Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 141:6 - ಕನ್ನಡ ಸಮಕಾಲಿಕ ಅನುವಾದ

6 ಅವರ ನ್ಯಾಯಾಧಿಪತಿಗಳು ಉನ್ನತ ಸ್ಥಳದಿಂದ ಕೆಳಬಿದ್ದಾಗ ಅವರು ನನ್ನ ಮಾತು ಕೇಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಅವರ ಪ್ರಮುಖರು ಕಡುಬಂಡೆಯಿಂದ ಕೆಳಕ್ಕೆ ದೊಬ್ಬಲ್ಪಟ್ಟ ಮೇಲೆ, ಜನರು ನನ್ನ ಮಾತುಗಳಿಗೆ ಕಿವಿಗೊಡುವರು, ಅವು ಅವರಿಗೆ ಹಿತವಾಗಿರುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ದುರುಳರ ಒಡೆಯರು ಶಿಖರದಿಂದ ಬಿದ್ದಾಗ ಕೆಳಕೆ I ನನ್ನ ಮಾತು ಯಥಾರ್ಥವೆಂದು ಜನ ಕಿವಿಗೊಡುವರೆನಗೆ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಅವರ ಪ್ರಮುಖರು ಕಡುಬಂಡೆಯಿಂದ ಕೆಳಕ್ಕೆ ದೊಬ್ಬಲ್ಪಟ್ಟ ಮೇಲೆ ಜನರು ನನ್ನ ಮಾತುಗಳಿಗೆ ಕಿವಿಗೊಡುವರು; ಅವು ಅವರಿಗೆ ಚೆನ್ನಾಗಿರುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಅವರ ಅಧಿಪತಿಗಳು ದೊಬ್ಬಲ್ಪಡಲಿ. ನಾನು ಹೇಳಿದ್ದು ಸತ್ಯವೆಂದು ಆಗ ಜನರು ತಿಳಿದುಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 141:6
12 ತಿಳಿವುಗಳ ಹೋಲಿಕೆ  

ಬದುಕಿದ್ದ ಬೇರೆ ಹತ್ತು ಸಾವಿರ ಮಂದಿಯನ್ನು ಯೆಹೂದ್ಯರು ಸೆರೆಯಾಗಿ ಒಯ್ದು, ಬಂಡೆಯ ಶಿಖರಕ್ಕೆ ಅವರನ್ನು ಕರೆದುಕೊಂಡು ಹೋಗಿ, ಅಲ್ಲಿಂದ ಅವರನ್ನು ದಬ್ಬಿ ಸಾಯಿಸಿದರು.


ನೀವು ಎಲ್ಲಾ ಮನುಷ್ಯರಿಗಿಂತ ಅತಿ ಸುಂದರರಾಗಿದ್ದೀರಿ. ನಿಮ್ಮ ತುಟಿಗಳಲ್ಲಿ ಕೃಪೆಯ ಅಭಿಷೇಕವಿದೆ; ಆದ್ದರಿಂದ ದೇವರು ಎಂದೆಂದಿಗೂ ನಿಮ್ಮನ್ನು ಆಶೀರ್ವದಿಸಿದ್ದಾರೆ.


ದಾವೀದನು ಇಸ್ರಾಯೇಲಿನ ಸಮಸ್ತ ಜನರಿಗೆ, “ನಿಮಗೆ ಒಳ್ಳೆಯದಾಗಿ ಕಂಡರೆ, ನಮ್ಮ ದೇವರಾದ ಯೆಹೋವ ದೇವರ ಚಿತ್ತವಾದರೆ, ನಮ್ಮ ಬಳಿಯಲ್ಲಿ ಕೂಡಿಬರುವ ಹಾಗೆ ಇಸ್ರಾಯೇಲಿನ ದೇಶವೆಲ್ಲದರಲ್ಲಿ ಉಳಿದಿರುವ ನಮ್ಮ ಸಹೋದರರನ್ನೂ, ತಮ್ಮ ಪಟ್ಟಣಗಳಲ್ಲಿ ಮತ್ತು ಉಪನಗರಗಳಲ್ಲಿ ಇರುವ ಯಾಜಕರನ್ನೂ, ಲೇವಿಯರನ್ನೂ ಎಲ್ಲಾ ಕಡೆಯಿಂದ ಕರೆಯಕಳುಹಿಸಿ,


ಯುದ್ಧಕ್ಕೆ ಸಿದ್ಧರಾದ ಈ ಸಮಸ್ತ ಸೈನಿಕರು ದಾವೀದನನ್ನು ಸಮಸ್ತ ಇಸ್ರಾಯೇಲರ ಮೇಲೆ ಅರಸನಾಗಿ ಮಾಡಲು ಹೆಬ್ರೋನಿಗೆ ಪೂರ್ಣಮನಸ್ಸಿನಿಂದ ಬಂದರು. ಇದಲ್ಲದೆ ಇಸ್ರಾಯೇಲಿನಲ್ಲಿದ್ದ ಮಿಕ್ಕಾದವರೆಲ್ಲರು ದಾವೀದನನ್ನು ಅರಸನಾಗಿ ಮಾಡಲು ಒಂದೇ ಮನಸ್ಸುಳ್ಳವರಾಗಿದ್ದರು.


ದಾವೀದನ ಕಡೆಯ ಮಾತುಗಳು: “ಇಷಯನ ಮಗ ದಾವೀದನ ನುಡಿಗಳಿವು: ಉನ್ನತವಾಗಿ ಸಾಗಿದ ಪುರುಷನು ಯಾಕೋಬನ ದೇವರಿಂದ ಅಭಿಷಿಕ್ತನಾದವನು, ಇಸ್ರಾಯೇಲಿನ ರಮ್ಯವಾದ ಕೀರ್ತನೆಗಾರನು ನುಡಿದದ್ದೇನೆಂದರೆ:


ಎಲ್ಲರೂ ಅವರನ್ನು ಹೊಗಳಿದರು. ಯೇಸುವಿನ ಬಾಯಿಂದ ಬಂದ ಕೃಪೆಯುಳ್ಳ ಮಾತುಗಳಿಗೆ ಆಶ್ಚರ್ಯಪಟ್ಟು, “ಈತನು ಯೋಸೇಫನ ಮಗನಲ್ಲವೇ?” ಎಂದು ಮಾತನಾಡಿಕೊಂಡರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು