Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 118:13 - ಕನ್ನಡ ಸಮಕಾಲಿಕ ಅನುವಾದ

13 ನಾನು ಬೀಳುವ ಹಾಗೆ ವೈರಿಯು ನನ್ನನ್ನು ನೂಕಿದನು; ಆದರೆ ಯೆಹೋವ ದೇವರು ನನಗೆ ಸಹಾಯ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ವೈರಿಯೇ, ನನ್ನನ್ನು ಬೀಳುವಂತೆ ಮಾಡಿದಿ; ಆದರೆ ಯೆಹೋವನು ನನಗೆ ಸಹಾಯ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ನನ್ನನು ತಳ್ಳಿ ಬೀಳಿಸ ನೋಡಿದರು ನೆಲಕೆ I ಆದರೆ ಪ್ರಭು ನೆರವು ನೀಡಿದನು ಎನಗೆ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 [ವೈರಿಯೇ,] ನನ್ನನ್ನು ಬೀಳ ನೂಕಿದಿ; ಆದರೆ ಯೆಹೋವನು ನನಗೆ ಸಹಾಯ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಶತ್ರುಗಳು ನನ್ನ ಮೇಲೆ ಆಕ್ರಮಣ ಮಾಡಿ ಸಂಪೂರ್ಣವಾಗಿ ನಾಶಮಾಡಲಿದ್ದರು. ಆದರೆ ಯೆಹೋವನು ನನಗೆ ಸಹಾಯ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 118:13
11 ತಿಳಿವುಗಳ ಹೋಲಿಕೆ  

ಯೆಹೋವ ದೇವರೇ, ದುಷ್ಟರ ಕೈಗಳಿಂದ ನನ್ನನ್ನು ತಪ್ಪಿಸಿ ಕಾಯಿರಿ. ಹಿಂಸಕರಿಂದ ನನ್ನನ್ನು ರಕ್ಷಿಸು, ಅವರು ನನ್ನ ಮಾರ್ಗಗಳನ್ನು ಕೆಡಿಸುವುದಕ್ಕೆ ಉದ್ದೇಶಿಸುತ್ತಾರೆ.


ನನಗಾಗಿ ನಿಮ್ಮ ಉಪಕಾರದ ಗುರುತೊಂದನ್ನು ತೋರಿಸಿರಿ. ಆಗ ನನ್ನ ವೈರಿಗಳು ಅದನ್ನು ಕಂಡು ನಾಚಿಕೆಪಡುವರು. ಏಕೆಂದರೆ ಯೆಹೋವ ದೇವರೇ, ನೀವು ನನಗೆ ಸಹಾಯಮಾಡಿ ನನ್ನನ್ನು ಆದರಿಸಿದ್ದೀರಿ.


ನನ್ನ ಶತ್ರುವೇ, ನನ್ನ ಮೇಲೆ ಸಂತೋಷ ಪಡಬೇಡ, ನಾನು ಬಿದ್ದಿದ್ದರೂ ತಿರುಗಿ ಏಳುವೆನು. ನಾನು ಕತ್ತಲೆಯಲ್ಲಿ ಕುಳಿತುಕೊಂಡರೂ ಯೆಹೋವ ದೇವರೇ ನನಗೆ ಬೆಳಕಾಗಿರುವರು.


ಈಗ ನಿನ್ನನ್ನು ಹಿಂದಟ್ಟಿ ನಿನ್ನ ಪ್ರಾಣವನ್ನು ಹುಡುಕುವುದಕ್ಕೆ ಒಬ್ಬನು ಎದ್ದಿದ್ದಾನೆ. ಆದರೂ ನನ್ನ ಒಡೆಯನ ಪ್ರಾಣವು ದೇವರಾದ ಯೆಹೋವ ದೇವರ ಬಳಿಯ ಜೀವದ ಕಟ್ಟಿನಲ್ಲಿ ಕಟ್ಟಿರುವುದು. ನಿನ್ನ ಶತ್ರುಗಳ ಪ್ರಾಣವನ್ನು ಕವಣೆಯ ಮಧ್ಯದಲ್ಲಿಟ್ಟು ಎಸೆದ ಹಾಗೆಯೇ ದೇವರು ಎಸೆದುಬಿಡುವರು.


ಮಕ್ಕಳು ರಕ್ತಮಾಂಸಧಾರಿಗಳು ಆಗಿರುವುದರಿಂದ ಯೇಸು ತಮ್ಮ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ, ಸೈತಾನನನ್ನು ನಾಶಮಾಡುವುದಕ್ಕೂ


ದಾವೀದನು ಪ್ರಮಾಣಮಾಡಿ, “ನಿನ್ನ ಕಣ್ಣು ಮುಂದೆ ನನಗೆ ದಯೆ ದೊರಕಿತೆಂದು ನಿನ್ನ ತಂದೆಯು ನಿಶ್ಚಲವಾಗಿ ಬಲ್ಲನು. ಆದಕಾರಣ ಅವನು ಯೋನಾತಾನನು ವ್ಯಥೆಪಡದ ಹಾಗೆ, ‘ಅವನು ಇದನ್ನು ತಿಳಿಯಬಾರದು,’ ಎಂದು ಹೇಳುತ್ತಾನೆ. ನಿಶ್ಚಯವಾಗಿ ಯೆಹೋವ ದೇವರಾಣೆ, ನನ್ನ ಪ್ರಾಣದಾಣೆ, ನನಗೂ ಮರಣಕ್ಕೂ ಒಂದು ಹೆಜ್ಜೆ ಮಾತ್ರ ದೂರ ಇದೆ,” ಎಂದನು.


“ನನ್ನ ಯೌವನದಿಂದ ವೈರಿಗಳು ನನ್ನ ಮೇಲೆ ದಬ್ಬಾಳಿಕೆ ಮಾಡಿದರು; ಆದರೆ ಅವರು ನನ್ನ ಮೇಲೆ ವಿಜಯ ಸಾಧಿಸಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು