ಎಸ್ತೇರಳು 2:8 - ಕನ್ನಡ ಸಮಕಾಲಿಕ ಅನುವಾದ8 ಅರಸನ ಮಾತನ್ನು ಮತ್ತು ಅವನ ಕಟ್ಟಳೆಯನ್ನು ಕೇಳಿದ ತರುವಾಯ ಶೂಷನಿನ ಅರಮನೆಯಲ್ಲಿ ಹೇಗೈಯನ ವಶಕ್ಕೆ ಅನೇಕ ಕನ್ಯೆಯರನ್ನು ಒಪ್ಪಿಸಲಾಯಿತು. ಎಸ್ತೇರಳು ಸಹ ಅರಸನ ಅರಮನೆಯಲ್ಲಿ ಸ್ತ್ರೀಯರ ಕಾವಲಿನವನಾದ ಹೇಗೈಯ ಜವಾಬ್ದಾರಿಕೆಯ ಕೋಣೆಯಲ್ಲಿ ಇದ್ದಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಅರಸನ ನಿರ್ಣಯವೂ, ಆಜ್ಞೆಯೂ ಪ್ರಕಟಿಸಲ್ಪಟ್ಟ ತರುವಾಯ ಕಾರ್ಯನಿರ್ವಾಹಕರು ಅನೇಕಾನೇಕ ಕನ್ಯೆಯರನ್ನು ಕೂಡಿಸಿ ಶೂಷನ್ ಕೋಟೆಯಲ್ಲಿ ಹೇಗೈಯ ವಶಕ್ಕೆ ಒಪ್ಪಿಸಿದಾಗ ಎಸ್ತೇರಳೂ ಅರಮನೆಗೆ ಬಂದು ಅಂತಃಪುರ ಪಾಲಕನಾದ ಹೇಗೈಯ ಪರಾಂಬರಿಕೆಯಲ್ಲಿದ್ದಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಅರಸನ ನಿರ್ಣಯದ ಪ್ರಕಾರ ರಾಜಾಜ್ಞೆಯು ಎಲ್ಲೆಡೆ ಪ್ರಕಟವಾಯಿತು. ಅನೇಕ ಮಂದಿ ಕನ್ಯೆಯರನ್ನು ಶೂಷನ್ ನಗರಕ್ಕೆ ಕರೆತಂದು ಅಂತಃಪುರಪಾಲಕನಾದ ಹೇಗೈಯನ ವಶಕ್ಕೆ ಒಪ್ಪಿಸಲಾಯಿತು. ಇಂಥವರಲ್ಲಿ ಎಸ್ತೇರಳೂ ಒಬ್ಬಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಅರಸನ ನಿರ್ಣಯವೂ ಆಜ್ಞೆಯೂ ಪ್ರಕಟಿಸಲ್ಪಟ್ಟು [ಕಾರಭಾರಿಗಳು] ಅನೇಕಾನೇಕ ಕನ್ಯೆಯರನ್ನು ಕೂಡಿಸಿ ಶೂಷನ್ ಕೋಟೆಯಲ್ಲಿ ಹೇಗೈಯ ವಶಕ್ಕೆ ಒಪ್ಪಿಸಿದಾಗ ಎಸ್ತೇರಳೂ ಅರಮನೆಗೆ ತರಲ್ಪಟ್ಟು ಅಂತಃಪುರಪಾಲಕನಾದ ಹೇಗೈಯ ಪರಾಂಬರಿಕೆಯಲ್ಲಿದ್ದಳು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ರಾಜಾಜ್ಞೆಯು ರಾಜ್ಯದ ಎಲ್ಲಾ ಭಾಗಗಳಲ್ಲಿ ಪ್ರಕಟಿಸಲ್ಪಟ್ಟಾಗ ಅನೇಕ ಕನ್ಯೆಯರನ್ನು ರಾಜಧಾನಿಯಾದ ಶೂಷನ್‌ಗೆ ಕರೆದುಕೊಂಡು ಬಂದರು. ಇವರನ್ನೆಲ್ಲಾ ಹೇಗೈಯ ವಶಕ್ಕೆಕೊಟ್ಟರು. ಆ ಕನ್ಯೆಯರಲ್ಲಿ ಎಸ್ತೇರಳು ಸಹ ಒಬ್ಬಳಾಗಿದ್ದಳು. ಎಸ್ತೇರಳನ್ನೂ ಅರಮನೆಗೆ ಕರೆದುಕೊಂಡು ಹೋಗಿ ಹೇಗೈಯ ವಶಕ್ಕೆ ಕೊಟ್ಟರು. ಅಧ್ಯಾಯವನ್ನು ನೋಡಿ |