Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 129:5 - ಕನ್ನಡ ಸಮಕಾಲಿಕ ಅನುವಾದ

5 ಚೀಯೋನನ್ನು ದ್ವೇಷಿಸುವವರೆಲ್ಲರು ನಾಚಿಕೆಪಟ್ಟು ಹಿಂದಿರುಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಚೀಯೋನನ್ನು ದ್ವೇಷಿಸುವವರೆಲ್ಲರೂ ಅವಮಾನದಿಂದ ಹಿಂದಿರುಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಸಿಯೋನನ್ನು ದ್ವೇಷಿಸುವ ಜನ I ಹಿಂದಿರುಗಲಿ ಪಡೆದು ಅಪಮಾನ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಚೀಯೋನನ್ನು ದ್ವೇಷಿಸುವವರೆಲ್ಲರು ಅವಮಾನದಿಂದ ಹಿಂದಿರುಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಚೀಯೋನನ್ನು ದ್ವೇಷಿಸಿದ ಜನರು ಸೋತುಹೋದರು. ಅವರು ಹೋರಾಟವನ್ನು ನಿಲ್ಲಿಸಿ ಓಡಿಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 129:5
17 ತಿಳಿವುಗಳ ಹೋಲಿಕೆ  

“ಈ ಪಟ್ಟಣವನ್ನು ನನಗೋಸ್ಕರವೂ ನನ್ನ ಸೇವಕನಾದ ದಾವೀದನಿಗೋಸ್ಕರವೂ ಕಾಪಾಡಿ ಅದನ್ನು ರಕ್ಷಿಸುವೆನು.”


ನನ್ನನ್ನು ಆರೋಪಿಸುವವರು, ನಾಚಿಕೆಪಟ್ಟು ನಾಶವಾಗಲಿ. ನನ್ನ ಕೇಡಿಗಾಗಿ ಹುಡುಕುವವರನ್ನು ನಿಂದಾಪಮಾನಗಳು ಕವಿಯಲಿ.


ಆ ದಿವಸದಲ್ಲಿ, ಅವಳ ವಿರೋಧವಾಗಿ ಭೂಮಿಯ ಜನಾಂಗಗಳೆಲ್ಲಾ ಒಟ್ಟುಗೂಡಿಕೊಳ್ಳುವಾಗ, ನಾನು ಯೆರೂಸಲೇಮನ್ನು ಎಲ್ಲಾ ಜನರಿಗೆ ಚಲಿಸಲಾಗದ ಕಲ್ಲಾಗಿ ಮಾಡುತ್ತೇನೆ. ಅದನ್ನು ತೆಗೆದುಹಾಕಲು ಪ್ರಯತ್ನಿಸುವವರೆಲ್ಲರು ತಮ್ಮನ್ನು ತಾವೇ ಗಾಯಗೊಳಿಸಿಕೊಳ್ಳುತ್ತಾರೆ.


ಆದರೆ ಈಗ ಅನೇಕ ಜನಾಂಗಗಳು ನಿನಗೆ ವಿರೋಧವಾಗಿ ಕೂಡಿಬಂದಿವೆ. ಅವರು, “ಯೆರೂಸಲೇಮನ್ನು ಕೆಡಿಸೋಣ. ಚೀಯೋನಿನ ನಾಶನವನ್ನು ಕಣ್ಣಾರೆ ನೋಡೋಣ,” ಎಂದು ಹೇಳುತ್ತಾರೆ.


ಆದರೆ ಕರ್ತದೇವರು ಚೀಯೋನ್ ಪರ್ವತದ ಮೇಲೆಯೂ ಯೆರೂಸಲೇಮಿನ ಮೇಲೆಯೂ ತಮ್ಮ ಕಾರ್ಯಗಳನ್ನು ನೆರವೇರಿಸಿದ ಮೇಲೆ, “ಅಸ್ಸೀರಿಯದ ಅರಸನ ಹೃದಯದ ದೊಡ್ಡಸ್ತಿಕೆಯ ಫಲವನ್ನು, ಅವನ ಉನ್ನತವಾದ ದೃಷ್ಟಿಯ ಘನತೆಯನ್ನು ನಾನು ದಂಡಿಸುವೆನು.”


ಆಗ ಹಾಮಾನನು ತನ್ನ ಹೆಂಡತಿಯಾದ ಜೆರೆಷಳಿಗೂ ತನ್ನ ಸಮಸ್ತ ಸ್ನೇಹಿತರಿಗೂ ತನಗೆ ಆದದ್ದನ್ನೆಲ್ಲಾ ವಿವರವಾಗಿ ಹೇಳಿದನು. ಆಗ ಅವನ ಸಲಹೆಗಾರರೂ ಹೆಂಡತಿಯಾದ ಜೆರೆಷಳೂ ಅವನಿಗೆ, “ಯಾವನ ಮುಂದೆ ನಿನ್ನ ಬೀಳುವಿಕೆ ಪ್ರಾರಂಭವಾಯಿತೋ, ಆ ಮೊರ್ದೆಕೈ ಯೆಹೂದ್ಯನಾಗಿದ್ದರೆ ನೀನು ಅವನನ್ನು ಜಯಿಸಲಾರೆ. ನಿಶ್ಚಯವಾಗಿ, ನೀನು ಅವನಿಂದ ನಾಶವಾಗುವಿ,” ಎಂದರು.


ಯಾವನಾದರೂ ಕರ್ತನನ್ನು ಪ್ರೀತಿಸದಿದ್ದರೆ, ಅವನು ಶಾಪಗ್ರಸ್ತನಾಗಲಿ! ಕರ್ತನೇ, ಬಾ!


“ಆ ದಿವಸದಲ್ಲಿ ನಾನು ಯೆಹೂದದ ಕುಲಪತಿಗಳನ್ನು ಕಟ್ಟಿಗೆಯ ಮಧ್ಯದಲ್ಲಿರುವ ಬೆಂಕಿಯ ಒಲೆಯ ಹಾಗೆಯೂ, ಸಿವುಡುಗಳಲ್ಲಿರುವ ಬೆಂಕಿಯ ಪಂಜಿನ ಹಾಗೆಯೂ ಮಾಡುವೆನು. ಅವರು ಬಲಗಡೆಯಲ್ಲಿಯೂ, ಎಡಗಡೆಯಲ್ಲಿಯೂ ಸುತ್ತಲಿರುವ ಎಲ್ಲಾ ಜನಗಳನ್ನೂ ನುಂಗಿಬಿಡುವರು. ಆದರೆ ಯೆರೂಸಲೇಮಿನವರು ತಿರುಗಿ ತನ್ನ ಸ್ಥಳದಲ್ಲಿ ಯೆರೂಸಲೇಮಿನಲ್ಲಿಯೇ ಸುರಕ್ಷಿತವಾಗಿ ವಾಸಿಸುವರು.


ಅವನನ್ನು ಕುರಿತು ಯೆಹೋವ ದೇವರು ಹೇಳುವುದೇನೆಂದರೆ: “ಕನ್ನಿಕೆಯಾದ ಚೀಯೋನ್ ಪುತ್ರಿಯು ನಿನ್ನನ್ನು ತಿರಸ್ಕರಿಸಿ, ನಿನಗೆ ಅಪಹಾಸ್ಯ ಮಾಡುತ್ತಾಳೆ. ಯೆರೂಸಲೇಮಿನ ಪುತ್ರಿಯು ನೀನು ಓಡಿ ಹೋಗುವಾಗ ತನ್ನ ತಲೆಯಾಡಿಸುತ್ತಾಳೆ.


ಯೆರೂಸಲೇಮಿನ ಸಮಾಧಾನಕ್ಕಾಗಿ ಪ್ರಾರ್ಥನೆಮಾಡಿರಿ. “ಯೆರೂಸಲೇಮೇ, ನಿನ್ನನ್ನು ಪ್ರೀತಿಸುವವರಿಗೆ ಅಭಿವೃದ್ಧಿಯಾಗಲಿ.


ಹೀಗೆ ಯೆಹೂದ್ಯರು ತಮ್ಮ ಶತ್ರುಗಳೆಲ್ಲರನ್ನು ಸೋಲಿಸಿ, ಖಡ್ಗದಿಂದ ಸಂಹರಿಸಿದರು. ತಮ್ಮನ್ನು ಹಗೆಮಾಡುತ್ತಿದ್ದವರಿಗೆ ತಮ್ಮ ಇಷ್ಟ ಬಂದ ಹಾಗೆ ಮಾಡಿದರು.


ಈ ಸುದ್ದಿ ಸುತ್ತಮುತ್ತಲಿನ ನಮ್ಮ ವಿರೋಧಿಗಳಾದ ಜನಾಂಗಗಳಿಗೆ ಮುಟ್ಟಿತು. ಅವರು ಭಯಭೀತರಾದರು. ಸೊಕ್ಕು ಮುರಿದವರಾಗಿ ಹಾಗೇ ಕುಗ್ಗಿಹೋದರು. ಈ ಕಾರ್ಯ ನಮ್ಮ ದೇವರಿಂದಲೇ ಪೂರ್ಣಗೊಂಡಿತು ಎಂದು ಅವರಿಗೆ ಮನದಟ್ಟಾಯಿತು.


“ಆಹಾ! ಆಹಾ!” ಎಂದು ನನ್ನನ್ನು ಹಾಸ್ಯಮಾಡುವವರು ತಮ್ಮ ನಾಚಿಕೆಯಿಂದಲೇ ವಿಸ್ಮಯಗೊಳ್ಳಲಿ.


ಹಸಿದ ಮನುಷ್ಯನು ಕನಸು ಕಂಡು ಇಗೋ, ಉಣ್ಣುತ್ತೇನೆ ಎಂದುಕೊಂಡಂತಾಗುವುದು. ಆದರೆ ಅವನು ಎಚ್ಚೆತ್ತಾಗ ಪ್ರಾಣ ತುಂಬಿದ ಹಾಗೆಯೂ, ಬಾಯಾರಿದವನು ಸ್ವಪ್ನದಲ್ಲಿ ಇಗೋ, ಕುಡಿಯುತ್ತೇನೆ ಎಂದುಕೊಂಡಂತಾಗುವುದು. ಆದರೆ ಅವನು ಎಚ್ಚರವಾದಾಗ ಬಲಹೀನನಾಗಿದ್ದು, ಪ್ರಾಣ ಆಶಿಸುವ ಹಾಗೆಯೇ ಚೀಯೋನ್ ಪರ್ವತಕ್ಕೆ ವಿರೋಧವಾಗಿ ಯುದ್ಧಮಾಡುವ ಎಲ್ಲಾ ಜನಾಂಗಗಳ ಸಮೂಹವಿರುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು