ಓಬದ್ಯ 1:3 - ಕನ್ನಡ ಸಮಕಾಲಿಕ ಅನುವಾದ3 ಬಂಡೆಯ ಬಿರುಕುಗಳಲ್ಲಿ ವಾಸಮಾಡುವವನೇ, ಉನ್ನತದಲ್ಲಿ ನಿವಾಸಮಾಡಿಕೊಂಡವನೇ, ‘ಯಾರು ನನ್ನನ್ನು ನೆಲಕ್ಕೆ ಇಳಿಸಬಲ್ಲವರು?’ ಎಂದು ತನ್ನ ಹೃದಯದಲ್ಲಿ ಅನ್ನುವವನೇ, ನಿನ್ನ ಹೃದಯದ ಗರ್ವವು ನಿನ್ನನ್ನು ಮೋಸಗೊಳಿಸಿದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಉನ್ನತ ಸ್ಥಾನದಲ್ಲಿ ಬಂಡೆಯ ಬಿರುಕುಗಳೊಳಗೆ ವಾಸಿಸುತ್ತಾ, ನನ್ನನ್ನು ನೆಲಕ್ಕೆ ಇಳಿಸಬಲ್ಲವರು ಯಾರು? ಎಂದುಕೊಳ್ಳುವ ಜನರೇ, ನಿಮ್ಮ ಹೃದಯದ ಒಣ ಹೆಮ್ಮೆಯು ನಿಮ್ಮನ್ನು ಮೋಸಗೊಳಿಸಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ನಿನ್ನ ದುರಹಂಕಾರ ನಿನ್ನನ್ನು ವಂಚಿಸಿದೆ.” ‘ಉನ್ನತಸ್ಥಾನದಲ್ಲಿ ವಾಸವಾಗಿದ್ದೇನೆ; ಬಂಡೆಗಳ ಬಿರುಕುಗಳಲ್ಲಿ ಭದ್ರವಾಗಿದ್ದೇನೆ; ನನ್ನನ್ನು ನೆಲಕ್ಕೆ ಇಳಿಸಬಲ್ಲವರು ಯಾರು?’ ಎನ್ನುತ್ತಿರುವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಉನ್ನತಸ್ಥಾನದಲ್ಲಿ ಬಂಡೆಯ ಬಿರುಕುಗಳೊಳಗೆ ವಾಸಿಸುತ್ತಾ - ನನ್ನನ್ನು ನೆಲಕ್ಕೆ ಇಳಿಸಬಲ್ಲವರು ಯಾರು ಅಂದುಕೊಳ್ಳುವ ಜನವೇ, ನಿನ್ನೆದೆಯ ಹೆಮ್ಮೆಯು ನಿನ್ನನ್ನು ಮೋಸಗೊಳಿಸಿದೆ; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ನಿನ್ನ ಹೆಚ್ಚಳಿಕೆಯು ನಿನ್ನನ್ನು ಮರುಳುಗೊಳಿಸಿತು. ನೀನು ಎತ್ತರವಾದ ಬೆಟ್ಟದಂಚಿನ ಗುಹೆಗಳಲ್ಲಿ ವಾಸಿಸುವೆ. ನಿನ್ನ ಮನೆಯು ಪರ್ವತಗಳಲ್ಲಿದೆ. ಆದ್ದರಿಂದ ನೀನು ನಿನ್ನಲ್ಲಿ ಹೇಳಿಕೊಳ್ಳುವದೇನೆಂದರೆ, ‘ಯಾರೂ ನನ್ನನ್ನು ಕೆಳಗೆ ಭೂಮಿಯ ಮೇಲೆ ಇಳಿಸಲಾರರು.’” ಅಧ್ಯಾಯವನ್ನು ನೋಡಿ |