Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಓಬದ್ಯ 1:5 - ಕನ್ನಡ ಸಮಕಾಲಿಕ ಅನುವಾದ

5 “ನಿನ್ನಲ್ಲಿ ಕಳ್ಳರಾಗಲಿ, ರಾತ್ರಿಯಲ್ಲಿ ಪಂಜುಗಳ್ಳರಾಗಲಿ ಬಂದರೆ ಅವರು ತಮಗೆ ಬೇಕಾದಷ್ಟನ್ನು ಮಾತ್ರ ದೋಚಿಕೊಂಡು ಹೋಗುತ್ತಿದ್ದರಲ್ಲವೆ? ದ್ರಾಕ್ಷಿ ಕೀಳುವವರು ನಿಮ್ಮ ಬಳಿಗೆ ಬಂದರೆ ಸ್ವಲ್ಪ ದ್ರಾಕ್ಷಿಯನ್ನು ಬಿಡುವುದಿಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಕಳ್ಳರು ನಿನ್ನಲ್ಲಿ ನುಗ್ಗಿದರೆ, ರಾತ್ರಿ ವೇಳೆಯಲ್ಲಿ ಪಂಜುಗಳ್ಳರು ನಿನ್ನ ಮೇಲೆ ಬಿದ್ದರೆ, ಬೇಕಾದಷ್ಟನ್ನು ಮಾತ್ರ ದೋಚಿಕೊಂಡು ಹೋಗುವರಲ್ಲವೇ? ಆಹಾ! ನೀನು ಎಷ್ಟು ಭಂಗಪಟ್ಟಿದ್ದೀ! ದ್ರಾಕ್ಷಿಯ ಹಣ್ಣನ್ನು ಕೀಳುವವರು ನಿನ್ನ ಕಡೆಗೆ ಬಂದರೆ, ಹಕ್ಕಲನ್ನು ಉಳಿಸುವುದಿಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ನಿನ್ನಲ್ಲಿಗೆ ಕಳ್ಳರಾಗಲಿ, ರಾತ್ರಿಯಲ್ಲಿ ಪಂಜುಗಳ್ಳರಾಗಲಿ ಬಂದರೆ ಅವರು ತಮಗೆ ಬೇಕಾದಷ್ಟನ್ನು ಮಾತ್ರ ದೋಚಿಕೊಂಡು ಹೋಗುತ್ತಿದ್ದರಲ್ಲವೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಕಳ್ಳರು ನಿನ್ನಲ್ಲಿ ನುಗ್ಗಿದರೆ, ರಾತ್ರಿವೇಳೆಯಲ್ಲಿ ಪಂಜುಗಳ್ಳರು ನಿನ್ನ ಮೇಲೆ ಬಿದ್ದರೆ ಬೇಕಾದಷ್ಟು ಮಾತ್ರ ದೋಚಿಕೊಂಡು ಹೋಗುವರಲ್ಲವೆ. (ಆಹಾ, ನೀನು ಎಷ್ಟೋ ಭಂಗಪಟ್ಟಿದ್ದೀ!) ದ್ರಾಕ್ಷೆಯ ಹಣ್ಣನ್ನು ಕೀಳುವವರು ನಿನ್ನ ಕಡೆಗೆ ಬಂದರೆ ಹಕ್ಕಲನ್ನು ಉಳಿಸುವದಿಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ನೀನು ಸಂಪೂರ್ಣವಾಗಿ ನಾಶವಾಗುವೆ. ಕಳ್ಳರು ನಿನ್ನ ಬಳಿಗೆ ಬರುವರು, ದರೋಡೆಗಾರರು ರಾತ್ರಿವೇಳೆ ಬರುವರು. ಅವರು ತಮಗೆ ಇಷ್ಟಬಂದದ್ದನ್ನೆಲ್ಲಾ ದೋಚುವರು. ನಿನ್ನ ತೋಟದಲ್ಲಿ ಕೆಲಸಗಾರರು ದ್ರಾಕ್ಷೆಯನ್ನು ಕೊಯ್ಯುವಾಗ ಕೆಲವೊಂದನ್ನು ಬಿಟ್ಟುಬಿಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಓಬದ್ಯ 1:5
13 ತಿಳಿವುಗಳ ಹೋಲಿಕೆ  

ದ್ರಾಕ್ಷಿ ಕೀಳುವವರು ನಿಮ್ಮ ಬಳಿಗೆ ಬಂದರೆ ಸ್ವಲ್ಪ ದ್ರಾಕ್ಷಿಯನ್ನು ಬಿಡುವುದಿಲ್ಲವೇ? ಕಳ್ಳರು ರಾತ್ರಿ ವೇಳೆಯಲ್ಲಿ ನುಗ್ಗಿದರೆ ತಮಗೆ ಸಾಕಾಗುವವರೆಗೂ ಕದಿಯುವುದಿಲ್ಲವೇ?


ದ್ರಾಕ್ಷಿತೋಟದ ಬೆಳೆಯನ್ನು ಕೂಡಿಸಿಕೊಳ್ಳುವಾಗ ಹಕ್ಕಲಾಯಬಾರದು. ಪರದೇಶಿ, ತಂದೆತಾಯಿ ಇಲ್ಲದ ವ್ಯಕ್ತಿ, ವಿಧವೆ ಇಂಥವರಿಗಾಗಿ ಅದನ್ನು ಬಿಟ್ಟುಬಿಡು.


ಆದರೂ ಎಣ್ಣೆಮರವನ್ನು ಅಲ್ಲಾಡಿಸಿದ ಬಳಿಕ ಮೇಲಿನ ಕೊಂಬೆಯ ತುಟ್ಟತುದಿಯಲ್ಲಿ ಎರಡು ಮೂರು ಕಾಯಿಗಳಿರುವುವು. ಅದರ ಫಲವತ್ತಾದ ಆ ಮರದ ರೆಂಬೆಗಳಲ್ಲಿ ನಾಲ್ಕೈದು ಕಾಯಿಗಳು ಉಳಿದಿರುವುವು. ಅದೇ ರೀತಿಯಾಗಿ, ಇಸ್ರಾಯೇಲರಲ್ಲಿ ಕೆಲವರು ಮಾತ್ರ ಉಳಿದಿರುವರು, ಎಂದು ಇಸ್ರಾಯೇಲಿನ ಯೆಹೋವ ದೇವರು ಹೇಳುತ್ತಾರೆ.


“ನಿಶ್ಚಿಂತೆಯಾಗಿ ವಾಸಿಸಿದಂಥ ಉಲ್ಲಾಸದ ಪಟ್ಟಣ ನಾನೇ ಹೊರತು ಮತ್ತೊಂದಿಲ್ಲಾ,” ಎಂದು ತನ್ನೊಳಗೆ ಎಂದುಕೊಂಡಂಥ ಸುಭದ್ರ ನಿನೆವೆ ಪಟ್ಟಣವು ಇದೇ. ಅದು ಎಷ್ಟೋ ಹಾಳಾಯಿತು; ಮೃಗಗಳು ಮಲಗಿಕೊಳ್ಳುವ ಸ್ಥಳವಾಯಿತು. ಅದರಲ್ಲಿ ಹಾದುಹೋಗುವವರೆಲ್ಲರೂ ನಿಂದಿಸಿ ಅಪಹಾಸ್ಯ ಮಾಡುವರು.


ಎಂತಹ ಸಂಕಟ ನನ್ನದು! ನಾನು ಬೇಸಿಗೆ ಕಾಲದ ಹಣ್ಣುಗಳನ್ನು ಕೂಡಿಸುವವರ ಹಾಗೆಯೂ ದ್ರಾಕ್ಷಿ ಸುಗ್ಗಿಯಲ್ಲಿ ಹಕ್ಕಲು ಆರಿಸುವವರ ಹಾಗೆಯೂ ಇದ್ದೇನೆ. ತಿನ್ನುವುದಕ್ಕೆ ಗೊಂಚಲೇ ಇಲ್ಲ. ನನಗೆ ಪ್ರಿಯವಾದ ಮೊದಲು ಮಾಗಿದ ಅಂಜೂರದ ಹಣ್ಣುಗಳೂ ಇಲ್ಲ.


ಜನಭರಿತವಾಗಿದ್ದ ನಗರಿಯು ಹೇಗೆ ಬರಿದಾಗಿ ಹೋಗಿದೆ! ಜನಾಂಗಗಳಲ್ಲಿ ಶ್ರೇಷ್ಠಳಾದವಳೂ, ಈಗ ಹೇಗೆ ವಿಧವೆಯಾಗಿದ್ದಾಳೆ! ಸಂಸ್ಥಾನಗಳಲ್ಲಿ ರಾಜಕುಮಾರಿಯಾಗಿದ್ದವಳೂ, ಹೇಗೆ ಈಗ ದಾಸಿಯಂತಾಗಿದ್ದಾಳೆ!


ಇಗೋ, ಲೋಕವನ್ನೆಲ್ಲಾ ಹೊಡೆದ ಸುತ್ತಿಗೆಯು ಮುರಿದು ತುಂಡುತುಂಡಾಯಿತು! ಹೇಗೆ ಬಾಬೆಲ್ ರಾಜ್ಯವು ಜನಾಂಗಗಳ ನಡುವೆ ಹಾಳಾಯಿತಲ್ಲಾ!


ಓಲಿವ್ ಮರವನ್ನು ಬಡಿದ ಮೇಲೆಯೂ, ದ್ರಾಕ್ಷಿ ಸುಗ್ಗಿಯು ತೀರಿದ ನಂತರವು ನಿಲ್ಲುವ ಉಳಿದ ಕಾಯಿಗಳ ಹಾಗೆ ದೇಶದಲ್ಲಿರುವುದು.


ಮುಂಜಾನೆಯ ನಕ್ಷತ್ರವೇ, ಉದಯ ಪುತ್ರನೇ, ಆಕಾಶದಿಂದ ನೀನು ಹೇಗೆ ಬಿದ್ದೆ? ಜನಾಂಗಗಳನ್ನು ಬಲಹೀನ ಮಾಡಿದ ನೀನು ಭೂಮಿಗೆ ಹೇಗೆ ಬಿದ್ದೆ?


“ಇಸ್ರಾಯೇಲೇ, ನಿನ್ನ ಮಹಿಮೆಯು ನಿನ್ನ ಬೆಟ್ಟಗಳ ಮೇಲೆ ಕೊಲೆಯಾಗಿ ಬಿದ್ದಿದೆ. ಪರಾಕ್ರಮಶಾಲಿಗಳು ಹೇಗೆ ಬಿದ್ದರು!


ಆಕೆಯ ಯಾತನೆಯ ದೆಸೆಯಿಂದ ಹೆದರಿ, ದೂರದಲ್ಲಿ ನಿಂತು: “ ‘ಅಯ್ಯೋ! ಅಯ್ಯೋ! ಮಹಾನಗರಿಯೇ, ಬಲಿಷ್ಠನಗರಿ ಬಾಬಿಲೋನೇ! ಒಂದೇ ತಾಸಿನಲ್ಲಿ ನಿನಗೆ ತೀರ್ಪಾಯಿತಲ್ಲಾ?’ ಎಂದು ಶೋಕಿಸುವರು.


ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಇಸ್ರಾಯೇಲಿನ ಶೇಷವನ್ನು ದ್ರಾಕ್ಷಿ ಗಿಡದ ಹಾಗೆ ಪೂರ್ಣವಾಗಿ ಹಕ್ಕಲಾಯುವರು; ದ್ರಾಕ್ಷಿ ಕೂಡಿಸುವವನ ಹಾಗೆ ನಿನ್ನ ಕೈಯನ್ನು ರೆಂಬೆಗಳಲ್ಲಿ ಹಿಂದಕ್ಕೆ ತಿರುಗಿಸು.”


ಸರ್ವರು ಸಂಹಾರದಿಂದ ಏಸಾವನ ಬೆಟ್ಟದೊಳಗಿಂದ ನಾಶವಾಗುವ ಹಾಗೆ ತೇಮಾನೇ, ನಿನ್ನ ಪರಾಕ್ರಮಶಾಲಿಗಳು ಗಾಬರಿಪಡುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು