Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 12:4 - ಕನ್ನಡ ಸಮಕಾಲಿಕ ಅನುವಾದ

4 ಅವರು ಹೀಗೆನ್ನುತ್ತಾರೆ, “ನಾವು ನಮ್ಮ ನಾಲಿಗೆಯಿಂದ ಜಯಿಸುವೆವು; ನಮ್ಮ ತುಟಿಗಳೇ ನಮಗೆ ಸಂರಕ್ಷಣೆ ನಮ್ಮ ಮೇಲೆ ಒಡೆಯನು ಯಾರು?”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಅವರು, “ನಮ್ಮ ಮಾತುಗಳಿಗೆ ತಡೆಯಿಲ್ಲವಲ್ಲಾ; ನಮ್ಮ ತುಟಿಗಳು ನಮ್ಮವೇ; ನಮಗೆ ಒಡೆಯನು ಯಾರು?” ಎಂದು ಹೇಳಿಕೊಳ್ಳುತ್ತಾರಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 “ನಮ್ಮ ತುಟಿಗೆ ಹತೋಟಿ ಬೇಕಿಲ್ಲ; ನಾಲಗೆಯೇ ಗೆಲುವಿನ ಮೂಲ I ನಮಗೊಡೆಯನ ಅವಶ್ಯವಿಲ್ಲ” ಎಂದವರಾಡುವುದು ಸಲ್ಲ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಅವರು - ನಮ್ಮ ಮಾತುಗಳಿಗೆ ತಡೆಯಿಲ್ಲವಲ್ಲಾ; ನಮ್ಮ ತುಟಿಗಳು ನಮ್ಮವೇ; ನಮಗೆ ಒಡೆಯನು ಯಾವನು ಎಂದು ಹೇಳಿಕೊಳ್ಳುತ್ತಾರಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 “ನಾವು ಪ್ರಮುಖರಾಗಲು ನಮ್ಮ ಸುಳ್ಳುಗಳೇ ನಮಗೆ ಆಧಾರ. ನಮ್ಮ ನಾಲಿಗೆಗಳು ಇರುವಾಗ ನಮಗೆ ಒಡೆಯರಾಗಲು ಯಾರಿಗೆ ಸಾಧ್ಯ?” ಎಂದು ಅವರು ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 12:4
10 ತಿಳಿವುಗಳ ಹೋಲಿಕೆ  

ದೇವರೆಣಿಸಿಕೊಳ್ಳುವ ಎಲ್ಲವನ್ನೂ ಆರಾಧಿಸಲಾಗುವ ಪ್ರತಿಯೊಂದನ್ನೂ ಅವನು ವಿರೋಧಿಸಿ ನಿಲ್ಲುವನು. ದೇವರಿಗೆ ಸಂಬಂಧಿಸಿದ ಇವೆಲ್ಲವುಗಳ ಮೇಲೆ ತನ್ನನ್ನು ಹೆಚ್ಚಿಸಿಕೊಳ್ಳುವನು. ತಾನೇ ದೇವರೆಂದು ಘೋಷಿಸಿ ದೇವರ ಆಲಯದಲ್ಲಿ ಕೂತುಕೊಳ್ಳುವನು.


ಆಗ ಫರೋಹನು, “ನಾನು ಆತನ ಮಾತಿಗೆ ವಿಧೇಯನಾಗಿ ಇಸ್ರಾಯೇಲರನ್ನು ಕಳುಹಿಸಿಬಿಡುವಂತೆ ಆ ಯೆಹೋವ ಯಾರು? ಆ ಯೆಹೋವ ದೇವರನ್ನು ನಾನರಿಯೆನು. ಇಸ್ರಾಯೇಲರನ್ನೂ ಕಳುಹಿಸುವುದಿಲ್ಲ,” ಎಂದನು.


ಆಗ ಜನರು, “ಬನ್ನಿರಿ, ಯೆರೆಮೀಯನಿಗೆ ವಿರೋಧವಾಗಿ ಯುಕ್ತಿಯನ್ನು ಕಲ್ಪಿಸೋಣ. ಯಾಜಕನಿಂದ ನಿಯಮ ಬೋಧನೆಯೂ, ಜ್ಞಾನಿಯಿಂದ ಆಲೋಚನೆಯೂ, ಪ್ರವಾದಿಯಿಂದ ವಾಕ್ಯವೂ ನಿಂತುಹೋಗುವುದಿಲ್ಲ. ಬನ್ನಿರಿ, ನಾಲಿಗೆಯಿಂದ ಅವನನ್ನು ಆಕ್ರಮಿಸೋಣ. ಅವನ ಮಾತುಗಳಲ್ಲಿ ಒಂದನ್ನಾದರೂ ಲಕ್ಷಿಸದೆ ಇರೋಣ,” ಎಂದು ಹೇಳಿದರು.


ಈಗ ನೀವು ಸಿದ್ಧವಾಗಿದ್ದು ತುತೂರಿ, ಕೊಳಲು, ತಂಬೂರಿ, ವೀಣೆ, ಕಿನ್ನರಿ, ನಾದಸ್ವರ ಎಲ್ಲಾ ವಿಧವಾದ ವಾದ್ಯಗಳ ಶಬ್ದವನ್ನು ಕೇಳುವ ಸಮಯದಲ್ಲಿ ನಾನು ಮಾಡಿಸಿದ ಪ್ರತಿಮೆಯನ್ನು ಆರಾಧಿಸಿದರೆ ಸರಿ, ಆರಾಧಿಸದಿದ್ದರೆ ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಕುಲುಮೆಯ ಮಧ್ಯದಲ್ಲಿ ಹಾಕಲಾಗುವಿರಿ. ನನ್ನ ಕೈಯಿಂದ ನಿಮ್ಮನ್ನು ಬಿಡಿಸುವ ಆ ದೇವರು ಯಾರು?” ಎಂದು ಹೇಳಿದನು.


“ಇಸ್ರಾಯೇಲರೇ, ನೀವು ಯೆಹೋವ ದೇವರ ವಾಕ್ಯವನ್ನು ಗಮನಿಸಿರಿ: “ನಾನು ಇಸ್ರಾಯೇಲಿನ ಮರುಭೂಮಿಯಾದೆನೋ? ಗಾಡಾಂಧಕಾರದ ದೇಶವಾದೆನೋ? ನನ್ನ ಜನರು, ‘ನಾವು ಮನಬಂದಂತೆ ನಡೆದುಕೊಳ್ಳುತ್ತೇವೆ, ನಾವು ಇನ್ನು ಮೇಲೆ ನಿನ್ನ ಬಳಿಗೆ ಎಂದೂ ಬರುವುದಿಲ್ಲ,’ ಎಂದು ಹೇಳುವುದು ಹೇಗೆ?


ನೀವು ಇದನ್ನು ತಿಂದ ದಿನದಲ್ಲಿ ನಿಮ್ಮ ಕಣ್ಣುಗಳು ತೆರೆಯುವುವು, ನೀವು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ಅರಿತವರಾಗಿ ದೇವರ ಹಾಗೆ ಇರುವಿರಿ. ಇದು ದೇವರಿಗೆ ತಿಳಿದಿದೆ,” ಎಂದು ಹೇಳಿತು.


ಯೆಹೋವ ದೇವರು ಬಡವನಿಗೆ ವ್ಯಾಜ್ಯವನ್ನು, ಬಲಹೀನರಿಗೆ ನ್ಯಾಯವನ್ನೂ ತೀರಿಸುವರೆಂದೂ ನಾನು ಬಲ್ಲೆನು.


ನೀತಿವಂತರ ಬಾಯಲ್ಲಿ ಜ್ಞಾನವು ಫಲಿಸುತ್ತದೆ; ಆದರೆ ಮೂರ್ಖನ ನಾಲಿಗೆಯು ಕತ್ತರಿಸಲಾಗುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು