈಗ ಕ್ರಿಸ್ತನ ರಕ್ತದ ಮೂಲಕ ಹತ್ತಿರವಾಗಿದ್ದೀರಿ.


ಬರೆದಿರುವ ನ್ಯಾಯವಿಧಿಯು ಅವರಲ್ಲಿ ನೆರವೇರಲಿ, ದೇವರ ಭಕ್ತರೆಲ್ಲರಿಗೆ ಈ ಗೌರವವಿರುತ್ತದೆ. ಯೆಹೋವ ದೇವರನ್ನು ಸ್ತುತಿಸಿರಿ.


ಹೀಗಿರಲಾಗಿ, ನೀವು ಇನ್ನು ಮೇಲೆ ಪರಕೀಯರೂ ಪರದೇಶದವರೂ ಆಗಿರದೆ ದೇವಜನರೊಂದಿಗೆ ಜೊತೆ ನಾಗರಿಕರೂ ದೇವರ ಮನೆಯವರೂ ಆಗಿದ್ದೀರಿ.


ಅದು ಯೆಹೂದ್ಯರಲ್ಲದವರಿಗೆ ಪ್ರಕಟಣೆಯ ಬೆಳಕೂ, ನಿಮ್ಮ ಪ್ರಜೆಯಾದ ಇಸ್ರಾಯೇಲರ ಮಹಿಮೆಯೂ ಆಗಿದೆ.”


ಅಧಿಪತಿಗಳನ್ನು ಅವರ ಸಿಂಹಾಸನಗಳಿಂದ ಕೆಳಗೆ ದಬ್ಬಿ, ದೀನರನ್ನು ಮೇಲಕ್ಕೆ ಎತ್ತಿದ್ದಾರೆ.


ಯೆಹೋವ ದೇವರೇ, ನನ್ನನ್ನು ಸ್ವಸ್ಥಮಾಡಿ, ಆಗ ಸ್ವಸ್ಥವಾಗುವೆನು. ನನ್ನನ್ನು ರಕ್ಷಿಸು, ಆಗ ರಕ್ಷಿತನಾಗುವೆನು. ಏಕೆಂದರೆ, ನೀವೇ ನನಗೆ ಸ್ತುತ್ಯರು.


ಯೆಹೋವ ದೇವರೇ, ನಿಮ್ಮ ನಂಬಿಗಸ್ತರು ನಿಮ್ಮನ್ನು ಸ್ತುತಿಸುವರು.


ಆದರೆ ನೀವು ನನ್ನ ಬಲವನ್ನು ಕಾಡುಕೋಣದ ಕೊಂಬಿನ ಹಾಗೆ ಬಲಪಡಿಸುವಿರಿ. ನಾನು ನೂತನ ತೈಲದಿಂದ ಅಭಿಷಿಕ್ತನಾಗುವೆನು.


ಏಕೆಂದರೆ ಅವರ ಬಲವೂ ಮಹಿಮೆಯೂ ನೀವೇ. ನಿಮ್ಮ ಮೆಚ್ಚುಗೆಯಿಂದ ನಮ್ಮ ಬಲವೆಂಬ ಕೊಂಬು ಉನ್ನತವಾಗುವುದು.


ನಮ್ಮ ಗುರಾಣಿಯು ಯೆಹೋವ ದೇವರದೇ. ನಮ್ಮ ಅರಸರು ಇಸ್ರಾಯೇಲರ ಪರಿಶುದ್ಧರಾಗಿರುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು